ಸಿನಿಮಾ ವಿಮರ್ಶೆ | ‘Assi’ Per Day: ನಾಗರಿಕತೆಗೆ ಸವಾಲಾಗಿರುವ ಕಠಿಣ ಪ್ರಶ್ನೆ

Date:

ಗಡಿಯಲ್ಲಿ ನಡೆಯುವ ದಾಳಿಗಳನ್ನು ರಾಷ್ಟ್ರದ ಅಪಾಯವೆಂದು ಕಾಣುವ ನಾವು, ಪ್ರತಿದಿನ ನಮ್ಮ ನಡುವೆಯೇ, ನಾವು ಬದುಕುತ್ತಿರುವ ಸಮಾಜದಲ್ಲಿಯೇ ನಡೆಯುತ್ತಿರುವ ಲೈಂಗಿಕ ಹಿಂಸೆಯನ್ನು ರಾಷ್ಟ್ರದ ಸಮಸ್ಯೆಯೆಂದು ಕಾಣುವುದಿಲ್ಲ. 'ದೇಶ ಎಂದರೆ ಕೇವಲ ಮಣ್ಣಲ್ಲ, ಅಲ್ಲಿನ ಜನರು' ಆ ಜನರಲ್ಲಿ ಅರ್ಧಭಾಗ ಮಹಿಳೆಯರು ಅನ್ನೋದನ್ನು ನಾವು ಅರ್ಥ ಮಾಡಿಕೊಳ್ಳಬೇಕಲ್ಲವೇ?

‘Assi (80) Per Day’ ಎಂಬ ಶೀರ್ಷಿಕೆ ಕೇವಲ ಒಂದು ಸಿನಿಮಾದ ಹೆಸರು ಮಾತ್ರವಲ್ಲ, ಅದು ನಮ್ಮ ಸಮಾಜದ ನಗ್ನ ಸತ್ಯದ ಅಂಕಿಅಂಶ. ರಾಷ್ಟ್ರೀಯ ಅಪರಾಧ ದಾಖಲೆಗಳ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಸರಾಸರಿ ಪ್ರತೀ 15-20 ನಿಮಿಷಕ್ಕೊಮ್ಮೆ ಅತ್ಯಾಚಾರದ ಒಂದು ಪ್ರಕರಣ ದಾಖಲಾಗುತ್ತದೆ. ಅಂದರೆ ದಿನಕ್ಕೆ ಸುಮಾರು 80 ಪ್ರಕರಣಗಳು. ಇದು ಕೇವಲ ದಾಖಲಾಗುವ ಪ್ರಕರಣಗಳ ಲೆಕ್ಕ ಮಾತ್ರ. ಆದರೆ ಸಾಮಾಜಿಕ ಒತ್ತಡ, ಕುಟುಂಬದ ಮರ್ಯಾದೆ ಹೋಗುತ್ತೆ ಅನ್ನೋ ಭಯ, ಮತ್ತು ನ್ಯಾಯಾಲಯದಲ್ಲಿ ನಡೆಯುವ ದೀರ್ಘ ಪ್ರಕ್ರಿಯೆಗಳ ಕಾರಣ ಅನೇಕ ಘಟನೆಗಳು ಬೆಳಕಿಗೆ ಬಾರದೆಯೇ ಮುಚ್ಚಿಹೋಗುತ್ತವೆ. ಈ ಅಂಕಿಅಂಶಗಳ ಹಿಂದೆ ನೂರಾರು ಜೀವಗಳು ನಾಶವಾಗಿವೆ. ಸಾವಿರ ಲಕ್ಷ ಕನಸುಗಳು ಕಮರಿಹೋಗಿವೆ.

ಈ ಚಿತ್ರವು ನಗರದಲ್ಲಿ ಉದ್ಯೋಗ ಮಾಡುತ್ತಿರುವ ಒಬ್ಬ ಯುವತಿಯ ಬದುಕನ್ನು ಕೇಂದ್ರದಲ್ಲಿರಿಸಿ, ಅತ್ಯಾಚಾರ ಎಂಬ ಕ್ರೂರ ಹಿಂಸೆ ಕೇವಲ ಒಂದು ಕ್ಷಣದ ಘಟನೆ ಅಲ್ಲ, ಅದು ಸಂತ್ರಸ್ತೆಯ ಜೀವನವನ್ನೇ ಚೂರುಮೂರು ಮಾಡುವ ಪ್ರಕ್ರಿಯೆ ಎಂಬುದನ್ನು ತೋರಿಸುತ್ತದೆ. ದೈಹಿಕ ಹಲ್ಲೆಯ ನಂತರ ಅವಳು ಎದುರಿಸುವುದು ಮತ್ತೊಂದು ಯಾತನೆ, ನೌಕರಿ ಕಳೆದುಕೊಳ್ಳುವುದು, ಪೊಲೀಸರ ಅನುಮಾನಭರಿತ ಪ್ರಶ್ನೆಗಳು, ನ್ಯಾಯಾಲಯದಲ್ಲಿ ಅವಮಾನಕಾರಿ ವಾದಗಳು, ಅಪರಾಧಿಗಳನ್ನು ರಕ್ಷಿಸಲು ನಡೆಯುವ ಪ್ರಯತ್ನಗಳು. ಇಂತಹ ಎಲ್ಲಾ ಘಟನೆಗಳು ಸೇರಿ ಅತ್ಯಾಚಾರವನ್ನು ವ್ಯಕ್ತಿಗತ ದುರಂತದಿಂದ ಸಾಮಾಜಿಕ ವೈಫಲ್ಯವನ್ನಾಗಿ ರೂಪಿಸುತ್ತವೆ. ಸಂತ್ರಸ್ತೆಯ ಮೇಲೆ ‘ಎರಡನೇ ಬಾರಿ ನಡೆಯುವ ಇಂಥಹ ಹಿಂಸೆ’ಯು ನಮ್ಮ ವ್ಯವಸ್ಥೆಯ ಇನ್ನೊಂದು ಕೆಟ್ಟ ಮುಖವನ್ನು ಬಹಿರಂಗಪಡಿಸುತ್ತದೆ.

ಇದನ್ನು ಓದಿದ್ದೀರಾ? ಸಿನಿಮಾ ವಿಮರ್ಶೆ | ನೋಡುಗನನ್ನು ನಜೀಬನ ಮರುಭೂಮಿಯ ಆಡಿನ ದೊಡ್ಡಿಗೆ ಕರೆದೊಯ್ಯುವ ‘ಆಡುಜೀವಿತಂ’

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಭಾರತದಲ್ಲಿ ಕಾನೂನುಗಳು ಕಠಿಣವಾಗಿವೆ, IPC 375 ಮತ್ತು 376ನೇ ವಿಧಿಗಳು, 2013ರ ಕ್ರಿಮಿನಲ್ ಲಾ ತಿದ್ದುಪಡಿ, ಮಕ್ಕಳ ರಕ್ಷಣೆಗೆ POCSO ಕಾಯ್ದೆ, ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳು, ಇವೆಲ್ಲವೂ ಅಸ್ತಿತ್ವದಲ್ಲಿವೆ. ಆದರೂ ಪ್ರಶ್ನೆ ಉಳಿಯುತ್ತದೆ. ಇಷ್ಟು ಶಿಕ್ಷೆಗಳು ಸಾಕಾಗುತ್ತವೆಯೇ?

ಅಪರಾಧ ತಡೆಯಲು ಶಿಕ್ಷೆಯ ಭಯ ಮಾತ್ರವಲ್ಲ, ಶಿಕ್ಷೆಯ ಅನಿವಾರ್ಯತೆ ಮತ್ತು ಸಮಾಜದ ಮನೋಭಾವದ ಬದಲಾವಣೆಯೂ ಮುಖ್ಯ. Patriarchal ಮನಸ್ಥಿತಿ, ಮಹಿಳೆಯನ್ನು ತಮ್ಮ ಸ್ವತ್ತು ಎಂದು ನೋಡುವ ದೃಷ್ಟಿಕೋನ, ಪರಸ್ಪರ ಸಮ್ಮತಿಯ ಅರಿವಿನ ಕೊರತೆ, ಮತ್ತು ಲೈಂಗಿಕ ಶಿಕ್ಷಣದ ಅಭಾವ, ಇವೆಲ್ಲವೂ ಈ ಅಪರಾಧದ ಮೂಲ ಕಾರಣಗಳು.

ಮಕ್ಕಳಲ್ಲಿ ಲೈಂಗಿಕ ಶಿಕ್ಷಣದ ಕೊರತೆ ಇರುವ ಕಾರಣ ಇಂದಿನ ಡಿಜಿಟಲ್ ಯುಗದಲ್ಲಿ ಅತ್ಯಾಚಾರದ ವಿಷಯಗಳು ಮೀಮ್ಸ್‌ಗಳಾಗಿ, ಟ್ರೋಲ್‌ಗಳಾಗಿ ಹರಿದಾಡುತ್ತಿರುವುದು ಅನಾಗರೀಕತೆ ತಲೆ ಎತ್ತುತ್ತಿದೆ ಎನ್ನುವುದರ ಸೂಚನೆ. ನಾವು ರಾಷ್ಟ್ರಭಕ್ತಿ, ಧರ್ಮರಕ್ಷಣೆಯ ಕುರಿತು ಭಾವೋದ್ರೇಕದಿಂದ ಪ್ರತಿಕ್ರಿಯಿಸುತ್ತೇವೆ, ಆದರೆ ನಮ್ಮ ಮನೆಗಳಲ್ಲಿ, ಅಕ್ಕಪಕ್ಕದಲ್ಲಿ ಮಹಿಳೆಯರು ಅಪಾಯದಲ್ಲಿರುವುದನ್ನು ಗಮನಿಸುವುದಿಲ್ಲ. ನಿಮಗೆ ಹೊರಗೆ ಯಾರಿಂದಾದರೂ ತೊಂದರೆ ಆಗುತ್ತಿದೆಯೇ ಎಂದು ಕೇಳುವುದೂ ಇಲ್ಲ.

ಗಡಿಯಲ್ಲಿ ನಡೆಯುವ ದಾಳಿಗಳನ್ನು ರಾಷ್ಟ್ರದ ಅಪಾಯವೆಂದು ಕಾಣುವ ನಾವು, ಪ್ರತಿದಿನ ನಮ್ಮ ನಡುವೆಯೇ, ನಾವು ಬದುಕುತ್ತಿರುವ ಸಮಾಜದಲ್ಲಿಯೇ ನಡೆಯುತ್ತಿರುವ ಲೈಂಗಿಕ ಹಿಂಸೆಯನ್ನು ರಾಷ್ಟ್ರದ ಸಮಸ್ಯೆಯೆಂದು ಕಾಣುವುದಿಲ್ಲ. ‘ದೇಶ ಎಂದರೆ ಕೇವಲ ಮಣ್ಣಲ್ಲ, ಅಲ್ಲಿನ ಜನರು’ ಆ ಜನರಲ್ಲಿ ಅರ್ಧಭಾಗ ಮಹಿಳೆಯರು ಅನ್ನೋದನ್ನು ನಾವು ಅರ್ಥ ಮಾಡಿಕೊಳ್ಳಬೇಕಲ್ಲವೇ? ಅವರ ಸುರಕ್ಷತೆ ಮತ್ತು ಗೌರವವೂ ನಿಜವಾದ ರಾಷ್ಟ್ರಭದ್ರತೆ ಮತ್ತು ದೇಶಪ್ರೇಮವಾಗಬೇಕು.

“Assi (80) Per Day” ಅಂತಿಮವಾಗಿ ನಮ್ಮ ನಾಗರಿಕತೆಯನ್ನು ಪ್ರಶ್ನಿಸುತ್ತದೆ. ಕೇವಲ ಕಾನೂನು ತಿದ್ದುಪಡಿಗಳು ಸಾಕಾಗುವುದಿಲ್ಲ, ಮನೆಗಳಲ್ಲಿ, ಶಾಲೆಗಳಲ್ಲಿ, ಸಮಾಜದಲ್ಲಿ, ಗೌರವ, ಸಮಾನತೆ ಬಗ್ಗೆ ಸಂವಾದಗಳು, ಜಾಗೃತಿ ಸಭೆಗಳು ಶುರುವಾಗಬೇಕು. ಮಕ್ಕಳಿಗೆ ಲೈಂಗಿಕ ಶಿಕ್ಷಣದ ಪ್ರಾಥಮಿಕ ಅರಿವು ಮೂಡಿಸಬೇಕು. ಪುರುಷತ್ವವನ್ನು ಕ್ರೌರ್ಯದಿಂದ ಬೇರ್ಪಡಿಸಿ ಸಹಾನುಭೂತಿ ಆಧಾರಿತ ಮೌಲ್ಯಗಳನ್ನು ಬೆಳೆಸಬೇಕು. ಧುರಂಧರ್ ತರಹದ ಪ್ರೊಪೋಗಂಡ ಸಿನೆಮಾಗಳಿಗೆ ನೂಕುನುಗ್ಗಲಾಗಿ ಹೋಗುವ ಜನರು, ನಮ್ಮ ಸಮಾಜದ ಕರಾಳ ಮುಖವನ್ನು ಬಿಚ್ಚಿಟ್ಟ ಇಂತಹ ಸಿನಿಮಾಗಳ ಬಗ್ಗೆಯೂ ತಲೆಕೆಡಿಸಿಕೊಳ್ಳಬೇಕು.

ಪ್ರತಿದಿನ 80 ಅತ್ಯಾಚಾರ ಪ್ರಕರಣಗಳು ನಡೆಯುತ್ತಿರುವ ದೇಶದಲ್ಲಿ ಮೌನವೇ ದೊಡ್ಡ ಅಪರಾಧ. ಮಾನವೀಯತೆ, ವೈಚಾರಿಕತೆ ಮತ್ತು ಜವಾಬ್ದಾರಿಯೇ ನಮ್ಮ ಉತ್ತರವಾಗಬೇಕು.

581700e7fdae5673415a95fe389fb509
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...