ಸಿಗರೇಟ್ ಸೇವನೆ ಮಾಡುವ ಶಾರುಕ್‌ ನಿಮ್ಮ ರೋಲ್‌ ಮಾಡಲ್‌ ಅಲ್ಲ ಎಂದ ಬಾಲಿವುಡ್ ನಟ

Date:

ಬಾಲಿವುಡ್‌ ನಟ ಶಾರುಕ್‌ ಖಾನ್ ನವಂಬರ್‌ 2 ರಂದು ತಮ್ಮ 59ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿ ಅಭಿಮಾನಿಗಳೊಂದಿಗೆ ಸಿಗರೇಟ್‌ ಸೇವನೆ ತ್ಯಜಿಸಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಕಳೆದ 30 ವರ್ಷಗಳಿಂದ ನಿರಂತರವಾಗಿ ಸಿಗರೇಟ್‌ ಸೇವನೆ ಮಾಡುತ್ತಿದ್ದ ತಮ್ಮನ್ನು ರೋಲ್‌ ಮಾಡಲ್‌ ಎಂದು ಪರಿಗಣಿಸಿಕೊಳ್ಳಲು ಇಷ್ಟವಿರಲಿಲ್ಲ ಎಂದು ತಿಳಿಸಿದ್ದಾರೆ.

ನಿಮಗೆ ಏನು ಅನಿಸುತ್ತದೆಯೋ ಅದನ್ನೇ ಮಾಡಿ. ನಾನು ನಿಮ್ಮ ರೋಲ್‌ ಮಾಡಲ್‌ ಅಲ್ಲ ಎಂದು ಹುಟ್ಟುಹಬ್ಬದಂದು ಸಂದೇಶ ನೀಡಿದ್ದಾರೆ.

30 ವರ್ಷಗಳ ಕಾಲ ಸಿಗರೇಟ್ ಸೇವನೆ ಮಾಡುತ್ತಿದ್ದುದ್ದು ಕೆಟ್ಟ ಗಳಿಗೆಯಾಗಿತ್ತು. ಸಿಗರೇಟ್‌ ಸೇವನೆ ಮಾಡಬಾರದೆಂದು ನಿಮಗೆ ನಾನು ಸಲಹೆ ನೀಡುತ್ತೇನೆ. ನಮಗೆ ಯಾವಾಗಲು ತಿಳಿದಿದೆ ಸಿಗರೇಟ್ ಸೇವನೆ ಒಳ್ಳೆಯದಲ್ಲ. ನಾವು ಇದನ್ನು ಬಿಟ್ಟರೆ ತುಂಬಾ ಒಳ್ಳೆಯದು.ನಾವು ಇದನ್ನು ಬಿಡದಿದ್ದರೆ ತುಂಬ ಕೆಟ್ಟದ್ದು. ನೀವು ಸೂಕ್ತವೆಂದು ಭಾವಿಸುವ ಸಂದರ್ಭದಲ್ಲಿ ಸೂಕ್ತವಾದುದ್ದನ್ನೇ ಮಾಡಿ ಎಂದು ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಸ್ನೇಹಿತರೆ, ಒಳ್ಳೆಯ ವಿಷಯವೇನೆಂದರೆ ನಾನು ಸಿಗರೇಟ್‌ ಸೇದುವುದನ್ನು ಬಿಟ್ಟಿದ್ದೇನೆ. ಸಿಗರೇಟ್ ಬಿಟ್ಟ ನಂತರ ನಾನು ಚೆನ್ನಾಗಿ ಉಸಿರಾಡುತ್ತಿದ್ದೇನೆ. ದೇವರ ದಯೆಯಿಂದ ನನ್ನ ಆರೋಗ್ಯ ಚೆನ್ನಾಗಿದೆ” ಎಂದು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಕಡಿವಾಣ ಯಾವಾಗ?

ಶಾರುಕ್‌ ತಮ್ಮ ಸಿಗರೇಟ್‌ ಸೇವನೆಯ ಬಗ್ಗೆ ಆಗಾಗ ಸಂದರ್ಶನಗಳಲ್ಲಿ ಹೇಳುತ್ತಿದ್ದರು. 2011ರ ಸಂದರ್ಶನದಲ್ಲಿ, ನಾನು ದಿನಕ್ಕೆ 100 ಸಿಗರೇಟ್‌ ಸೇದುತ್ತೇನೆ. ಇದರಿಂದ ನಾನು ಊಟ ಮಾಡುವುದು, ನೀರು ಸೇವನೆಯನ್ನು ಮರೆಯುತ್ತಿದ್ದೆ ಎಂದು ಹೇಳಿದ್ದರು.

“ನಾನು ಮಧ್ಯಮ ವರ್ಗದ ಕುಟುಂಬದಿಂದ ಬಂದವನು. ನನ್ನ ಪೋಷಕರ ಒತ್ತಾಸೆಯಂತೆ ನಾನು ವಿದ್ಯಾಭ್ಯಾಸ ಪಡೆದುಕೊಂಡಿದ್ದೆ. ನನ್ನ ಶಿಕ್ಷಣ ನನ್ನ ಜೀವನದಲ್ಲಿ ಉಪಯುಕ್ತವಾಗಿತ್ತು. ನಾವೆಲ್ಲ ಎಲ್ಲಿಂದಲೋ ಬಂದವರಾಗಿತ್ತೇವೆ. ನಿಮ್ಮ ಜೀವನದ ಪ್ರಯಾಣ ಎಲ್ಲಿಂದಲೋ ಪ್ರಾರಂಭವಾಗಿರುತ್ತದೆ. ವಿದ್ಯಾಭ್ಯಾಸ ಸೇರಿದಂತೆ ಎಲ್ಲ ಕೆಲಸವನ್ನು ಪರಿಶ್ರಮದಿಂದ ಮುಂದುವರಿಸಿ. ಹಾಗೆಯೇ ನಿಮ್ಮ ಕನಸನ್ನು ಮುಂದುವರೆಸಿ, ನಿಮ್ಮ ಅಂತ್ಯವು ಸುಂದರವಾಗಿರುತ್ತದೆ. ನನ್ನ ಜೀವನವು ಇದೇ ರೀತಿ ಮುಂದುವರೆಯಿತು” ಎಂದು ತಿಳಿಸಿದ್ದಾರೆ.

ಸದ್ಯ ಶಾರುಕ್‌ ಅವರು ಸುಜಯ್‌ ಘೋಷ್‌ ನಿರ್ದೇಶನದ ಕಿಂಗ್‌ ಎಂಬ ಸಿನಿಮಾದಲ್ಲಿ ನಟಿಸುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒನ್ ಬ್ಯಾಟಲ್ ಆಫ್ಟರ್ ಅನದರ್ | ಸಾಧಾರಣ ಚಿತ್ರಕ್ಕೆ ಆಸ್ಕರ್ ಚಿನ್ನದ ಚೌಕಟ್ಟು!

ವಲಸೆಯಂತಹ ಜ್ವಲಂತ ಸಮಸ್ಯೆಯನ್ನು ಹೇಳುವ ರಾಜಕೀಯ ಚಿತ್ರವೆನಿಸಿದರೂ; ಕ್ರಾಂತಿಕಾರಿ ಚಟುವಟಿಕೆಗಳ ಕುರಿತು...

“ತಾಯಿನೇ ಎಲ್ಲಾ” ಎಂದಿದ್ದ ಪ್ರೇಮ್, ಈಗ “ಸರ್ಸೆ ನಿನ್ನ ಸೆರಗ” ಅಂತಾರೆ!; ಭಾರೀ ಟೀಕೆಗೆ ಗುರಿಯಾದ ʼಕೆಡಿ ದಿ ಡೆವಿಲ್‌ʼ ಹಾಡು

ಪ್ರೇಮ್‌ ನಿರ್ದೇಶನದ "ಕೆಡಿ ದಿ ಡೆವಿಲ್‌" ಸಿನಿಮಾ ಏಪ್ರಿಲ್‌ 30ರಂದು ಬಿಡುಗಡೆಯಾಗಲಿದೆ...

ಆಸ್ಕರ್ 2026​ ಪ್ರಶಸ್ತಿ | ಅತ್ಯುತ್ತಮ ನಟ ಮೈಕೆಲ್ ಬಿ, ನಟಿ ಜೆಸ್ಸಿ ಬಕ್ಲಿ: ಸಂಪೂರ್ಣ ವಿಜೇತರ ಪಟ್ಟಿ

ಆಸ್ಕರ್ 2026 ಪ್ರಶಸ್ತಿ ಸಮಾರಂಭವು ಮಾರ್ಚ್ 15ರಂದು ಲಾಸ್ ಏಂಜಲಿಸ್‌ನ ಡಾಲ್ಬಿ...