ಕಳಪೆ ಗುಣಮಟ್ಟದ ಔಷಧಿ; ಕೇಂದ್ರವನ್ನೂ ಮೀರಿ ಮತ್ತಷ್ಟು ಕಠಿಣ ಕ್ರಮಕ್ಕೆ ಮುಂದಾದ ಕರ್ನಾಟಕ

Date:

ರಾಜ್ಯದಲ್ಲಿ 9 ಔಷಧಗಳನ್ನು ನಿಷೇಧಿಸಿ ರಾಜ್ಯ ಆರೋಗ್ಯ ಇಲಾಖೆ ಆದೇಶಿಸಿದೆ. ಅಲ್ಲದೆ, ಆ ಔಷಧಗಳನ್ನು ದೇಶಾದ್ಯಂತ ನಿಷೇಧಿಸುವಂತೆ ಒತ್ತಾಯಿಸಿ ಕೇಂದ್ರ ಸರ್ಕಾರಕ್ಕೆ ರಾಜ್ಯ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಪತ್ರ ಬರೆದಿದ್ದಾರೆ. ಜೊತೆಗೆ, ಮಾರಾಟಕ್ಕಾಗಿ ವಿತರಿಸಲಾಗುವ ಔಷಧಗಳನ್ನು ಕೇಂದ್ರ ಪರೀಕ್ಷಿಸಿದ್ದರೂ ಸಹ ರಾಜ್ಯದಲ್ಲಿಯೂ ಮತ್ತೆ ಪರೀಕ್ಷೆ ನಡೆಸಿಯೇ ಮಾರಾಟಕ್ಕೆ ಅನುಮತಿಸುವುದಾಗಿಯೂ ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಇತ್ತೀಚೆಗೆ, ಆರೋಗ್ಯ ಇಲಾಖೆ 9 ಔಷಧಗಳನ್ನು ರಾಜ್ಯದ ಸರ್ಕಾರಿ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿತ್ತು. ಪರೀಕ್ಷೆಯಲ್ಲಿ ಆ ಔಷಧಗಳು ಅಸುರಕ್ಷಿತವಾಗಿವೆ ಮತ್ತು ಕಳಪೆ ಗುಣಮಟ್ಟ ಹೊಂದಿವೆ ಎಂಬುದು ಸಾಬೀತಾಗಿತ್ತು. ಅವುಗಳನ್ನು ರಾಜ್ಯದಲ್ಲಿ ನಿಷೇಧಿಸಲಾಗಿದೆ. ಅಲ್ಲದೆ, ದೇಶಾದ್ಯಂತ ಅವುಗಳ ನಿಷೇಧಕ್ಕಾಗಿ ಕೇಂದ್ರ ಆರೋಗ್ಯ ಸಚಿವ ಜೆ.ಪಿ ನಡ್ಡಾ ಅವರಿಗೆ ದಿನೇಶ್‌ ಗುಂಡೂರಾವ್ ಪತ್ರವನ್ನೂ ಬರೆದಿದ್ದಾರೆ.

ಇನ್ನು, ಔಷಧಗಳ ಗುಣಮಟ್ಟ ಪರೀಕ್ಷೆಗೆ ರಾಜ್ಯದಲ್ಲಿ ಹೊಸ ಕಾನೂನನನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. ರಾಜ್ಯಕ್ಕೆ ಬರುವ ಎಲ್ಲ ಬ್ಯಾಚ್‌ಗಳ ಎಲ್ಲ ರೀತಿಯ ಮಾತ್ರೆಗಳು, ಇಂಜೆಕ್ಷನ್‌ಗಳು, ಸಿರಪ್‌ಗಳು ಹಾಗೂ ಫ್ಲೋಯಿಡ್‌ಗಳನ್ನು ರಾಜ್ಯದ ಸರ್ಕಾರಿ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಅವುಗಳು ಅಸುರಕ್ಷಿತ ಎಂದು ಸಾಬೀತಾದರೆ ಅವುಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಔಷಧ ತಯಾರಕ ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ವರದಿ ಓದಿದ್ದೀರಾ?: ಬಿಜೆಪಿಯ ಕರಾಳ ಮುಖ | ರೀಲ್ಸ್‌ ಮಾಡುವುದು, ಅವಘಡವಾದಾಗ ಅಳಿಸಲು ನೋಟಿಸ್‌ ಕೊಡುವುದು!

ರೂಪಿಸಲಾಗುವ ಹೊಸ ಕಾನೂನಿನ ಅಡಿಯಲ್ಲಿ, ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಪೂರೈಕೆಯಾಗುವ ಔಷಧಗಳನ್ನು ಕೇಂದ್ರ ಸರ್ಕಾರದ ಲ್ಯಾಬ್‌ನಲ್ಲಿ ಔಷಧಿಗಳನ್ನು ಪರೀಕ್ಷಿಸಿ, ಅವುಗಳ ಉಣಮಟ್ಟ ಉತ್ತಮವಾಗಿವೆ ಎಂದು ವರದಿ ಬಂದರೂ ಸಹ, ರಾಜ್ಯದಲ್ಲಿ ಅವುಗಳನ್ನು ಮತ್ತೆ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ರಾಜ್ಯದಲ್ಲಿನ ಪರೀಕ್ಷೆಯಲ್ಲಿ ಗುಣಮಟ್ಟ ಸಾಬೀತು ಮಾಡುವಲ್ಲಿ ಔಷಧಗಳು ವಿಫಲವಾದರೆ, ಅವುಗಳನ್ನು ನಿರ್ಬಂಧಿಸಲಾಗುತ್ತದೆ ಎಂದು ಇಲಾಖೆ ತೀರ್ಮಾನಿಸಿದೆ.

ಈಗಾಗಲೇ ನಿಷೇಧವಾಗಿರುವ ಔಷಧಗಳು

ಐಪಿ 100 ಎಂಎಲ್‌, ಪಾಕ್ಸನ್ಸ್ ಫಾರ್ಮಾಸಿಟಿಕಲ್ಸ್‌ನ ಫ್ರುಸ್ಮೈಡ್‌ ಇಂಜೆಕ್ಷನ್‌ ಫ್ರ್ಯೂಕ್ಸ್‌ 10ಎಂಜಿ
ಐ.ಪಿ. ಐಎಚ್‌ಎಲ್‌ ಲೈಫ್‌ಸೈನ್ಸಸ್‌ನ ಮೆಟ್ರೊನಿಡಜೋಲ್‌ ಇಂಜೆಕ್ಷನ್‌
ಐಪಿ-100 ಎಂಎಲ್‌, ಎಲ್ಪಾ ಲ್ಯಾಬೊರೇಟರಿಸ್‌ನ ಡೈಕ್ಲೊಫೆನ್ಯಾಕ್‌ ಸೋಡಿಯಂ ಇಂಜೆಕ್ಷನ್‌
ಐಪಿ, ರುಸೊಮಾ ಲ್ಯಾಬೊರೇಟರಿಸ್‌ನ ಡೆಕ್ಸ್ಟ್‌ರೋಸ್‌ 25% ಡಬ್ಲ್ಯೂ/ವಿ ಡಿ25 ಇಂಜೆಕ್ಷನ್‌
ಮಾರ್ಟಿನ್‌ ಮತ್ತು ಬ್ರೌನ್‌ ಬಯೋ ಸೈನ್ಸ್‌ನ ಅಟ್ರೋಪೈನ್‌ ಸಲ್ಫೇಟ್‌ ಇಂಜೆಕ್ಷನ್‌ ಐಪಿ1 ಎಂಎಲ್‌
ಫಾರ್ಮಾ ಇಂಪೆಕ್ಸ್‌ ಕಂಪನಿಯ ಮೆಟ್ರೊನಿಡಜೋಲ್‌ ಇಂಜೆಕ್ಷನ್‌
ಮಾಡರ್ನ್‌ ಲ್ಯಾಬೊರೇಟರಿಸ್‌ನ ಪೈಪರಾಸಿಲಿನ್‌ ಮತ್ತು ಟಾಜೊಬ್ಯಾಕ್ಟಮ್‌, ರಿಗೈನ್‌ ಲ್ಯಾಬೊರೇಟರಿಸ್‌ನ ಕ್ಯಾಲ್ಸಿಯಂ ಗ್ಲುಕೊನೇಟ್ ಇಂಜೆಕ್ಷನ್‌
ಒಂಡನ್ಸೆಟ್ರೋನ್‌ ಇಂಜೆಕ್ಷನ್‌

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...