ಕನ್ನಡದಲ್ಲಿ ಅತಿ ಹೆಚ್ಚು ಫ್ಲಾಪ್ ಸಿನಿಮಾ ಕೊಟ್ಟ ನಟ!

Date:

ಕನ್ನಡ ಚಿತ್ರರಂಗದಲ್ಲಿ ‘ಕ್ರೇಝಿ ಸ್ಟಾರ್’ ಎಂದೇ ಖ್ಯಾತಿ ಗಳಿಸಿರುವ ನಟ ರವಿಚಂದ್ರನ್ ಸಾಕಷ್ಟು ಏಳು-ಬೀಳುಗಳನ್ನು ಕಂಡ ಬಹುಮುಖ ಪ್ರತಿಭೆ. ನಟ, ನಿರ್ದೇಶಕ, ಸಂಗೀತ ಸಂಯೋಜಕ, ನಿರ್ಮಾಪಕ ಹಾಗೂ ಛಾಯಾಗ್ರಾಹಕನಾಗಿ ಚಿತ್ರರಂಗದ ಎಲ್ಲ ಕ್ಷೇತ್ರಗಳಲ್ಲೂ ದುಡಿದವರು. ದುಡಿಯುತ್ತಿರುವವರು. 1980ರಲ್ಲಿ ಸಿನಿಜರ್ನಿ ಆರಂಭಿಸಿದ ರವಿಚಂದ್ರನ್ ಈವರೆಗೆ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕನಾಗಿ, ಪೋಷಕ ನಟನಾಗಿ ನಟಿಸಿದ್ದಾರೆ. ಕೆಲವು ಸಂದರ್ಭಗಳಲ್ಲಿ ಸಿಕ್ಕಾಪಟ್ಟೆ ಸಕ್ಸಸ್ ಕಂಡರೆ, ಹಲವು ಸಂದರ್ಭಗಳಲ್ಲಿ ಎಡವಿದ್ದಾರೆ. ಅವರ ಬಹುತೇಕ ಸಿನಿಮಾಗಳ ಮುಖ್ಯ ಕಥಾಹಂದರ ಪ್ರೀತಿ. ಜೊತೆಗೆ ವಿಶಿಷ್ಟ ಶೈಲಿ, ಸಂಗೀತ, ಹಾಸ್ಯ ಹಾಗೂ ಅವರದ್ದೇ ಆದ ಒಳನೋಟ. ಹಲವು ಸಿನಿಮಾಗಳಲ್ಲಿ ಅವರ ಅಂತರಾಳ ಪ್ರೇಕ್ಷಕರಿಗೆ ಅರ್ಥವಾಗದೇ, ಸಿನಿಮಾಗಳು ಸೋತಿರುವ ಉದಾಹರಣೆಗಳೂ ಇವೆ.

ರವಿಚಂದ್ರನ್ ಅವರು ‘ಖದೀಮ ಕಳ್ಳರು’ ಚಿತ್ರದಿಂದ ಇತ್ತೀಚೆಗೆ ಬಿಡುಗಡೆಯಾದ ‘ಗೌರಿಶಂಕರ’ ಚಿತ್ರದವರೆಗೆ ಬರೋಬ್ಬರಿ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವುಗಳಲ್ಲಿ ಸುಮಾರು 60ಕ್ಕೂ ಹೆಚ್ಚು ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ಫ್ಲಾಪ್‌ ಆಗಿವೆ. 40 ಸಿನಿಮಾಗಳು ಮಾತ್ರವೇ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಮನ ಗೆದ್ದು, ಯಶಸ್ಸು ಕಂಡಿವೆ.

1968ರಲ್ಲಿ ತೆರೆಕಂಡ ‘ಧೂಮಕೇತು’ ಸಿನಿಮಾದಲ್ಲಿ ಬಾಲನಟನಾಗಿ ಕಾಣಿಸಿಕೊಂಡಿದ್ದ ರವಿಚಂದ್ರನ್, 1982ರಲ್ಲಿ ಬಿಡುಗಡೆಯಾದ ‘ಖದೀಮ ಕಳ್ಳರು’ ಸಿನಿಮಾದಲ್ಲಿ ಪ್ರಮುಖ ಪಾತ್ರದ ಮೂಲಕ ಚಿತ್ರರಂಗದಲ್ಲಿ ಮುನ್ನೆಲೆಗೆ ಬಂದರು. 1987ರಲ್ಲಿ ತೆರೆಕಂಡ ‘ಪ್ರೇಮಲೋಕ’ ಚಿತ್ರವು ಅವರನ್ನು ಸೂಪರ್‌ಸ್ಟಾರ್ ಆಗಿ ರೂಪಿಸಿತು. ತಮ್ಮದೇ ‘ನಾಯಕನ್ ಪ್ರೊಡಕ್ಷನ್ಸ್’ ಮೂಲಕ ಹಲವಾರು ಸಿನಿಮಾಗಳನ್ನು ತಾವೇ ನಿರ್ದೇಶಿಸಿ, ನಿರ್ಮಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಬಾಕ್ಸ್‌ಆಫೀಸ್‌ನಲ್ಲಿ ಯಶಸ್ಸು ಕಂಡ ರವಿಚಂದ್ರನ್ ಅವರು ಪ್ರಮುಖ ಚಿತ್ರಗಳು:

  • ಪ್ರೇಮಲೋಕ (1987): ರವಿಚಂದ್ರನ್ ತಾವೇ ಸ್ವತಃ ನಿರ್ದೇಶಿಸಿದ ಮೊದಲ ಚಿತ್ರ. ರವಿ ಎಂಬ ಪಾತ್ರದಲ್ಲಿ ಅವರ ನಟನೆ ಮತ್ತು ಹಾಡುಗಳು ಸಿನಿ ಪ್ರೇಮಿಗಳ ಮನಗೆದ್ದವು. ಸಿನಿಮಾ 25 ವಾರಗಳ ಕಾಲ ಥಿಯೇಟರ್‌ನಲ್ಲಿ ಪ್ರದರ್ಶನ ಕಂಡಿತು.
    ಅಂಜದ ಗಂಡು (1988), ರಣಧೀರ (1988), ರಾಮಚಾರಿ (1991), ಮನೆ ದೇವರು (1993), ಸಿಪಾಯಿ (1996), ಕಲಾವಿದ (1997), ಯಾರೇ ನೀನು ಚೆಲುವೆ (1998), ಪ್ರೀತ್ಸೋದ್ ತಪ್ಪಾ (1998), ಓ ನನ್ನ ನಲ್ಲೆ (2000), ಕನಸುಗಾರ (2001), ಮಲ್ಲ (2004), ಹಠವಾದಿ (2006), ದೃಶ್ಯ (2014) ಸೇರಿದಂತೆ ಕೆಲವು ಸಿನಿಮಾಗಳು ಹಿಟ್‌ ಆಗಿವೆ.

ಆದರೆ, ರವಿಚಂದ್ರನ್ ಅವರ ಸಿನಿಮಾಗಳಲ್ಲಿ ಯಶಸ್ಸು ಕಂಡ ಸಿನಿಮಾಗಳಿಗಿಂತ ಫ್ಲಾಪ್‌ ಆಗಿ, ಬಂಡವಾಳವೂ ಕೈಸೇರದೇ ಹೋದ ಸಿನಿಮಾಗಳ ಸಂಖ್ಯೆಯೇ ಹೆಚ್ಚು.

ಪ್ರಮುಖ ಫ್ಲಾಪ್ ಸಿನಿಮಾಗಳು:

ಶಾಂತಿ ಕ್ರಾಂತಿ (1991), ಪುಟ್ಣಂಜ (1995), ಮೊಮ್ಮಗ (1997), ಚೆಲುವ (1997), ನಾನು ನನ್ನ ಹೆಂಡ್ತೀರು (1999), ಮಹಾತ್ಮ (2000), ಪ್ರೀತ್ಸು ತಪ್ಪೇನಿಲ್ಲ (2000), ಪ್ರೇಮಕ್ಕೆ ಸೈ (2001), ಉಸಿರೆ (2001), ಏಕಾಂಗಿ (2002), ಪ್ರೀತಿ ಮಾಡೋ ಹುಡುಗರಿಗೆಲ್ಲ (2002), ಕೋದಂಡ ರಾಮ (2002), ಒಂದಾಗೋಣ ಬಾ (2003), ಅಹಂ ಪ್ರೇಮಾಸ್ಮಿ (2005), ರಾಮ ಕೃಷ್ಣ (2004), ಸಾಹುಕಾರ (2004), ನೀನೆಲ್ಲೋ ನಾನಲ್ಲೆ (2006), ಒಡಹುಟ್ಟಿದವಳು (2006), ರವಿ ಶಾಸ್ತ್ರಿ (2006), ನೀಲಕಂಠ (2006), ಉಗಾದಿ (2007), ನೀ ಟಾಟಾ ನಾ ಬಿರ್ಲಾ (2008), ಹೂ (2010), ಅಪೂರ್ವ (2016) ಸೇರಿದಂತೆ ಸುಮಾರು 60ಕ್ಕೂ ಹೆಚ್ಚು ಸಿನಿಮಾಗಳು ಫ್ಲಾಪ್ ಆಗಿವೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...