ತೆಲುಗು ನಟಿ ಸಮಂತಾ ರುತ್ ಪ್ರಭು ಇದೀಗ ಹೊಸ ಜೀವನ ಆರಂಭಿಸಿದ್ದಾರೆ. ʼದಿ ಫ್ಯಾಮಿಲಿ ಮ್ಯಾನ್ʼ ವೆಬ್ ಸೀರೀಸ್ ಖ್ಯಾತಿಯ ನಿರ್ದೇಶಕ ರಾಜ್ ನಿಡಿಮೋರು ಜೊತೆ ನಟಿ ಸಮಂತಾ ರುತ್ ಪ್ರಭು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮೂಲಕ ಹಲವು ದಿನಗಳಿಂದ ಹಬ್ಬಿದ್ದ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಇಶಾ ಫೌಂಡೇಶನ್ ಆವರಣದಲ್ಲಿರುವ ಲಿಂಗಭೈರವಿ ದೇವಿಯ ದೇವಸ್ಥಾನದಲ್ಲಿ ಇಂದು ಸರಳ ವಿವಾಹವಾಗಿದ್ದಾರೆ.
ಇದನ್ನು ಓದಿದ್ದೀರಾ? ಅನಾರೋಗ್ಯದಿಂದ ಹಿರಿಯ ನಟ ಉಮೇಶ್ ನಿಧನ
ʼಫ್ಯಾಮಿಲಿ ಮ್ಯಾನ್ʼ, ʻಸಿಟಾಡೆಲ್ ಹನಿಬನಿʼ ವೆಬ್ ಸೀರೀಸ್ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶಿಸಿರುವ ನಿರ್ದೇಶಕನ ಜೊತೆ ಸಮಂತಾ ಮದುವೆಯಾಗಿರುವ ವಿಚಾರವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಧಿಕೃತ ಘೋಷಣೆ ಮಾಡಿದ್ದಾರೆ. ಮದುವೆಯ ಭಾವಚಿತ್ರಗಳನ್ನು ಸಮಂತಾ ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.





