ಸಂವಿಧಾನ ವಿರೋಧಿಗಳಿಂದ ದೇಶದ ಆಂತರಿಕ ಭದ್ರತೆಗೆ ಅಪಾಯವಿದೆ- ಎ ನಾರಾಯಣ

Date:

“ಈ ದೇಶದ ಆಂತರಿಕ ಭದ್ರತೆಗೆ ಅಪಾಯ ಇರುವುದು ಮುಸ್ಲಿಮರಿಂದ ಅಲ್ಲ, ಈ ದೇಶದ ಸಂವಿಧಾನಕ್ಕೆ ಯಾರು ವಿರೋಧಿಯಾಗಿದ್ದಾರೊ ಅವರಿಂದ ದೇಶದ ಆಂತರಿಕ ಭದ್ರತೆಗೆ ಅಪಾಯವಿದೆ ಎಂಬುದನ್ನು ಬಹಳ ಗಟ್ಟಿಯಾಗಿ ನಿರೂಪಿಸಬೇಕಾಗಿದೆ” ಎಂದು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎ ನಾರಾಯಣ ಹೇಳಿದರು.

‘ಜಾಗೃತ ಕರ್ನಾಟಕ’ ಶುಕ್ರವಾರ ಬೆಂಗಳೂರಿನಲ್ಲಿ ಆಯೋಜಿಸಿದ್ದ ಕರ್ನಾಟಕದ ರಾಜಕಾರಣದಲ್ಲಿ ಮುಸ್ಲಿಮರ ಭವಿಷ್ಯ ಕುರಿತ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

“ಭಾರತ ದೇಶದ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮುಸ್ಲಿಮರ ರಾಜಕೀಯ ಭವಿಷ್ಯ ಅಪಾಯದಲ್ಲಿದೆ. ನಮ್ಮೆಲ್ಲರ ಪ್ರತಿರೋಧ ಇಲ್ಲದೆ ಇದ್ದರೆ ಈ ಅಪಾಯ ಈಗಿನ ಪ್ರಧಾನ ಮಂತ್ರಿಗಳ ನಂತರವೂ ಮುಂದುವರಿಯುತ್ತದೆ. ಈ ಆತಂಕ ಮುಂದುವರಿಯುತ್ತದೆ ಎಂಬ ನಿರಾಶವಾದದ ನಡುವೆಯೂ ನಮ್ಮ ದೇಶದ ಬಹುಸಂಖ್ಯಾತ ಸೆಕ್ಯುಲರ್‌ಗಳು ಪ್ರಬಲವಾದಂತಹ ಪ್ರತಿರೋಧ ತೋರಿದರೆ ಈ ಆತಂಕ ಇರುವುದಿಲ್ಲ ಎಂಬ ಆಶಾವಾದ ಕಾಣಿಸುತ್ತದೆ. ಈ ದೇಶದ ಬಹುಸಂಖ್ಯಾತ ಸೆಕ್ಯುಲರ್‌ಗಳು ಅಂತಹ ಪ್ರಬಲವಾದ ಪ್ರತಿರೋಧವನ್ನು ಕಟ್ಟುವಂತಹ ಸಂದರ್ಭ ಬಂದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇಂತಹ ಸಂದರ್ಭದಲ್ಲಿ ಒಂದು ದೊಡ್ಡ ಪ್ರತಿರೋಧ ಹುಟ್ಟಿಕೊಳ್ಳುವ ಅವಶ್ಯಕತೆ ಇದೆ. ಪ್ರತಿರೋಧ ಹುಟ್ಟುವುದಾದರೂ ಹೇಗೆ ಮತ್ತು ಯಾರು ಮಾಡಬೇಕು? ಈ ದೇಶದಲ್ಲಿರುವ ಬಹುಸಂಖ್ಯಾತ ಸೆಕ್ಯೂಲರ್‌ವಾದಿಗಳು ಬಹಳ ವ್ಯವಸ್ಥಿತವಾಗಿ ಒಟ್ಟಾಗಿ ಸೇರಿ ಮುಸ್ಲಿಂರನ್ನು ರಾಕ್ಷಸೀಕರಣಗೊಳಿಸುತ್ತಿರುವ ಅಪಪ್ರಚಾರವನ್ನು ಅಲ್ಲಗಳೆಯಬೇಕಾಗಿದೆ” ಎಂದರು.

“ಪ್ರಸ್ತುತ ದೇಶಕ್ಕೆ ರಾಜಕೀಯ ನಾಯಕತ್ವ ಬೇಕಾಗಿದೆ. ನಾಯಕತ್ವ ಹುಟ್ಟುವ ಕಾಲ ಬಂದಿದೆ. ದೇಶದ ಜನಕ್ಕೆ ಈಗಿರುವ ಸಮಸ್ಯೆಗಳಿಂದ ಮುಕ್ತಿ ದೊರಕಿಸಿಕೊಡುವ ನಾಯಕ ಬೇಕಾಗಿದೆ. ಇಂತಹ ಸಂದರ್ಭದಲ್ಲಿ ಮುಸ್ಲಿಮರು ನಾವು ಅಲ್ಪಸಂಖ್ಯಾತರ ನಾಯಕ, ಮುಸ್ಲಿಮರ ನಾಯಕನಾಗಬೇಕು ಎಂದು ಯೋಚಿಸಬೇಡಿ. ನಾವು ಇಡೀ ಭಾರತ ದೇಶದ ಸಮಸ್ತ ಜನವರ್ಗದ ನಾಯಕನಾಗುತ್ತೇನೆ ಮತ್ತು ಭಾರತವನ್ನು ಪ್ರತಿನಿಧಿಸುತ್ತೇನೆ ಎಂದು ಗಟ್ಟಿಯಾಗಿ ಹೇಳುವಂಥ ಧೈರ್ಯ ಬೆಳೆಸಿಕೊಳ್ಳಬೇಕು. ಹಾಗೆ ಮುಸ್ಲಿಂ ನಾಯಕರಾದಂಥವರು ಬರೀ ಮುಸ್ಲಿಂ ಸಮಸ್ಯೆಗಳ ಬಗ್ಗೆ ಮಾತನಾಡೋದಲ್ಲ, ದಲಿತರ, ಹಿಂದುಳಿದ ವರ್ಗಗಳ ಸಮಸ್ಯೆಗಳ ಬಗ್ಗೆ ಮಾತನಾಡಿ. ನಿಮ್ಮ ಹಾಗೆ ಇರುವ ಇಡೀ ಜನವರ್ಗದ ಸಮಸ್ಯೆ ಬಗ್ಗೆ ಮಾತನಾಡಿದಾಗ ಜನ ನಿಮ್ಮ ಧರ್ಮವನ್ನು, ನಿಮ್ಮ ಮತವನ್ನು ಮರೆತು ನಿಮ್ಮನ್ನು ಮನುಷ್ಯರೆಂದು ನೋಡುತ್ತಾರೆ. ನಾಯಕರೆಂದು ಒಪ್ಪಿಕೊಳ್ಳುತ್ತಾರೆ. ಈ ದೇಶ ಒಬ್ಬ ರಕ್ಷಕನಿಗಾಗಿ ಕಾಯುತ್ತಿದೆ. ಆ ರಕ್ಷಕ ಯಾವ ಸಮಾಜದಿಂದ, ಯಾವ ಮತದಿಂದ ಬರುತ್ತಾರೆ ಎಂದು ನೋಡುವುದಿಲ್ಲ. ಅವನು ನಮ್ಮ ರಕ್ಷಕ ಹೌದೋ ಅಲ್ಲವೊ ಎಂಬುದಷ್ಟೆ ನೋಡುತ್ತಾರೆ. ಸಂದಿಗ್ಧ ಪರಿಸ್ಥಿತಿಯಲ್ಲಿ ಈ ದೇಶವಿದ್ದು ನಾವೆಲ್ಲರೂ ಒಟ್ಟಿಗೆ ಸೇರಿಕೊಂಡು ಎದುರಿಸೋಣ” ಎಂದರು.

Shikwa E Hind : The Political Future Of Indian Muslims ಪುಸ್ತಕದ ಲೇಖಕ, ದೆಹಲಿಯ ಜಾಮಿಯಾ ಮಿಲಿಯಾ ವಿವಿ ಪ್ರಾಧ್ಯಾಪಕ ಪ್ರೊ ಮುಜೀಬರ್‌ ರೆಹಮಾನ್‌ ಮಾತನಾಡಿದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್‌ ಅಹಮದ್‌ ಮುಖ್ಯ ಅತಿಥಿಯಾಗಿದ್ದರು. ಜಾಗೃತ ಕರ್ನಾಟಕದ ಡಾ ವಾಸು ಎಚ್‌ ವಿ ಪ್ರಸ್ತಾವಿಕವಾಗಿ ಮಾತನಾಡಿದರು. ಸುಹೈಲ್‌ ಅಹಮದ್‌ ನಿರೂಪಿಸಿದರು. ಸಂವಾದದಲ್ಲಿ ಹಲವು ಮುಸ್ಲಿಂ ಮುಖಂಡರು ಭಾಗವಹಿಸಿದ್ದರು.

WhatsApp Image 2025 07 04 at 8.12.39 PM
WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...