ತಮ್ಮ ತಂದೆ ದಿವಂಗತ ಪತ್ರಕರ್ತ ರವಿ ಬೆಳಗೆರೆ ಅವರ ‘ಹೇಳಿ ಹೋಗು ಕಾರಣ’ ಪುಸ್ತಕದ ನಕಲಿ ಪ್ರತಿ ಆನ್‌ಲೈನ್ ಮಾರುಕಟ್ಟೆಯಲ್ಲಿರುವ ಬಗ್ಗೆ ಭಾವನಾ ಬೆಳಗೆರೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೆಯೇ ನಕಲಿ ಮತ್ತು ಕಳಪೆ ಪ್ರತಿ ಮಾರಾಟ ಮಾಡುತ್ತಿರುವ ಅಮೆಜಾನ್, ಮೀಶೋ, ಫ್ಲಿಫ್‌ಕಾರ್ಟ್‌ಗೆ ತಲಾ ಒಂದು ಕೋಟಿ ರೂಪಾಯಿ ಕೃತಿಚೌರ್ಯ ದೂರು ದಾಖಲಿಸಲು ಭಾವನಾ ಬೆಳಗೆರೆ ಮುಂದಾಗಿದ್ದಾರೆ.
ಈ ಬಗ್ಗೆ ಫೇಸ್‌ಬುಕ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ‘ಹೇಳಿ ಹೋಗು ಕಾರಣ’ ಕಾದಂಬರಿಯನ್ನು ಭಾವನಾ ಪ್ರಕಾಶನ ಪ್ರಕಟಿಸಿದೆ. ಈ ಮೂಲ ಪ್ರತಿಗೂ ನಕಲಿ ಪ್ರತಿಗೂ ಇರುವ ವ್ಯತ್ಯಾಸವನ್ನು ಭಾವನಾ ಬೆಳಗೆರೆಯವರು ವಿಡಿಯೋದಲ್ಲಿ ತೋರಿಸಿದ್ದು, ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಚಿತ್ರದುರ್ಗ | ನನೆಗುದಿಗೆ ಬಿದ್ದಿರುವ ಪ್ರಾಥಮಿಕ ಶಾಲಾ ಕಟ್ಟಡ; ಕಾಮಗಾರಿ ಪೂರ್ಣಕ್ಕೆ ಗ್ರಾಮಸ್ಥರ ಆಗ್ರಹ
“ಇಷ್ಟು ಕಳಪೆ ಪ್ರತಿಯನ್ನು ಅವರು ಹೇಗೆ ಮಾರಾಟ ಮಾಡುತ್ತಾರೆ? ದುಡ್ಡಿಗಾಗಿ ಈ ಕಳಪೆ ಗುಣಮಟ್ಟದ ಪುಸ್ತಕ ಮಾರಿ ನನ್ನ ತಂದೆಯ ಹೆಸರು ಹಾಳು ಮಾಡಲು ನಾನು ಇಲ್ಲಿ ಕುಳಿತಿರುವುದೇ? ಜನರು ಏನು ಅಂದುಕೊಳ್ಳಲ್ಲ? ಈ ವಿಚಾರದಲ್ಲಿ ನಾನು ಕೋರ್ಟ್ ಮೆಟ್ಟಿಲೇರಲು ಸಿದ್ಧವಾಗಿದ್ದೇನೆ” ಎಂದು ಆಕ್ರೋಶವಾಗಿ ಮಾತನಾಡಿದ್ದಾರೆ.
“ಇದನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು, ಒಪ್ಪಲಾಗದು. ನಾನು ನ್ಯಾಯ ಸಿಗುವವರೆಗೂ ಈ ವಿಚಾರವನ್ನು ಬಿಡಲಾರೆ. ಜನರು ರವಿ ಬೆಳಗೆರೆ ನಂತರ ಭಾವನಾ ಬೆಳಗೆರೆ ಅಥವಾ ಪ್ರಕಾಶನ ಇಂತಹ ಕೆಟ್ಟ ಕೆಲಸ ಮಾಡುತ್ತಾ ಇದ್ದೀವಿ ಅಂದುಕೊಳ್ಳುವುದಲ್ಲವೇ? ಆದರೆ ನೀವು ಅಮಾಯಕರು. ನಿಮಗೆ ತಿಳಿದಿಲ್ಲ” ಎಂದು ಹೇಳಿದ್ದಾರೆ.





