ಫೇರ್‌ಪ್ಲೇ ಆಪ್‌ನಲ್ಲಿ 2023ರ ಆವೃತ್ತಿಯ ಐಪಿಎಲ್ ಅನ್ನು ಅಕ್ರಮವಾಗಿ ಪ್ರಸಾರ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ತಮನ್ನಾ ಭಾಟಿಯಾ ಅವರಿಗೆ ಮಹಾರಾಷ್ಟ್ರ ಸೈಬರ್ ಪೊಲೀಸ್ ಸಮನ್ಸ್ ನೀಡಿದೆ. ಫೇರ್‌ಪ್ಲೇ ಆಪ್ ಮಹದೇವ್ ಆನ್‌ಲೈನ್ ಗೇಮ್‌ನ ಒಂದು ಬೆಟ್ಟಿಂಗ್ ಆಪ್ ಆಗಿದೆ.
ತಮನ್ನಾ ಅವರಿಗೆ ಏಪ್ರಿಲ್ 29ರಂದು ಮಹಾರಾಷ್ಟ್ರ ಸೈಬರ್ ಪೊಲೀಸರು ಸಮನ್ಸ್ ನೀಡಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಪರ್ ಗಾಯಕ ಬಾದ್‌ಶಾ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಬಾಲಿವುಡ್ ನಟ ಸಂಜಯ್ ದತ್ ಅವರಿಗೂ ಕಳೆದ ವಾರ ಸಮನ್ಸ್ ನೀಡಲಾಗಿದ್ದು, ಆದರೆ ಅವರು ಇಲಾಖೆಯ ಮುಂದೆ ಹಾಜರಾಗಲು ಸಮಯ ಕೋರಿದ್ದಾರೆ.
ಇವರೆಲ್ಲ ನಟರು ಹಾಗೂ ಗಾಯಕರು ಫೇರ್‌ಪ್ಲೇ ಆಪ್ ಮೂಲಕ ಐಪಿಎಲ್ ನೋಡುವಂತೆ ಪ್ರಚಾರ ಮಾಡುತ್ತಿದ್ದರು. ಆದರೆ ಅಧಿಕೃತವಾಗಿ ಈ ಆಪ್ ಮಾಧ್ಯಮ ಪ್ರಸಾರದ ಹಕ್ಕುಗಳನ್ನು ಹೊಂದಿರಲಿಲ್ಲ. ಇದರಿಂದ ಅಧಿಕೃತ ಪ್ರಸಾರ ಹಕ್ಕುಗಳನ್ನು ಹೊಂದಿದ್ದ ವಯಾಕಾಂ 18 ಸಂಸ್ಥೆ ನೂರು ಕೋಟಿಗೂ ಹೆಚ್ಚಿನ ನಷ್ಟ ಹೊಂದಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದ್ವೇಷ -ವಿರಸ- ವೈಷಮ್ಯಗಳ ಮೇಲೆ ಮತಯಾಚನೆ ಪರಮವಿಕೃತಿ
ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿಯೇ ವಯಾಕಾಂ 18 ಸಂಸ್ಥೆ ಐಪಿಎಲ್ ಪಂದ್ಯಗಳ ಪ್ರಸಾರದ ಬೌದ್ಧಿಕ ಪ್ರಸಾರದ ಹಕ್ಕುಗಳಡಿ ಎಫ್‌ಐಆರ್ ದಾಖಲಿಸಿತ್ತು.
ಎಫ್‌ಐಆರ್‌ನ ಅಡಿಯಲ್ಲಿ ಬಾಲಿವುಡ್ ನಟರಾದ ಸಂಜಯ್ ದತ್, ಜಾಕ್ವಿಲಿನ್ ಫರ್ನಾಡಿಸ್ ಸೇರಿದಂತೆ ಹಲವು ನಟರ ವಿರುದ್ಧ ಎಫ್‌ಐಆರ್ ದಾಖಲಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಮಹಾದೇವ್ ಆಪ್‌ನ ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿತ್ತು.





