ಆರ್ಯನ್ ಖಾನ್ ಬಿಡುಗಡೆಗೆ ₹18 ಕೋಟಿ ಬೇಡಿಕೆ ಇಟ್ಟಿದ್ದ ಸಮೀರ್ ವಾಂಖೆಡೆ ಆಪ್ತ ಗೋಸಾವಿ

Date:

ಸಮೀರ್ ವಾಂಖೆಡೆ ನೇತೃತ್ವದ ಎನ್‌ಸಿಬಿ ಅಧಿಕಾರಿಗಳ ತಂಡ ಕೆಪಿ ಗೋಸಾವಿ ಅವರನ್ನು ಎನ್‌ಸಿಬಿ ಅಧಿಕಾರಿಯೆಂದು ಬಿಂಬಿಸಿ ನಂತರ ಸ್ವತಂತ್ರ ಸಾಕ್ಷಿಯಾಗಿಸಿತ್ತು. ಇದೇ ಅಧಿಕಾರಿ ಆರ್ಯನ್‌ ಖಾನ್‌ ಬಿಡುಗಡೆಗೆ ಶಾರುಖ್‌ ಖಾನ್‌ ಅವರಿಂದ ₹18 ಕೋಟಿಗೆ ಬೇಡಿಕೆ ಇಟ್ಟಿದ್ದರು.

ಕೊರ್ಡೆಲಿಯ ಕ್ರೂಸ್‌ ಮೇಲೆ ದಾಳಿ ನಡೆಸಿ ನಟ ಶಾರುಖ್ ಖಾನ್ ಮಗ ಆರ್ಯನ್ ಖಾನ್ ಅವರನ್ನು ಮಾದಕ ದ್ರವ್ಯ ಪ್ರಕರಣದಲ್ಲಿ ಬಂಧಿಸಿದ ಐಆರ್‌ಎಸ್ ಅಧಿಕಾರಿ ಸಮೀರ್ ವಾಂಖೆಡೆ ನೇತೃತ್ವದ ಎನ್‌ಸಿಬಿ ಅಧಿಕಾರಿಗಳ ಮೇಲೆ ಇದೀಗ ಸಿಬಿಐ ಎಫ್‌ಐಆರ್‌ ದಾಖಲಿಸಿದೆ.

ಸಿಬಿಐ ನೀಡಿರುವ ಮಾಹಿತಿ ಪ್ರಕಾರ, ಈ  ಅಧಿಕಾರಿಗಳು ದಾಳಿ ಸಂದರ್ಭ ಆರೋಪಿ ಮಾದಕ ದ್ರವ್ಯ ಡೀಲರ್ ಸೇರಿದಂತೆ 17 ಶಂಕಿತರನ್ನು ಬಂಧಿಸದೆ ಬಿಟ್ಟಿದ್ದರು. ಸ್ವತಂತ್ರ ಸಾಕ್ಷಿ ಕೆ ಪಿ ಗೋಸಾವಿ ಅವರನ್ನು ಎನ್‌ಸಿಬಿ ಅಧಿಕಾರಿಯೆಂದು ಈ ಅಧಿಕಾರಿಗಳು ಬಿಂಬಿಸಿದ್ದರು. ನಂತರ ಇದೇ ಅಧಿಕಾರಿ ಆರ್ಯನ್‌ ಖಾನ್‌ರನ್ನು ಬಿಡುಗಡೆ ಮಾಡಲು ಶಾರುಖ್‌ ಖಾನ್‌ರಿಂದ ₹18 ಕೋಟಿ ಬೇಡಿಕೆ ಇಟ್ಟಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಆರೋಪಿಗಳನ್ನು ಕೆ ಪಿ ಗೋಸಾವಿ ಖಾಸಗಿ ವಾಹನದಲ್ಲಿ ಎನ್‌ಸಿಬಿ ಕಚೇರಿಗೆ ತಂದಿದ್ದರು. ಗೋಸಾವಿ ಕೂಡ ಎನ್‌ಸಿಬಿ ಅಧಿಕಾರಿ ಎಂದೇ ಆರಂಭದಲ್ಲಿ ಬಿಂಬಿಸಲಾಗಿತ್ತು. ಗೋಸಾವಿ ಸೆಲ್ಫಿಗಳನ್ನು ತೆಗೆದಿದ್ದಲ್ಲದೆ, ಧ್ವನಿಯನ್ನೂ ರೆಕಾರ್ಡ್ ಮಾಡಿಕೊಂಡಿದ್ದರು. ಈ ದಾಖಲೆಗಳಿಂದಲೇ ಗೋಸಾವಿ ಮತ್ತು ಆತನ ಬೆಂಬಲಿಗ ಸಾಣ್ವಿಲ್ ಡಿಸೋಜಾ ಆರ್ಯನ್ ಖಾನ್ ಕುಟುಂಬದಿಂದ ₹25 ಕೋಟಿ ಲೂಟಿ ಮಾಡುವ ಪಿತೂರಿ ಹೂಡಲು ಸಾಧ್ಯವಾಗಿತ್ತು. ಅಂತಿಮವಾಗಿ ಆರ್ಯನ್‌ ಅವರನ್ನು ಬಿಡುಗಡೆ ಮಾಡುವ ಮೊತ್ತವನ್ನು ₹18 ಕೋಟಿಗೆ ಇಳಿಸಲಾಗಿತ್ತು. ₹50 ಲಕ್ಷವನ್ನು ಟೋಕನ್ ಮೊತ್ತವಾಗಿ ಕೆ ಪಿ ಗೋಸ್ವಾಮಿ ಪಡೆದಿದ್ದರು” ಎಂದು ಸಿಬಿಐ ಎಫ್‌ಐಆರ್ ಹೇಳಿದೆ.

ಕೆ ಪಿ ಗೋಸಾವಿ ಮತ್ತು ಪ್ರಭಾಕರ್‌ ಸೈಲ್‌ರನ್ನು ಸ್ವತಂತ್ರ ಸಾಕ್ಷಿಗಳೆಂದು ಹೆಸರಿಸಲು ಸಮೀರ್ ವಾಂಖೆಡೆ ನಿರ್ದೇಶಿಸಿದ್ದರು.

2008 ಬ್ಯಾಚ್‌ನ ಐಆರ್‌ಎಸ್ ಅಧಿಕಾರಿ ಸಮೀರ್ ವಾಂಖೆಡೆ ಎನ್‌ಸಿಬಿ ಮುಂಬೈ ವಲಯದ ನೇತೃತ್ವ ವಹಿಸಿದ್ದ ಸಂದರ್ಭದಲ್ಲಿ ಮುಂಬೈ ಕರಾವಳಿಯಲ್ಲಿ 2021 ಅಕ್ಟೋಬರ್ 2ರಂದು ಕೊರ್ಡೆಲಿಯ ಕ್ರೂಸ್ ಮೇಲೆ ದಾಳಿ ನಡೆಸಿದ ಅಧಿಕಾರಿಗಳ ತಂಡ ಮುನ್ನಡೆಸಿದ್ದರು.

ಎನ್‌ಸಿಬಿ 13 ಗ್ರಾಂ ಕೊಕೇನ್, 5 ಗ್ರಾಂ ಮಿಫೀಡ್ರೋನ್, 21 ಗ್ರಾಂ ಮರಿಜುವಾನ, 22 ಎಂಡಿಎಂಎ ಗುಳಿಗೆಗಳು ಹಾಗೂ ರೂ 1.33 ಲಕ್ಷ ನಗದು ವಶಪಡಿಸಿಕೊಂಡು, ಆರ್ಯನ್ ಖಾನ್ ಸೇರಿದಂತೆ 17 ಮಂದಿಯನ್ನು ಬಂಧಿಸಿತ್ತು.

ಎನ್‌ಸಿಬಿ ನಡೆಸಿದ ವಿಜಿಲೆನ್ಸ್ ತನಿಖೆ ಆಧರಿಸಿ ಸಿಬಿಐ ಎಫ್‌ಐಆರ್ ದಾಖಲಿಸಿದೆ. “2021ರಲ್ಲಿ ಕೊರ್ಡೆಲಿಯ ಕ್ರೂಸ್‌ಗೆ ದಾಳಿ ಸಂದರ್ಭದಲ್ಲಿ ನಿರ್ದಿಷ್ಟ ಶಂಕಿತರ ಹೆಸರುಗಳನ್ನು ಪ್ರಥಮ ಮಾಹಿತಿ ವಿವರದಿಂದ ಹೊರಗಿಡಲಾಗಿತ್ತು. ತನಿಖೆಯನ್ನು ತಿರುಚಿ ಕೆಲವು ಆರೋಪಿಗಳ ಹೆಸರನ್ನು ಸೇರಿಸಲಾಗಿತ್ತು” ಎಂದು ವಿಶೇಷ ತನಿಖಾ ತಂಡದ ಎಫ್‌ಐಆರ್‌ನಲ್ಲಿ ಬರೆಯಲಾಗಿದೆ.

ಈ ಸುದ್ದಿ ಓದಿದ್ದೀರಾ?: ‘ದಿ ಕೇರಳ ಸ್ಟೋರಿ’ ಸಿನಿಮಾ ನಿಷೇಧ ಪ್ರಕರಣ; ಪಶ್ಚಿಮ ಬಂಗಾಳ, ತಮಿಳುನಾಡಿಗೆ ಸುಪ್ರೀಂ ನೋಟಿಸ್

ಆರಂಭಿಕ ಪ್ರಥಮ ಮಾಹಿತಿ ವಿವರದಲ್ಲಿ 27 ಹೆಸರುಗಳಿದ್ದವು. ತಿರುಚಿದ ವಿವರದಲ್ಲಿ 10 ಹೆಸರುಗಳಷ್ಟೇ ಇದ್ದವು. ಇತರರ ಬಗ್ಗೆಯೂ ತನಿಖೆ ನಡೆಸಲಾಗಿತ್ತಾದರೂ, ಹೆಸರುಗಳನ್ನು ದಾಖಲೆಗಳಿಂದ ಹೊರಗಿಡಲಾಗಿತ್ತು. ಕೆಲವು ಶಂಕಿತರನ್ನು ದಾಖಲೆಯಲ್ಲಿ ಹೆಸರಿಲ್ಲದೆಯೇ ಬಿಡುಗಡೆ ಮಾಡಲಾಗಿತ್ತು. ಆರ್ಯನ್ ಖಾನ್‌ರ ಸ್ನೇಹಿತ ಅರ್ಬಾಜ್ ಮರ್ಚಂಟ್‌ರಿಗೆ ಚರಸ್ ನೀಡುತ್ತಿದ್ದಾರೆಂದು ಆರೋಪಿಸಲಾದ ಸಿದ್ಧಾರ್ಥ್ ಶಾ ಅವರನ್ನು ಬಂಧಿಸಿರಲಿಲ್ಲ. ಆತ ಸ್ವತಃ ಮಾದಕ ದ್ರವ್ಯ ಸೇವಿಸುತ್ತಿದ್ದ ಮತ್ತು ಅರ್ಬಾಜ್‌ನಿಗೆ ಚರಸ್ ಒದಗಿಸಲು ಹಣ ಪಡೆದಿರುವ ಬಗ್ಗೆ ಫೋನ್ ಸಂದೇಶಗಳು ದೊರೆತಿದ್ದವು ಎಂಬ ವಿವರಗಳು ಎಫ್‌ಐಆರ್‌ನಲ್ಲಿವೆ.

ತನಿಖೆಯ ವಿವರಗಳು ಹೇಳಿರುವಂತೆ, ಸಮೀರ್ ವಾಂಖೆಡೆ ತಮ್ಮ ವಿದೇಶಿ ಭೇಟಿಗಳು ಮತ್ತು ವೆಚ್ಚದ ಬಗ್ಗೆ ಸೂಕ್ತ ಮಾಹಿತಿ ನೀಡದಿರುವುದು ಪತ್ತೆಯಾಗಿದೆ. ದುಬಾರಿ ಕೈಗಡಿಯಾರಗಳನ್ನು ಖಾಸಗಿ ವ್ಯಕ್ತಿಗಳಿಗೆ ಇಲಾಖೆಗೆ ಮಾಹಿತಿ ನೀಡದೆ ಅವರು ಮಾರಿರುವುದೂ ಪತ್ತೆಯಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...