VIDEO | ಶಂಕರಾಚಾರ್ಯರ ಜಯಂತಿಯ ಭಾಷಣಕ್ಕೆ ಬ್ರಾಹ್ಮಣರ ಆಕ್ಷೇಪ; ಸುಮ್ಮನಿದ್ದ ಸಚಿವದ್ವಯರು!

Date:

"ನನಗೆ ಅವರ ಅವಹೇಳನಕಾರೀ ವರ್ತನೆಯಿಂದಾದ ಅವಮಾನಕ್ಕಿಂತಲೂ ನಾಗರಿಕರ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳನ್ನು ಕಾಪಾಡಬೇಕಾದ ಸರ್ಕಾರಿ ವ್ಯವಸ್ಥೆಯೇ ಇವರ ಗೂಂಡಾಗಿರಿಯನ್ನು ಕಂಡು ಮೌನವಾಗಿ ನಿರ್ವೀರ್ಯವಾಗಿ ಕೂತಿದ್ದುದು ವಿಷಾದಕರವೆನಿಸಿತು" ಎಂದು ಡಾ.ವಾಸುದೇವಮೂರ್ತಿ ಬೇಸರ ಹೊರಹಾಕಿದ್ದಾರೆ

ಮೇ 2ನೇ ತಾರೀಕಿನಂದು ಸರ್ಕಾರದ ವತಿಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಶಂಕರಾಚಾರ್ಯರ ಜಯಂತಿಯ ವೇಳೆ ಮುಖ್ಯ ಭಾಷಣಕಾರರಿಗೆ ಬ್ರಾಹ್ಮಣ ಮುಖಂಡರು ಅಡ್ಡಿಪಡಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಶಂಕರಾಚಾರ್ಯರ ಕುರಿತು ಭಾಷಣ ಮಾಡಲು ಆಹ್ವಾನಿತರಾಗಿದ್ದ ಆದಿಚುಂಚನಗಿರಿ ವಿಶ್ವ ವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ಟಿ.ಎನ್. ವಾಸುದೇವಮೂರ್ತಿಯವರ ಭಾಷಣಕ್ಕೆ ಅಡ್ಡಿಪಡಿಸಿ, ವೇದಿಕೆಯಿಂದ ಕೆಳಗಿಳಿಸಲಾಗಿದೆ. ಆದರೆ ವೇದಿಕೆಯಲ್ಲೇ ಆಸೀನರಾಗಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಮತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಈ ಘಟನೆಗೆ ಆಕ್ಷೇಪ ಎತ್ತದೆ ಮೂಕಪ್ರೇಕ್ಷಕರಾಗಿದ್ದಕ್ಕೆ ವಾಸುದೇವಮೂರ್ತಿಯವರು ಬೇಸರ ಹೊರಹಾಕಿದ್ದಾರೆ.

“ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಕೃತಿ ಇಲಾಖೆಯ ಸಚಿವ ಶ್ರೀ ಶಿವರಾಜ್‌ ತಂಗಡಗಿ, ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಚಿವ ದಿನೇಶ್‌ ಗುಂಡೂರಾವ್‌, ಇಲಾಖೆಯ ನಿರ್ದೇಶಕಿ ಶ್ರೀಮತಿ ಗಾಯತ್ರಿ ಮುಂತಾದವರು ಕಾರ್ಯಕ್ರಮ ಹಳಿ ತಪ್ಪುತ್ತಿದೆ ಎಂದು ಗೊತ್ತಿದ್ದೂ ಬೆದರು ಬೊಂಬೆಗಳಂತೆ ಮೌನವಾಗಿ ಕೂತಿದ್ದರು. ನನಗೆ ಅವರ ಅವಹೇಳನಕಾರೀ ವರ್ತನೆಯಿಂದಾದ ಅವಮಾನಕ್ಕಿಂತಲೂ ನಾಗರಿಕರ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳನ್ನು ಕಾಪಾಡಬೇಕಾದ ಸರ್ಕಾರಿ ವ್ಯವಸ್ಥೆಯೇ ಇವರ ಗೂಂಡಾಗಿರಿಯನ್ನು ಕಂಡು ಮೌನವಾಗಿ ನಿರ್ವೀರ್ಯವಾಗಿ ಕೂತಿದ್ದುದು ವಿಷಾದಕರವೆನಿಸಿತು” ಎಂದು ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನೂ ಓದಿರಿ: “ಸೋನು ನಿಗಮ್ ನನ್ನು ತಕ್ಷಣ ಬಂಧಿಸಿ”- ಸರ್ಕಾರಕ್ಕೆ ಕರವೇ ನಾರಾಯಣ ಗೌಡ ಒತ್ತಾಯ

ಘಟನೆಯ ಕುರಿತು ‘ಈದಿನ.ಕಾಮ್’ ಜೊತೆಯಲ್ಲಿ ಡಾ. ವಾಸುದೇವಮೂರ್ತಿಯವರು ಪತ್ರವೊಂದನ್ನು ಹಂಚಿಕೊಂಡಿದ್ದು, ಸರ್ಕಾರದ ಪ್ರತಿನಿಧಿಗಳ ಮೌನವನ್ನು ಪ್ರಶ್ನಿಸಿದ್ದಾರೆ.

ವಾಸುದೇವಮೂರ್ತಿಯವರ ಪತ್ರ ಹೀಗಿದೆ:

ಮೇ 2ನೇ ತಾರೀಖು 2025ರಂದು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ʼಶ್ರೀ ಶಂಕರಾಚಾರ್ಯ ಜಯಂತಿಯ ಕಾರ್ಯಕ್ರಮ’ಕ್ಕೆ ಮುಖ್ಯ ಭಾಷಣಕಾರನನ್ನಾಗಿ ಇಲಾಖೆಯವರು ನನ್ನನ್ನು ಆಹ್ವಾನಿಸಿದ್ದರು. ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಾಷಣದ ಮಧ್ಯೆಯೇ ನನ್ನ ಮಾತುಗಳನ್ನು ಆಕ್ಷೇಪಿಸಿ ನನ್ನನ್ನು ವೇದಿಕೆಯಿಂದ ಕೆಳಗಿಳಿಸಲಾಯಿತು.

ಅಂದು ಸಂಜೆ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕದ ಜಾನಪದ ನೃತ್ಯ ಮತ್ತು ಸಂಗೀತ ಮೇಳದೊಂದಿಗೆ ಶಂಕರರ ರಥವನ್ನು ಮೆರವಣಿಗೆಯ ಮೂಲಕ ಹಡ್ಸನ್‌ ವೃತ್ತದಿಂದ ರವೀಂದ್ರ ಕಲಾಕ್ಷೇತ್ರದವರೆಗೆ ಎಳೆದು ತರಲಾಯಿತು. ಸಂಜೆ 6ಕ್ಕೆ ಕಾರ್ಯಕ್ರಮದಲ್ಲಿ ನನ್ನ ಭಾಷಣ ಪ್ರಾರಂಭವಾಯಿತು. ಶಂಕರರ ಅನುಯಾಯಿಗಳಾದ ಬ್ರಾಹ್ಮಣರೇ ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು.

ಇದನ್ನೂ ಓದಿರಿ: ಶಂಕರಾಚಾರ್ಯ ಸಮಾನತೆಯ ಪ್ರತಿಪಾದಕರೇ? ಜಸ್ಟಿಸ್ ಎನ್.ಕುಮಾರ್ ಮುಚ್ಚಿಟ್ಟ ಕಟು ಸತ್ಯಗಳೇನು?

ಭಾರತವನ್ನು ಬೌದ್ಧಿಕವಾಗಿ ಒಗ್ಗೂಡಿಸಿದ, ಭಾರತದ ಬೌದ್ಧಿಕತೆಗೆ ಒಂದು ಪ್ರಖರವಾದ ಹೊಳಪು ನೀಡಿದ ಶಂಕರರು ಈ ನಾಡಿನ ವಿವಿಧ ದಾರ್ಶನಿಕರೊಂದಿಗೆ, ವಿವಿಧ ದಾರ್ಶನಿಕ ಧಾರೆಗಳೊಂದಿಗೆ ಹೇಗೆ ಅನುಸಂಧಾನ ನಡೆಸಿದ್ದರು ಎಂದು ವಿವರಿಸುತ್ತಿದ್ದೆ. ಕಮ್ಯುನಿಸ್ಟ್‌ ನಾಯಕ ನಂಬೂದಿರಿಪಾಡ್‌ ಶಂಕರರ ಕುರಿತು ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ನಿರೂಪಿಸುತ್ತಿದ್ದೆ (ಅವರು ಶಂಕರರನ್ನು ಗ್ರೀಕ್‌ ತತ್ವಜ್ಞಾನಿ ಪ್ಲೇಟೋಗೆ ಹೋಲಿಸುತ್ತಾರೆ), ಬುದ್ಧನ ಸರ್ವಶೂನ್ಯವಾದಕ್ಕೂ ಶಂಕರರ ಬ್ರಹ್ಮವಿವರ್ತವಾದದ ಕಲ್ಪನೆಗೂ ಇರುವ ಸಂಬಂಧವನ್ನು ವಿಶ್ಲೇಷಿಸುತ್ತಿದ್ದೆ. ಮಧ್ವಾಚಾರ್ಯ ಹಾಗೂ ಶಂಕರಾಚಾರ್ಯರ ನಡುವೆ ಇದೆ ಎನ್ನಲಾಗಿರುವ ಭಿನ್ನಾಭಿಪ್ರಾಯ ಹೇಗೆ ಯಥಾರ್ಥವಾದುದಲ್ಲ ಎಂದು ವಿವರಿಸುತ್ತಿದ್ದೆ. ಹೀಗೆ ಸುಮಾರು ಹದಿನೈದು ನಿಮಿಷಗಳ ಕಾಲ ಮಾತನಾಡಿದ್ದೆ.

ಇದನ್ನೂ ಓದಿರಿ: ಸಮಾಜಘಾತಕ ಶಕ್ತಿಗಳನ್ನು ಮಟ್ಟಹಾಕಲು ವಿಶೇಷ ಪಡೆಯ ಅಗತ್ಯವಿದೆ: ಸಿಎಂ ಸಿದ್ದರಾಮಯ್ಯ

ಸಭೆಯಲ್ಲಿ ಹಾಜರಿದ್ದ ಶಂಕರರ ಅನುಯಾಯಿಗಳು ನನ್ನ ಮಾತುಗಳಿಂದ ಇದ್ದಕ್ಕಿದ್ದಂತೆ ವ್ಯಗ್ರರಾದರು. ತಮಗೆ ಪಥ್ಯವಲ್ಲದ ಬೇರೆ ಬೇರೆ ದಾರ್ಶನಿಕರನ್ನು, ಚಿಂತಕರನ್ನು ಉಲ್ಲೇಖಿಸಕೂಡದೆಂದು ಆಕ್ಷೇಪಿಸಿದರು. ಹಾಗೆ ನೋಡಿದರೆ ನಾನು ಶಂಕರರನ್ನು ಎಲ್ಲಿಯೂ ಟೀಕಿಸಿರಲಿಲ್ಲ, ಎಲ್ಲಿಯೂ ಅವರ ಹಿರಿಮೆಯನ್ನು ಅವಗಣನೆ ಮಾಡಿರಲಿಲ್ಲ (ಅದರ ವೀಡಿಯೋ ತುಣುಕನ್ನು ನಿಮಗೆ ಕಳಿಸಿದ್ದೇನೆ). ಆದರೆ ನನ್ನ ಭಾಷಣ ಶಂಕರರ ಭಜನೆ, ಹೊಗಳಿಕೆಗಳಿಗೆ ಮಾತ್ರ ಸೀಮಿತವಾಗಬೇಕು ಎಂಬುದು ಅವರ ಆಗ್ರಹವಾಗಿತ್ತು.

ಅವರ ಮನೆಯಲ್ಲೋ ಅಥವಾ ಮಠದಲ್ಲೋ ಅವರ ಅಪೇಕ್ಷೆಗೆ ತಕ್ಕಂತೆ ಮಾತನಾಡಬೇಕೆಂದು ಆಗ್ರಹಿಸಿದರೆ ಅದು ಯುಕ್ತವಾಗಬಹುದು. ಆದರೆ ಒಂದು ಸಾರ್ವಜನಿಕ ಸಭೆಯಲ್ಲಿ, ಅದೂ ಸರ್ಕಾರದ ಸಂಸ್ಕೃತಿ ಇಲಾಖೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರ ಹೀಗೆಯೇ ಮಾತನಾಡತಕ್ಕದ್ದು ಎಂದು ಆಗ್ರಹಿಸುವುದು ಸಭ್ಯತೆಯಲ್ಲ, ಸಂಸ್ಕೃತಿಯಲ್ಲವೆಂದು ನಾನು ಅವರಿಗೆ ತಿಳಿ ಹೇಳಿದೆ. ಆದರೆ ಆ ಗುಂಪಿನವರು ಯಾವ ಮಾತುಗಳನ್ನೂ ಕೇಳುವ ಮನಃಸ್ಥಿತಿಯಲ್ಲಿ ಇರಲಿಲ್ಲ. “ನೀನು ಶಂಕರರನ್ನು ಅವಮಾನಿಸುತ್ತಿರುವೆ; ಈ ಕ್ಷಣವೇ ವೇದಿಕೆಯಿಂದ ಕೆಳಗಿಳಿಯಬೇಕು” ಎಂದು ಕೂಗಾಡಲಾರಂಭಿಸಿದರು. ಮತ್ತೊಬ್ಬರ ಅಭಿಪ್ರಾಯಕ್ಕೆ ಸ್ಪಂದಿಸದ ಸಭೆಯಲ್ಲಿ ಮಾತು ಮುಂದುವರಿಸಿದರೆ ಅದು ಮೊಂಡುತನವಾಗುತ್ತದೆ ಎಂದು ಮನಗಂಡು ಅರ್ಧದಲ್ಲೇ ವೇದಿಕೆಯಿಂದ ಕೆಳಗಿಳಿದೆ.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಕೃತಿ ಇಲಾಖೆಯ ಸಚಿವ ಶ್ರೀ ಶಿವರಾಜ್‌ ತಂಗಡಗಿ, ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಚಿವ ದಿನೇಶ್‌ ಗುಂಡೂರಾವ್‌, ಇಲಾಖೆಯ ನಿರ್ದೇಶಕಿ ಶ್ರೀಮತಿ ಗಾಯತ್ರಿ ಮುಂತಾದವರು ಕಾರ್ಯಕ್ರಮ ಹಳಿ ತಪ್ಪುತ್ತಿದೆ ಎಂದು ಗೊತ್ತಿದ್ದೂ ಬೆದರು ಬೊಂಬೆಗಳಂತೆ ಮೌನವಾಗಿ ಕೂತಿದ್ದರು. ನನಗೆ ಅವರ ಅವಹೇಳನಕಾರೀ ವರ್ತನೆಯಿಂದಾದ ಅವಮಾನಕ್ಕಿಂತಲೂ ನಾಗರಿಕರ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳನ್ನು ಕಾಪಾಡಬೇಕಾದ ಸರ್ಕಾರೀ ವ್ಯವಸ್ಥೆಯೇ ಇವರ ಗೂಂಡಾಗಿರಿಯನ್ನು ಕಂಡು ಮೌನವಾಗಿ ನಿರ್ವೀರ್ಯವಾಗಿ ಕೂತಿದ್ದುದು ವಿಷಾದಕರವೆನಿಸಿತು.

ಇದನ್ನೂ ಓದಿರಿ: ಮಂಗಳೂರು | ಸುಹಾಸ್‌ ಶೆಟ್ಟಿಯನ್ನು ರೌಡಿಶೀಟರ್‌ ಮಾಡಿದ್ದು ಬಿಜೆಪಿಯವರೇ: ವಿಪ ಸದಸ್ಯ ಮಂಜುನಾಥ್ ಭಂಡಾರಿ

ಇದು ನಿನ್ನೆಯ ಸಮಾರಂಭದಲ್ಲಿ ನನಗೆ ವೈಯಕ್ತಿಕವಾಗಿ ತೇಜೋವಧೆಯಾದ ಅಹಿತಕರ ಘಟನೆಯ ಪ್ರಶ್ನೆಯಲ್ಲ. ಇಂತಹ ಅನುಭವವಾದ ಮೇಲೆ ಮಾನ ಮರ್ಯಾದೆ ಇರುವವರು ಈ ಬಗೆಯ ಕಾರ್ಯಕ್ರಮಗಳಿಂದ ಎಂದೆಂದಿಗೂ ಅಂತರ ಕಾಯ್ದುಕೊಳ್ಳಬೇಕೆಂದು ತೀರ್ಮಾನಿಸಿಕೊಂಡು ನನ್ನಂತಹವರು ಸುಮ್ಮನಾಗಬಹುದು. ಆದರೆ ಸರ್ಕಾರಗಳು ಮತಕ್ಕಾಗಿ ಈ ತರಹದ ಜಯಂತಿಗಳಿಂದ ಪ್ರಜೆಗಳನ್ನು ಜಾತಿಕೂಪದೊಳಗೆ ಇನ್ನಷ್ಟು ಆಳಕ್ಕೆ ಮುಳುಗಿಸಿ ಕಟ್ಟಿಹಾಕುವುದು, ಮತಲಾಭಕ್ಕಾಗಿ ಪ್ರಜೆಗಳ ಅಸಭ್ಯ, ಅವಿವೇಕದ ವರ್ತನೆಗಳಿಗೆ ಪರೋಕ್ಷ ಬೆಂಬಲ ನೀಡುವುದು ಇವೆಲ್ಲ ಒಳ್ಳೆಯ ಬೆಳವಣಿಗೆಗಳಲ್ಲ. ಇಂತಹ ಕುತಂತ್ರಗಳು ಸಮಾಜದ ಸ್ವಾಸ್ಥ್ಯ ಹದಗೆಡುತ್ತದೆ ಮತ್ತು ಸರ್ಕಾರದ ನೈತಿಕತೆ ಅಧೋಗತಿಗೆ ತಲುಪುತ್ತದೆ.

ಪ್ರತಿವರ್ಷ ಮಹರ್ಷಿ ವಾಲ್ಮೀಕಿ, ಕನಕದಾಸ, ಬಸವಣ್ಣ, ಆದಿಶಂಕರಾಚಾರ್ಯ ಮುಂತಾದ ಮಹಾತ್ಮರ ಜಯಂತಿ, ಹುಟ್ಟುಹಬ್ಬಗಳನ್ನು ಆಚರಿಸುವ ಉಪಕ್ರಮವನ್ನು ಯಾರೂ ಆಕ್ಷೇಪಿಸುವುದಿಲ್ಲ. ಇಂತಹ ಜಯಂತಿಗಳನ್ನು ಖಾಸಗಿ ಸಂಸ್ಥೆಗಳು, ಮಠಮಾನ್ಯಗಳು, ಜಾತಿ ಸಂಘಟನೆಗಳು ಆಚರಿಸುವುದಕ್ಕೂ, ಆಳುವ ಸರ್ಕಾರ ಆಚರಿಸುವುದಕ್ಕೂ ಬಹಳ ದೊಡ್ಡ ವ್ಯತ್ಯಾಸವಿದೆ. ಜಾತಿ ಹಾಗು ಕೋಮು ಸಂಘಟನೆಗಳು ಈ ಐತಿಹಾಸಿಕ, ಪೌರಾಣಿಕ ವ್ಯಕ್ತಿಗಳನ್ನು ತಮ್ಮ ಜಾತಿ ಹಾಗು ಕೋಮಿಗೆ ಸೀಮಿತಗೊಳಿಸಿದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾಯಿತವಾಗುವ ಸರ್ಕಾರಗಳು ಆಯೋಜಿಸುವ ಕಾರ್ಯಕ್ರಮಗಳಿಂದಾಗಿ ಇವರನ್ನು ಜಾತಿಯ ಪರಿಧಿಯಾಚೆಗೂ ನೋಡಲು ಸಾಧ್ಯವಾಗುತ್ತದೆ. ಇವರು ತಮ್ಮ ತಮ್ಮ ಜಾತಿಯ ಹೊರಗೂ ಮುಖ್ಯರಾಗಿದ್ದಾರೆ ಎಂದು ಮನಗಾಣಲು, ಇವರ ವಿಚಾರಗಳು ಎಲ್ಲ ಕೋಮಿನ ಜನಗಳ ಯೋಗಕ್ಷೇಮಕ್ಕೂ ಹೇಗೆ ಉಪಯುಕ್ತವಾಗುತ್ತದೆ ಎಂಬ ನಿಟ್ಟಿನಲ್ಲಿ ಚರ್ಚೆ ನಡೆಸಲು ಅವಕಾಶವಾಗುತ್ತದೆ. ಪ್ರತಿವರ್ಷ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಸಂಸ್ಕೃತಿ ಇಲಾಖೆಯ ಆಶಯ ಮತ್ತು ಬದ್ಧತೆ ಸಹ ಇದೇ ಆಗಿರತಕ್ಕದ್ದು.

-ಟಿ.ಎನ್. ವಾಸುದೇವಮೂರ್ತಿ

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...