ದಾವಣಗೆರೆ ಜಿಲ್ಲೆ ಜಗಳೂರು ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಷಣ್ಮುಖಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ರಾಷ್ಟ್ರೀಯ ಮಾನವ ಹಕ್ಕುಗಳ ಹೋರಾಟ ಸಮಿತಿ ಪದಾಧಿಕಾರಿಗಳು ಲ್ಯಾಬ್ ಸೇರಿದಂತೆ ಆಸ್ಪತ್ರೆಯಲ್ಲಿ ಸರಿಯಾದ ನಿರ್ವಹಣೆ ಕೊರತೆ ಇದ್ದು ಸರಿಪಡಿಸುವಂತೆ ಮನವಿ ಮಾಡಿದರು.
ಆಸ್ಪತ್ರೆಯ ಲ್ಯಾಬ್ ನಲ್ಲಿ ಸೀನಿಯರ್ ಲ್ಯಾಬ್ ಟೆಕ್ನಿಷೀಯನ್ನಿಗೆ ದೃಷ್ಟಿ ಸರಿಯಾಗಿ ಕಾಣಿಸುವುದಿಲ್ಲ. ಇಂಥವರು ಯಾವ ರೀತಿ ಪರೀಕ್ಷೆ ಮಾಡಲು ಸಾದ್ಯ. ಶೀಘ್ರವೇ ಬದಲಾವಣೆ ಮಾಡಿ” ಎಂದು ಪದಾಧಿಕಾರಿಗಳು ಒತ್ತಾಯಿಸಿದರು.
ತಾಲೂಕಿನ ಆರೋಗ್ಯಾಧಿಕಾರ(ಟಿಎಚ್ಓ) ಡಾ. ವಿಶ್ವನಾಥ ತಮ್ಮ ಟಿ ಎಚ್ ಓ ಕಛೇರಿ ಸುತ್ತ ಮುತ್ತ ಸ್ವಚ್ಛತೆ ಮಾಡಿಸುವಲ್ಲಿ ವಿಫಲರಾಗಿದ್ದಾರೆ. ಸ್ವಚ್ಛತೆ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾದರೂ ಬೇಜವಬ್ದಾರಿ ನಡೆಯಿಂದ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ” ಎಂದು ಆರೋಪಿಸಿದರು.
ಪ್ರಗತಿಪರ ಸಂಘಟನೆಗಳ ಹೋರಾಟಗಾರ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ ಮಾತನಾಡಿ, ಜಗಳೂರು ಕ್ಷೇತ್ರ ಹಿಂದುಳಿದ ಪ್ರದೇಶವಾಗಿದ್ದು ಇಲ್ಲಿ ಹೆಚ್ಚು ಬಡವರ್ಗದ ಜನತೆ ಸಾರ್ವಜನಿಕ ಅಸ್ಪತ್ರೆಯನ್ನೇ ಅವಲಂಭಿಸಿದ್ದಾರೆ. ಬರುವಂತ ಅನೇಕ ಗರ್ಭಿಣಿ ಬಾಣಂತಿಯರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಮಷಿನ್ ಇದ್ದರು ಸ್ಕ್ಯಾನಿಂಗ್ ತಜ್ಘರ ಕೊರತೆಯಿಂದ ಖಾಸಗಿ ಲ್ಯಾಬ್ ನಲ್ಲಿ ಹೋಗಿ ದುಪ್ಪಟ್ಟು ಹಣ ಕೊಟ್ಟು ಸ್ಕ್ಯಾನಿಂಗ್ ಮಾಡಿಸುವ ಅನಿವಾರ್ಯತೆ ಇದೆ. ತಾವುಗಳು ಶೀಘ್ರವೇ ಸರಿಪಡಿಸುಯಬೇಕು”ಎಂದು ಮನವಿ ಮಾಡಿದರು.
ಮಾನವ ಹಕ್ಕುಗಳ ಹೋರಾಟ ಸಮಿತಿ ತಾಲ್ಲೂಕು ಅಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿ “ಆಸ್ಪತ್ರೆ ಲ್ಯಾಬ್ ನಲ್ಲಿ ಕೆಲ ಕಾಯಿಲೆ ಬಗ್ಗೆ ಪರೀಕ್ಷೆಗಳು ರೋಗಿಗಳಿಗೆ ಲಭ್ಯವಿಲ್ಲದೇ ಜಿಲ್ಲಾ ಕೇಂದ್ರಗಳಿಗೆ ಜನರು ತೆರಳುತ್ತಾರೆ. ಆಸ್ಪತ್ರೆಯಲ್ಲಿ ಮಳೆಗಾಲದಲ್ಲಿ ಬಿಲ್ಡಿಂಗ್ ನ ಮೇಲಿನ ಮಳೆ ನೀರು ವಾರ್ಡಗಳಿಗೆ ಹರಿದುಹೋಗುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು” ಎಂದು ಒತ್ತಾಯಿಸಿದರು.
ಸಂಘಟಕರ ಮನವಿಗೆ ಸ್ವಂದಿಸಿದ ಡಿಎಚ್ಓ ಇಲ್ಲಿನ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸುವುದಾಗಿ ಪ್ರತಿಕ್ರಿಯಿಸಿ ನಂತರ ಆಸ್ಪತ್ರೆಯ ವಿವಿಧ ವಾರ್ಡಗಳಿಗೆ ತೆರಳಿ ಪರಿಶೀಲನೆ ನಡೆಸಿದರು ಜನರಿಗೆ ಸಿಗುವಂತ ಸೌಲಭ್ಯಗಳನ್ನ ಸಮರ್ಪಕವಾಗಿ ಒದಗಿಸುವಂತೆ ಸಿಬ್ಬಂದಿಗಳಿಗೆ ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸರ್ಕಾರಿ ಶಾಲೆಗಳ ವಿಲೀನ ಮುಚ್ಚುವ ಪ್ರಕ್ರಿಯೆ ಸಂವಿಧಾನದ ಶಿಕ್ಷಣ ಹಕ್ಕು ಉಲ್ಲಂಘನೆ
ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ರಾಘವೇಂದ್ರ ವೈದ್ಯರಾದ ಜಗನಾಥ ಹಾಗೂ ಆಸ್ಪತ್ರೆ ಸಿಬ್ಬಂದಿ ಸೇರಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿಯಂತ್ರಣ ಮಂಡಳಿ ತಾಲೂಕು ಅಧ್ಯಕ್ಷ ತಿಪ್ಪೇಸ್ವಾಮಿ, ಜಿಟಿ ಉಪಾಧ್ಯಕ್ಷ ಸಿದ್ದೇಶ ಕೆಎಸ್, ಜಂಟಿ ಕಾರ್ಯದರ್ಶಿ ಡಿ ವಿ ನಾಗರಾಜ್, ಮಾಧ್ಯಮ ಘಟಕದ ಅಧ್ಯಕ್ಷ ಎಂ.ಡಿ ಅಬ್ದುಲ್ ರಖೀಬ್ ಸೇರಿದಂತೆ ಸಾರ್ವಜನಿಕರು ಹಾಜರಿದ್ದರು.





