ತಂಗಳಾನ್ | ಚಿನ್ನದ ಗಣಿಯಿಂದ ಚಿಮ್ಮಿದ ದಲಿತರು ಬ್ರಾಹ್ಮಣರಾಗುವ ಐತಿಹಾಸಿಕ ಕಥನ

Date:

ಇತಿಹಾಸದಲ್ಲಿ ಸಾಮಾಜಿಕ ಸಮಾನತೆಯನ್ನು ಪಡೆಯಲು ದಲಿತರು ನಾನಾ ದಾರಿಗಳನ್ನು ಹಿಡಿದಿದ್ದಾರೆ. ಹೇಗೆ ಅಪಾರ ಸಂಖ್ಯೆಯಲ್ಲಿ ಕ್ರೈಸ್ತರಾಗಿದ್ದಾರೆಯೋ, ಈಗ ಬಾಬಾಸಾಹೇಬ್ ಅಂಬೇಡ್ಕರರ ಹಾದಿಯಲ್ಲಿ ಬೌದ್ಧರಾಗುತ್ತಿದ್ದಾರೆಯೋ ಹಾಗೇ ಬ್ರಾಹ್ಮಣರಾಗುವ ಪ್ರಯತ್ನವನ್ನೂ ದಲಿತರು ಮಾಡಿದ್ದರು!

ಇದೀಗ ಬಿಡುಗಡೆಯಾಗಿ ವಿಮರ್ಶಕರಿಂದ ವ್ಯಾಪಕ ಮೆಚ್ಚುಗೆ ಗಳಿಸುತ್ತಿರುವ, ಹಾಗೆಯೇ ತುಂಬಿದ ಗೃಹಗಳಿಂದ ಪ್ರದರ್ಶನವನ್ನು ಕಾಣುತ್ತಿರುವ ಪಾ.ರಂಜಿತ್ ನಿರ್ದೇಶನದ, ಚಿಯಾನ್ ವಿಕ್ರಮ್ ಅಭಿನಯದ “ತಂಗಳಾನ್” ಚಿತ್ರದ ಒಂದು ವೈಶಿಷ್ಟ್ಯ ಸಂತ ರಾಮಾನುಜಂ. ರಾಮಾನುಜಂ ರಾಮಾನುಜಾಚಾರ್ಯ ಎಂದು ಪ್ರಸಿದ್ಧರು. ಅವರ ಅನುಯಾಯಿಗಳು ಮಂಡ್ಯ ಜಿಲ್ಲೆಯ ಮೇಲುಕೋಟೆಗೆ ಪ್ರತಿ ವರ್ಷ ಬಹುಸಂಖ್ಯೆಯಲ್ಲಿ ಬರುತ್ತಾರೆ. ಚಿತ್ರದಲ್ಲಿ ತಮಿಳುನಾಡಿನ ದಲಿತ ಸಮುದಾಯ 1800ರ ಆಸುಪಾಸಿನಲ್ಲಿ ಬಹು ಸಂಖ್ಯೆಯಲ್ಲಿ ರಾಮಾನುಜಂ ಅವರ ಅನುಯಾಯಿಗಳಾಗುವ ದೃಶ್ಯ ಇದೆ. ಎಲ್ಲರೂ ಬ್ರಾಹ್ಮಣರಾಗಬಹುದು ಎಂಬ ಸಂಭಾಷಣೆ ಇದೆ! ಚಿತ್ರದಲ್ಲಿ ರಾಮಾನುಜಂ ಅನುಯಾಯಿಯಾದ ಪಾತ್ರಧಾರಿ (ಪಶುಪತಿ) ಮಕ್ಕಳಿಗೆ ಪವಿತ್ರ ದಾರ ತೊಡಿಸುತ್ತಾರೆ. ಹಾಗೆ ತೊಡಿಸುತ್ತ ಮಾಂಸ ತಿನ್ನಬಾರದು, ಸ್ಲಂ ಜನರ ಜೊತೆ ಸೇರಬಾರದು ಎಂದು ಮಕ್ಕಳಿಗೆ ಬುದ್ಧಿವಾದ ಹೇಳುತ್ತಾರೆ.

ಇದರರ್ಥ ಬ್ರಾಹ್ಮಣರಾಗುವ ಪ್ರಯತ್ನದ ಮೂಲಕವೂ ದಲಿತರು ತಮಿಳುನಾಡಿನಲ್ಲಿ ಸಮಾನತೆಯೆಡೆಗೆ ಸಾಗಲು ಪ್ರಯತ್ನಿಸಿರುವ ಸಂದರ್ಭ ನಡೆದಿದೆ ಎಂಬುದು ಸಮಾನತೆಯೆಡೆಗೆ ತುಡಿತ. ಯಾಕೆಂದರೆ ಒಂದು ಸಂದರ್ಭದಲ್ಲಿ ಅದೇ ರಾಮಾನುಜಂ ಅನುಯಾಯಿ ಪಾತ್ರಧಾರಿ ಕಾಡಿಗೆ ಚಿನ್ನ ಹುಡುಕಲು ನಾಯಕ ತಂಗಳಾನ್(ವಿಕ್ರಮ್) ಜೊತೆ ಹೋಗುತ್ತಾರೆ, ಕರ್ನಾಟಕದ ಕೋಲಾರ ಜಿಲ್ಲೆಗೆ. ಅಲ್ಲಿ ಆತನನ್ನು ಎದುರಾಗುವ ಕನ್ನಡಿಗ ಶಾನುಭೋಗ ಪಾತ್ರಧಾರಿ ರಾಮಾನುಜಂ ಅನುಯಾಯಿಯಿಂದ ದಾರ ಕಿತ್ತುಕೊಳ್ಳುವ ಘಟನೆ ನಡೆಯುತ್ತದೆ. ಅದನ್ನು ಪ್ರತಿಭಟಿಸಿ ರಾಮಾನುಜಂ ಅನುಯಾಯಿ ಹೋರಾಟ ಮಾಡಿ ದಾರ ಉಳಿಸಿಕೊಳ್ಳುತ್ತಾರೆ!

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
ಪಾ ರಂಜಿತ್
ತಂಗಳಾನ್‌ ನಿರ್ದೇಶಕ ಪಾ ರಂಜಿತ್

ಮತ್ತೊಂದು ದೃಶ್ಯದಲ್ಲಿ, ಚಿನ್ನದ ಗಣಿಗಾರಿಕೆ ಮಾಡುತ್ತಿದ್ದ ದಲಿತರು ಕೊನೆಗೊಂದು ದಿನ ಹಸಿವಿನಿಂದ ಸಾಮೂಹಿಕವಾಗಿ ನರಳುವ ಸಂದರ್ಭ ಬರುತ್ತದೆ. ಆಗ ಇದ್ದಕ್ಕಿದ್ದಂಗೆ ಕೋಣವೊಂದು ಪ್ರತ್ಯಕ್ಷವಾಗುತ್ತದೆ. ದೃಶ್ಯದಲ್ಲಿ ಆ ಕೋಣವನ್ನು ತೋರಿಸುವ ಅವರನ್ನು ಗಣಿಗಾರಿಕೆಗೆ ಕರೆಸಿದ್ದ ಬ್ರಿಟಿಷ್ ಅಧಿಕಾರಿ ಕ್ಲೆಮೆಂಟ್ ದಲಿತ ಸಮುದಾಯದ ಬಂಧುಗಳಿಗೆ “ಹೋಗಿ ನಿಮ್ಮ ಆಹಾರ ಸಿಕ್ಕಿತು” ಎಂದು ಕೂಗಿ ಹೇಳುತ್ತಾನೆ. ತಕ್ಷಣ ಹಸಿವಿನಿಂದ ನರಳುತ್ತಿದ್ದ ದಲಿತರು ಅಪರಿಮಿತವಾಗಿ ಖುಷಿಗೊಂಡು ಆಹಾರಕ್ಕಾಗಿ ಆ ಕೋಣವನ್ನು ಬಲಿ ಪಡೆಯಲು ಆಯುಧಗಳ ಸಮೇತ ಅದರ ಬೆನ್ನತ್ತುತ್ತಾರೆ. ಅಂದಹಾಗೆ ಇದನ್ನು ನೋಡುತ್ತಲೇ ಅಲ್ಲಿಯೇ ಇದ್ದ ರಾಮಾನುಜಂ ಅನುಯಾಯಿ ಅಪಾರವಾಗಿ ದುಃಖಿತಗೊಳ್ಳುತ್ತಾನೆ. ಮಾಂಸ ತಿನ್ನಬೇಡಿ ಎಂದು ತಾನು ಯಾವ ಸಿದ್ದಾಂತವನ್ನು ಪ್ರತಿಪಾದಿಸಿದ್ದೇನೊ ಅದನ್ನು ತನ್ನ ಸಮುದಾಯ ಉಲ್ಲಂಘಿಸುತ್ತಿದೆಯಲ್ಲ ಎಂದು ಬೇಸರಗೊಳ್ಳುತ್ತಾನೆ. ಇದರರ್ಥ ಸಮಾನತೆಯೆಡೆಗೆ ಮಿಡಿಯುವ ಆ ರಾಮಾನುಜಂ ಅನುಯಾಯಿಯ ನಿರಂತರ ತುಡಿತ ಎಂಬುದು.

ಇತಿಹಾಸದಲ್ಲಿ ಸಾಮಾಜಿಕ ಸಮಾನತೆಯನ್ನು ಪಡೆಯಲು ದಲಿತರು ನಾನಾ ದಾರಿಗಳನ್ನು ಹಿಡಿದಿದ್ದಾರೆ. ಹೇಗೆ ಅಪಾರ ಸಂಖ್ಯೆಯಲ್ಲಿ ಕ್ರೈಸ್ತರಾಗಿದ್ದಾರೆಯೋ, ಈಗ ಬಾಬಾಸಾಹೇಬ್ ಅಂಬೇಡ್ಕರರ ಹಾದಿಯಲ್ಲಿ ಬೌದ್ಧರಾಗುತ್ತಿದ್ದಾರೆಯೋ ಹಾಗೆ ಬ್ರಾಹ್ಮಣರಾಗುವ ಪ್ರಯತ್ನವನ್ನು ಕೂಡ ದಲಿತರು ಮಾಡಿದ್ದಾರೆ ಮತ್ತು ಆಗಿದ್ದಾರೆ ಎಂಬುದು ನಾವು ಗಮನಿಸಬೇಕಾದ ವಿಚಾರ. ಈ ನಿಟ್ಟಿನಲ್ಲಿ ತಂಗಳಾನ್ ಚಿತ್ರದಲ್ಲಿ ನಿರ್ದೇಶಕ ಪಾ. ರಂಜಿತ್ ಇತಿಹಾಸದ ಅಂತಹ ಒಂದು ಸಣ್ಣ ಪ್ರಯತ್ನವನ್ನು, ಸಮಾನತೆಗೆ ನಡೆಯುವ ವಿಶಿಷ್ಟ ಪ್ರಯತ್ನವನ್ನು ಅತ್ಯಂತ ಯಶಸ್ವಿಯಾಗಿ ದಾಖಲಿಸಿದ್ದಾರೆ.

ರಾಮಾನುಜಂ
ರಾಮಾನುಜಾಚಾರ್ಯ

ಈ ನಿಟ್ಟಿನಲ್ಲಿ ಹೇಳಬಹುದಾದರೆ ನೂರಾರು ದಲಿತರು ರಾಮಾನುಜಂ ಅನುಯಾಯಿಗಳಾಗುವ, ಮಾಂಸ ತಿನ್ನುವುದನ್ನು ಬಿಡುವ, ಅಂತಹ ಒಂದು ಪ್ರಯತ್ನ ನಿಜವೇ ಎಂದು ಯಾರಿಗಾದರೂ ಅನ್ನಿಸಬಹುದು. ಆದರೆ, ಇದು ವಾಸ್ತವ. ಏಕೆಂದರೆ ಈಗಲೂ ನೂರಾರು ಸಂಖ್ಯೆಯಲ್ಲಿ ಉದಾಹರಣೆಗೆ ಚಾಮರಾಜನಗರದ ಕೊಳ್ಳೇಗಾಲ ತಾಲೂಕಿನ ಮಹದೇಶ್ವರ ಬೆಟ್ಟದಲ್ಲಿರುವ ಮಹದೇಶ್ವರನಿಗೆ ದಲಿತರು ನೂರಾರು ಸಂಖ್ಯೆಯಲ್ಲಿ ಗುಡ್ಡಪ್ಪನನ್ನು ಬಿಡಿಸುತ್ತಾರೆ ಅಥವಾ ಗುಡ್ಡಪ್ಪಂದಿರು ಆಗುತ್ತಾರೆ. ಅವರೆಲ್ಲರ ಸಂಪ್ರದಾಯವೆಂದರೆ ಅವರು ಮದ್ಯಪಾನ ಮಾಡಬಾರದು ಮಾಂಸ ತಿನ್ನಬಾರದು ಇತ್ಯಾದಿ ಇತ್ಯಾದಿ. ಅಂದರೆ ಅಂದು ರಾಮಾನುಜಂ ಅನುಯಾಯಿಗಳು ಮಾಡಿರುವಂತೆ ಈಗಲೂ ಮಹದೇಶ್ವರನ ಭಕ್ತರು ಮಾಡುತ್ತಿರುವರೇ? ಖಂಡಿತ ಇದು ಗಮನಿಸಬೇಕಾದ ವಿಚಾರ. ಹಾಗೆ ಇದು ಕರ್ನಾಟಕದಲ್ಲಿ ಅಷ್ಟೇ ಅಲ್ಲ ದೂರದ ಉತ್ತರ ಪ್ರದೇಶದಲ್ಲಿ ಪಂಜಾಬಿನಲ್ಲಿ ರವಿದಾಸರ ಅನುಯಾಯಿಗಳು ಇದೇ ಮಾದರಿಯನ್ನು ಅನುಸರಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಸಂತ ಕಬೀರರ ಹಾದಿಯಲ್ಲಿ ದಲಿತರು ಸಾಗಿದ್ದಾರೆ. ಈ ನಿಟ್ಟಿನಲ್ಲಿ ತಮಿಳುನಾಡಿನಲ್ಲಿ ದಲಿತರು ರಾಮಾನುಜಮ್ ಅನುಯಾಯಿಗಳಾಗುವ ಆ ಹಾದಿಯಲ್ಲಿ ಜನಿವಾರ ತೊಳಲು ಪ್ರಯತ್ನಿಸಿರುವ ಘಟನೆ ನಡೆದಿಲ್ಲ ಎಂದು ಯಾರೂ ಭಾವಿಸಬಾರದು.

thangalan

ಹಾಗೆಯೇ ತಂಗಳಾನ್ ಚಿತ್ರದಲ್ಲಿ ನಿರ್ದೇಶಕ ನಡೆದಿರುವ ಇತಿಹಾಸವನ್ನು ಕೋಲಾರ ಗೋಲ್ಡ್ ಫೀಲ್ಡ್ ಕೆಜಿಎಫ್‌ನಲ್ಲಿ ಚಿನ್ನ ತೆಗೆಯುವ ನಿಟ್ಟಿನಲ್ಲಿ ನಡೆದಿರುವ ಇತಿಹಾಸವನ್ನು ಮರು ಕಟ್ಟಿಕೊಟ್ಟಿದ್ದಾರೆ. ಅಂತಹ ಇತಿಹಾಸದಲ್ಲಿ ದಲಿತರು ಬ್ರಾಹ್ಮಣರಾಗುವ ಇಂತಹ ಒಂದು ಘಟನೆಯು ಚಿಲುಮೆಯಾಗಿ ಚಿಮ್ಮಿ ಬಂದಿದೆ, ಚಿನ್ನದ ಗಟ್ಟಿಯಾಗಿ ಹೊರ ಬಂದಿದೆ.

ಅಂದಹಾಗೆ ಇಂತಹ ಅಪರೂಪದ ಯಾರೂ ಮುಟ್ಟಿರದ ದಲಿತರು ಬ್ರಾಹ್ಮಣರಾಗುವ ಇತಿಹಾಸದ ದಾಖಲೀಕರಣ ಖಂಡಿತ ಪ್ರಗತಿಪರರನ್ನು ಒಳಗೊಂಡಂತೆ ಸಾಮಾಜಿಕ ಅಧ್ಯಯನ ಮಾಡುವ ಪ್ರತಿಯೊಬ್ಬರನ್ನು ಚಕಿತಗೊಳಿಸದಿರದು. ಆದರೆ, ಮಾನವ ಪ್ರಯತ್ನ ಬಲು ದೊಡ್ಡದು. ಆಯಾ ಕಾಲ ಘಟ್ಟದ ಆತನ ಚಿಂತನೆಯು ಒಂದೊಂದು ಬಗೆಯ ವೈಶಿಷ್ಟ್ಯ. ಈ ನಿಟ್ಟಿನಲ್ಲಿ ಇತಿಹಾಸದ ಈ ಘಟನೆಯನ್ನು ನಾವು ಮುಕ್ತ ಮನಸ್ಸಿನಿಂದ ಸ್ವಾಗತಿಸಬೇಕು. ಹಾಗೆ ಇದನ್ನು ದಾಖಲಿಸಿದ ಪಾ.ರಂಜಿತ್ ಅವರ ಪ್ರಯತ್ನವನ್ನು, ಅವರ ಅಧ್ಯಯನವನ್ನು ಅಷ್ಟೇ ಮುಕ್ತ ಮನಸ್ಸಿನಿಂದ ಒಪ್ಪಬೇಕು.

WhatsApp Image 2025 11 17 at 5.14.55 PM
ರಘೋತ್ತಮ ಹೊ.ಬ
+ posts

ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...