ಸದನ ಸ್ವಾರಸ್ಯ | ಕುರ್ಚಿ ಕಾಳಗ – ‘ಮುಂದೆಯೂ ನಾನೇ ಸಿಎಂ’ ಎಂದು ಪ್ರತಿಪಕ್ಷಕ್ಕೆ ಗುಡುಗಿದ ಸಿದ್ದು

Date:

ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದ ಏಳನೇ ದಿನದ ವಿಧಾನಸಭೆ ಕಲಾಪದಲ್ಲೂ ಸಿಎಂ ಬದಲಾವಣೆ ವಿಷಯ ಚರ್ಚೆಗೆ ಬಂದಿತು.

ಕುಣಿಗಲ್‌ ಶಾಸಕ ರಂಗನಾಥ್‌ ಅವರು ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೇಳಿದ್ದ ಪ್ರಶ್ನೆಗೆ ಸಿದ್ದರಾಮಯ್ಯ ಅವರು ಉತ್ತರಿಸುವಾಗ ಆರ್‌ ಅಶೋಕ್‌ ಅವರು ಮಧ್ಯೆ ಪ್ರವೇಶಿಸಿ ಕ್ಷೇತ್ರಗಳ ತಾರತಮ್ಯ ಬಗ್ಗೆ ಮಾತನಾಡಿದರು. ಕೂಡಲೇ ಸಿದ್ದರಾಮಯ್ಯ ಅವರು ‘ಉರಿಯುವ ಬೆಂಕಿಗೆ ಉಪ್ಪು ಹಾಕಬೇಡಿ’ ಎಂದು ಅಶೋಕ್‌ ಅವರನ್ನು ಕುಟುಕಿದರು.

ಆಶೋಕ್‌ ಅವರು ಅಲ್ಲಿಗೆ ಸುಮ್ಮನಾಗದೇ ‘ಹಾಗಾದ್ರೆ ನಿಮಗೆ ಉರಿತಿದೆ ಎನ್ನುವುದು ಪಕ್ಕಾ ಆಯಿತು. ನೀವೇ ಐದು ವರ್ಷ ಸಿಎಂ ಆಗಿ ಇರುತ್ತೀರಾ? ಎಂದು ಪ್ರಶ್ನಿಸಿದರು.‌ ಮುಂದುವರಿದು, “ಚಾಣಕ್ಯನ ತಂತ್ರಗಾರಿಗೆ ಕೇಳಿದ್ದೇವೆ. ನಾನೂ ಸಹ ಸಿದ್ದರಾಮಯ್ಯ ತಂತ್ರಗಾರಿಕೆ ಕುರಿತು ಪುಸ್ತಕ ಬರೆಯಲಿದ್ದೇನೆ” ಎಂದರು

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅಶೋಕ್‌ ಅವರನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ, “ನೀವು ಎಂದಾದರೂ ಜನರ ಆಶೀರ್ವಾದ ಪಡೆದು ಅಧಿಕಾರಕ್ಕೆ ಬಂದಿದ್ದೀರಾ? ಬರೀ ಆಫರೇಷನ್‌ ಕಮಲ ಮೂಲಕ ಹಿಂಬಾಗಿಲಿನಿಂದಲೇ ಅಧಿಕಾರ ಹಿಡಿದಿದ್ದೀರಿ. ರಾಜ್ಯದ ಜನತೆ ನಿಮಗೆ ಯಾವತ್ತೂ ಆಶೀರ್ವಾದ ಮಾಡಲ್ಲ” ಎಂದು ಕಿಡಿಕಾರಿದರು.

ಆರ್‌ ಅಶೋಕ್‌ ಮಧ್ಯ ಪ್ರವೇಶಿಸಿ, “ನೀವು ಜೆಡಿಎಸ್‌ನವರ ಮನೆ ಬಾಗಿಲಿಗೆ ಹೋಗಿರಲಿಲ್ವಾ?” ಎಂದು ಪ್ರಶ್ನಿಸಿದರು. ಕೋಪಗೊಂಡ ಸಿದ್ದರಾಮಯ್ಯ ಅವರು, “ಯಾರೀ ಜೆಡಿಎಸ್‌ ಮನೆ ಬಾಗಿಲಿಗೆ ಹೋಗಿದ್ದು, ರಾಜ್ಯದಲ್ಲಿ ಬಿಜೆಪಿಯಾವರು ಅಧಿಕಾರಕ್ಕೆ ಬರಬಾರದು ಎಂದು ಅವರೇ ನಮ್ಮ ಬಳಿ ಬಂದಿದ್ದು” ಎಂದು ತಿರಗೇಟು ನೀಡಿದರು.

ವಿ ಸುನಿಲ್‌ ಕುಮಾರ್‌ ಮಧ್ಯ ಪ್ರವೇಶಿಸಿ, “ಸರ್‌ ಹೋಗಲಿ ನೀವೇ ಐದು ವರ್ಷ ಸಿಎಂ ಆಗಿ ಇರುತ್ತೀರಾ? ಅಥವಾ ಜನವರಿ ನಂತರ ಕುರ್ಚಿಯಿಂದ ಕೆಳಗಿಳಿಯುತ್ತೀರಾ ಎಂದು ಕೇಳಿದರು. ಅದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, “ರಾಜ್ಯದ ಜನ ನಮಗೆ ಆಶೀರ್ವಾದ ಮಾಡಿದ್ದಾರೆ. ಐದು ವರ್ಷ ನಾವೇ ಇರುತ್ತೇವೆ. 2028ರಲ್ಲೂ ನಾವೇ ಅಧಿಕಾರಕ್ಕೆ ಮರಳಿ ಬರುತ್ತೇವೆ” ಎಂದು ಕೌಂಟರ್‌ ಕೊಟ್ಟರು.

ಮಾತು ಬದಲಿಸದ ಸುನಿಲ್‌ ಕುಮಾರ್‌ ‘ನೀವೂ ಐದು ವರ್ಷ ಸಿಎಂ ಆಗಿ ಇರುತ್ತೀರಾ’ ಎಂದು ಪಟ್ಟು ಹೀಡಿದು ಕೇಳಿದಾಗ, “ಹೈಕಮಾಂಡ್‌ ಹೇಳುವವರೆಗೂ ನಾನೇ ಸಿಎಂ, ಮುಂದೆಯೂ ನಾನೇ ಸಿಎಂ” ಎಂದು ಹೇಳಿದರು.

“ಹೈಕಮಾಂಡ್‌ ಹೇಳುವವರೆಗೂ ನಾನೇ ಸಿಎಂ” ಎಂದು ಹೇಳಿದ್ರಲ್ಲ ಅಲ್ಲೇ ಇದೆ ಉತ್ತರ ಎಂದು ನಗುತ್ತಲೇ ಸುನಿಲ್‌ ಕುಮಾರ್ ಮಾತು ಮುಗಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...