ವಿಪಕ್ಷ ನಾಯಕರಾಗಿ ಅಶೋಕ್‌ 2 ವರ್ಷ: ಜನರ ಧ್ವನಿಯಾಗದೆ ಸ್ವಪಕ್ಷದ ತುತ್ತೂರಿಯಾಗಿದ್ದೇ ಸಾಧನೆ!

Date:

ಮುಖ್ಯಮಂತ್ರಿಗಳಿಗೆ ಸಮಾನವಾಗಿ ವಿರೋಧ ಪಕ್ಷದ ನಾಯಕರನ್ನು ಕಾಣಲಾಗುತ್ತದೆ. ಅಂತಹ ಅವಕಾಶವನ್ನು ಸ್ವತಃ ಆರ್‌ ಅಶೋಕ್ ಅವರು ಕಳೆದುಕೊಂಡಿದ್ದಾರೆ. ಅಧಿವೇಶನಗಳಲ್ಲಿ ಆಳವಾಗಿ ವಿಷಯ ಮಂಡಿಸಿದ ಉದಾಹರಣೆಗಳಿಲ್ಲ. ಸ್ವಪಕ್ಷದ ಅಜೆಂಡಾಗಳನ್ನೇ ಮಂಡಿಸುವಲ್ಲಿ ಸಮಯ ಮತ್ತು ಶ್ರಮ ವ್ಯಯ ಮಾಡಿದ್ದಾರೆ. 

ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಎರಡು ವರ್ಷ ಪೂರೈಸಿದ ಆರ್‌ ಅಶೋಕ್‌ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅವರದ್ದೇ ಪಕ್ಷದ ನಾಯಕರು, ಹಿಂಬಾಲಕರು ಹಾಗೂ ಅಭಿಮಾನಿಗಳು ಅಭಿನಂದನೆ ಹೇಳುತ್ತಿದ್ದಾರೆ. ಆದರೆ, ನೈಜ ಹರ್ಷ ಎಲ್ಲೂ ವ್ಯಕ್ತವಾದಂತೆ ಕಾಣುತ್ತಿಲ್ಲ.

ಮಾಜಿ ಸಂಸದ ಪ್ರತಾಪ್‌ ಸಿಂಹ ಸಹ ಅಶೋಕ್‌ ಅವರಿಗೆ ಶುಭಾಶಯ ತಿಳಿಸಿ ಪೋಸ್ಟ್‌ ಮಾಡಿ, ಕೆಲವೇ ಗಂಟೆಯಲ್ಲಿ ತಮ್ಮ ಪೋಸ್ಟ್‌ ಅನ್ನು ಡಿಲೀಟ್‌ ಸಹ ಮಾಡಿದ್ದಾರೆ. ಇದಕ್ಕೆ ಕಾರಣ ಪೋಸ್ಟ್‌ಗೆ ಬಂದ ಕಮೆಂಟ್‌ಗಳು. ಪ್ರತಾಪ್‌ ಶುಭಾಶಯಕ್ಕೆ ಮುಜುಗರ ಸೃಷ್ಟಿಸುವಂತ ಕಮೆಂಟ್‌ಗಳ ಸುರಿಮಳೆಯೇ ಪೋಸ್ಟ್‌ ಕೆಳಗೆ ಆಗಿತ್ತು. ಈಗ ನೋಡಿದರೆ ಪೋಸ್ಟ್‌ ಡಿಲೀಟ್‌ ಆಗಿದೆ.

ಹಾಗಾದರೆ ಆರ್‌ ಅಶೋಕ್‌ ಅವರು ತಮಗೆ ದೊರೆತ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಯಶಸ್ವಿಯಾಗಿ ಪೂರೈಸಿಲ್ಲ ಎನ್ನುವುದನ್ನು ಪ್ರತಾಪ್‌ ಸಿಂಹ ನಡವಳಿಕೆ ತೋರಿಸುತ್ತಿದೆಯೇ? ಶುಭಾಶಯ ತಿಳಿಸಿದ ಪೋಸ್ಟ್‌ ಅನ್ನು ಯಾಕೆ ಡಿಲೀಟ್‌ ಮಾಡಿದರು? ಅವರಿಗೆ ಸಂಕೋಚವಾಗಿ ಡಿಲೀಟ್‌ ಮಾಡಿದ್ರಾ? ಇದಕ್ಕೆ ಪ್ರತಾಪ್‌ ಸಿಂಹ ಅವರೇ ಉತ್ತರಿಸಬೇಕು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪ್ರತಾಪ್‌ ಸಿಂಹ ಅವರ ಬೆಳವಣಿಗೆಯನ್ನು ಒಂದು ಕಡೆಯಿಟ್ಟು ನೋಡುವುದಾರೆ ಆರ್‌ ಅಶೋಕ್‌ ಅವರು ನಿಜಕ್ಕೂ ಎರಡು ವರ್ಷದ ಅವಧಿಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿಭಾಯಿಸಿದ್ದಾರೆಯೇ? ಅವರ ಪಕ್ಷದದೊಳಗೆ ಇವರ ಬಗ್ಗೆ ಏನು ಚರ್ಚೆಯಾಗುತ್ತಿದೆ?

2023ರಲ್ಲಿ ರಾಜ್ಯ ವಿಧಾನಸಭೆಯ ಫಲಿತಾಂಶ ಪ್ರಕಟವಾದಾಗ 136 ಸ್ಥಾನಗಳನ್ನು ಪಡೆದ ಕಾಂಗ್ರೆಸ್‌ ದೊಡ್ಡ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ. ಸರ್ಕಾರ ಸ್ಥಾಪನೆಯಾಗಿ ಮುಂಗಾರು ಅಧಿವೇಶನ ನಡೆದರೂ ಬಿಜೆಪಿ ಪಕ್ಷವು ವಿಧಾನ ಪರಿಷತ್‌, ವಿಧಾನಸಭೆ ಹಾಗೂ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಯಾರನ್ನೂ ನೇಮಕ ಮಾಡಿರಲಿಲ್ಲ. ಪರಿಣಾಮ ಇತಿಹಾಸದಲ್ಲಿ ವಿಪಕ್ಷ ನಾಯಕರಿಲ್ಲದೇ ಅಧಿವೇಶನವೊಂದು ನಡೆದುಹೋಯಿತು.

ಆಡಳಿತಾರೂಢ ಕಾಂಗ್ರೆಸ್‌ ಮಾಧ್ಯಮಗಳ ವಿಪಕ್ಷ ನಾಯಕರೇ ನೇಮಕವಾಗದಿರುವ ಬಗ್ಗೆ ಟೀಕೆಗಳನ್ನು ಮಾಡಿದಾಗ ಇಲ್ಲಿಯ ಬಿಜೆಪಿ ನಾಯಕರು ತೀವ್ರ ಮುಜುಗರ ಅನುಭವಿಸುತ್ತಾರೆ. ಸೋಲಿನ ಹಾತಾಸೆಯಿಂದ ಆರು ತಿಂಗಳುಗಳ ಕಾಲ ಹೈಕಮಾಂಡ್‌ ರಾಜ್ಯ ಬಿಜೆಪಿಯನ್ನು ಕಣ್ಣೆತ್ತಿಯೂ ನೋಡಲಿಲ್ಲ. ಇದು ಸಹಜವಾಗಿಯೇ ಬಿಜೆಪಿಗೆ ಮುಖಭಂಗ ಉಂಟುಮಾಡುತ್ತದೆ. ಕೊನೆಗೆ ನವೆಂಬರ್‌ನಲ್ಲಿ ಅಳೆದು ತೂಗಿ ಜಾತಿ ಲೆಕ್ಕಾಚಾರದ ಆಧಾರದ ಮೇಲೆ ಬಿಜೆಪಿ ರಾಜ್ಯ ಘಟಕವನ್ನು ಲಿಂಗಾಯತ ಸಮುದಾಯದ ಕೈಗೆ ನೀಡಿ, ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಪುತ್ರ ಬಿ ವೈ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡುತ್ತದೆ. ಒಕ್ಕಲಿಗ ಸಮುದಾಯಕ್ಕೆ ವಿಧಾನಸಭೆಯ ವಿರೋಧ ಪಕ್ಷದ ಸ್ಥಾನವನ್ನು ಮೀಸಲಿಟ್ಟು ಆರ್‌ ಅಶೋಕ್‌ ಅವರಿಗೆ ವಿಪಕ್ಷ ನಾಯಕನ ಜವಾಬ್ದಾರಿ ಹಂಚುತ್ತದೆ.

ಆರ್. ಅಶೋಕ್ ಅವರು 2023ರ ನವೆಂಬರ್‌ನಿಂದ ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ (LoP) ಕಾರ್ಯನಿರ್ವಹಿಸುತ್ತಿದ್ದಾರೆ. ಈ ಎರಡು ವರ್ಷದ ಅವಧಿಯಲ್ಲಿ ಸರ್ಕಾರದ ವಿರುದ್ಧ ಪ್ರಜಾಪ್ರಭುತ್ವ ಮಾದರಿಯಲ್ಲಿ ಆಕ್ರಮಣಕಾರಿಯಾಗಿ ಅವರಿಂದ ಟೀಕೆಗಳು ವ್ಯಕ್ತವಾಗದೇ ಬರೀ ವೈಯಕ್ತಿಕ ಮಟ್ಟದ, ಕೀಳು ಅಭಿರುಚಿಯ ಟೀಕೆಗಳು ಕೇಳಿಬಂದವು. ಇಷ್ಟು ಸಣ್ಣದಾ ಇವರ ವ್ಯಕ್ತಿತ್ವ ಎಂದು ಜನ ಮಾತನಾಡಿಕೊಂಡರು.

“ಸಿದ್ದರಾಮಯ್ಯ ಕರ್ನಾಟಕವನ್ನು ‘ಮಿನಿ ಪಾಕಿಸ್ತಾನ್’ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ; ಮುಸ್ಲಿಮರನ್ನು ಮೆಚ್ಚಿಸಲು ಜಾತಿ-ಧರ್ಮ ವಿಭಜನೆ ಮಾಡುತ್ತಿದ್ದಾರೆ” ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಅವರನ್ನು ‘ಭಯೋತ್ಪಾದಕರೊಂದಿಗೆ ಹೋಲಿಕೆ’ ಮಾಡಿದರು. ಸುಪ್ರೀಂ ಕೋರ್ಟ್‌ನಲ್ಲೂ ಇದು ಚರ್ಚೆಯಾಯಿತು.

“ಕಾಂಗ್ರೆಸ್ ಆಳ್ವಿಕೆಯಲ್ಲಿ ಕರ್ನಾಟಕ ‘ಗುಂಡಾ ರಾಜ್’ ಆಗಿದೆ. ಹಂಪಿಯಲ್ಲಿ ವಿದೇಶಿ ಮಹಿಳೆ ಮೇಲೆ ಹಲ್ಲೆ, ಚಿನ್ನ ಸ್ಮಗ್ಲಿಂಗ್, ಕೊಲೆಗಳು ಹೆಚ್ಚಾಗಿವೆ” ಎಂದು ವಿಧಾನಸಭೆಯಲ್ಲಿ ಭಾಷಣ ಮಾಡಿದರು. ಪ್ರಜಾಪ್ರಭುತ್ವಕ್ಕೆ ಅನುಗುಣವಾಗಿ ಅವರು ಭಾಷೆ ಬಳಿಸಿರಲಿಲ್ಲ.

“ಸಿದ್ದರಾಮಯ್ಯ ಸರ್ಕಾರ ‘ಧರ್ಮಾಂತರದ ಬ್ರ್ಯಾಂಡ್ ಅಂಬಾಸಿಡರ್’; ಕರ್ನಾಟಕವನ್ನು ಟಿಪ್ಪು ಸುಲ್ತಾನ್ ಕಾಲಕ್ಕೆ ಹಿಂದುಗೊಳಿಸುತ್ತಿದೆ” ಎಂದು ಟೀಕಿಸುವ ಮೂಲಕ ತಮ್ಮೊಳಗಿನ ಕೋಮು ವಿಷವನ್ನು ಕಕ್ಕಿದ್ದರು. ಇವು ಕೆಲವು ಉದಾಹರಣೆಗಳು ಅಷ್ಟೇ. ಧರ್ಮ ಮತ್ತು ಜಾತಿ ವಿಚಾರದಲ್ಲಿ ಸೂಕ್ಷ್ಮತೆ ಮರೆತು ಮಾತನಾಡಿದ್ದೇ ಅಶೋಕ್‌ ಅವರ ಮಹಾನ್‌ ಸಾಧನೆ!

ಭ್ರಷ್ಟಾಚಾರ, ಕಮಿಷನ್‌ ವಿಚಾರದಲ್ಲಿ ಸರ್ಕಾರದ ವಿರುದ್ಧ ಏರು ಧ್ವನಿಯಲ್ಲಿ ಮಾತನಾಡಿದ್ದಾರೆ. ವಾಲ್ಮೀಕಿ ಹಗರಣ, ಮುಡಾ ಅಕ್ರಮ ಬಗ್ಗೆ ಟೀಕಿಸುವಾಗ ಅಲ್ಲೂ ಸಿದ್ದರಾಮಯ್ಯ ಅವರ ಕುರಿತು ‘ಸೈಟ್‌ ಕಳ್ಳ’ ಎಂದು ಸಂಬೋಧಿಸಿ, ವೈಯಕ್ತಿಕ ಮಟ್ಟಕ್ಕೆ ಇಳಿದು ಮಾತನಾಡಿದ್ದಾರೆ.

ವಿರೋಧ ಪಕ್ಷದ ನಾಯಕರಾಗುವ ಮುಂಚೆ ಅಶೋಕ್‌ ಸಭ್ಯ ಮಾತುಗಳನ್ನು ಆಡುತ್ತಿದ್ದರು. ಪರಸ್ಪರ ಗೌರವಕೊಟ್ಟು ಮಾತನಾಡುತ್ತಿದ್ದರು. ಆದರೆ ವಿಪಕ್ಷ ನಾಯಕರಾದ ಮೇಲೆ ಅಶೋಕ್‌ ಮಾತಿನ ದಾಟಿ ಬಹಳ ಬದಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಆಡಳಿತ ಪಕ್ಷದ ಬಗ್ಗೆ ಅವರು ಟೀಕಿಸುವ ಭಾಷೆಯನ್ನು ಗಮನಿಸಿದರೆ ಅರ್ಥವಾಗುತ್ತದೆ. ಇದನ್ನಲ್ಲ ಅಶೋಕ್‌ ಪ್ರಜ್ಞಾಪೂರ್ವಕವಾಗಿ ಮಾಡಿತ್ತಿದ್ದಾರೆಯೇ? ಹಾಗನ್ನಿಸುವುದಿಲ್ಲ. ಯಾರ ಬಗ್ಗೆ ಹೇಗೆ ಪ್ರತಿಕ್ರಿಯಿಸಬೇಕು ಎನ್ನುವುದನ್ನು ಬಿಜೆಪಿಯ ವಾರ್‌ ರೂಮ್‌ ನಿರ್ಧರಿಸುತ್ತದೆ. ಅದು ಅಲ್ಲಿಂದ ಬರುವ ಸರಕು! ಅದನ್ನು ಸಾಮಾಜಿಕ ಜಾಲತಾಣದಲ್ಲಿ ವಾಂತಿ ಮಾಡುತ್ತಾರೆ ಅಷ್ಟೇ! ಎಷ್ಟೋ ಜನಕ್ಕೆ ಗೊತ್ತಿಲ್ಲ.

ಕಾಂಗ್ರೆಸ್‌ ಒಳಗಿನ ‘ನವೆಂಬರ್‌ ಕ್ರಾಂತಿ’ ಬಗ್ಗೆ ಆರ್‌ ಅಶೋಕ್‌ಗೆ ಇನ್ನಿಲ್ಲದ ಕುತೂಹಲ. ಇದಕ್ಕೆ ಕಾರಣವೂ ಇದೆ. ತಮ್ಮದೇ ಸಮುದಾಯದ ಡಿ ಕೆ ಶಿವಕುಮಾರ್‌ ಸಿಎಂ ಆಗಲಿ ಎಂದು ಒಳಗೊಳಗೆ ಬಯಸುತ್ತಿದ್ದಾರೆ. ಡಿ ಕೆ ಶಿವಕುಮಾರ್‌ ಜೊತೆ ಹೊಂದಾನಿಕೆ ರಾಜಕಾರಣ ಮಾಡುತ್ತಾರೆ ಎನ್ನುವ ಆರೋಪ ಸಹ ಇವರ ಮೇಲಿದೆ.

ಒಟ್ಟಾರೆ ವಿರೋಧ ಪಕ್ಷದ ನಾಯಕರಾಗಿ ಆರ್‌ ಅಶೋಕ್ ಯಶಸ್ವಿ ನಾಯಕರಾಗಿ ಹೊರಹೊಮ್ಮಿದ್ದಾರೆ ಎಂದು ಕಡ್ಡಿ ಮುರಿದಂತೆ ಹೇಳಲು ಸಾಧ್ಯವಿಲ್ಲ. ಶೇ. 50ರಷ್ಟು ವಿಫಲವೂ ಆಗಿದ್ದಾರೆ. ರಚನಾತ್ಮಕ ಸಲಹೆಗಳು ಇಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆರೋಗ್ಯಕರ ಟೀಕೆಗಳಿಲ್ಲ. ಸ್ವಂತ ವಿಚಾರ ಹೇಳುವುದಕ್ಕಿಂತ ಎಲ್ಲೋ ಸಿದ್ಧವಾದ ಭಾಷಣ ಓದುವುದೇ ಅವರ ಸಾಧನೆ.

ಮುಖ್ಯಮಂತ್ರಿಗಳಿಗೆ ಸಮಾನವಾಗಿ ವಿರೋಧ ಪಕ್ಷದ ನಾಯಕರನ್ನು ಕಾಣಲಾಗುತ್ತದೆ. ಅಂತಹ ಅವಕಾಶವನ್ನು ಸ್ವತಃ ಅವರೇ ಕಳೆದುಕೊಂಡಿದ್ದಾರೆ. ಅಧಿವೇಶನಗಳಲ್ಲಿ ಆಳವಾಗಿ ವಿಷಯ ಮಂಡಿಸಿದ ಉದಾಹರಣೆಗಳಿಲ್ಲ. ಸ್ವಪಕ್ಷದ ಅಜೆಂಡಾಗಳನ್ನೇ ಮಂಡಿಸುವಲ್ಲಿ ಸಮಯ ಮತ್ತು ಶ್ರಮ ವ್ಯಯ ಮಾಡಿದ ಆರ್‌ ಅಶೋಕ್‌ ಅವರು ನೈಜವಾಗಿ ಜನರ ಧ್ವನಿಯಾಗಿ ಕೆಲಸ ಮಾಡಲಿಲ್ಲ ಎನ್ನುವ ಅಸಮಾಧಾನಗಳಿಗೇನು ಕೊರತೆಯಿಲ್ಲ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...