ಸಿ ಎಸ್ ದ್ವಾರಕಾನಾಥ್ ಆಡಿಯೊ ಸಂದರ್ಶನ | ‘ಹೈಕೋರ್ಟ್ ನ್ಯಾಯಮೂರ್ತಿಯ ಇನ್ನೊಂದು ಮೂತಿ’ ಅಂತ ಹೆಡ್ಡಿಂಗ್ ಕೊಟ್ಟಿದ್ದರು ಲಂಕೇಶ್!

Date:

ನಾವು ಬದುಕುತ್ತಿರುವ ಇದೇ ನೆಲದಲ್ಲಿ, ಅಂದ್ರೆ ಕರ್ನಾಟಕದಲ್ಲಿ ನೂರಾರು ಪುಟ್ಟ-ಪುಟ್ಟ ಸಮುದಾಯಗಳು ಕೂಡ ಬದುಕುತ್ತಿವೆ. ಅವುಗಳಲ್ಲಿ ಬಹುತೇಕ ಸಮುದಾಯಗಳು ನಾವೆಲ್ಲ ಕಂಡು-ಕೇಳಿರದ ಕೆಲಸಗಳನ್ನು ಬದುಕಲಿಕ್ಕಾಗಿ ಮಾಡುತ್ತಿವೆ. ಇಂತಹ ಸಮುದಾಯಗಳ ಬಗೆಗೆ ನಮ್ಮ ಕಣ್ಣು ತೆರೆಸುವಂಥ ಕೆಲಸ ಮಾಡುತ್ತಿರುವವರಲ್ಲಿ ಸಿ ಎಸ್ ದ್ವಾರಕಾನಾಥ್ ಕೂಡ ಒಬ್ಬರು. ಇವರು ವಕೀಲರು. ನಮ್ಮ ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದವರು. ಎಲ್ಲಕ್ಕಿಂತ ಮುಖ್ಯವಾಗಿ, ಪಿ ಲಂಕೇಶರ ಗರಡಿಯಲ್ಲಿ ಸರಿಸುಮಾರು ಇಪ್ಪತ್ತು ವರ್ಷ ಪಳಗಿದಂತಹ ಪತ್ರಕರ್ತ. ಇವರ ಬದುಕಿನ ಕತೆಗಳು - ನಮ್ಮ ನಡುವೆಯೇ ಬದುಕುತ್ತಿರುವ, ದನಿ ಇಲ್ಲದ ಪುಟ್ಟ-ಪುಟ್ಟ ಸಮುದಾಯಗಳ ಬದುಕಿನ ಕತೆಗಳೂ ಹೌದು. ಬನ್ನಿ, ದ್ವಾರಕಾನಾಥ್ ಅವರು ಪರಿಚಯಿಸುವ ಪ್ರಪಂಚಕ್ಕೆ ಹೋಗಿಬರೋಣ.

ಸಂದರ್ಶನದ ಮುಖ್ಯಾಂಶಗಳು:

“ಗಣಿಯಲ್ಲಿ ಕೆಲಸ ಮಾಡೋದ್ರಿಂದ ಅವ್ರಿಗೆ ಪ್ರತಿದಿನ ಆಲ್ಕೋಹಾಲ್ ಬೇಕಾಗಿತ್ತು. ಆಲ್ಕೋಹಾಲ್ ಸಿಗದಿದ್ದಾಗ ಬೂಟ್‌ಪಾಲಿಶ್ ಅನ್ನೇ ನೀರಿಗೆ ಬೆರೆಸಿಕೊಂಡು ಕುಡಿದುಬಿಡ್ತಿದ್ರು!”

“ಲಂಕೇಶ್ ಅಂದ್ರೆ, ಅತ್ಯಂತ ಪ್ರಾಮಾಣಿಕ ಕ್ರಾಂತಿಕಾರಿ.”

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಚಿಕ್ಕನಾಯಕನಹಳ್ಳಿ ಸ್ಮಶಾನದಲ್ಲಿ, ಹರಿದ ಗುಡಿಸಲುಗಳಲ್ಲಿ ವಾಸವಿದ್ದವರನ್ನು ಮಾತಾಡಿಸೋಣ ಅಂತ ಹೋದ್ರೆ, ಕಂಕುಳಲ್ಲಿ ಮಕ್ಕಳನ್ನು ಎತ್ಕೊಂಡಿದ್ದ ಹೆಣ್ಮಕ್ಳು ಓಡೋಕೆ ಶುರುಮಾಡಿದ್ರು!”

“ಬೀದಿಯಲ್ಲಿ ಬಟ್ಟೆ ಮಾರ್ತಿದ್ದ ಸುಡುಗಾಡು ಸಿದ್ದರ ಮೂವರು ಹೆಣ್ಮಕ್ಳನ್ನು ಅರೆಸ್ಟ್ ಮಾಡಲಾಗಿತ್ತು. ಕಾರಣ ಕೇಳಿದಾಗ ಇನ್ಸ್‌ಪೆಕ್ಟರ್ ಹೇಳಿದ… ‘ಜಿಎಸ್‌ಟಿ ಕಟ್ಟಿರ್ಲಿಲ್ಲ ಸರ್, ಅದುಕ್ಕೇ ಅರೆಸ್ಟ್ ಮಾಡಿದ್ದೀವಿ!”

“ಅವತ್ತು, ಮೂರ್ನಾಲ್ಕು ಜನ ತಿನ್ನೋ ಅನ್ನವನ್ನು ಒಬ್ಬನೇ ಒಂದೇ ಸಾರಿ ಮುಗ್ಸಿಬಿಟ್ಟಿದ್ದೆ… ಕೋಳಿ ಸಾರು ಅಷ್ಟು ರುಚಿಯಾಗಿತ್ತು.”

“ಕುಣಬಿ ಸಮುದಾಯದ ಆ ಮುದುಕ ಕೋಳಿ ಬಗ್ಗೆ ಕೇಳಿದ ಪ್ರಶ್ನೆ ನನ್ನಲ್ಲಿ ಬಹಳ ದೊಡ್ಡ ಗಿಲ್ಟ್ ಹುಟ್ಟುಹಾಕಿಬಿಟ್ಟಿತು!”

“ತಮ್ಮ ವಿರುದ್ಧವಿದ್ದ ಕೇಸಿನಲ್ಲಿ ವಾದಿಸದಂತೆ ನನ್ನನ್ನು ಮನವೊಲಿಸೋಕೆ ಪೇಜಾವರ ಶ್ರೀ ಹೇಳಿದ್ರು – ‘ದ್ವಾರಕಾನಾಥ್ ಅಂತ ಕೃಷ್ಣನ ಹೆಸ್ರು ಇಂಟ್ಕೊಂಡಿದಿಯ… ನಾನು ಕೃಷ್ಣನ ಆರಾಧಕ. ನನ್ ಮೇಲ್ ಕೇಸ್ ನಡೆಸ್ತಿದಿಯ…!”

“ಏಳೆಂಟು ತಿಂಗಳ ನಂತರ ಊರಿಂದ ಆತ ಮರಳಿಬಂದ. ಅದೇ ಬಟ್ಟೆ, ಮತ್ತೋನೋ ಗಂಟು ತಂದಿದ್ದ. ತೆಗೆದು ನೋಡಿದರೆ ಹುಚ್ಚೆಳ್ಳು…”

“ಕೋಲಾರದಲ್ಲಿ ಅಂದು, ಬರೀ ವೇಷ ನೋಡಿ ಆತ ಮುಸ್ಲಿಂ ಅಂದ್ಕೊಂಡು ಈತ ಚಾಕು ಇರಿದುಬಿಟ್ಟಿದ್ದ. ಆದರೆ ಆತ ಬ್ರಾಹ್ಮಣ ಸಮುದಾಯದ ಹುಡುಗ! ಈ ಘಟನೆಯನ್ನು, ‘ಹಿಂದೂ ಹುಡುಗನನ್ನು ಮುಸ್ಲಿಮರು ಕೊಂದರು’ ಅಂತ ಸುದ್ದಿ ಮಾಡಲಾಗಿತ್ತು!

“ಬೇಡಗೆಂಪಣ ಅನ್ನೋ ಹೆಸರಿನ ಸಸ್ಯಾಹಾರಿ ಬುಡಕಟ್ಟಿನ ಪುಟಾಣಿ ಹೆಣ್ಣುಮಕ್ಕಳು ದೀಪಾವಳಿ ದಿನ, ತಂಬಿಗೆಗಳಲ್ಲಿ ನೊರೆಹಾಲು ಹೊತ್ತು ಮಾದಪ್ಪನಿಗೆ ಅರ್ಪಿಸಲು ಬರುವ ದೃಶ್ಯವನ್ನು ನೋಡಲು ಕಣ್ಣೆರಡು ಸಾಲೋಲ್ಲ…”

“ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಕಾಲು ಕಳೆದುಕೊಂಡ್ರೂ ಪಿಂಚಣಿ ಸಹಿತ ಯಾವುದೇ ಸಹಾಯ ಪಡೆಯಲೇ ಇಲ್ಲ ಆ ಮಹಾನುಭಾವ!”

“ಕಳೆದ 10 ವರ್ಷಗಳಲ್ಲಿ 19 ಮಂದಿ ಆದಿವಾಸಿಗಳನ್ನು ಅಮಾನುಷವಾಗಿ ಕೊಂದುಹಾಕಲಾಗಿದೆ. ಒಂದೂ ಎಫ್‌ಐಆರ್ ಆಗಿಲ್ಲ!”

“ಆತ ಹೇಳ್ತಾನೆ… ‘ಕಂಚಿಯ ದೇವಸ್ಥಾನದ ಕೊಳದೊಳಗಿನ ಬಂಡೆ ಮೇಲೆ ಗಂಗಭಾರತ ಬರೆಯಲಾಗಿದೆ… ಬೇಕಿದ್ರೆ ಹೋಗಿ ನೋಡಿ’ ಅಂತ!”

ಪೋಸ್ಟ್ ಹಂಚಿಕೊಳ್ಳಿ:

ಈದಿನ.ಕಾಮ್ ಕೇಳುದಾಣ
ಈದಿನ.ಕಾಮ್ ಕೇಳುದಾಣ
ಬದುಕಿನ ಮೇಲಿನ ಪ್ರೀತಿ ಹೆಚ್ಚಿಸುವ ಆಡಿಯೊ-ಬರಹಗಳ ನಿಲುದಾಣ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊರಳಿಗೆ ಸುತ್ತಿಕೊಂಡ ಇರಾನ್ ಯುದ್ಧ; ಅಮೆರಿಕದಲ್ಲಿ ತೈಲ ಬಿಕ್ಕಟ್ಟು – ಟ್ರಂಪ್ ಜನಪ್ರಿಯತೆಗೆ ಕುತ್ತು

ಟ್ರಂಪ್ ಸೃಷ್ಟಿಸಿದ ಈ ವಿನಾಶಕಾರಿ ಯುದ್ಧದ ಬಿಸಿ ಅಮೆರಿಕದ ಜನಸಾಮಾನ್ಯರ ಬದುಕನ್ನು...

ಮೊಜ್ತಬಾ ಖಮೇನಿ | ತೆರೆಯ ಹಿಂದಿದ್ದ ‘ಗೇಟ್‌ಕೀಪರ್’ ಈಗ ಇರಾನ್‌ನ ಪರಮೋಚ್ಚ ನಾಯಕ

ತಂದೆಯ 'ಸುಪ್ರೀಂ ಲೀಡರ್ ಕಚೇರಿ'ಯ ಸಂಪೂರ್ಣ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಮೊಜ್ತಬಾ ಅವರು...

ಮಹಿಳಾ ದಿನಾಚರಣೆ ವಿಶೇಷ: ಕಳೆದೆರಡು ದಶಕಗಳಲ್ಲಿ ಕ್ರೀಡಾಂಗಣವನ್ನಾಳಿದ 10 ಭಾರತೀಯ ಮಹಿಳೆಯರು

ಒಂದು ಕಾಲದಲ್ಲಿ ಕ್ರೀಡೆಯೆಂದರೆ ಕೇವಲ ಪುರುಷರ ಸ್ವತ್ತು ಎಂಬ ಅಲಿಖಿತ ನಿಯಮವಿತ್ತು;...