ನಾನಾ ಆಯಾಮಗಳಲ್ಲಿ ಚಾಚಿಕೊಂಡ ಪ್ರವಾಹ ರೂಪದ ʼಋತ್ವಿಕ್ ಘಟಕ್ʼ

Date:

ಭಾರತೀಯ ಚಿತ್ರರಂಗದ ಮೇರು ಸಿನೆಮಾ ತಂತ್ರಜ್ಞ, ನಿರ್ದೇಶಕ ಸತ್ಯಜಿತ್ ರೇ ಅವರು ಸ್ವತಃ ಋತ್ವಿಕ್ ಘಟಕ್ ಅವರ ಸಿನೆಮಾ ಕಲೆಗಾರಿಕೆಯ ಅಭಿಮಾನಿ. ಮೆಚ್ಚುಗೆಯ ನುಡಿಗಳನ್ನು ಆಡಿದ್ದಾರೆ. 1950 – 60ರ ದಶಕದ ಬಂಗಾಳದ ಬಹು ಸಿನೆಮಾ ನಿರ್ಮಾತೃ ಎಂದು ಕರೆದಿದ್ದಾರೆ. ಆದರೆ ಭಾರತೀಯ ಚಿತ್ರರಂಗಕ್ಕೆ ಘಟಕ್ ಅಂಥ ಮಹಾನ್ ಪ್ರತಿಭೆಯ ವಿರಾಟ ರೂಪ ಗೊತ್ತಾಗಿದ್ದು ಅವರ ಮರಣ ನಂತರವೇ ಎಂಬುದು ವಿಷಾದಕರ ಸಂಗತಿ.

ವಿಶಿಷ್ಟ ಕಾಣ್ಕೆ, ವಿಶಿಷ್ಟ ಕಥೆ – ಚಿತ್ರಕಥೆ, ವಿಶಿಷ್ಟ ನಿರ್ದೇಶನ ಇವು ಅತೀ ವಿರಳ ವ್ಯಕ್ತಿತ್ವದ ಋತ್ವಿಕ್ ಘಟಕ್ ವಿಶಿಷ್ಟತೆ. ಇವರ ಬದುಕಿದ ತೀವ್ರತೆ ನೋಡಿದರೆ ಅಚ್ಚರಿಯಾಗುತ್ತದೆ. ನಾನಾ ಆಯಾಮಗಳಲ್ಲಿ ಧೀಮಂತವಾಗಿ ಚಾಚಿಕೊಂಡರು. ಸಿನೆಮಾ ಪ್ರೇಮಿಗಳು ಸದಾ ಸೋಜಿಗದ ನೋಟ ಬೀರುವ, ತಮ್ಮ ಸೃಜನಾತ್ಮಕ ಕಲೆಗಾರಿಕೆಯ ಮೂಲಕ ಸಾವಿಲ್ಲದ ಬದುಕು ಪಡೆದ ಘಟಕ್ ಅವರಿಗೆ 2025, ನವೆಂಬರ್‌ 4ಕ್ಕೆ ನೂರು ವರ್ಷ (ಅವಿಭಜಿತ ಭಾರತದ ಢಾಕಾದಲ್ಲಿ ಜನನ: ನವೆಂಬರ್ 4, 2025) ಬಹು ರಭಸದಿಂದ ಹರಿಯುವ ನದಿ ಕ್ಷಿಪ್ರ ಹಾದಿಯಲ್ಲಿ ಸಾಗರ ಸೇರುವಂತೆ ತಮ್ಮ 50ನೇ ವಯಸ್ಸಿನಲ್ಲಿ ಭೌತಿಕವಾಗಿ (ಸ್ವತಂತ್ರ ಭಾರತದ ಕೋಲ್ಕತ್ತಾದಲ್ಲಿ ಮರಣ: ಫೆಬ್ರವರಿ 6, 1976) ಇಲ್ಲವಾದರು.

ಋತ್ವಿಕ್ ಘಟಕ್ ವಿಚಾರದಲ್ಲಿ ವಿಶಿಷ್ಟ ಎಂಬುದನ್ನು ಮತ್ತೆ ಮತ್ತೆ ಬಳಸಿದ್ದೇನೆ. ಇದರ ಜೊತೆಗೆ ಅವರದು ವಿಕ್ಷಿಪ್ತ ವ್ಯಕ್ತಿತ್ವ!! ಹೀಗೆನ್ನಲು ಕಾರಣವೂ ಇದೆ. ಇವರು ಭಾರತೀಯ ಕಮ್ಯುನಿಸ್ಟ್ ಪಾರ್ಟಿಯ ಕಾರ್ಯಕರ್ತ. ಕಮ್ಯುನಿಸಂ ವಿಚಾರಧಾರೆಯ ನೆರಳು ಇವರ ಕೃತಿಗಳಲ್ಲಿ ಚಾಚಿದೆ. ಡಿಸೆಂಬರ್ 16, 1971 ಭಾರತದ ಇತಿಹಾಸದ ಮಹತ್ವದ ದಿನಗಳಲ್ಲಿ ಒಂದು. ಇದೇ ದಿನ ಅಂದಿನ ಪ್ರಧಾನಿ ಇಂದಿರಾ ಗಾಂಧಿ ನಿರ್ದೇಶನದಲ್ಲಿ ಭಾರತೀಯ ಸೇನೆ ಪಾಕಿಸ್ತಾನದ ತೆಕ್ಕೆಗೆ ಹೋಗಿದ್ದ ಪೂರ್ವ ಬಾಂಗ್ಲಾವನ್ನು ವಿಮೋಚನೆಗೊಳಿಸಿತು. ಬಾಂಗ್ಲಾದೇಶ ಉದಯಕ್ಕೆ ಕಾರಣವಾಯಿತು. ಈ ಬೆಳವಣಿಗೆ ಪಕ್ಷಾತೀತವಾಗಿ ರಾಜಕೀಯ ನಾಯಕರ ಪ್ರಶಂಸೆಗೆ ಕಾರಣವಾಯಿತು.

ನಿರ್ದೇಶಕ ಘಟಕ್ 1972ರಲ್ಲಿ ಬಾಂಗ್ಲಾ ವಿಮೋಚನೆ ಕುರಿತು ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಮುಂದಾದರು. ಸಂದರ್ಶನ ನೀಡುವ ಸಲುವಾಗಿಯೇ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು 1972ರಲ್ಲಿ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ನಿಗದಿತ ಸಮಯಕ್ಕಿಂತ ತುಸು ಮುಂಚಿತವಾಗಿಯೇ ಬಂದು ನಿರೀಕ್ಷೆ ಮಾಡುತ್ತಿದ್ದರು. ಬಹಳ ಹೊತ್ತು ನಿರೀಕ್ಷೆ ಮಾಡಿದರೂ ಘಟಕ್ ಬರಲಿಲ್ಲ. ಹೀಗಾಗಿ ಈ ಸಾಕ್ಷ್ಯಚಿತ್ರ ಅಪೂರ್ಣವಾಯಿತು. ತೆರೆಯೂ ಕಾಣಲಿಲ್ಲ. ಹಣಕಾಸಿನ ಮುಗ್ಗಟ್ಟು, ವಿಕ್ಷಿಪ್ತತೆ ಕಾರಣದಿಂದಾಗಿಯೂ ಇವರ ಕೆಲವು ಸಿನೆಮಾಗಳು, ಸಾಕ್ಷ್ಯಚಿತ್ರಗಳು ಅಪೂರ್ಣವಾಗಿ ತೆರೆ ಕಾಣಲೇ ಇಲ್ಲ!

ಋತ್ವಿಕ್ ಘಟಕ್ ಅವರು 1950ರಲ್ಲಿ ನಿಮೈ ಘೋಷ್ ಅವರ ಚಿನ್ನಮುಲ್ ಮೂಲಕ ನಟ ಮತ್ತು ಸಹಾಯಕ ನಿರ್ದೇಶಕರಾಗಿ ಪಶ್ಚಿಮ ಬಂಗಾಳದ ಸಿನೆಮಾ ರಂಗ ಪ್ರವೇಶಿಸಿದರು. ಇದಾದ ಎರಡು ವರ್ಷಗಳ ಬಳಿಕ ನಾಗರಿಕ್ ನಲ್ಲಿ ತೊಡಗಿಸಿಕೊಂಡರು. ಇವರ ಜೀವಿತಾವಧಿಯಲ್ಲಿ ತೆರೆ ಕಾಣದ ನಾಗರಿಕ್ 1977ರಲ್ಲಿ ತೆರೆ ಕಂಡಿತು. ಅಜಂತ್ರಿಕ್, ಬಾರಿ ಥೆಕ್ಕೆ ಪಾಲಿಯೆ, ಮೇಘೆ ಢಾಕಾ ತಾರಾ, ಕೋಮಲ್ ಗಾಂಧರ್, ಸುಬರ್ಣಾರೇಖಾ, ತೀತಾಶ್ ಏಕ್ತಿನಾದೀರ್ ನಾಮ್, ಜುಕ್ತಿ ತಕ್ಕೋ ಅರ್ ಗಪ್ಪೊ ಇವರು ಚಿತ್ರಕಥೆ ಬರೆದು, ನಿರ್ದೇಶಿಸಿದ ಸಿನೆಮಾಗಳು. ಪ್ರತಿಯೊಂದು ಸಿನೆಮಾ ಕೂಡ ಪ್ರೇಕ್ಷಕರನ್ನು ಗಾಢವಾಗಿ ತಟ್ಟುತ್ತದೆ.

ritwik ghatak

ದೇಶದ ವಿಭಜನೆ ಅದರಲ್ಲಿಯೂ ಬಾಂಗ್ಲಾ ವಿಭಜನೆಯಾಗಿದ್ದು ಮೂಲತಃ ಅಂದಿನ ಅವಿಭಜಿತ ಬಾಂಗ್ಲಾದಲ್ಲಿ ಜನಿಸಿ, ಬಾಲ್ಯ, ಯೌವನದ ನೆನಪುಗಳನ್ನು ಹೊದ್ದ ಘಟಕ್ ಅವರಿಗೆ ತೀವ್ರ ನೋವು ಉಂಟು ಮಾಡಿತು. ಈ ವೇದನೆಯನ್ನು ಜೀವಿತಾವಧಿ ಮರೆಯಲಿಲ್ಲ. ಮೇಘೆ ಢಾಕಾ ತಾರಾ, ಕೋಮಲ್ ಗಾಂಧರ್ ಮತ್ತು ಸುಬರ್ಣಾರೇಖಾ ಸಿನೆಮಾಗಳು ದೇಶದ ವಿಭಜನೆಯ ಸಂಕಟವನ್ನು ದಟ್ಟವಾಗಿ ಚಿತ್ರಿಸುತ್ತವೆ.

ಋತ್ವಿಕ್ ಘಟಕ್ ಅವರು ಇತರ ಮುಖ್ಯ ನಿರ್ದೇಶಕರು ಮಾಡಿರುವ ಸಿನೆಮಾಗಳಿಗೂ ಕಥೆ – ಚಿತ್ರಕಥೆ ರಚಿಸಿದ್ದಾರೆ. ಇವುಗಳಲ್ಲಿ ಕಮರ್ಷಿಯಲ್ ಆಗಿ ಭಾರೀ ಯಶಸ್ಸು ಕಂಡ ಸಿನೆಮಾ ಎಂದರೆ 1958ರಲ್ಲಿ ತೆರೆ ಕಂಡ ಬಿಮಲ್ ರಾಯ್ ನಿರ್ದೇಶನದ ಮಧುಮತಿ ಅಂದಿನ ಕಾಲಕ್ಕೆ ಇದು 4 ಕೋಟಿ ರೂಪಾಯಿಗಳಿಗೂ ಹೆಚ್ಚು ಗಳಿಕೆ ಮಾಡಿತು. ಇದರ ಯಶಸ್ಸಿನ ಅಲೆಗಳು ಇದೇ ಸ್ವರೂಪದ ಕಥೆ ಆಧರಿಸಿ ಭಾರತೀಯ ಚಿತ್ರರಂಗದ ಬೇರೆ ಬೇರೆ ಭಾಷೆಗಳಲ್ಲಿಯೂ ಸಿನೆಮಾಗಳ ನಿರ್ಮಾಣಕ್ಕೆ ಕಾರಣವಾಯತು.

ಭಾರತೀಯ ಚಿತ್ರರಂಗದ ಮೇರು ಸಿನೆಮಾ ತಂತ್ರಜ್ಞ, ನಿರ್ದೇಶಕ ಸತ್ಯಜಿತ್ ರೇ ಅವರು ಸ್ವತಃ ಋತ್ವಿಕ್ ಘಟಕ್ ಅವರ ಸಿನೆಮಾ ಕಲೆಗಾರಿಕೆಯ ಅಭಿಮಾನಿ. ಮೆಚ್ಚುಗೆಯ ನುಡಿಗಳನ್ನು ಆಡಿದ್ದಾರೆ. 1950–60ರ ದಶಕದ ಬಂಗಾಳದ ಬಹು ಸಿನೆಮಾ ನಿರ್ಮಾತೃ ಎಂದು ಕರೆದಿದ್ದಾರೆ. ಆದರೆ ಭಾರತೀಯ ಚಿತ್ರರಂಗಕ್ಕೆ ಘಟಕ್ ಅಂಥ ಮಹಾನ್ ಪ್ರತಿಭೆಯ ವಿರಾಟ ರೂಪ ಗೊತ್ತಾಗಿದ್ದು ಅವರ ಮರಣ ನಂತರವೇ ಎಂಬುದು ವಿಷಾದಕರ ಸಂಗತಿ.

ಪೂನಾ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿಯೂ ಘಟಕ್ ಅವರು ಕೆಲಸ ಮಾಡಿದ್ದು ಇವರಿಗಲ್ಲ; ಇವರ ವಿದ್ಯಾರ್ಥಿಗಳಾಗಿದ್ದವರಿಗೆ ಅಪೂರ್ವ ಸದವಕಾಶ. ಭಾರತೀಯ ಸಿನೆಮಾ ರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ ಮಣಿ ಕೌಲ್, ಅಡೂರು ಗೋಪಾಲಕೃಷ್ಣನ್, ಸಯೀದ್ ಅಖ್ತರ್ ಮಿರ್ಜಾ, ಜಾನ್ ಅಬ್ರಾಹಂಕುಮಾರ್ ಸಹಾನಿ, ಸುಭಾಷ್ ಘಾಯ್ ಇವರುಗಳು ಘಟಕ್ ಅವರ ಸಿನೆಮಾ ನೋಟದಿಂದ ಪ್ರಭಾವಿತರಾದರು.

ಕರ್ನಾಟಕದ ವಿವಿಧೆಡೆಯ ಪರ್ಯಾಯ ಸಿನೆಮಾ (ಮುಖ್ಯವಾಹಿನಿಗೆ ಹೊರತಾದದ್ದು)ಗಳ ಅಧ್ಯಯನಾಸ್ತಕರು ಸೇರಿಕೊಂಡು “ಮನುಜಮತ ಸಿನಿಯಾನ” ಎಂಬ ಬಳಗ ರೂಪಿಸಿಕೊಂಡಿದ್ದೇವೆ. 2014ರಿಂದ ಇದು ಸಕ್ರಿಯವಾಗಿದೆ. 9 ವರ್ಷಗಳ ಹಿಂದೆ ಹಾಸನದಲ್ಲಿ ಫಿಲ್ಮ್ ಫೆಸ್ಟಿವಲ್ ಮಾಡಿದ್ದೆವು (ಈ ಬಳಗದಿಂದ ಪ್ರತಿವರ್ಷ ಕನಿಷ್ಠ ನಾಲ್ಕು ಬಾರಿ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಫಿಲ್ಮ್ ಫೆಸ್ಟಿವಲ್ ನಡೆಯುತ್ತದೆ. ಇವುಗಳ ಆಯೋಜನೆಗೆ ಸರ್ಕಾರದಿಂದ ಹಣ ಸೇರಿದಂತೆ ಯಾವುದೇ ನೆರವು ಪಡೆಯುತ್ತಿಲ್ಲ) ಈ ಸಂದರ್ಭದಲ್ಲಿ ಸಿನೆಮಾ ಅಧ್ಯಯನಕಾರ ಪ್ರದೀಪ್ ಕೆಂಚನೂರು ಅವರು ಋತ್ವಿಕ್ ಘಟಕ್ ಅವರ ಸಿನೆಮಾಗಳು, ಧ್ವನಿ ಬಗ್ಗೆ ಉಪನ್ಯಾಸ ನೀಡಿದರು. ಇದು ನನ್ನನ್ನು ಮತ್ತೆ ಘಟಕ್ ಸಿನೆಮಾಗಳ ಮರು ಓದಿಗೆ ಅಣಿಗೊಳಿಸಿತು. ಈ ಲೇಖನ ಬರೆಯಲು ಹೊರಟಾಗ ಪ್ರದೀಪ್ ನೆನಪಾದರು.

“ಭಾರತೀಯ ಸಂದರ್ಭದಲ್ಲಿ ಸೃಜನಾತ್ಮಕ ಜಗತ್ತಿನಲ್ಲಿ ಬಹಳಷ್ಟು ಬಾರಿ ಪೈಪೋಟಿಗಳನ್ನು ನೋಡುತ್ತೇವೆ. ಆರ್ಟ್ ಹೌಸ್ ಸಿನೆಮಾ ಕ್ಷೇತ್ರದಲ್ಲಿ ಸತ್ಯಜಿತ್ ರೇ ಮತ್ತು ಋತ್ವಿಕ್ ಘಟಕ್ ಕುರಿತು ಇಂಥದ್ದನ್ನು ಕಾಣುತ್ತೇವೆ. ಇವರಿಬ್ಬರ ವಿಚಾರಧಾರೆಗಳು ಎರಡು ಸಿದ್ಧಾಂತಗಳ ರೀತಿ ಇವೆ (School of thought) ಇವರಿಬ್ಬರಿಗೂ ದೊಡ್ಡ ಪ್ರಮಾಣದಲ್ಲಿ ಅಭಿಮಾನಿಗಳಿದ್ದಾರೆ. ಘಟಕ್ ಅವರ ಸಿನೆಮಾಗಳು ತುಂಬ ಆಸಕ್ತಿದಾಯಕ. ಇವರ ಸಿನೆಮಾಗಳಲ್ಲಿ ವಿಗ್ರಹ ಭಂಜನೆ ಮಾದರಿಯ ವಿಚಾರಧಾರೆಗಳು ಕಾಣುತ್ತವೆ. ಅದುವರೆಗೂ ಪರ್ಯಾಯ ಸಿನೆಮಾ ಕ್ಷೇತ್ರದಲ್ಲಿ ಇದ್ದ ಸಿದ್ಧ ಮಾದರಿಗಳನ್ನು ಮುರಿದರು. ಮೊದಲಿಗೆ ಸಿನೆಮಾದಲ್ಲಿ ಸಿಂಕ್ ಸೌಂಡ್ ಶುರು ಮಾಡಿದರು. ಛಾಯಾಗ್ರಹಣದ ದೃಷ್ಟಿಕೋನಗಳಲ್ಲಿಯೂ ಹೊಸತನಗಳನ್ನು ತಂದರು.

ಇವರ ಸಿನೆಮಾಗಳ ಸಂಗೀತದಲ್ಲಿಯೂ ವಿಭಿನ್ನತೆ ಇದೆ. ರೇ ಅವರು ಹಿನ್ನೆಲೆ ಸಂಗೀತಕ್ಕೆ ಸಿತಾರ್ ಬಳಸಿದರೆ ಘಟಕ್ ಅವರು ಸರೋದ್ ಬಳಸುತ್ತಾರೆ. ಇವುಗಳ ವೈಶಿಷ್ಟ್ಯ ಗಮನಿಸಿದರೂ ಅವರು ಎರಡು ಧ್ರುವಗಳಾಗಿಯೂ ಕಾಣಿಸುತ್ತಾರೆ. ಈ ಎರಡೂ ವಾದ್ಯಗಳು ಸಿನೆಮಾದ ಆಯಾ ಸಂದರ್ಭಕ್ಕೆ ಹೊರಡಿಸುವ ರಾಗಗಳು ವಿಶೇಷ ಭಾವಾರ್ಥ ಕಟ್ಟಿಕೊಡುತ್ತವೆ. ಘಟಕ್ ಸಿನೆಮಾಗಳು ಮನ ಕಲಕುವುದಷ್ಟೆ ಅಲ್ಲ; ಸಂವೇದನಾಶೀಲ ಪ್ರೇಕ್ಷಕರನ್ನು ಅಲುಗಾಡಿಸುತ್ತವೆ, ದಿಗ್ಬ್ರಮೆಗೊಳಿಸುತ್ತವೆ. ಸುಬರ್ಣಾರೇಖಾ (ಸುವರ್ಣ ರೇಖೆ) ಇದಕ್ಕೊಂದು ಉದಾಹರಣೆಯಷ್ಟೆ. ಅವರ ಎಲ್ಲ ಸಿನೆಮಾಗಳು ವೀಕ್ಷಕರನ್ನು ತೀವ್ರ ಚಿಂತನೆಗೆ ಹಚ್ಚುತ್ತವೆ” ಎಂದು ಪ್ರದೀಪ್ ಕೆಂಚನೂರು ವಿವರಿಸಿದರು.

ಮಾರ್ಚ್ 1, 2025ರಿಂದ ಮಾರ್ಚ್ 8, 2025ರ ತನಕ ಬೆಂಗಳೂರು ಫಿಲ್ಮ್ ಫೆಸ್ಟಿವಲ್ ಆಯೋಜಿತವಾಗಿದೆ. ಈ ಸಂದರ್ಭದಲ್ಲಿ ಶತಮಾನೋತ್ಸವ ಸ್ಮರಣೆ ವಿಭಾಗದಲ್ಲಿ ಋತ್ವಿಕ್ ಘಟಕ್ ಅವರನ್ನು ನೆನಪು ಮಾಡಿಕೊಳ್ಳಲಾಗುತ್ತದೆ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನೂ ಓದಿ ಫಿಲ್ಮ್‌ ಫೆಸ್ಟಿವಲ್‌ | ಚಾಮಯ್ಯ ಮೇಷ್ಟ್ರೇ… ನಿಮ್ಮನ್ನು ಮರೆಯುವುದುಂಟೆ!

WhatsApp Image 2025 11 17 at 3.33.11 PM 1
ಕುಮಾರ ರೈತ
+ posts

ಪತ್ರಕರ್ತ, ಕೃಷಿ ಇವರ ಆಸಕ್ತಿಯ ಕ್ಷೇತ್ರ. ಹಲವು ಪತ್ರಿಕೆಗಳಿಗೆ ಕೃಷಿ ಲೇಖನಗಳನ್ನು ಬರೆಯುತ್ತಿದ್ದಾರೆ

ಪೋಸ್ಟ್ ಹಂಚಿಕೊಳ್ಳಿ:

ಕುಮಾರ ರೈತ
ಕುಮಾರ ರೈತ
ಪತ್ರಕರ್ತ, ಕೃಷಿ ಇವರ ಆಸಕ್ತಿಯ ಕ್ಷೇತ್ರ. ಹಲವು ಪತ್ರಿಕೆಗಳಿಗೆ ಕೃಷಿ ಲೇಖನಗಳನ್ನು ಬರೆಯುತ್ತಿದ್ದಾರೆ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...