60 ಲಕ್ಷ ಶಿಶುಗಳಿಗೆ ಕ್ಯಾಲರಿಯುಕ್ತ ಆಹಾರವಿಲ್ಲ ಎಂದ ‘ದಿ ಲ್ಯಾನ್ಸೆಟ್’ ವರದಿ

Date:

ಭಾರತದಲ್ಲಿ ಕೋವಿಡ್ ಸಂದರ್ಭದಲ್ಲಿ 60 ಲಕ್ಷ ಮಕ್ಕಳು ಕ್ಯಾಲರಿಯುಕ್ತ ಆಹಾರ ಸಿಗದೆ ಹಸಿವಿನಿಂದ ನರಳಿದ್ದಾರೆ ಎನ್ನುವ ಅಂತಾರಾಷ್ಟ್ರೀಯ ಅಧ್ಯಯನ ವರದಿಯನ್ನು ಭಾರತೀಯ ತಜ್ಞರು ತಿರಸ್ಕರಿಸಿದ್ದಾರೆ

2021ರ ಕೋವಿಡ್ ಅವಧಿಯಲ್ಲಿ ದೇಶದ ಸುಮಾರು 60 ಲಕ್ಷ ಮಕ್ಕಳು (6ರಿಂದ 23 ತಿಂಗಳ ನಡುವಿನ ವಯಸ್ಸಿನವರು) ಕನಿಷ್ಠ ಒಪ್ಪತ್ತಿನ ಗುಣಮಟ್ಟದ ಕ್ಯಾಲರಿಯುಕ್ತ ಪೌಷ್ಠಿಕಾಹಾರ ಇಲ್ಲದ ಪರಿಸ್ಥಿತಿ ಎದುರಿಸಿದ್ದಾರೆ ಎಂದು ಅಂತಾರಾಷ್ಟ್ರೀಯ ವಿಜ್ಞಾನ ಜರ್ನಲ್ ‘ದಿ ಲ್ಯಾನ್ಸೆಟ್‌’ ಹೇಳಿದೆ.

‘ದಿ ಲ್ಯಾನ್ಸೆಟ್’ ಮಾರ್ಚ್‌ 30ರಂದು ಪ್ರಕಟಿಸಿದ ವರದಿ ಪ್ರಕಾರ, “2021ರ ಸಯದಲ್ಲಿ ಭಾರತದಲ್ಲಿ ಪೌಷ್ಠಿಕ ಆಹಾರವಿಲ್ಲದೆ 59,98,138 ಮಕ್ಕಳು ಬಳಲಿದ್ದಾರೆ. ಈ ಪೈಕಿ, ಉತ್ತರ ಪ್ರದೇಶ (28.4%), ಬಿಹಾರ (14.2%), ಮಹಾರಾಷ್ಟ್ರ (7.1%), ರಾಜಸ್ಥಾನ ( 6.5%), ಹಾಗೂ ಮಧ್ಯಪ್ರದೇಶ (6%) ಮೂರನೇ ಎರಡರಷ್ಟು ಪಾಲು ಹೊಂದಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಆಹಾರ ಕೊರತೆ ಅಥವಾ ಪೌಷ್ಠಿಕ ಆಹಾರವಿಲ್ಲದಿರುವ ಬಗ್ಗೆ ವಿವರಿಸಿರುವ ವರದಿ, “ಮಗುವು ಅಗತ್ಯವಿರುವ ಕ್ಯಾಲೋರಿಫಿಕ್ ಅಂಶದ ಯಾವುದೇ ಆಹಾರ ಸೇವಿಸಿಲ್ಲ (ಅಂದರೆ, ಮಗು ಕಳೆದ 24 ಗಂಟೆಗಳಲ್ಲಿ ಯಾವುದೇ ಘನ/ಅರೆ-ಘನ/ ಮೃದು/ ಮೆತ್ತಗಿನ ಆಹಾರ ಅಥವಾ ತಾಜಾ ಹಾಲು ಸೇವಿಸದಿರುವುದು)” ಎಂದು ತಾಯಂದಿರು ನೀಡಿರುವ ಮಾಹಿತಿಯನ್ನು ಆಧರಿಸಿ ವರದಿ ಸಿದ್ಧಪಡಿಸಲಾಗಿದೆ” ಎಂದು ಹೇಳಿದೆ.

1993, 1999, 2006, 2016 ಮತ್ತು 2021ರಲ್ಲಿ ನಡೆದಿರುವ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಗಳ (ಎನ್‌ಎಫ್‌ಎಚ್‌ಎಸ್‌) ದತ್ತಾಂಶ ಉಲ್ಲೇಖಿಸಿ ‘ದಿ ಲ್ಯಾನ್ಸೆಟ್’ ಭಾರತದಲ್ಲಿ ಆಹಾರದ ಕೊರತೆ ಹೆಚ್ಚಾಗಿದೆ ಎಂದು ಹೇಳಿದೆ. 1993ರಲ್ಲಿ ಶೇ 20.0ರಷ್ಟಿದ್ದ ಆಹಾರ ಕೊರತೆಯು 2021ರ ವೇಳೆಗೆ ಶೇ 17.8ಕ್ಕೆ ಇಳಿದಿದೆ. 2021ರ ಸಮೀಕ್ಷೆಯಂತೆ 60 ಲಕ್ಷ ಮಕ್ಕಳು ಆಹಾರ ಕೊರತೆಯಿಂದ ಬಳಲುತ್ತಿದ್ದಾರೆ.

ದಿ ಲ್ಯಾನ್ಸೆಟ್‘ ವರದಿಯನ್ನು ಆಡಳಿತ ಬಿಜೆಪಿ ಸರ್ಕಾರ ಟೀಕಿಸಿ ತಳ್ಳಿಹಾಕಿದೆ. “ಈ ವರದಿಯು ‘ಕೃತಕ’ವಾಗಿದ್ದು, ಇದು ಓದುಗರನ್ನು ಮತ್ತು ಆಡಳಿತವನ್ನು ದಾರಿ ತಪ್ಪಿಸುತ್ತದೆ” ಎಂದು ಭಾರತೀಯ ಆಹಾರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

“ಶಿಶುಗಳು ಮತ್ತು ಚಿಕ್ಕ ಮಕ್ಕಳು ಎದೆ ಹಾಲನ್ನು ಕುಡಿಯುತ್ತವೆ. ಎದೆ ಹಾಲನ್ನು ಹೊರಗಿಟ್ಟು ಆಹಾರ ಕೊರತೆಯ ಬಗ್ಗೆ ಜರ್ನಲ್ ವರದಿ ಮಾಡಿದೆ” ಎಂದು ಮುಂಬೈನ ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಪಾಪ್ಯುಲೇಶನ್ ಸೈನ್ಸಸ್ (ಐಐಪಿಎಸ್) ಅಸೋಸಿಯೇಟ್ ಪ್ರೊಫೆಸರ್ ಡಾ ಶ್ರೀನಿವಾಸ್ ಗೋಲಿ ಹೇಳಿದ್ದಾರೆ.

‘ದಿ ಲ್ಯಾನ್ಸೆಟ್’ ವರದಿಯಂತೆ ಶೇ. 17.8 ಮಕ್ಕಳಲ್ಲಿ ಆಹಾರ ಕೊರತೆಯಿದೆ ಎಂಬುದನ್ನು ಒಪ್ಪಿಕೊಳ್ಳಲಾಗದು. ನಾವು ಆಹಾರದ ವ್ಯಾಖ್ಯಾನದಲ್ಲಿ ಎದೆ ಹಾಲನ್ನು ಪರಿಗಣಿಸಿದರೆ, ನಿಜವಾದ ಆಹಾರ ಕೊರತೆ ಅಂಕಿಅಂಶವು ಶೇ 1.3ರಷ್ಟು ಮಾತ್ರವಿದೆ ಎಂದು ಗೋಲಿ ವಾದಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಆರೋಗ್ಯ ಹಕ್ಕು ಮಸೂದೆ ವಿರುದ್ಧ ರಾಜಸ್ಥಾನದ ವೈದ್ಯರೇಕೆ ತಿರುಗಿ ಬಿದ್ದಿದ್ದಾರೆ?

“ಕ್ಯಾಲರಿಯುಕ್ತ ಆಹಾರದಿಂದ ವಂಚಿತವಾಗಿರುವ ಮಕ್ಕಳಲ್ಲಿ ಹೆಚ್ಚಿನವರು (ಸುಮಾರು ಶೇ. 65) 6-11 ತಿಂಗಳ ವಯಸ್ಸಿನ-ಗುಂಪಿಗೆ ಸೇರಿದವರು. ಅವರು ಎದೆಹಾಲು ಕುಡಿಯುವವರಾಗಿದ್ದಾರೆ. ಬರೀ ಎದೆಹಾಲು ಮಕ್ಕಳಿಗೆ ಸಾಕಾಗುವುದಿಲ್ಲ. ಆದರೂ, ಈ ವಯಸ್ಸಿನ ಮಕ್ಕಳನ್ನು ಆಹಾರ ವಂಚಿತ ಮಕ್ಕಳ ಅಂಕಿ- ಅಂಶಕ್ಕೆ ಪರಿಗಣಿಸಲಾಗುವುದಿಲ್ಲ” ಎಂದು ಸಂಶೋಧಕರು ಹೇಳಿದ್ದಾರೆ.

ಸಮೀಕ್ಷೆಯಲ್ಲಿ ಭಾಗವಹಿಸಿದ 6ರಿಂದ 23 ತಿಂಗಳೊಳಗಿನ ಸುಮಾರು ಶೇ. 93ರಷ್ಟು ಮಕ್ಕಳು ಎದೆಹಾಲು ಕುಡಿಯುವವರು. ಅವರಲ್ಲಿ 6ರಿಂದ 11 ತಿಂಗಳ ವಯಸ್ಸಿನ ಶಿಶುಗಳ ಸಂಖ್ಯೆ ಹೆಚ್ಚಾಗಿತ್ತು. ಈ ವಯಸ್ಸಿನ ಮಕ್ಕಳು ಅಗತ್ಯ ಕ್ಯಾಲರಿಗಳನ್ನು ಎದೆಹಾಲಿನಿಂದಲೇ ಪಡೆಯುತ್ತಾರೆ. ಆದ್ದರಿಂದ, ‘ಆಹಾರ’ದ ವ್ಯಾಖ್ಯಾನದಲ್ಲಿ ಎದೆಹಾಲನ್ನು ಬಿಟ್ಟುಬಿಡುವ ಪರಿಕಲ್ಪನೆಯು ‘ಕೃತಕವಾಗಿ ಸಂಖ್ಯೆಗಳನ್ನು ಹೆಚ್ಚಿಸುತ್ತದೆ’ ಮತ್ತು ಓದುಗರು ಮತ್ತು ಆಡಳಿತಕ್ಕೆ ಅನಗತ್ಯ ಎಚ್ಚರಿಕೆ ಸೃಷ್ಟಿಸುತ್ತದೆ” ಎಂದು ಐಐಪಿಎಸ್‌ನ ಎಪಿಡೆಮಿಯಾಲಜಿ ಮತ್ತು ಬಯೋಸ್ಟಾಟಿಸ್ಟಿಕ್ಸ್ ವಿಭಾಗದ ಪ್ರೊ. ಉದಯ ಎಸ್ ಮಿಶ್ರಾ ತಿಳಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...