ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 17ನೇ ಬಜೆಟ್ ಅನ್ನು ಇಂದು ಮಂಡಿಸಿದ್ದು, 2026-27ನೇ ಸಾಲಿನ ಬಜೆಟ್ ಮಂಡನೆ ವೇಳೆ ಹಂತ ಹಂತವಾಗಿ ಮದ್ಯದ ದರ ಏರಿಕೆ ಮಾಡುವ ಪ್ರಸ್ತಾಪ ಮಾಡಿದ್ದಾರೆ.
2023ರ ಜೂನ್‌ನಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಬಜೆಟ್‌ನಲ್ಲಿ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇಕಡ 20ರಷ್ಟು ಹೆಚ್ಚಿಸಲಾಗಿತ್ತು. 2024ರ ಬಜೆಟ್ ಮಂಡನೆ ವೇಳೆ ಬಿಯರ್ ಮೇಲಿನ ಸುಂಕವನ್ನು ಏರಿಸಲಾಗಿತ್ತು.
ಇದನ್ನು ಓದಿದ್ದೀರಾ? ರಾಜ್ಯ ಬಜೆಟ್ | ಯಾವ ವಲಯಕ್ಕೆ ಎಷ್ಟು ಅನುದಾನ?
ಅದಾದ ಬಳಿಕ 2025ರಲ್ಲಿ ರಾಜ್ಯ ಸರ್ಕಾರವು ಭಾರತದಲ್ಲಿ ತಯಾರಿಸಿದ ಮದ್ಯದ (IML) ಮೊದಲ ನಾಲ್ಕು ಸ್ಲ್ಯಾಬ್‌ಗಳ ದರವನ್ನು ಹೆಚ್ಚಿಸಿತ್ತು, ಇದು ಮೇ 15ರಿಂದ ಜಾರಿಗೆ ಬಂದಿತ್ತು.
2026-27ನೇ ಬಜೆಟ್‌ನಲ್ಲಿ ಮತ್ತೆ ಹಂತ ಹಂತವಾಗಿ ಮದ್ಯದ ದರವನ್ನು ಏರಿಸುವ ಗುರಿಯನ್ನು ಸರ್ಕಾರ ಘೋಷಿಸಿದೆ.
2025-26ನೇ ಸಾಲಿನಲ್ಲಿ ಅಬಕಾರಿ ಇಲಾಖೆಗೆ 40 ಸಾವಿರ ಕೋಟಿ ರೂ. ಆದಾಯದ ಟಾರ್ಗೆಟ್ ನೀಡಲಾಗಿತ್ತು. ಅದಾದ ಬಳಿಕ ಮತ್ತೆ 3 ಸಾವಿರ ಕೋಟಿ ರೂ. ಹೆಚ್ಚುವರಿ ಗುರಿ ನಿಗದಿಪಡಿಸಲಾಗಿತ್ತು. ಆದರೆ ಈವರೆಗೆ ಕೇವಲ ಶೇ. 77.61ರಷ್ಟು (33,371 ಕೋಟಿ ರೂ.) ಮಾತ್ರ ಅಬಕಾರಿ ಇಲಾಖೆ ಸಂಗ್ರಹಿಸಿದೆ.





