ಬಾಬಾ ವಂಗಾ ಭವಿಷ್ಯ | ವೈಜ್ಞಾನಿಕ ಆಧಾರವಿಲ್ಲದ ಸುಳ್ಳುಗಳನ್ನು ಪ್ರಸಾರ ಮಾಡುವ ಮಾಧ್ಯಮಗಳು

Date:

ಜಪಾನ್ ದೇಶದ ಮಂಗಾ ಕಲಾವಿದೆ ಅಥವಾ ಹೊಸ ಬಾಬಾ ವಂಗಾ ಎಂದೇ ಕರೆಯಲ್ಪಡುವ ರಿಯೋ ಟಟ್ಸುಕಿ ಅವರು ಜುಲೈ 5,2025ರಂದು ಜಪಾನ್‌ನಲ್ಲಿ ಭೀಕರ ಸುನಾಮಿ ಸಂಭವಿಸುತ್ತದೆ ಎಂದು ಹೇಳಿರುವುದನ್ನು ಭಾರತದ ಮಾಧ್ಯಮಗಳು ಒಳಗೊಂಡಂತೆ ವಿಶ್ವದ ಹಲವಾರು ಮಾಧ್ಯಮಗಳು ವೈಭವೀಕರಿಸಿ ಸುದ್ದಿ ಮಾಡಿದ್ದವು. ವೈಜ್ಞಾನಿಕ ಆಧಾರವಿಲ್ಲದ ಇಂತಹ ಸುದ್ದಿಗಳು ಜನರಲ್ಲಿ ಭೀತಿಯನ್ನೂ, ಗೊಂದಲವನ್ನು ಹೆಚ್ಚಿಸುತ್ತದೆ ಎಂದು ಮಂಗಳೂರು ವಿವಿಯ ಸಾಗರ ಭೂ ವಿಜ್ಞಾನ ವಿಭಾಗದ ಮಾಜಿ ಪ್ರಾಧ್ಯಾಪಕರಾದ ಡಾ. ಬಿ ಆರ್‌ ಮಂಜುನಾಥ್‌ ಅಭಿಪ್ರಾಯಪಟ್ಟಿದ್ದಾರೆ.

ಜಪಾನ್ ವಿಶ್ವದ ಅತ್ಯಂತ ಭೂಕಂಪ ಸಕ್ರಿಯ ಪ್ರದೇಶಗಳಲ್ಲಿ ಒಂದಾಗಿದೆ ಎಂಬುದು ಸತ್ಯ. ಈವರೆಗೆ ಜಪಾನ್‌ನಲ್ಲಿ ಹಲವಾರು ಭೀಕರ ಭೂಕಂಪಗಳು ಮತ್ತು ಸುನಾಮಿಗಳು ಸಂಭವಿಸಿರುವುದೂ ನಿಜ. ಆದರೂ ಕೂಡ, ಭೂಕಂಪ ಅಥವಾ ಸುನಾಮಿಯನ್ನು ನಿಖರವಾಗಿ ಯಾವ ದಿನ, ಯಾವ ಸಮಯದಲ್ಲಿ ಸಂಭವಿಸುತ್ತವೆ ಎಂಬುದನ್ನು ಹೇಳಬಹುದಾದ ಯಾವುದೇ ವಿಜ್ಞಾನ ಅಥವಾ ತಂತ್ರಜ್ಞಾನವನ್ನು ಈವರೆಗೆ ಅಭಿವೃದ್ಧಿಪಡಿಸಲಾಗಿಲ್ಲ ಎಂದು ಮಂಜುನಾಥ್‌ ಹೇಳಿದ್ದಾರೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಅಪಾಯಕಾರಿ ಸೈಬರ್ ಅಪರಾಧ ಕುರಿತು ಜನ ಜಾಗೃತರಾಗಬೇಕಿದೆ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಭೂಕಂಪವು ಭೂಮಿಯ ಲಿಥೋಸ್ಫಿಯರ್‌ನಲ್ಲಿ ಒತ್ತಡ ಸಂಗ್ರಹವಾಗಿ, ಬಂಡೆಗಳು ಒತ್ತಡವನ್ನು ತಡೆಯಲಾಗದೆ ಒಡೆಯುವುದರಿಂದ ಉಂಟಾಗುತ್ತದೆ. ಈ ಆಕಸ್ಮಿಕ ಒಡಕು ಭೂಕಂಪ ತರಂಗಗಳ ರೂಪದಲ್ಲಿ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ. ಈ ತರಂಗಗಳು ಭೂಮಿಯ ಮೇಲ್ಮೈಯಲ್ಲಿ ಕಂಪನವನ್ನು ಉಂಟುಮಾಡುತ್ತವೆ, ಇದು ಭೂಕಂಪವಾಗಿ ಅನುಭವವಾಗುತ್ತದೆ. ಪ್ರಮುಖ ಭೂಕಂಪ ಅಥವಾ ಸುನಾಮಿಯಿಂದ ಬಿಡುಗಡೆಯಾಗುವ ಶಕ್ತಿಯು ಪರಮಾಣು ಸ್ಫೋಟಕ್ಕೆ ಸಮಾನವಾಗಿರಬಹುದು, ಆದರೆ ಈ ಒತ್ತಡ ಯಾವಾಗ ಒಡೆಯುತ್ತದೆ ಎಂಬುದನ್ನು ನಿಖರವಾಗಿ ಅಂದಾಜಿಸಲು ಸಾಧ್ಯವಿಲ್ಲ ಎಂದು ಮಂಜುನಾಥ್ ತಿಳಿಸಿದ್ದಾರೆ.

ಜುಲೈ 5, 2025ರಂದು ಜಪಾನ್‌ನಲ್ಲಿ ‘ದೊಡ್ಡ ಸುನಾಮಿ’ ಸಂಭವಿಸುತ್ತದೆ ಎಂಬ ಮಾತು ವೈಜ್ಞಾನಿಕವಾಗಿ ಅಸಾಧ್ಯ. ಏಕೆಂದರೆ ಶಿಲೆಗಳಲ್ಲಾಗುವ ಒತ್ತಡ ಯಾವಾಗ ತೀವ್ರವಾಗಿ ಹರಿದು ಭೂಕಂಪ ಉಂಟಾಗುತ್ತದೆ ಎಂಬುದನ್ನು ನಿಖರವಾಗಿ ಯಾರೂ ಊಹಿಸಲು ಸಾಧ್ಯವಿಲ್ಲ. ಆದ್ದರಿಂದ, ಈ ರೀತಿಯ ಹೇಳಿಕೆಗಳು ಕೇವಲ ಊಹಾಪೋಹವಾಗಿಯೇ ಉಳಿಯುತ್ತವೆ. ಆದ್ದರಿಂದ ಮಾಧ್ಯಮಗಳು ಸೃಷ್ಟಿಸುವ ಇಂತಹ ಸುಳ್ಳುಗಳನ್ನು ಸಾರ್ವಜನಿಕರು ನಂಬಬಾರದು.ಈ ರೀತಿಯ ಊಹಾಪೋಹಗಳು ಸಾರ್ವಜನಿಕರಲ್ಲಿ ಗೊಂದಲವನ್ನು ಉಂಟುಮಾಡುವುದರಿಂದ, ವೈಜ್ಞಾನಿಕ ಮಾಹಿತಿಯ ಆಧಾರದ ಮೇಲೆ ಜನರಲ್ಲಿ ಜಾಗೃತಿಯನ್ನು ಮೂಡಿಸುವುದು ಅಗತ್ಯವಾಗಿದೆ ಎಂದು ಡಾ. ಬಿ ಆರ್‌ ಮಂಜುನಾಥ್‌ ಮನವಿ ಮಾಡಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...