2ನೇ ಮದುವೆಯಾದ ಆಶಿಷ್‌ ವಿದ್ಯಾರ್ಥಿ : ಮೊದಲ ಪತ್ನಿ ಅಸಮಾಧಾನ

Date:

ರೂಪಾಲಿ ಬರುವಾ ಜೊತೆ ದಾಂಪತ್ಯಕ್ಕೆ ಕಾಲಿಟ್ಟ ಆಶಿಷ್‌

ಎರಡನೇ ಮದುಯಾಗಿದ್ದಕ್ಕೆ ಟೀಕೆಗೆ ಗುರಿಯಾದ ನಟ

ಬಹುಭಾಷಾ ನಟ ಆಶಿಷ್‌ ವಿದ್ಯಾರ್ಥಿ ಗುರುವಾರ ಕೊಲ್ಕತ್ತಾದಲ್ಲಿ ಅಸ್ಸಾಂ ಮೂಲದ ರೂಪಾಲಿ ಬರುವಾ ಅವರೊಂದಿಗೆ ಎರಡನೇ ಮದುವೆಯಾಗಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹಿರಿಯ ನಟನ ಮದುವೆ ಸಮಾರಂಭದ ಫೋಟೋಗಳು ವೈರಲ್‌ ಆಗಿದ್ದು, ಆಶಿಷ್‌ ನಡೆಯ ಕುರಿತು ಅವರ ಮೊದಲ ಪತ್ನಿ ರಾಜೋಶಿ ಬರುವಾ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಆಶಿಷ್‌ ಮತ್ತು ರೂಪಾಲಿ ಮದುವೆಯ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸೆಲ್ಫೀ ಫೋಟೋ ಹಂಚಿಕೊಂಡು “ಜೀವನವೆಂಬ ಒಗಟಿನಲ್ಲಿ ನೀವು ಬಿಡಿಸಲಾಗದ ಒಗಟಾಗಬೇಡಿ” ಎಂದು ಬರೆದುಕೊಂಡಿದ್ದಾರೆ.

“ನಿಮಗೆ ಸರಿಹೊಂದುವ ವ್ಯಕ್ತಿ, ನೀವು ಅವರಿಗೆ ಎಷ್ಟು ಮುಖ್ಯ ಎಂದು ಯಾವತ್ತಿಗೂ ಕೇಳುವುದಿಲ್ಲ. ನಿಮಗೆ ನೋವುಂಟು ಮಾಡುವ ಕೆಲಸಗಳನ್ನು ಅವರು ಎಂದಿಗೂ ಮಾಡುವುದಿಲ್ಲ. ಈ ಮಾತನ್ನು ನೆನಪಿಡಿ. ನಿಮ್ಮ ತಲೆಯಲ್ಲಿ ತುಂಬಿರುವ ಅತಿಯಾದ ಆಲೋಚನೆ ಮತ್ತು ಸಂದೇಹಗಳು ಈ ಕ್ಷಣವೇ ದೂರವಾಗಲಿ, ಗೊಂದಲದಲ್ಲಿದ್ದ ನಿಮಗೆ ಸ್ಪಷ್ಟತೆ ಸಿಗಲಿ, ನಿಮ್ಮ ಬದುಕಲ್ಲಿ ಶಾಂತಿ ತುಂಬಿರಲಿ” ಎಂಬ ಬರಹಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.

ರಾಜೋಶಿ ಬರುವಾ ಬೆಂಗಾಲಿ ಚಿತ್ರರಂಗದಲ್ಲಿ ಜನಪ್ರಿಯ ನಟಿಯಾಗಿ ಮತ್ತು ಹಿನ್ನೆಲೆ ಗಾಯಕಿಯಾಗಿ ಹೆಸರು ಮಾಡಿದ್ದಾರೆ. 23 ವರ್ಷಗಳ ಕಾಲ ದಾಂಪತ್ಯದಲ್ಲಿದ್ದ ಆಶಿಷ್‌ ಮತ್ತು ರಾಜೋಶಿ ಇತ್ತೀಚೆಗೆ ಪರಸ್ಪರ ಒಪ್ಪಿಗೆಯಿಂದ ದೂರವಾಗಿದ್ದರು.

ಈ ಸುದ್ದಿ ಓದಿದ್ದೀರಾ? ಅಭಿಮಾನಿಯ ಕೊನೆ ಆಸೆ ಈಡೇರಿಸಿದ ಹೃದಯವಂತ ಶಾರುಖ್‌ ಖಾನ್‌

ಆಶಿಷ್‌ ವಿದ್ಯಾರ್ಥಿ 60ನೇ ವಯಸ್ಸಿನಲ್ಲಿ ಎರಡನೇ ಮದುವೆಯಾದ ಕಾರಣಕ್ಕೆ ನೆಟ್ಟಿಗರಿಂದ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಇನ್ನು ಕೆಲವರು ನಟನ ವೈಯಕ್ತಿಕ ನಿಲುವನ್ನು ಎಲ್ಲರೂ ಗೌರವಿಸಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒನ್ ಬ್ಯಾಟಲ್ ಆಫ್ಟರ್ ಅನದರ್ | ಸಾಧಾರಣ ಚಿತ್ರಕ್ಕೆ ಆಸ್ಕರ್ ಚಿನ್ನದ ಚೌಕಟ್ಟು!

ವಲಸೆಯಂತಹ ಜ್ವಲಂತ ಸಮಸ್ಯೆಯನ್ನು ಹೇಳುವ ರಾಜಕೀಯ ಚಿತ್ರವೆನಿಸಿದರೂ; ಕ್ರಾಂತಿಕಾರಿ ಚಟುವಟಿಕೆಗಳ ಕುರಿತು...

“ತಾಯಿನೇ ಎಲ್ಲಾ” ಎಂದಿದ್ದ ಪ್ರೇಮ್, ಈಗ “ಸರ್ಸೆ ನಿನ್ನ ಸೆರಗ” ಅಂತಾರೆ!; ಭಾರೀ ಟೀಕೆಗೆ ಗುರಿಯಾದ ʼಕೆಡಿ ದಿ ಡೆವಿಲ್‌ʼ ಹಾಡು

ಪ್ರೇಮ್‌ ನಿರ್ದೇಶನದ "ಕೆಡಿ ದಿ ಡೆವಿಲ್‌" ಸಿನಿಮಾ ಏಪ್ರಿಲ್‌ 30ರಂದು ಬಿಡುಗಡೆಯಾಗಲಿದೆ...

ಆಸ್ಕರ್ 2026​ ಪ್ರಶಸ್ತಿ | ಅತ್ಯುತ್ತಮ ನಟ ಮೈಕೆಲ್ ಬಿ, ನಟಿ ಜೆಸ್ಸಿ ಬಕ್ಲಿ: ಸಂಪೂರ್ಣ ವಿಜೇತರ ಪಟ್ಟಿ

ಆಸ್ಕರ್ 2026 ಪ್ರಶಸ್ತಿ ಸಮಾರಂಭವು ಮಾರ್ಚ್ 15ರಂದು ಲಾಸ್ ಏಂಜಲಿಸ್‌ನ ಡಾಲ್ಬಿ...