ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ: ಮಂದಕೃಷ್ಣ ಮಾದಿಗ ಆರೋಪ

Date:

ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್‌, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ. ಖರ್ಗೆ ಹೊಲೆಯ ಸಮುದಾಯದವರು. ಅವರು ಒಳಮೀಸಲಾತಿ ಜಾರಿಗೊಳಿಸಲು ಕಾಂಗ್ರೆಸ್‌ ಹೈಕಮಾಂಡ್‌ಗೆ ಬಿಡುತ್ತಿಲ್ಲ. ಕರ್ನಾಟಕದಲ್ಲಿ ಒಳಮೀಸಲಾತಿ ವಿಚಾರದಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ನಿರ್ಧಾರ ತೆಗೆದುಕೊಳ್ಳಲು ಇದೇ ಬಲಗೈ ಸಮುದಾಯದ ಪರಮೇಶ್ವರ್, ಮಹದೇವಪ್ಪ ಹಾಗೂ ಪ್ರಿಯಾಂಕ್ ಖರ್ಗೆ ಬಿಡುತ್ತಿಲ್ಲ ಎಂದು ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಒಳಮೀಸಲಾತಿ ಅನುಷ್ಠಾನದ ನೇತಾರ, ಹೋರಾಟಗಾರ ಮಂದಕೃಷ್ಣ ಮಾದಿಗ ಆರೋಪಿಸಿದರು.

ನೇಮಕಾತಿಯಲ್ಲಿ ಒಳಮೀಸಲಾತಿಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ‘ಒಳಮೀಸಲಾತಿ ಹೋರಾಟ ಸಮಿತಿ’ ನೇತೃತ್ವದಲ್ಲಿ ನಡೆಯುತ್ತಿರುವ ಬೃಹತ್ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. “ಇಂದು ಒಂದು ಸಂತೋಷ ಮತ್ತು ಒಂದು ದುಖಃ ನನ್ನನ್ನು ಕಾಡುತ್ತಿದೆ. ಸಂತೋಷ ಏನೆಂದರೆ ಕರ್ನಾಟಕದ ಎಲ್ಲಾ ಒಳಮೀಸಲಾತಿ ಹೋರಾಟಗಾರರು ಒಂದೇ ವೇದಿಕೆಗೆ ಬಂದು ನಮಗೆ ಗುಂಒಉಗಳು ಮುಖ್ಯವಲ್ಲ, ಸಮುದಾಯದ ಹಕ್ಕುಗಳನ್ನುಪಡೆದುಕೊಳ್ಳುವುದೇ ನಮಗೆ ಮುಖ್ಯ ಎಂದು ಒಂದೇ ವೇದಿಕೆಗೆ ಬಂದಿರುವುದು. ದುಖಃದ ವಿಚಾರವೆಂದರೆ, ಇಷ್ಟೆಲ್ಲ ಒತ್ತಡ ಬರುತ್ತಿದ್ದರೂ ಕರ್ನಾಟಕ ಸರ್ಕಾರ ಒಳಮೀಸಲಾತಿಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡದೇ ಇರುವುದು” ಎಂದರು.

“ಕರ್ನಾಟಕದಲ್ಲಿ 15 ರಷ್ಟು ಮೀಸಲಾತಿಯಲ್ಲಿ ಬಹುತೇಕ ಮೀಸಲಾತಿಯನ್ನು ಹೊಲೆಯ ಸಮುದಾಯವೇ ಅನುಭವಿಸಿದೆ, ಇದು ಕರ್ನಾಟಕ ಮಾತ್ರವಲ್ಲ, ದಕ್ಷಿಣ ಭಾರತದ ಎಲ್ಲಾ ರಾಜ್ಯಗಳ ಪರಿಸ್ಥಿತಿ ಇದೇ ಆಗಿದೆ.  1965ರಲ್ಲೆ ಕೇಂದ್ರ ಸರ್ಕಾರ ಲೋಕೂರ್ ಕಮಿಟಿ, ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಜಾರಿಯಾಗಬೇಕೆಂದು ಶಿಫಾರಸ್ಸು ಮಾಡಿತ್ತು, ಏಕೆಂದರೆ ಕಾಂಗ್ರೆಸ್ ನಲ್ಲಿ ಅಂದಿನಿಂದ ಹೊಲೆಯ ಸಮುದಾಯದ ಮೇಲಾಧಿಪತ್ಯ ಕಾರಣದಿಂದಾಗಿ ಇದನ್ನು ಜಾರಿಯಾಗುವುದನ್ನು ತಡೆಹಿಡಿಯಾಲಾಯಿತು” ಎಂದು ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“1996ರಲ್ಲಿ ಶುರು ಮಾಡಿದ ಹೋರಾಟ ಇಂದು ಮಾದಿಗ ಮೀಸಲಾತಿ ಇಲ್ಲಿಗೆ ತಂದು ನಿಲ್ಲಿಸಿದೆ. ನಮ್ಮ ಒಒಳಮೀಸಲಾತಿ ಹೋರಾಟದಲ್ಲಿ ನ್ಯಾಯವಿದೆ, ಧರ್ಮವಿದೆ. ತೆಲಂಗಾಣದಲ್ಲಿ ಎಲ್ಲ  ಪಕ್ಷಗಳು ನಮಗೆ ಬಂಬಲಿಸಿದ್ದರು, ತಮಿಳುನಾಡುವಿನಲ್ಲೂ ಕೂಡಾ ಒಳಮೀಸಲಾತಿಯ ಪರವಾಗಿದೆ ಎಂದು ಹೇಳುತ್ತಿದೆ. ಕರ್ನಾಟಕದಲ್ಲೂ ಕೂಡಾ ಎಲ್ಲ ಪಕ್ಷಗಳು ನಮ್ಮ ಒಳಮೀಸಲಾತಿ ಪರವಾಗಿ ಇವೆ ಎಂದು ಹೇಳುತ್ತಿವೆ. ನಮ್ಮ ಹೋರಾಟದಲ್ಲಿ ನ್ಯಾಯ ಇಲ್ಲದಿದ್ದರೆ, ಧರ್ಮ ಇಲ್ಲದಿದ್ದರೆ ಈ ಎಲ್ಲ ಪಕ್ಷಗಳು ಏಕೆ ಒಳಮೀಸಲಾತಿ ಜಾರಿಯಾಗಬೆಕೆಂದು ಬಯಸುತ್ತಿದ್ದವು. ಎಲ್ಲಿ ಒಳಮೀಸಲಾತಿ ಕೂಗು, ಹೋರಾಟ ಹೆಚ್ಚಾಗಿ ಕೇಳಿಬರುತ್ತಿವೆಯೋ ಆ ರಾಜ್ಯಗಳಲ್ಲಿನ ಪಕ್ಷಗಳೆಲ್ಲವೂ ಒಳಮೀಸಲಾತಿ ಪರವಾಗಿ ನಿಲುವು ತೆಗೆದುಕೊಳ್ಳುತ್ತಿವೆ. ಎಲ್ಲ ಆಯೋಗಗಳೂ ಒಳಮೀಸಲಾತಿ ಜಾರಿಯಾಗಬೇಕೆಂದು ವರದಿ ನೀಡುತ್ತಿದೆ” ಎಂದರು.

“ಹರಿಯಾಣದಲ್ಲಿ 2024 ಆಗಸ್ಟ್ ತೀರ್ಪು ಬಂದ ನಂತರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಜಾರಿ ಮಾಡುವ ತೀರ್ಮಾನ ತೆಗೆದುಕೊಂಡಿದೆ. ಆಂದ್ರ ಪ್ರದೇಶದಲ್ಲಿ ಒಳಮಿಸಲಾತಗಾಗಿ ಆಗ್ರಹಿಸಿ ಶುರುವಾದ ಹೋರಾಟದಲ್ಲಿ ಹಲವು ಏಳುಬೀಳುಗಳು ನಡೆದಿವೆ. ಚಂದ್ರಬಾಬು ಸರ್ಕಾರ ಒಳಮೀಸಲಾತಿ ಜಾರಿ  ಮಾಡಿ ಆದೇಶ ಮಾಡಿತ್ತು ಅಂದು ಮಾಲಾ ಜಾತಿಗಳು ಒಳಮೀಸಲಾತಿಯ ವಿರುದ್ದ ಸುಪ್ರೀಂ ಕೋರ್ಟ್‌ಗೆ ಅರ್ಜಿ ಹಾಕಿದ್ದವು. 2004ರಲ್ಲಿ ಕೇಂದ್ರ ಸರ್ಕಾರ ಒಳಮೀಸಲಾತಿ ಪರವಾಗಿ ಅಫೀಡವಿಟ್ ಹಾಕದಿದ್ದ ಕಾರಣದಿಂದಾಗಿ ಅಂದು ಸುಪ್ರೀಂ ಕೋರ್ಟ್ ಒಳಮಿಸಲಾತಿ ವಿರುದ್ದ ತೀರ್ಪು ನೀಡಿತ್ತು. ಯುಪಿಎ ಸರ್ಕಾರದ ಅವಧಿಯಲ್ಲಿ ನಿರಂತರವಾಗಿ ಒಳಮೀಸಲಾತಿ ವಿರುದ್ದ ನಿಲುವು ತೆಗೆದುಕೊಂಡಿದ್ದ ಕಾರಣದಿಂದಾಗಿ ಉಷಾ ಮೆಹ್ರಾ ಸಮಿತಿ ಸೇರಿದಂತೆ ಹಲವು ಸಮಿತಿಗಳ ರಚಿಸುವ ಮೂಲಕ ಒಳಮೀಸಲಾತಿಯನ್ನು ಸಂಕಷ್ಟಕ್ಕೆ ದೂಡಿದವರು” ಆರೋಪಿಸಿದರು.

“ಆಂದ್ರದಲ್ಲಿ 2023ರಲ್ಲಿ ಮಾದಿಗ ವಿಶ್ವರೂಪಂ ಕಾರ್ಯಕ್ರಮ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರನ್ನು ಒಳಮೀಸಲಾತಿ ಪರವಾಗಿ ಅಫಿಡವಿಟ್ ಹಾಕುವಂತೆ ಒತ್ತಡ ತರಲಾಯಿತು. ಅದರಂತೆಯೇ ನರೇಂಧ್ರ ಮೋದಿ ಸರ್ಕಾರ ಸುಪ್ರೀಂ ಕೋರ್ಟ್ ಗೆ ಒಳಮೀಸಲಾತಿ ಪರವಾಗಿ ಅಫಿಡವಿಟ್ ಹಾಕಿದ್ದರು ಆ ಕಾರಣದಿಂದಾಗಿಯೇ ಒಳಮೀಸಲಾತಿ ಪರವಾಗು ಸುಪ್ರೀಂ ಕೋರ್ಟ್ ಆದೇಶ ನೀಡಲು ಸಾದ್ಯವಾಯಿತು. ಆಂದ್ರ ಪ್ರದೇಶದಲ್ಲಿ ರಾಜೀವ್ ರಂಜಮಿಶ್ರನ್ ಸಮಿತಿ ರಚಿಸುವ ಮೂಲಕ ಒಳಮೀಸಲಾತಿ ಜಾರಿಯಾಗುತ್ತಿದೆ. ತೆಲಂಗಾಣದಲ್ಲಿಯೂ ಒಳಮೀಸಲಾತಿ ಜಾರಿಯಾಗಿದೆ. ತಮಿಳುನಾಡುನಲ್ಲಿ ಬಹಳ ಹಿಂದೆಯೇ ಅರುಂಧತಿಯಾರ್ ಸಮುದಾಯಕ್ಕೆ 3% ರಷ್ಟು ಒಳಮೀಸಲಾತಿ ನೀಡಿದೆ. ಎಲ್ಲ ರಾಜ್ಯಗಳಲ್ಲೂ ಒಳಮೀಸಲಾತಿ ಬಹತೇಕ ಬಗೆಹರಿಯುವ ಹಂತಕ್ಕೆ ಬಂದಿದೆ. ಆದರೆ ಕರ್ನಾಟಕದಲ್ಲಿ ಒಳಮೀಸಲಾತಿಯನ್ನು ನಿಧಾನಗತಿ ಧೋರಣೆ ಅನುಸರಿಸುತ್ತಿರುವ ಕಾರಣದಿಂದಾಗಿ ನನಗೆ ಅತೀವ ದುಖಃ ತಂದಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಕರ್ನಾಟಕದಲ್ಲಿ ಎಜೆ ಸದಾಶಿವ ಸಮಿತಿ ಒಳಮೀಸಲಾತಿ ಪರವಾಗು ತೀರ್ಪು ನೀಡಿದ್ದವು. ಮಾದುಸ್ವಾಮಿ ಸಮಿತಿಯೂ ಕೂಡಾ ಒಳಮೀಸಲಾತಿ ಪರವಾಗಿ ವರದಿನೀಡಿದ್ದವು. ಇವೆಲ್ಲಾ ಸುಪ್ರೀಂ ಕೋರ್ಟ್ ತೀರ್ಪು ಬರುವ ಮುಂಚೆ ಎಂದುಕೊಂಡರೆ ಇದೇ ಸರ್ಕಾರ ಸುಪ್ರೀಂ ಕೋರ್ಟ್ ತೀರ್ಪು ಬಂದ ನಂತರ ನೀವೇ ರಚಿಸಿದ ಜಸ್ಟೀಸ್ ನಾಗಮೋಹನ್ ದಾಸ್ ಸಮಿತಿಯೂ ಕೂಡಾ ಒಳಮೀಸಲಾತಿ ಜಾರಿಮಾಡಬೇಕೆಂದು ವರದಿ ನೀಡಿವೆ. ಮತ್ತೇಕೆ ಜಾರಿ ಮಾಡುತ್ತಿಲ್ಲ” ಎಂದು ಪ್ರಶ್ನಿಸಿದರು.

“ತಮಿಳುನಾಡಿನಲ್ಲಿ, ಆಂದ್ರದಲ್ಲಿ, ತೆಲಂಗಾಣದಲ್ಲಿ ಒಂದೇ ಸಮಿತಿ ವರದಿ ಅನುಸಾರ ಒಳಮೀಸಲಾತಿ ಜಾರಿ ಮಾಡಿವೆ. ಆದರೆ ಕರ್ನಾಟಕದಲ್ಲಿ 3 ಸಮಿತಿಗಳ ವರದಿ ಇದ್ದರೂ ಒಳಮೀಸಲಾತಿ ಜಾರಿ ಮಾಡದಿರುವುದು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಒಳಮೀಸಲಾತಿ ವಿರುದ್ದ ನಿಲುವು ತೆಗೆದುಕೊಳ್ಳುತ್ತಿದೆ. ಕಾಂಗ್ರೆಸ್ ಸರ್ಕಾರ ಒಳಮೀಸಲಾತಿ ಪರವಾಗಿ ಇವೆ ಎಂದು ಘೋಷಿಸಿದರೂ ಕಾಂಗ್ರೆಸ್ ಪಕ್ಷದಲ್ಲಿ ಹೊಲೆಯ ಸಮುದಾಯಕ್ಕೆ ಇರುವ ಪ್ರಾಧಾನ್ಯತೆ ಮಾದಿಗರಿಗಿಲ್ಲ ಎಂದು ಇದರ ಮೂಲಕ ತಿಳಿಯುತ್ತದೆ. ಇಂದು ಕರ್ನಾಟಕದ ಕಾಂಗ್ರೆಸ್ ಪಕ್ಷದಲ್ಲಿ ಹೊಲೆಯ ಸಮುದಾಯದ ಪ್ರಭಾವಕ್ಕೆ ಹೆದರುತ್ತಿದೆ. ಆದರೆ ಮಾದಿಗ ಸಮುದಾಯದ ಆಕ್ರೋಷ, ನೋವನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ” ಎಂದು ಕಿಡಿಕಾರಿದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...