ಪತ್ರಕರ್ತ, ಪರಿಸರ ವಿಜ್ಞಾನ ಲೇಖಕ ನಾಗೇಶ ಹೆಗಡೆ ತಮ್ಮ ಬದುಕಿನ ಸ್ವಾರಸ್ಯಕರ ಕತೆಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಊರು ಬಕ್ಕೆಮನೆ, ಜೆಎನ್ಯು ವಿದ್ಯಾರ್ಥಿಜೀವನ, ನೈನಿತಾಲ್ ನೆನಪು, ಬೆಳ್ಳಂದೂರು ಕೆರೆ ದುರಂತ, 'ಪ್ರಜಾವಾಣಿ'ಯಲ್ಲಿ ಕೆಲಸ ಮಾಡುತ್ತಿದ್ದಾಗಿನ ಆಘಾತಕಾರಿ ಘಟನೆ... ಹೀಗೆ ಹಲವು ಮೆಲುಕು ಇಲ್ಲುಂಟು
(ಈ ಆಡಿಯೊ ಟ್ಯಾಬ್ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಸಂಪೂರ್ಣ ಆಡಿಯೊ ಕೇಳಿ)
ನಾಗೇಶ ಹೆಗಡೆ ಅವರಲ್ಲಿ ಕತೆಗಳನ್ನು ಕೆದಕಿದ ಕೇಳ್ವಿಗಳು:
1.ನಿಮ್ಮ ಊರು ಬಕ್ಕೆಮನೆಯನ್ನು ನಿಮ್ಮೊಳಗೆ ಜೀವಂತ ಉಳಿಸಿರುವ ಒಂದು ಘಟನೆ ಹೇಳಿ ಅಂದ್ರೆ, ಯಾವ ಘಟನೆ ಹೇಳಲು ಬಯಸ್ತೀರಿ?
2.ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್ಯು) ವಿದ್ಯಾರ್ಥಿ ಆಗಿದ್ದವರು ನೀವು. ಜೆಎನ್ಯು ಅಂದ್ರೇನು ಅಂತ ಒಂದು ಘಟನೆಯ ಮೂಲಕ ಕಟ್ಟಿಕೊಡೋದಾದ್ರೆ ಅದು ಯಾವ ಘಟನೆ ಆಗಿರುತ್ತೆ?
3.ಉತ್ತರಾಖಂಡದ ನೈನಿತಾಲ್ನ ಕುಮಾಂವು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿದ್ರಿ ನೀವು. ಅಲ್ಲಿ ನಿಮಗೆ ತುಂಬಾನೇ ಇಷ್ಟವಾದ ‘ಪರಿಸರದ ಒಂದು ಚಿತ್ರಣ’ವನ್ನು ನಮಗಾಗಿ ಹೇಳೋದಾದ್ರೆ…
4.ನಿಮ್ಮ ಪ್ರಕಾರ, ಕಳೆದ ಹತ್ತು ವರ್ಷದ ಅವಧಿಯಲ್ಲಿ, ಪ್ರಕೃತಿಗೆ ಅತ್ಯಂತ ಹೆಚ್ಚು ಹಾನಿ ಮಾಡಿದ ಘಟನೆ ಯಾವುದು?
5.ನಿಮ್ಮ ಬರಹಗಳಲ್ಲಿ ಯಾವಾಗಲೂ ಹೊಸ ಪದ ಪ್ರಯೋಗಗಳು ಕಾಣಿಸ್ತಾನೇ ಇರುತ್ವೆ. ಇತ್ತೀಚೆಗೆ, ಕೊಳ್ಳೇಗಾಲ ಶರ್ಮ ಅವರು ಲೇಖನವೊಂದರಲ್ಲಿ, ನಿಮ್ಮ ‘ಯಾಂಬು’ ಅನ್ನೋ ಪದದ ಬಗ್ಗೆ ಬರೆದಿದ್ರು. ಇಂತಹ ಪದ ಪ್ರಯೋಗಗಳು ನಿಮ್ಮನ್ನು ಯಾವಾಗಲಾದರೂ ಪೇಚಿಗೆ ಸಿಕ್ಕಿಸಿದ್ದುಂಟಾ?
6.ಶಿವರಾಮ ಕಾರಂತರ ಜೊತೆ ನಿಮ್ಮ ಒಡನಾಟದ ಬಗೆಗೆ ಸಾಕಷ್ಟು ಬಾರಿ ಮಾತನಾಡಿದ್ದೀರಿ. ಆದ್ರೆ, ಶಿವರಾಮ ಕಾರಂತ ಅಂದ ತಕ್ಷಣ ಯಾವ ಘಟನೆ ನೆನಪಾಗುತ್ತೆ?
7.ನಿಮ್ಮ ಪತ್ರಿಕಾ ವೃತ್ತಿಜೀವನದಲ್ಲಿ ಅತ್ಯಂತ ಸವಾಲೆನಿಸಿದ ಸನ್ನಿವೇಶ ಯಾವುದು?
8.ನಿಮ್ಮ ಸಂಗಾತಿ ರೇಖಾ ಮೇಡಂ ಜೊತೆ ಸಾಕಷ್ಟು ಸುತ್ತಾಡಿದ್ದೀರಿ ನೀವು. ಹಾಗೆ ಸುತ್ತಿದ ಪ್ರದೇಶಗಳಲ್ಲಿ, ಅತ್ಯಂತ ಆಹ್ಲಾದಕರ ಮತ್ತು ಚಂದದ ಪರಿಸರ ಅಂತ ನೀವು ಯಾವ ಪ್ರದೇಶವನ್ನು ಗುರುತಿಸೋಕೆ ಇಷ್ಟಪಡ್ತೀರಿ?
ನಾಗೇಶ ಹೆಗಡೆ ಆಡಿಯೊ ಸಂದರ್ಶನವಿದು. ಇದೇ ಸರಣಿಯ ಇತರೆ ಸಂದರ್ಶನಗಳನ್ನು ಮತ್ತು ಈದಿನ.ಕಾಮ್ನ ಇತರೆ ಲೇಖನಗಳನ್ನು ಆಲಿಸಲು ಇಲ್ಲಿ ಕ್ಲಿಕ್ ಮಾಡಿ: ‘ಈ ದಿನ’ ಕೇಳುದಾಣ




