ಶರಾವತಿ, ವಾರಾಹಿ ಪಂಪ್ಡ್ ಸ್ಟೋರೇಜ್ ಯೋಜನೆ ಕೈಬಿಡಲು ಆಗ್ರಹ; ಸಿಎಂಗೆ ‘ಪರಿಸರಕ್ಕಾಗಿ ನಾವು’ ಪತ್ರ

Date:

ಪಶ್ಚಿಮಘಟ್ಟ ಜಿಲ್ಲೆಗಳಾದ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಶರಾವತಿ ನದಿಯ ಸೂಕ್ಷ್ಮ ಕಣೆವೆಯಲ್ಲಿ ‘ನವೀಕರಿಸಬಹುದಾದ ಇಂಧನ’ (ವಿದ್ಯುತ್) ಉತ್ಪಾದನೆಗೆ ಉದ್ದೇಶಿಸಿರುವ ‘ಶರಾವತಿ ಮತ್ತು ವಾರಾಹಿ ಪಂಪ್ಡ್ ಸ್ಟೋರೇಜ್ ಯೋಜನೆ’ಗಳಿಗೆ (PSPs) ‘ಪರಿಸರಕ್ಕಾಗಿ ನಾವು’ ಸಂಘಟನೆ ವಿರೋಧ ವ್ಯಕ್ತಪಡಿಸಿದೆ. ಯೋಜನೆಗಳನ್ನು ಕೈಬಿಡುವಂತೆ ಒತ್ತಾಯಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪರಿಸರಕ್ಕಾಗಿ ನಾವು’ ಸಂಘಟನೆ ಪತ್ರ ಬರೆದಿದೆ. “ಶರಾವತಿ ಕಣಿವೆಯು ಈಗಾಗಲೇ ಸರಣಿ ಜಲಾಶಯಗಳು ಮತ್ತು ಜಲವಿದ್ಯುತ್ ಯೋಜನೆಗಳಿಂದಾಗಿ ಅಪಾಯದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಯೋಜನೆಗಳು ಕಣಿವೆಯ ಪರಿಸರ ಮತ್ತು ಜನಜೀವನದ ಮೇಲೆ ಆಘಾತಕಾರಿ ಪರಿಣಾಮ ಉಂಟುಮಾಡಲಿವೆ” ಎಂದು ಕಳವಳ ವ್ಯಕ್ತಪಡಿಸಿದೆ.

“ಶರಾವತಿ ನದಿ ಕಣಿವೆ ಸೇರಿದಂತೆ ಪಶ್ಚಿಮಘಟ್ಟ ಪ್ರದೇಶಗಳು ಕಾವೇರಿ, ಹೇಮಾವತಿ, ತುಂಗ-ಭದ್ರಾ, ವರದಾ ಸೇರಿದಂತೆ ಇಡೀ ರಾಜ್ಯದ ನೀರಾವರಿ ಮತ್ತು ಕುಡಿಯುವ ನೀರಿನ ಮೂಲಗಳಾಗಿರುವ ಬಹುತೇಕ ಎಲ್ಲ ನದಿಗಳ ಉಗಮಸ್ಥಾನವಾಗಿವೆ. ಹಾಗಾಗಿಯೇ ಘಟ್ಟಗಳನ್ನು ರಾಜ್ಯದ ನೀರಿನ ಬಟ್ಟಲು ಎಂದು ಕರೆಯಲಾಗುತ್ತಿದೆ. ಅಲ್ಲದೆ, ರಾಜ್ಯದ ಒಟ್ಡಾರೆ ಮಳೆ ಹಂಚಿಕೆ, ಹವಾಗುಣ ಸಮತೋಲನ ಹಾಗೂ ಶುದ್ಧ ಗಾಳಿಯನ್ನು ಖಾತರಿಪಡಿಸುವಲ್ಲಿ ಕೂಡ ಈ ಘಟ್ಟಶ್ರೇಣಿ ಮತ್ತು ಕಣಿವೆಗಳ ಪಾತ್ರ ಮಹತ್ವದ್ದಾಗಿದೆ” ಎಂದು ಸಂಘಟನೆಗೆ ಗಮನ ಸೆಳೆದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ನಿರ್ದಿಷ್ಟವಾಗಿ ಶರಾವತಿ ಕಣಿವೆ ಮತ್ತು ಒಟ್ಟಾರೆಯಾಗಿ ಪಶ್ಚಿಮಘಟ್ಟಗಳ ಪರಿಸರ ಮತ್ತು ಜನಜೀವನದ ಹಿತದೃಷ್ಟಿಯಿಂದ ಯೋಜನೆಗಳನ್ನು ಪುನರ್ ಪರಿಶೀಲಿಸಬೇಕು. ರಾಜ್ಯದ ವಿದ್ಯುತ್ ಬೇಡಿಕೆ ನೀಗಿಸಲು ಹಾಲಿ ಲಭ್ಯವಿರುವ ತಂತ್ರಜ್ಞಾನ ಮತ್ತು ಅವಕಾಶಗಳ ಹಿನ್ನೆಲೆಯಲ್ಲಿ ಪರ್ಯಾಯ ಪರಿಸರ ಸ್ನೇಹಿ ಆಯ್ಕೆಗಳನ್ನು ಆದ್ಯತೆಯಾಗಿ ಪರಿಗಣಿಸಬೇಕು” ಎಂದು ಒತ್ತಾಯಿಸಿದೆ.

“ಪ್ರಸ್ತಾವಿತ ಯೋಜನೆಗಳನ್ನು ಅಧಿಸೂಚಿತ ವನ್ಯಜೀವಿ ಅಭಯಾರಣ್ಯಗಳ ಒಳಗೆ ಜಾರಿಮಾಡಲು ಪ್ರಸ್ತಾಪಿಸಲಾಗಿದೆ. ಇದು ವನ್ಯಜೀವಿ ಕಾಯ್ದೆ-WLPA ಮಾನದಂಡವನ್ನು ಉಲ್ಲಂಘಿಸುತ್ತವೆ. ವನ್ಯಜೀವಿ (ರಕ್ಷಣೆ) ಕಾಯ್ದೆ-1972ರ ಸೆಕ್ಷನ್ 29ರ ಅಡಿಯಲ್ಲಿ, ವನ್ಯಜೀವಿಗಳ ಪರಿಸ್ಥಿತಿ ಸುಧಾರಣೆ ಮತ್ತು ಉತ್ತಮ ನಿರ್ವಹಣೆಯ ಉದ್ದೇಶ ಹೊರತುಪಡಿಸಿ, ಅನ್ಯ ಉದ್ದೇಶಗಳಿಗೆ ವನ್ಯಜೀವಿಗಳು ಅಥವಾ ಆವಾಸಸ್ಥಾನಗಳ ನಾಶ ಅಥವಾ ಅಭಯಾರಣ್ಯದೊಳಗೆ ಅರಣ್ಯೇತರ ಚಟುವಟಿಕೆಗಳಿಗೆ ಅನುಮತಿ ಇಲ್ಲ. ಅದರಲ್ಲೂ ಮುಖ್ಯವಾಗಿ ಸಿಂಗಳೀಕ(Lion Tailed Macaque-LTM) ಮತ್ತು ದಾಸ ಮಂಗಟ್ಟೆ(Great Indian Hornbill)ಯಂತಹ ಅಪರೂಪದ, ಅಳಿವಿನಂಚಿನ ವನ್ಯಜೀವಿಗಳ ನೆಲೆಯಾಗಿರುವ ಕಣಿವೆಯಲ್ಲಿ ಇಂತಹ ಬೃಹತ್ ಯೋಜನೆ ಜಾರಿ ದೇಶದ ವನ್ಯಜೀವಿ ಸಂರಕ್ಷಣೆಯ ಕಾನೂನು ಉದ್ದೇಶಗಳನ್ನು ವಿಫಲಗೊಳಿಸುತ್ತದೆ” ಎಂದು ಸಂಘಟನೆ ವಿವರಿಸಿದೆ.

“ಈ ಯೋಜನೆಗಳ ಅನುಷ್ಠಾನಕ್ಕೆ ಗುರುತಿಸಲಾದ ತಾಣಗಳು ಮಧ್ಯ ಪಶ್ಚಿಮಘಟ್ಟಗಳ ದಟ್ಟವಾದ, ನಿತ್ಯಹರಿದ್ವರ್ಣ ಕಾಡುಗಳ ನಟ್ಟನಡುವೆ ಇವೆ. ಆ ಘಟ್ಟ ಪ್ರದೇಶವು ಅಧಿಕ ಮಳೆ ಮತ್ತು ಕಡಿದಾದ ಕಣಿವೆಗಳಿಂದ ಉಂಟಾಗುವ ಭಾರೀ ಭೂ ಕುಸಿತಗಳಿಂದಾಗಿ ಅಪಾಯಕಾರಿ ಭೂ ಕುಸಿತ ವಲಯ ಎಂದು ಗುರುತಿಸಲ್ಪಟ್ಟಿದೆ. ಇಂತಹ ಸೂಕ್ಷ್ಮ ಪ್ರದೇಶದಲ್ಲಿ ಬೃಹತ್ ಸುರಂಗಗಳು, ಭೂಗತ ಕಟ್ಟಡ ಮತ್ತು ರಸ್ತೆಗಳ ನಿರ್ಮಾಣ, ವಿದ್ಯುತ್ ಪ್ರಸರಣ ಮಾರ್ಗಗಳು, ಕ್ವಾರಿಗಳು ಮತ್ತು ತ್ಯಾಜ್ಯವಿಲೇ ಜಾಗಗಳು ಹಾಗೂ ಭಾರೀ ಪ್ರಮಾಣದ ಸ್ಫೋಟಕಗಳ ಬಳಕೆ ಇಡೀ ಕಣಿವೆ ಮತ್ತು ಘಟ್ಟ ವ್ಯಾಪ್ತಿಯಲ್ಲಿ ಸರಿಪಡಿಸಲಾಗದ ಪಾರಿಸಾರಿಕ ಬಿಕ್ಕಟ್ಟು ಮತ್ತು ಅನಾಹುತಗಳಿಗೆ ಕಾರಣವಾಗಲಿದೆ ಎಂದು ಈಗಾಗಲೇ ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಕಣಿವೆಯ ಪರಿಸರ ಅಸಮತೋಲನ ಇಡೀ ರಾಜ್ಯದ ಹವಾಗುಣ ಮತ್ತು ತಾಪಮಾನದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರಲಿದೆ” ಎಂದು ತಿಳಿಸಿದೆ.

“ಕೊಡಗು (2018, ಕರ್ನಾಟಕ), ವಯನಾಡು (2024, ಕೇರಳ) ಮತ್ತು ಮಾಲಿನ್ (2014, ಮಹಾರಾಷ್ಟ್ರ)ನಲ್ಲಿ ಸಂಭವಿಸಿರುವ ಭಾರೀ ಭೂಕುಸಿತಗಳು ಸೂಕ್ಷ್ಮ ಕಣಿವೆಗಳಲ್ಲಿ ಮಾನವ ಹಸ್ತಕ್ಷೇಪದ ವಿಪತ್ತುಗಳನ್ನು ಸಾರಿ ಹೇಳಿವೆ. ಘಟ್ಟಸಾಲಿನಲ್ಲಿ ಸುರಂಗ ಮಾರ್ಗ, ಅಣೆಕಟ್ಟು ನಿರ್ಮಾಣ, ರಸ್ತೆ ಮತ್ತಿತರ ಉದ್ದೇಶಕ್ಕಾಗಿ ಘಟ್ಟಗಳನ್ನು ಸೀಳುವುದು ಎಂಥ ಅನಾಹುತಗಳಿಗೆ ಎಡೆಮಾಡಿಕೊಡಲಿದೆ ಎಂಬುದು ಈಗಾಗಲೇ ಮನವರಿಕೆಯಾಗಿದೆ. ಅಲ್ಲದೆ, ಜನ, ವನ್ಯಜೀವಿಗಳು, ಕಾಡುಗಳು ಮತ್ತು ಸಾರ್ವಜನಿಕ ಮೂಲಸೌಕರ್ಯವನ್ನು ಕೂಡ ಅಂತಹ ಕ್ರಮಗಳು ಅಪಾಯಕ್ಕೆ ಸಿಲುಕಿಸುತ್ತವೆ” ಎಂದು ಹೇಳಿದೆ.

ಈ ಲೇಖನ ಓದಿದ್ದೀರಾ?: ರೈತ ಮಹಿಳೆಯ ಕ್ಷಮೆಗೆ ಕಂಗನಾ ಅರ್ಹರೇ?

“ಅಪರೂಪದ ವನ್ಯಜೀವಿ ಮತ್ತು ಅರಣ್ಯವನ್ನು ಹೊಂದಿರುವ ಸೂಕ್ಷ್ಮ ಅಭಯಾರಣ್ಯಗಳನ್ನು ಆಕ್ರಮಿಸದೆ, ನಾಶಮಾಡದೆ ರಾಜ್ಯದ ಭವಿಷ್ಯದ ಇಂಧನ(ವಿದ್ಯುತ್) ಅಗತ್ಯಗಳನ್ನು ಪೂರೈಸಲು ಹಲವು ಪರಿಸರಪೂರಕವಾದ ಮತ್ತು ಪ್ರಾಯೋಗಿಕವಾಗಿ ಕಾರ್ಯಸಾಧುವಾದ ಆಯ್ಕೆಗಳಿವೆ. ಅಧಿಕ ತಾಪಮಾನ ಹೊಂದಿರುವ ರಾಜ್ಯದಲ್ಲಿ ಸೌರಶಕ್ತಿ ಬಳಕೆಗೆ ಯಥೇಚ್ಛ ಅವಕಾಶಗಳಿವೆ. ಈಗಾಗಲೇ ರಾಜ್ಯದ ಪಾವಗಡದಲ್ಲಿ ಬಳಕೆಯಲ್ಲಿರುವ ಬೃಹತ್ ಸೌರಪಾರ್ಕ್ ಮಾದರಿಯನ್ನು ಬಯಲು ಪ್ರದೇಶಗಳಲ್ಲಿ ಇನ್ನಷ್ಟು ವಿಸ್ತರಿಸಬಹುದು” ಎಂದು ವಿವರಿಸಿದೆ.

“ಪಂಪ್ಡ್‌ ಸ್ಟೋರೇಜ್ ಮೂಲಕ ಜಲವಿದ್ಯುತ್ ಉತ್ಪಾದನೆಯೇ ಆದ್ಯತೆಯಾದರೆ, ಸೂಕ್ಷ್ಮ ಪರಿಸರ ಪ್ರದೇಶವನ್ನು ಹೊರತುಪಡಿಸಿ ರಾಜ್ಯದ ಇತರೆ ಜಲಾಶಯಗಳು ಮತ್ತು ನದಿ ಕಣಿವೆಗಳಲ್ಲಿ ಪರಿಸರ ಹಾನಿ ಇಲ್ಲದೆ ಇಂತಹ ಯೋಜನೆ ಜಾರಿಯ ಸಾಧ್ಯತೆಗಳನ್ನು ಪರಿಶೀಲಿಸಬಹುದು. ಬ್ಯಾಟರಿ ಶಕ್ತಿ ಸಂಗ್ರಹ ವ್ಯವಸ್ಥೆ (BESS) ಮೂಲಕ ‘ನಾನ್ ಪೀಕ್’ ವೇಳೆಯಲ್ಲಿ ಬಳಕೆಯಾಗದೇ ವ್ಯರ್ಥವಾಗುವ ವಿದ್ಯುತ್‌ ಸಂಗ್ರಹಿಸಿಟ್ಟುಕೊಂಡು ‘ಪೀಕ್’ ವೇಳೆಯಲ್ಲಿ ಬಳಸುವ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸುವ ಮೂಲಕ ಇಂಧನ ಕೊರತೆ ನೀಗಬಹುದು” ಎಂದು ಸಲಹೆ ನೀಡಿದೆ.

ಸಂಘಟನೆಯ ಹಕ್ಕೊತ್ತಾಯಗಳು

  1. ಶರಾವತಿ ಮತ್ತು ವಾರಾಹಿ PSP ಯೋಜನೆಗಳನ್ನು, ರಾಜ್ಯದ ಪರಿಸರ ಮತ್ತು ಭವಿಷ್ಯದ ತಲೆಮಾರುಗಳ ಹಿತ ಪರಿಗಣಿಸಿ; ಕೂಡಲೇ ಕೈಬಿಡಬೇಕು
  2. ಯೋಜನೆಗೆ ಸಂಬಂಧಿಸಿದಂತೆ ಎಲ್ಲಾ ಬಗೆಯ ಸಮೀಕ್ಷೆ, ಪೂರ್ವತಯಾರಿ, ಪ್ರಾಥಮಿಕ ನಿರ್ಮಾಣ ಚಟುವಟಿಕೆಗಳನ್ನು ಕೈಬಿಡಲು ಸಂಬಂಧಪಟ್ಟ ಇಲಾಖೆ ಮತ್ತು ಮಂಡಳಿಗಳಿಗೆ ನಿರ್ದೇಶಿಸಬೇಕು.
  3. ಪರ್ಯಾಯ ಇಂಧನ(ವಿದ್ಯುತ್‌) ಮೂಲಗಳ ಕುರಿತ ಆಯ್ಕೆಗಳಿವೆ. ಹೆಚ್ಚು ವಿವೇಕಯುತವಾದ ಅಂತಹ ಪರಿಸರಪೂರಕ ಆಯ್ಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕು.
  4. ನಿಮ್ಮ ಪಕ್ಷದ ಅಧಿನಾಯಕಿ ಶ್ರೀಮತಿ ಇಂದಿರಾ ಗಾಂಧಿಯವರು ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿದವರಾಗಿದ್ದು ಈ ದೇಶದ ಅಮೂಲ್ಯ ವನ್ಯಜೀವಿ ಸಂಪತ್ತನ್ನು ಸಂರಕ್ಷಿಸಲು 1972 ರಲ್ಲಿ ತಂದಿದ್ದ ವನ್ಯಜೀವಿ ಸಂರಕ್ಷಣಾ ಕಾಯ್ದೆ ಯನ್ನು ನೀವು ಗೌರವಿಸಿ ಮತ್ತು ಪಾಲಿಸಿ. ಈ ಕಾಯ್ದೆಯ 29 ನೇ ವಿಧಿಯನ್ನು ಎತ್ತಿಹಿಡಿಯುವ ಮೂಲಕ ಶ್ರೀಮತಿ ಇಂದಿರಾ ಗಾಂಧಿಯವರಿಗೆ ಗೌರವ ಸಲ್ಲಿಸಬೇಕು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...