‘ಪುಷ್ಪಾ 2: ದ ರೂಲ್’; ಟಿಕೆಟ್‌ ದರ 2,400 ರೂ.ಗೆ ಏರಿಕೆ!

Date:

ಅಲ್ಲು ಅರ್ಜುನ್ ಅವರ ಬಹುನಿರೀಕ್ಷಿತ ಸಿನೆಮಾ ‘ಪುಷ್ಪಾ 2: ದ ರೂಲ್’ ಇದೇ ವಾರ ಬಿಡುಗಡೆಯಾಗಲಿದೆ. ದೇಶದ ಆಯ್ದ ಭಾಗಗಳಲ್ಲಿ ಈ ಸಿನೆಮಾಗೆ ಮುಂಗಡ ಬುಕಿಂಗ್ ಶುರುವಾಗಿದೆ. ಹಿಂದಿ ಭಾಷಿಕ ಪ್ರದೇಶಗಳಲ್ಲಿ ಟಿಕೆಟ್ ದರ ತಲಾ 2,000-2,400 ರುಪಾಯಿಗೆ ಜಿಗಿದಿರುವ ಕುರಿತು ದೂರುಗಳು ಕೇಳಿ ಬಂದಿವೆ ಎಂದು ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.

‘ಎಕ್ಸ್’ (ಟ್ವಿಟರ್)ನಲ್ಲಿ 1,200 ರುಪಾಯಿ ದರ ಅತಿಯಾಯಿತಲ್ವಾ ಎಂದು ಹೈದರಾಬಾದಿನ ಅಭಿಮಾನಿಯೊಬ್ಬರು ಪ್ರಶ್ನಿಸಿರುವ ವಿಡಿಯೋ ಪೋಸ್ಟ್ ಆಗಿದೆ. ದೆಹಲಿ, ಮುಂಬಯಿಯ ಪಿವಿಆರ್ ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರದರ್ಶಿಸಲಾಗುವ ಈ ಚಲನಚಿತ್ರದ ಹಿಂದಿ 2ಡಿ ಅವತರಣಿಕೆಯ ಟಿಕೆಟ್ ದರಗಳು 2,400 ರುಪಾಯಿಗೆ ಮಾರಾಟವಾಗುತ್ತಿವೆ. ಮುಂಬಯಿಯ ಸಾಮಾನ್ಯ ಥಿಯೇಟರುಗಳಲ್ಲಿನ ದರಗಳು 1,500ರಿಂದ 1,700 ರುಪಾಯಿಗೆ ಮಾರಾಟವಾಗಿವೆ.

ಮುಂಗಡ ಬುಕಿಂಗ್ ಮೂಲಕ ಈ ಸಿನೆಮಾ ಈವರೆಗೆ ತೆಲುಗಿನಲ್ಲಿ 12 ಕೋಟಿ ರುಪಾಯಿ ಮತ್ತು ಹಿಂದಿಯಲ್ಲಿ 8 ಕೋಟಿ ರುಪಾಯಿ ಗಳಿಸಿದೆ ಎಂದು ವರದಿಗಳು ಹೇಳಿವೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒನ್ ಬ್ಯಾಟಲ್ ಆಫ್ಟರ್ ಅನದರ್ | ಸಾಧಾರಣ ಚಿತ್ರಕ್ಕೆ ಆಸ್ಕರ್ ಚಿನ್ನದ ಚೌಕಟ್ಟು!

ವಲಸೆಯಂತಹ ಜ್ವಲಂತ ಸಮಸ್ಯೆಯನ್ನು ಹೇಳುವ ರಾಜಕೀಯ ಚಿತ್ರವೆನಿಸಿದರೂ; ಕ್ರಾಂತಿಕಾರಿ ಚಟುವಟಿಕೆಗಳ ಕುರಿತು...

“ತಾಯಿನೇ ಎಲ್ಲಾ” ಎಂದಿದ್ದ ಪ್ರೇಮ್, ಈಗ “ಸರ್ಸೆ ನಿನ್ನ ಸೆರಗ” ಅಂತಾರೆ!; ಭಾರೀ ಟೀಕೆಗೆ ಗುರಿಯಾದ ʼಕೆಡಿ ದಿ ಡೆವಿಲ್‌ʼ ಹಾಡು

ಪ್ರೇಮ್‌ ನಿರ್ದೇಶನದ "ಕೆಡಿ ದಿ ಡೆವಿಲ್‌" ಸಿನಿಮಾ ಏಪ್ರಿಲ್‌ 30ರಂದು ಬಿಡುಗಡೆಯಾಗಲಿದೆ...

ಆಸ್ಕರ್ 2026​ ಪ್ರಶಸ್ತಿ | ಅತ್ಯುತ್ತಮ ನಟ ಮೈಕೆಲ್ ಬಿ, ನಟಿ ಜೆಸ್ಸಿ ಬಕ್ಲಿ: ಸಂಪೂರ್ಣ ವಿಜೇತರ ಪಟ್ಟಿ

ಆಸ್ಕರ್ 2026 ಪ್ರಶಸ್ತಿ ಸಮಾರಂಭವು ಮಾರ್ಚ್ 15ರಂದು ಲಾಸ್ ಏಂಜಲಿಸ್‌ನ ಡಾಲ್ಬಿ...