ಶಿವಾಜಿ ಸುರತ್ಕಲ್‌-2 ಸೇರಿ ಈ ವಾರ 4 ಚಿತ್ರಗಳು ತೆರೆಗೆ

Date:

ಡಾಲಿ ಧನಂಜಯ ನಟನೆಯ ʼಹೊಯ್ಸಳʼ ಚಿತ್ರದ ಬಳಿಕ ಇತ್ತೀಚೆಗೆ ಸ್ಯಾಂಡಲ್‌ವುಡ್‌ನಲ್ಲಿ ಹೇಳಿಕೊಳ್ಳವಂತಹ ಚಿತ್ರಗಳು ತೆರೆಕಂಡಿಲ್ಲ. ಕಳೆದ ವಾರ ಬಿಡುಗಡೆಯಾದ ʼವೀರಂʼ ಮತ್ತು ʼಪೆಂಟಗನ್‌ʼ ಚಿತ್ರಗಳು ನಿರೀಕ್ಷಿತ ಮಟ್ಟಕ್ಕೆ ಪ್ರದರ್ಶನ ಕಂಡಿಲ್ಲ. ʼಐಪಿಎಲ್‌ʼ ಪಂದ್ಯಾವಳಿಗಳು ಮತ್ತು ರಾಜಕೀಯ ಪಕ್ಷಗಳ ಅಬ್ಬರದ ಚುನಾವಣಾ ಪ್ರಚಾರಗಳು ಏಕಕಾಲಕ್ಕೆ ನಡೆಯುತ್ತಿರುವುದರಿಂದ ಸ್ಟಾರ್‌ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ. ಈ ವಾರ ಸ್ಯಾಂಡಲ್‌ವುಡ್‌ನಲ್ಲಿ ಶಿವಾಜಿ ಸುರತ್ಕಲ್‌-2 ಕನ್ನಡದ ನಾಲ್ಕು ಸಿನಿಮಾಗಳು ತೆರೆ ಕಾಣುತ್ತಿವೆ.

ಶಿವಾಜಿ ಸುರತ್ಕಲ್‌-2

ಈ ಹಿಂದೆ ಆಕಾಶ್‌ ಶ್ರೀವತ್ಸ ಮತ್ತು ರಮೇಶ್‌ ಅರವಿಂದ್‌ ಕಾಂಬಿನೇಶನ್‌ನಲ್ಲಿ ಮೂಡಿಬಂದಿದ್ದ ʼಶಿವಾಜಿ ಸುರತ್ಕಲ್‌ʼ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ತಕ್ಕ ಮಟ್ಟಿಗೆ ಯಶಸ್ಸು ಕಂಡಿತ್ತು. ಪತ್ತೆದಾರಿ ಕಥಾಹಂದರವನ್ನು ಹೊಂದಿದ್ದ ಈ ಚಿತ್ರ ಯಶಸ್ವಿಯಾದ ಬೆನ್ನಲ್ಲೇ ʼಶಿವಾಜಿ ಸುರತ್ಕಲ್‌-2ʼ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು. ರಮೇಶ್‌ ಅರವಿಂದ್‌, ರಾಧಿಕಾ ನಾರಾಯಣ್‌, ಮೇಘನಾ ಗಾಂವ್ಕರ್‌, ಸಂಗೀತಾ ಶೃಂಗೇರಿ, ನಾಸರ್‌ ಸೇರಿದಂತೆ ಬಹುತಾರಾಗಣವನ್ನು ಹೊಂದಿರುವ ಸಸ್ಪೆನ್ಸ್‌, ಕ್ರೈಂ, ಥ್ರಿಲ್ಲರ್‌ ಕಥಾಹಂದರವುಳ್ಳ ʼಶಿವಾಜಿ ಸುರತ್ಕಲ್‌-2ʼ ಚಿತ್ರಕ್ಕೆ ಅನೂಪ್‌ ಗೌಡ ಬಂಡವಾಳ ಹೂಡಿದ್ದು, ಜುಡಾ ಸ್ಯಾಂಡಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಟ್ರೈಲರ್‌ ಮೂಲಕ ನಿರೀಕ್ಷೆ ಹುಟ್ಟು ಹಾಕಿರುವ ಈ ಚಿತ್ರ ಶುಕ್ರವಾರ ಬಿಡುಗಡೆಯಾಗುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಉಂಡೆನಾಮ

ಕಳೆದ ಕೆಲ ವರ್ಷಗಳಿಂದ ಬೆಳ್ಳಿ ತೆರೆಯಿಂದ ಅಂತರ ಕಾಯ್ದುಕೊಂಡಿದ್ದ ಹಾಸ್ಯನಟ ಕೋಮಲ್‌ ʼಉಂಡೆನಾಮʼ ಚಿತ್ರದ ಮೂಲಕ ಮತ್ತೆ ತೆರೆಗೆ ಮರಳುತ್ತಿದ್ದಾರೆ. ಹಾಸ್ಯಪ್ರಧಾನ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಕೋಮಲ್‌ ಸಾಫ್ಟವೇರ್‌ ಇಂಜಿನಿಯರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಿರ್ದೇಶಕ ಕೆಎಲ್‌ ರಾಜಶೇಖರ್‌ ಲಾಕ್‌ಡೌನ್‌ ಸಂದರ್ಭದ ಸುತ್ತ ಚಿತ್ರದ ಕತೆ ಹೆಣೆದಿದ್ದಾರೆ. ಧನ್ಯ ಬಾಲಕೃಷ್ಣ ಕೋಮಲ್‌ಗೆ ಜೊತೆಯಾಗಿ ನಟಿಸಿದ್ದು, ತಬಲಾ ನಾಣಿ, ಬ್ಯಾಂಕ್‌ ಜನಾರ್ಧನ್‌, ಹರೀಶ್‌ ರಾಜ್‌, ಅಪೂರ್ವ ಶ್ರೀ ತನಿಷಾ ಕುಪ್ಪಂದ ಮುಂತಾದವರು ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಶ್ರೀಧರ್‌ ವಿ ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ. ಟಿ ಆರ್‌ ಚಂದ್ರಶೇಖರ್‌ ಬಂಡವಾಳ ಹೂಡಿರುವ ʼಉಂಡೆನಾಮʼ ಚಿತ್ರ ಈ ವಾರ ರಾಜ್ಯಾದ್ಯಂತ ಪ್ರದರ್ಶನ ಕಾಣಲಿದೆ.

ಮಾರಿಗುಡ್ಡದ ಗಡ್ಡಧಾರಿಗಳು

ಸಲಗ ಸೂರಿ ಅಣ್ಣ ಖ್ಯಾತಿಯ ದಿನೇಶ್‌ ಕುಮಾರ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ʼಮಾರಿಗುಡ್ಡದ ಗಡ್ಡಧಾರಿಗಳುʼ ಚಿತ್ರ ಈ ವಾರ ತೆರೆಗೆ ಬರುತ್ತಿದೆ. ಸಸ್ಪೆನ್ಸ್‌, ಕ್ರೈಂ, ಥ್ರಿಲ್ಲರ್‌ ಕಥಾಹಂದರವನ್ನು ಒಳಗೊಂಡಿರುವ ಈ ಚಿತ್ರಕ್ಕೆ ಯುವ ನಿರ್ದೇಶಕ ಚಂದ್ರಕಾಂತ್‌ ಆ್ಯಕ್ಷನ್ ಕಟ್‌ ಹೇಳಿದ್ದಾರೆ. ಟೀಸರ್‌ ಮತ್ತು ಟ್ರೈಲರ್‌ ಮೂಲಕ ಗಮನ ಸೆಳೆದಿರುವ ಈ ಚಿತ್ರದಲ್ಲಿ ಯುವ ಪ್ರತಿಭೆ ನಮ್ರತಾ ಅಗಸಿಮನಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವಿನಾಶ್‌, ಗಣೇಶ್‌ ರಾವ್‌, ಪ್ರವೀಣ್‌ ರಾಜ್‌, ಪ್ರಶಾಂತ್‌ ಸಿದ್ದಿ, ರಮೇಶ್‌ ಭಟ್‌ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕೆ.ಎಮ್‌ ಇಂದ್ರ ಅವರ ಹಿನ್ನೆಲೆ ಸಂಗೀತವಿರುವ ಈ ಚಿತ್ರಕ್ಕೆ ನಾಯಕ ದಿನೇಶ್‌ ಮತ್ತು ವಿಜಯ್‌ ಎಂಬುವವರು ಬಂಡವಾಳ ಹೂಡಿದ್ದಾರೆ.

ಸುರಾರಿ

ಯುವ ಪ್ರತಿಭೆ ವಿಶಾಲ್‌ ಅಜಯ್‌ ತಾವೇ ಬಂಡವಾಳ ಹೂಡಿ ನಟಿಸಿ, ನಿರ್ದೇಶಿಸಿರುವ ʼಸುರಾರಿʼ ಚಿತ್ರ ಕೂಡ ಈ ವಾರ ತೆರೆಕಾಣುತ್ತಿದೆ. ಕೌಟುಂಬಿಕ ಕಥಾಹಂದರ ಮತ್ತು ಆ್ಯಕ್ಷನ್ ಅಂಶಗಳನ್ನು ಒಳಗೊಂಡಿರುವ ಈ ಚಿತ್ರದಲ್ಲಿ ಅವಿನಾಶ್‌, ಮಿಮಿಕ್ರಿ ಗೋಪಿ, ಓಂ ಪ್ರಕಾಶ್‌ ರಾವ್‌, ಚಿತ್ರಾಲ್‌ ರಂಗಸ್ವಾಮಿ, ಅರ್ಚನಾ ಸಿಂಗ್‌ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅನಂತ್‌ ಆರ್ಯನ್‌ ಅವರ ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ.

ಉಳಿದಂತೆ ತೆಲುಗಿನ ಸ್ಟಾರ್‌ ನಟಿ ಸಮಂತಾ ಮುಖ್ಯಭೂಮಿಕೆಯ ʼಶಾಕುಂತಲಂʼ, ರಾಘವ ಲಾರೆನ್ಸ್‌ ನಟನೆಯ ʼರುದ್ರುಡುʼ, ಐಶ್ವರ್ಯಾ ರಾಜೇಶ್‌ ಪ್ರಧಾನ ಪಾತ್ರದಲ್ಲಿ ನಟಿಸಿರುವ ತಮಿಳಿನ ʼಸೊಪ್ಪನ ಸುಂದರಿʼ ಮುಂತಾದ ಚಿತ್ರಗಳು ಈ ವಾರ ಬಿಡುಗಡೆಯಾಗುತ್ತಿವೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒನ್ ಬ್ಯಾಟಲ್ ಆಫ್ಟರ್ ಅನದರ್ | ಸಾಧಾರಣ ಚಿತ್ರಕ್ಕೆ ಆಸ್ಕರ್ ಚಿನ್ನದ ಚೌಕಟ್ಟು!

ವಲಸೆಯಂತಹ ಜ್ವಲಂತ ಸಮಸ್ಯೆಯನ್ನು ಹೇಳುವ ರಾಜಕೀಯ ಚಿತ್ರವೆನಿಸಿದರೂ; ಕ್ರಾಂತಿಕಾರಿ ಚಟುವಟಿಕೆಗಳ ಕುರಿತು...

“ತಾಯಿನೇ ಎಲ್ಲಾ” ಎಂದಿದ್ದ ಪ್ರೇಮ್, ಈಗ “ಸರ್ಸೆ ನಿನ್ನ ಸೆರಗ” ಅಂತಾರೆ!; ಭಾರೀ ಟೀಕೆಗೆ ಗುರಿಯಾದ ʼಕೆಡಿ ದಿ ಡೆವಿಲ್‌ʼ ಹಾಡು

ಪ್ರೇಮ್‌ ನಿರ್ದೇಶನದ "ಕೆಡಿ ದಿ ಡೆವಿಲ್‌" ಸಿನಿಮಾ ಏಪ್ರಿಲ್‌ 30ರಂದು ಬಿಡುಗಡೆಯಾಗಲಿದೆ...

ಆಸ್ಕರ್ 2026​ ಪ್ರಶಸ್ತಿ | ಅತ್ಯುತ್ತಮ ನಟ ಮೈಕೆಲ್ ಬಿ, ನಟಿ ಜೆಸ್ಸಿ ಬಕ್ಲಿ: ಸಂಪೂರ್ಣ ವಿಜೇತರ ಪಟ್ಟಿ

ಆಸ್ಕರ್ 2026 ಪ್ರಶಸ್ತಿ ಸಮಾರಂಭವು ಮಾರ್ಚ್ 15ರಂದು ಲಾಸ್ ಏಂಜಲಿಸ್‌ನ ಡಾಲ್ಬಿ...