ಧರ್ಮಸ್ಥಳ ಪ್ರಕರಣ | ʼಕೊಂದವರು ಯಾರು?ʼ ಆಂದೋಲನದಿಂದ ಸೋನಿಯಾ ಗಾಂಧಿಗೆ ಪತ್ರ

Date:

ಧರ್ಮಸ್ಥಳ ಪ್ರಕರಣದಲ್ಲಿ ಈಗ ನಡೆಯುತ್ತಿರುವ ಎಸ್‌ಐಟಿ ತನಿಖೆಯ ಹಾದಿ ತಪ್ಪಿಸುವ ಮತ್ತು ಒತ್ತಡ ಹೇರುವ ಬೆಳವಣಿಗೆಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ವಿವಿಧ ಮಹಿಳಾಪರ ಸಂಘಟನೆಗಳು ಸೇರಿ ನಡೆಸುತ್ತಿರುವ ʼಕೊಂದವರು ಯಾರು?ʼ ಆಂದೋಲನದ ವತಿಯಿಂದ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಇಪ್ಪತ್ತು ವರ್ಷಗಳಲ್ಲಿ ನಡೆದಿರುವ ಹಲವು ಮಹಿಳೆಯರ ಅಸಹಜ ಸಾವು, ಅತ್ಯಾಚಾರ, ಕೊಲೆ ಪ್ರಕರಣಗಳನ್ನು ನಿಷ್ಪಕ್ಷಪಾತ ತನಿಖೆ ನಡೆಸಿ ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಒದಗಿಸಲು ಮಧ್ಯಸ್ಥಿಕೆ ವಹಿಸಬೇಕು ಎಂದು ಒತ್ತಾಯಿಸಿ ಸುದೀರ್ಘ ಪತ್ರ ಬರೆಯಲಾಗಿದೆ. ಪತ್ರದ ಸಾರಾಂಶ ಹೀಗಿದೆ…

ಶ್ರೀಮತಿ ಸೋನಿಯಾ ಗಾಂಧಿಯವರಿಗೆ,

ತಮ್ಮ ಪಕ್ಷವು ಆಡಳಿತ ನಡೆಸುತ್ತಿರುವ ಕರ್ನಾಟಕದ ವಿವಿಧ ಮಹಿಳಾ ಸಂಘಟನೆಗಳು ಮತ್ತು ಮಹಿಳೆಯರ ಮಾನವ ಹಕ್ಕುಗಳ ಬಗೆ ಕಾಳಜಿಯುಳ್ಳ ನಾವು, “ಧರ್ಮಸ್ಥಳದಲ್ಲಿ ಕೊಂದವರು ಯಾರು?” ಎಂಬ ಆಂದೋಲನವನ್ನು ಪ್ರಾರಂಭಿಸಿದ್ದೇವೆ. ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಧರ್ಮಸ್ಥಳ ಗ್ರಾಮದಲ್ಲಿ ಇನ್ನೂ ಬಗೆಹರಿಯದೇ ಉಳಿದಿರುವ ಸರಣಿ ಅಪರಾಧಗಳ ಕುರಿತು ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಉಂಟಾಗಿರುವ ಬೆಳವಣಿಗೆಗಳು ನಮ್ಮಲ್ಲಿ ಆತಂಕವನ್ನು ಉಂಟು ಮಾಡಿವೆ. ಈ ತನಿಖೆಯು ಮಹಿಳೆಯರ ವಿರುದ್ಧ ಆ ಪ್ರದೇಶದಲ್ಲಿ ನಿಯಮಿತವಾಗಿ ನಡೆದ ಹಿಂಸೆಯ ಪ್ರಕರಣಗಳನ್ನು ಮುನ್ನೆಲೆಗೆ ತಂದಿತ್ತು.

ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಶ್ರೀಮತಿ ನಾಗಲಕ್ಷ್ಮಿ ಚೌಧರಿಯವರು 2025 ರ ಜುಲೈನಲ್ಲಿ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರಿಗೆ ಕಳೆದ ಎರಡು ದಶಕಗಳಲ್ಲಿ ಧರ್ಮಸ್ಥಳ ಗ್ರಾಮದಲ್ಲಿ ಕಾಣೆಯಾದವರ, ಅಸಹಜವಾಗಿ ತೀರಿಕೊಂಡವರ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಪ್ರಕರಣಗಳ ಸರಣಿ ಕುರಿತು ವಿಶೇಷ ತನಿಖಾ ತಂಡವನ್ನು ರಚಿಸಬೇಕೆಂದು ಪತ್ರ ಬರೆದಿರುವುದು ತಮಗೆ ತಿಳಿದಿದೆ.

ಸಂಕ್ಷಿಪ್ತ ಇತಿಹಾಸ
ಮಾಧ್ಯಮದಲ್ಲಿ ಬರುತ್ತಿರುವ ವರದಿಗಳು, ಮಹಿಳೆ ಮತ್ತು ವಿದ್ಯಾರ್ಥಿಗಳ ನಿಂದನೆ, ಕೊಲೆ, ಅತ್ಯಾಚಾರ ಮತ್ತು ವಿವರಿಸಲಾಗದಂತಹ ಸಾವುಗಳು ವ್ಯವಸ್ಥಿತವಾಗಿ ನಡೆದಿರುವುದರತ್ತ ಬೆರಳು ಮಾಡಿ ತೋರಿಸುತ್ತದೆ. ದಕ್ಷಿಣ ಕನ್ನಡ (ದ.ಕ.) ಜಿಲ್ಲೆಯ ಸ್ಥಳೀಯ ಕಾರ್ಯಕರ್ತರು ಮತ್ತು ಪತ್ರಕರ್ತರು ಹಾಗೂ ರಾಜ್ಯಾದ್ಯಂತ ಇರುವ ಮಹಿಳಾ ಹಕ್ಕುಗಳ ಸಂಘಟನೆಗಳು ಈ ಅಸಹಜ ಸಾವುಗಳು ಮತ್ತು ಕಾಣೆಯಾಗಿರುವುದರ ಕುರಿತು ಹಲವಾರು ವರ್ಷಗಳಿಂದ ಪ್ರತಿಭಟನೆ ಮಾಡುತ್ತಲೇ ಬಂದಿವೆ. ಉದಾಹರಣೆಯಾಗಿ ಈ ಕೆಲವು ಪ್ರಕರಣಗಳನ್ನು ನೋಡಬಹುದು.

2012 ರಲ್ಲಿ ಸೌಜನ್ಯ ಪ್ರಕರಣ
1986 ರಲ್ಲಿ ಪದ್ಮಲತಾ ಪ್ರಕರಣ
1979 ರಲ್ಲಿ ಶಿಕ್ಷಕಿ ವೇದವಲ್ಲಿಯವರ ಪ್ರಕರಣ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಜನವರಿ 2001 ರಿಂದ ಅಕ್ಟೋಬರ್ 2012 ರವರೆಗಿನ ಮಾಹಿತಿ ಹಕ್ಕು (ಆರ್‌ಟಿಐ) ದತ್ತಾಂಶವು ಸುಮಾರು 424 ದಾಖಲಿತ ಸಾವಿನ ಪ್ರಕರಣಗಳನ್ನು ಬಹಿರಂಗಪಡಿಸುತ್ತದೆ, ಇದರಲ್ಲಿ ಬಹುತೇಕ ಹುಡುಗಿಯರು ಮತ್ತು ಮಹಿಳೆಯರ ಸಾವುಗಳು ಉಜಿರೆ ಮತ್ತು ಧರ್ಮಸ್ಥಳದಲ್ಲೇ ನಡೆದಿವೆ.

ಕಾಂಗ್ರೆಸ್‌ ಪಕ್ಷದ ನಾಯಕರು ಹಾಗೂ ಮಾಜಿ ಸಂಸದರೂ ಆದ ಶ್ರೀ ವಿ.ಎಸ್‌. ಉಗ್ರಪ್ಪನವರ ನೇತೃತ್ವದಲ್ಲಿ ಮಹಿಳೆಯರ ಮೇಲಿನ ಹಿಂಸೆ ತಡೆಗಟ್ಟಲು ರಚಿಸಲಾದ ಪರಿಣಿತರ ಸಮಿತಿಯು 2018 ರಲ್ಲಿ ಬಿಡುಗಡೆ ಮಾಡಿದ ವರದಿಯೂ ಸಹ ಆ ಪ್ರದೇಶದಲ್ಲಿ ಸಂಭವಿಸಿರುವ ಅಸಹಜ ಸಾವುಗಳ ಕುರಿತು ಹೇಳುತ್ತದೆ (23.01.2016 ರಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು 2011 ರಿಂದ 2016 ರವರೆಗೆ ಬೆಳ್ತಂಗಡಿ ತಾಲೂಕಿನಲ್ಲಿಯೇ 5೦೦ ಕ್ಕೂ ಹೆಚ್ಚು ಅಸ್ವಾಭಾವಿಕ ಸಾವು ಪ್ರಕರಣಗಳು ದಾಖಲಾಗಿವೆ ಎಂದು ವರದಿ ಮಾಡಿದ್ದಾರೆ, ಆದರೆ ಅಪರಾಧಿಗಳನ್ನು ಪತ್ತೆಹಚ್ಚಲು ಪೊಲೀಸರು ಯಾವುದೇ ನಿರ್ದಿಷ್ಟ ಕ್ರಮ ಕೈಗೊಂಡಿಲ್ಲ). ಪರಿಣಿತರ ಸಮಿತಿಯು ಈ ಪ್ರದೇಶದಲ್ಲಿ ವಿಶೇಷ ಪೊಲೀಸ್ ಪಡೆ ರಚಿಸಿ ವಿಶೇಷ ತನಿಖೆ ನಡೆಸಬೇಕೆಂದು ಕೇಳಿತ್ತು, ಆದರೆ ಇದುವರೆಗೆ ಅದನ್ನು ಜಾರಿಪಡಿಸಿಲ್ಲ.

ಧರ್ಮಸ್ಥಳ ಗ್ರಾಮದಲ್ಲಿ 2012 ರಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಹದಿನೇಳು ವರ್ಷದ ಸೌಜನ್ಯ ಪ್ರಕರಣದಲ್ಲಿ ಸಿಬಿಐ ಕೋರ್ಟ್‌, ಕಳಪೆ ಮತ್ತು ದೋಷಪೂರ್ಣ ತನಿಖೆಯಿಂದ ನಿಜವಾದ ಆರೋಪಿಗಳನ್ನು1 ಕಂಡು ಹಿಡಿಯಲು ವಿಫಲರಾಗಿರುವುದರ ಕುರಿತು ಸರ್ಕಾರ ಮತ್ತು ಸಿಬಿಐ ಇಬ್ಬರಿಗೂ ಛೀಮಾರಿ ಹಾಕಿದೆ. ಅಪರಾಧ ಜರುಗಿದ ಕೂಡಲೇ ಫೊರೆನ್ಸಿಕ್‌ ಮೆಟೀರಿಯಲ್‌ಗಳನ್ನು ಸಂಗ್ರಹಿಸಿಕೊಳ್ಳುವುದು ಹಾಗೂ ತನಿಖೆಯ ಸಂದರ್ಭದಲ್ಲಿ ಹತ್ಯೆಯಾದ ಮುಖ್ಯ ಸಾಕ್ಷಿಯನ್ನು ಸೂಕ್ತವಾಗಿ ತನಿಖೆ ಮಾಡದಿರುವುದೂ ಸೇರಿದಂತೆ ನಿರ್ಣಾಯಕವಾದ ಸಾಕ್ಷ್ಯನಾಶದಂತಹ ಹಲವಾರು ದೋಷಗಳು ತನಿಖೆಯಲ್ಲಿ ಕಂಡು ಬಂದಿವೆ.

ಇವೆಲ್ಲವೂ ವ್ಯವಸ್ಥೆಯ ನಿರ್ಲಕ್ಷ್ಯ ಅಥವಾ ದುರುದ್ದೇಶವನ್ನು ಸೂಚಿಸುತ್ತವೆ. ಈ ಪ್ರಕರಣಗಳ ಹಿಂದಿನ ಸತ್ಯ ಬಯಲುಮಾಡುವ ನಿಟ್ಟಿನಲ್ಲಿ ಸ್ಥಳೀಯ ಅಥಾರಿಟಿಗಳು ಸಂಪೂರ್ಣವಾಗಿ ವಿಫಲವಾಗಿವೆ ಹಾಗೂ ಮುಂದೆ ಆಡಳಿತಕ್ಕೆ ಬಂದ ಸರ್ಕಾರಗಳಿಗೆ ಬಿಕ್ಕಟ್ಟನ್ನು ಕಗ್ಗಂಟಾಗಿಸಿವೆ.

ಇತ್ತೀಚಿನ ಬೆಳವಣಿಗೆಗಳು
ಸಾವುಗಳ ಕುರಿತು ಧರ್ಮಸ್ಥಳ ಟ್ರಸ್ಟಿನ ವ್ಯವಸ್ಥಾಪಕ ಮಂಡಳಿ, ಸಾರ್ವಜನಿಕರು ಮತ್ತು ಮಾಧ್ಯಮದ ಸೂಕ್ಷ್ಮ ದೃಷ್ಟಿಗೆ ಬಿದ್ದ ನಂತರ ಜುಲೈ ತಿಂಗಳ ಆರಂಭದಲ್ಲಿ ಧರ್ಮಸ್ಥಳ ಟ್ರಸ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಮಾಜಿ ನೈರ್ಮಲ್ಯ ಕೆಲಸಗಾರನೆಂದು ಗುರುತಿಸಲಾದ ವ್ಯಕ್ತಿಯೊಬ್ಬರು ಮುಂದೆ ಬಂದು ಧರ್ಮಸ್ಥಳ ಗ್ರಾಮದಲ್ಲಿ ಕಾನೂನುಬಾಹಿರವಾಗಿ ನಿಯಮಿತವಾಗಿ ಶವಗಳ ವಿಲೇವಾರಿ ಮಾಡಿದ್ದರ ಬಗ್ಗೆ ಮಾಹಿತಿ ಕೊಡುವುದಾಗಿ ಮುಂದೆ ಬಂದರು. ಆ ನಂತರದಲ್ಲಿ, ಧರ್ಮಸ್ಥಳದಲ್ಲಿ ಶವಗಳ ಹೂತು ಹಾಕಿರುವುದರ ಮತ್ತು ಸಂಬಂಧಿಸಿದ ಕೊಲೆಗಳ ಕುರಿತು ಕರ್ನಾಟಕ ಸರ್ಕಾರವು ಜುಲೈ19, 2025 ರಲ್ಲಿ ಎಸ್‌ಐಟಿಯನ್ನು ಸ್ಥಾಪಿಸಲಾಯಿತು. ಆ ವ್ಯಕ್ತಿಯು ತಾನು ತೋರಿಸುವೆನೆಂದು ಹೇಳಿದ ಶವಗಳನ್ನು ಹೂತಿರುವ ಸ್ಥಳಗಳಿಗೆ ಎಸ್ಐಟಿ ಭೇಟಿ ನೀಡಿತು. ಜೊತೆಗೆ ಎಸ್‌ಐಟಿಯು ಮಂಗಳೂರಿನಲ್ಲಿ ಕಚೇರಿಯನ್ನು ತೆರೆದು, ದೂರುಗಳನ್ನು ನೀಡಲು ಕರೆ ನೀಡಿತು ಮತ್ತು ಸಂತ್ರಸ್ತರು ಮತ್ತು ಮಾಹಿತಿದಾರರು ಮುಂದೆ ಬರಲು ಚಾನೆಲ್‌ಗಳನ್ನು ಸ್ಥಾಪಿಸಿತು.

ಬಹಳ ಹಿಂದಿನಿಂದಲೂ ನಾವು, ಕಾಳಜಿಯುಳ್ಳ ಹಲವಾರು ನಾಗರೀಕರು ಹಾಗೂ ಕಾರ್ಯಕರ್ತರಿಗೆ, ಈ ಪ್ರಕ್ರಿಯೆಯು ನ್ಯಾಯ ದೊರಕಿಸಲು ಸಹಾಯವಾಗುವುದು ಮತ್ತು ಹಲವು ಕಾಲದಿಂದ ಆಘಾತದೊಂದಿಗೆ ಪ್ರಶ್ನೆಗಳನ್ನು ಇಟ್ಟುಕೊಂಡು ಉತ್ತರ ಹುಡುಕುತ್ತಿದ್ದವರನ್ನು ಸಂತೈಸುವುದೆಂಬ ಭರವಸೆ ಮೂಡಿತು.

ಪ್ರಸ್ತುತ ಬಿಕ್ಕಟ್ಟು
ದುರದೃಷ್ಟವಶಾತ್‌, ತನಿಖೆ ಆರಂಭವಾಗಿ ಕೆಲವೇ ವಾರಗಳಲ್ಲಿ ಈ ವಿಷಯವು ಪ್ರಚೋದನಾಕಾರಿ ಮಾಧ್ಯಮ ಮತ್ತು ರಾಜಕೀಯಕ್ಕೆ ವೇದಿಕೆಯಾಯಿತು. ಇದರ ಪರಿಣಾಮವಾಗಿ ಸತ್ಯ ಬೆಳಕಿಗೆ ತರುವ ಮತ್ತು ಹೊಣೆಗಾರಿಕೆ ತೋರಬೇಕಾದ ಸಂದರ್ಭದಲ್ಲಿ, ಸತ್ಯವನ್ನು ಹೂತುಹಾಕುವ ಬೆದರಿಕೆಯ ತಂತ್ರಗಳು ಮತ್ತು ಪ್ರಯತ್ನಗಳು ಮೇಲುಗೈ ಪಡೆದುಕೊಂಡವು.
ಹಿರಿಯ ವಯಸ್ಸಾದ ತಾಯಿಯೊಬ್ಬರೂ (ಸುಜಾತಾ ಭಟ್) ಸೇರಿದಂತೆ, ವಾರಸುದಾರರು ಮತ್ತು ಎಸ್‌ಐಟಿಗೆ ದೂರು ನೀಡಿದವರನ್ನು ಮಾಧ್ಯಮಗಳಲ್ಲಿ ಹೇಯವಾಗಿ ತೋರಿಸಲಾಗುತ್ತಿದೆ. ಈ ಬಗ್ಗೆ ಮಹಿಳಾ ಆಯೋಗವು ಮಧ್ಯಸ್ಥಿಕೆ ವಹಿಸಬೇಕೆಂದೂ ಹಾಗೂ ಅವರಿಗೆ ರಕ್ಷಣೆ ನೀಡಬೇಕೆಂದು ಕೇಳಿ, 2025 ರ ಆಗಸ್ಟ್‌ 28 ರಂದು ಮನವಿ ನೀಡುವ ಮೂಲಕ ಒತ್ತಾಯಿಸಲಾಗಿದೆ.

ವಿಷಯವನ್ನು ಬಯಲುಗೊಳಿಸಿದ ಸ್ವತಂತ್ರ ಪತ್ರಕರ್ತರನ್ನು ಮತ್ತು ಯೂಟ್ಯೂಬರ್‌ಗಳ ಮೇಲೆ ಅನಾಮಧೇಯ ಘಾತುಕರು ಕ್ರೂರದಾಳಿ ನಡೆಸಿದ್ದಾರೆ. ಆ ಮೂಲಕ ಕಹಿಸತ್ಯವನ್ನು ಹೇಳದಂತೆ ಬಾಯಿ ಮುಚ್ಚಿಸಲಾಗುತ್ತಿದೆ.

ತನಿಖೆಯು ಹಲವು ನಾಟಕೀಯ ತಿರುವುಗಳನ್ನು ಪಡೆದುಕೊಂಡಿದ್ದು, ಶವಗಳನ್ನು ಹೂಳಿದ ಸ್ಥಳಗಳನ್ನು ತೋರಿಸುವೆನೆಂದು ಮುಂದೆ ಬಂದ ವ್ಯಕ್ತಿಯನ್ನೇ ಸುಳ್ಳು ಸಾಕ್ಷಿ ನೀಡುತ್ತಿದ್ದಾರೆಂದು ಆರೋಪಿಸಿ ಬಂಧಿಸಲಾಗಿದೆ. ಆತನ ಮೇಲೆ ಹೊರಿಸಿರುವ ಅಪರಾಧಗಳಿಗೆ ಇರುವುದು ಏಳುವರ್ಷಕ್ಕಿಂತ ಕಡಿಮೆ ಇರುವ ಜೈಲುವಾಸ. ಇದು, ಇತರ ಶಕ್ತ ಸಾಕ್ಷಿಗಳು ಮತ್ತು ಪ್ರಕರಣಗಳ ನಿರ್ಣಾಯಕ ಮಾಹಿತಿ ಇರುವ, ಅಕ್ರಮ ಬಯಲಿಗೆಳೆದವರಿಗೆ (ವಿಸಿಲ್‌ ಬ್ಲೋಯರ್)‌ ಬೆದರಿಕೆಯ ಸಂದೇಶವನ್ನು ನೀಡುತ್ತಿದೆ.
ಬಿಜೆಪಿಯೂ ಸಹ ಆರಂಭದಲ್ಲಿ ಎಸ್‌ಐಟಿ ರಚನೆಯನ್ನು ಸ್ವಾಗತಿಸಿತಾದರೂ ಈಗ ಇಡೀ ಸಂದರ್ಭವನ್ನು ದ್ವೇಷರಾಜಕಾರಣದ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ. ಜಾತ್ಯತೀತತೆಯನ್ನು ಪ್ರತಿಪಾದಿಸುವ ಕಾಂಗ್ರೆಸ್‌ ಮಂತ್ರಿಗಳೂ ಸಹ ದ್ವೇಷರಾಜಕಾರಣದ ಉರಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದಾರೆ. ಎಸ್‌ಐಟಿ ತನ್ನ ತನಿಖೆಯನ್ನು ಮುಗಿಸುವ ಮೊದಲೇ ಹಲವು ದಶಕಗಳ ಹಿಂದೆ ತೀರಿಹೋದ ಜೀವಗಳ ಹೆಸರಿನಲ್ಲಿ ವಿವಾದ ಎಬ್ಬಿಸುತ್ತಿದೆ ಹಾಗು ರಾಜಕೀಯ ಒತ್ತಡದಿಂದ ಮುಕ್ತವಾಗಿ ತನಿಖೆ ನಡೆಸುವ ಎಸ್‌ಐಟಿಯ ಸಾಮರ್ಥ್ಯವನ್ನು ಕುಗ್ಗಿಸುತ್ತಿದೆ.

ಆಗಸ್ಟ್‌ 14 ರಂದು ಕರ್ನಾಟಕ ಸರ್ಕಾರದ ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್‌ ಅವರು, ಧರ್ಮಸ್ಥಳದಲ್ಲಿ ಶವ ಹೂಳಿದ ಪ್ರಕರಣವು, ಶತಮಾನಗಳ ಇತಿಹಾಸವಿರುವ ಸ್ಥಳದ ವಿರುದ್ಧ ʼಸಂಚುʼ ಎಂದು ಆರೋಪಿಸಿದ್ದಾರೆ, ಅಲ್ಲದೇ ಧರ್ಮಸ್ಥಳದಲ್ಲಿ ನಡೆದಿರುವ ಅತ್ಯಾಚಾರ ಮತ್ತು ಕೊಲೆಗಳ ವಿರುದ್ಧ ʼತಪ್ಪು ಮಾಹಿತಿ ಆಂದೋಲನʼ ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಆಲೋಚಿಸಲಾಗುತ್ತಿದೆ ಎಂದು ಹೇಳಲಾಗಿದೆ. ಗೃಹಮಂತ್ರಿಗಳಾದ ಜಿ.ಪರಮೇಶ್ವರ ಅವರೂ ವಿರೋಧ ಪಕ್ಷದವರ ಒತ್ತಡಕ್ಕೆ ಒಳಗಾಗಿ, ಧರ್ಮಸ್ಥಳದ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸುತ್ತಿರುವವರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಅಭಿಪ್ರಾಯ ವ್ಯಕ್ತಪಡಿಸುತ್ತಿರುವವರಿಗೆ “ನಿಮ್ಮನ್ನು ನೀವು ನಿಯಂತ್ರಿಸಿಕೊಳ್ಳದೇ ಹೋದರೆ ನಾವು ನಿಯಂತ್ರಿಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ. ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀಹೆಬ್ಬಾಳ್ಕರ್‌ ಅವರು ಸಹ ಇದೇ ರಾಗಕ್ಕೆ ತಮ್ಮ ಧ್ವನಿ ಸೇರಿಸಿ, ಇವೆಲ್ಲ ಧರ್ಮಸ್ಥಳದ ಹೆಸರಿಗೆ ಮಸಿ ಬಳಿವ ಸಂಚು ಎಂದು ಹೇಳಿದ ಡಿ.ಕೆ ಶಿವಕುಮಾರ್‌ ಅವರ ಹೇಳಿಕೆಯನ್ನು ಬೆಂಬಲಿಸಿರುವುದು ಕಡು ವ್ಯಂಗ್ಯವೇ ಸರಿ.

ಇದನ್ನೂ ಓದಿ ಈ ದಿನ ಸಂಪಾದಕೀಯ | ದಿಕ್ಕು ತಪ್ಪಿಸುವ ದೃಶ್ಯಮಾಧ್ಯಮಗಳು ಮತ್ತು ಧರ್ಮಯಾತ್ರೆಗಳು

ನಮ್ಮ ಹಕ್ಕೊತ್ತಾಯಗಳು
ಇಡೀ ತನಿಖೆಯಿಂದ ನಿರ್ದಿಷ್ಟವಾಗಿ ಮಹಿಳೆಯರು ಮತ್ತು ಇತರ ಸಂತ್ರಸ್ತರಿಗೆ ನ್ಯಾಯ ಸಿಗಬೇಕೆನ್ನುವುದು ನಮ್ಮ ಆಂದೋಲನದ ಮುಖ್ಯ ಉದ್ದೇಶವಾಗಿದೆ. ಈ ಉದ್ದೇಶವನ್ನು ಯಾವುದೇ ರಾಜಕೀಯ, ಧಾರ್ಮಿಕ ದುರುದ್ದೇಶಗಳಿಗೆ ಬಲಿಯಾಗಿಸಬಾರದು. ವಿರೋಧ ಪಕ್ಷದ ಹಾಗೂ ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕಿಯಾದ ತಾವು ಈ ಕೆಳಗಿನ ನಮ್ಮ ಹಕ್ಕೊತ್ತಾಯಗಳನ್ನು ಬೆಂಬಲಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ.

ಎ.) ಆ ಪ್ರದೇಶದಲ್ಲಿ ದಿಗ್ಭ್ರಮೆ ಹುಟ್ಟಿಸುವ ರೀತಿಯಲ್ಲಿ ನಡೆದಿರುವ ಅಸಹಜ ಸಾವುಗಳು ಮತ್ತು ಲೈಂಗಿಕ ದೌರ್ಜನ್ಯಗಳ ಪ್ರಕರಣಗಳ ತನಿಖೆಯು ಒತ್ತಡ ಮುಕ್ತವಾಗಿ ನಿಷ್ಪಕ್ಷಪಾತವಾಗಿ ನಡೆಯುವ ನಿಟ್ಟಿನಲ್ಲಿ ಎಸ್‌ಐಟಿಯು ದೃಢವಾಗಿ ಗಮನ ಕೇಂದ್ರೀಕರಿಸಬೇಕು. ಇದು ಮುಖ್ಯ ಏಕೆಂದರೆ, ಈ ಅಸಹಜ ಸಾವುಗಳ ಬಗ್ಗೆ ಮತ್ತು ಇದರಲ್ಲಿ ಸ್ಥಳೀಯ ಪೊಲೀಸ್‌ ಮತ್ತು ಇತರ ಅಧಿಕಾರೀ ವರ್ಗವು ಶಾಮೀಲಾಗಿರುವ ಬಗ್ಗೆ ಮಾಹಿತಿ ಹಕ್ಕು ವರದಿ ಮತ್ತು 2018 ರ ಉಗ್ರಪ್ಪ ಸಮಿತಿಯ ವರದಿಗಳೂ ಸೂಚಿಸಿವೆ. ಸಂತ್ರಸ್ತರಿಗೆ ನ್ಯಾಯ ಸಿಗಬೇಕು, ಅಪರಾಧ ಎಸಗಿರುವವರನ್ನು ಬಂಧಿಸಬೇಕು, ಕರ್ತವ್ಯ ನಿರ್ವಹಿಸಲು ವಿಫಲರಾದ ಅಧಿಕಾರ ವರ್ಗವನ್ನು ಹೊಣೆಗಾರರನ್ನಾಗಿಸಬೇಕು.

ಬಿ). ಕಾಂಗ್ರೆಸ್‌ ಪಕ್ಷದ ಮುಖಂಡರುಗಳು ಎಸ್ಐಟಿ ಕಾರ್ಯಾಚರಣೆಗೆ ಮತ್ತು ನ್ಯಾಯೋಚಿತ ತನಿಖೆಗೆ ಧಕ್ಕೆಯುಂಟುಮಾಡುವಂತಹ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು, ಬದಲಿಗೆ ಅವರು ಮಹಿಳೆಯರ ಮೇಲೆ ಆಗಿರುವ ಹಿಂಸೆಯನ್ನು ಗಂಭೀರವಾಗಿ ಪರಿಗಣಿಸಿ, ಅದಕ್ಕೆ ನ್ಯಾಯ ಕೊಡಿಸುವುದಕ್ಕೆ ಒತ್ತು ನೀಡಬೇಕು ಮತ್ತು ಅಂತಹ ಹಿಂಸೆಗೆ ಕಾರಣವಾಗಿರುವ ಆಳವಾಗಿ ಬೇರೂರಿರುವ ರಚನೆಗಳನ್ನು ವಿರೋಧಿಸುವುದಕ್ಕೆ ದನಿ ಜೋಡಿಸಬೇಕು.
ಸಿ). ತಮ್ಮ ಹೊಣೆಗಾರಿಕೆಯನ್ನು ಖಾತ್ರಿಪಡಿಸುವ ಸಲುವಾಗಿ ಸೌಜನ್ಯ ಪ್ರಕರಣದಲ್ಲಿನ ತನಿಖೆಗೆ ಎಡವಟ್ಟು ಮಾಡಿದ್ದಕ್ಕೆ ಕಾರಣರಾದ, ತಪ್ಪು ಮಾಡಿದ ಅಧಿಕಾರಿಗಳ ವಿರುದ್ಧ ಕರ್ನಾಟಕ ಸರ್ಕಾರ ಶೀಘ್ರವಾಗಿ ಕ್ರಮ ತೆಗೆದುಕೊಳ್ಳಬೇಕು ಎಂದು 2024ರ ಸೆಪ್ಟೆಂಬರ್‌ 13 ರಂದು ಕರ್ನಾಟಕ ಹೈಕೋರ್ಟ್‌ ನೀಡಿದ ತೀರ್ಪನ್ನು ಜಾರಿಗೊಳಿಸಬೇಕು.

ಸೋನಿಯಾ ಗಾಂಧಿಯವರೇ, ಇದು ಧರ್ಮಸ್ಥಳ ಗ್ರಾಮದ ಕತೆಯಷ್ಟೇ ಅಲ್ಲ, ಮಹಿಳೆಯರ ಮೇಲಿನ ಹಿಂಸೆಯೊಂದಿಗೆ ಶಾಮೀಲಾಗುವ ವ್ಯವಸ್ಥೆಯನ್ನು ಸರ್ಕಾರ ಎದುರಿಸುತ್ತದೆಯೇ ಎಂಬುದರ ಜೊತೆಗೆ ಕರ್ನಾಟಕದ ಮಹಿಳೆಯರಾದ ನಮ್ಮ ಜೀವಗಳೂ ಸರ್ಕಾರಕ್ಕೆ ಮುಖ್ಯವೆಂಬುದನ್ನು ನಂಬಬಹುದೇ? ಎಂಬ ಪ್ರಶ್ನೆಯೂ ಇದೆ.

ರಾಜಕೀಯ ಮುಖಂಡರಾಗಿ ನೀವು ನೈತಿಕತೆ ಮತ್ತು ಸಹಾನುಭೂತಿಯನ್ನು ರಾಜಕೀಯಕ್ಕೆ ತಂದಿರುವಿರಿ ಎಂಬುದನ್ನು ನಾವು ದೃಢವಾಗಿ ನಂಬುತ್ತೇವೆ. ನಿಮ್ಮ ಮಧ್ಯಸ್ಥಿಕೆಯು ಬಹಳ ಮುಖ್ಯ-ಧರ್ಮಸ್ಥಳ ಗ್ರಾಮದ ಮಹಿಳೆಯರಿಗೆ ನ್ಯಾಯ ದೊರಕಿಸುವುದಷ್ಟೇ ಅಲ್ಲ, ಕರ್ನಾಟಕದ ರಾಜ್ಯ ಸರ್ಕಾರದಲ್ಲಿ ನಮಗಿರುವ ಸ್ಥಾನವನ್ನು ದೃಢಪಡಿಸಿಕೊಳ್ಳುವುದಕ್ಕೂ ಜೊತೆಗೆ ಕಾನೂನು ಕ್ರಮ ಜರುಗಿಸುವ ಸಂಸ್ಥೆಗಳು ಸಂತ್ರಸ್ತರನ್ನು ರಕ್ಷಿಸಬೇಕೇ ಹೊರತು ಅವರ ಧ್ವನಿಯನ್ನು ಅಡಗಿಸಬಾರದೆಂಬ ನಂಬಿಕೆಯನ್ನು ಉಳಿಸುವ ಸಲುವಾಗಿಯೂ ತಾವು ಮಧ್ಯಸ್ಥಿಕೆ ವಹಿಸಬೇಕೆಂದೂ ಮನವಿ ಮಾಡಿಕೊಳ್ಳುತ್ತೇವೆ.

ವಿಶ್ವಾಸದಿಂದ,
Campaign ಕೊಂದವರು ಯಾರು? Who Killed the Women in Dharmasthala?

ವಿಜಯಮ್ಮ – ಹಿರಿಯ ಪತ್ರಕರ್ತರು ಮತ್ತು ಚಲನಚಿತ್ರ ವಿಮರ್ಶಕರು
ಅರುಂಧತಿ ನಾಗ್ – ಸತ್ಯದ ಕರೆಗಾಗಿ ಕಣಕ್ಕಿಳಿಯಲು ಸಿದ್ಧವಾಗಿರುವ ರಂಗಭೂಮಿ ಕಾರ್ಯಕರ್ತರು
ಡಾ. ಸಬಿತಾ ಬನ್ನಾಡಿ – ಲೇಖಕಿ ಮತ್ತು ಅಂಕಣಕಾರರು
ಪದ್ಮಾವತಿ ರಾವ್ – ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರ
ಕವಿತಾ ಲಂಕೇಶ್ – ಚಲನಚಿತ್ರ ನಿರ್ಮಾಪಕರು
ಡಿ.ಸುಮನ ಕಿತ್ತೂರು – ಪತ್ರಕರ್ತರು, ಚಿತ್ರ ನಿರ್ಮಾಪಕರು
ಅಕ್ಕೈ ಪದ್ಮಶಾಲಿ – ಲಿಂಗ ಮತ್ತು ಲೈಂಗಿಕ ಹಕ್ಕುಗಳ ಕಾರ್ಯಕರ್ತರು
ಪ್ರೊ ಎ.ಆರ್.ವಾಸವಿ – ಸ್ಕಾಲರ್
ಪ್ರೊ ಜಾನಕಿ ನಾಯರ್ – ನಿವೃತ್ತ ಇತಿಹಾಸ ಪ್ರಾಧ್ಯಾಪಕರು, ಜೆ ಎನ್ ಯು
ಸಿ.ಜಿ. ಮಂಜುಳಾ – ಹಿರಿಯ ಪತ್ರಕರ್ತರು
ಡಾ. ವಸುಂಧರಾ ಭೂಪತಿ – ವೈದ್ಯೆ, ಲೇಖಕಿ, ಸಾಮಾಜಿಕ ಕಾರ್ಯಕರ್ತರು
ಡಾ. ಸಬಿಹಾ ಭೂಮಿಗೌಡ – ಪ್ರಸಿದ್ಧ ಲೇಖಕಿ, ನಿವೃತ್ತ. ಉಪಕುಲಪತಿ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ
ಡಾ.ಎಚ್.ಎಸ್. ಅನುಪಮಾ – ಸ್ತ್ರೀರೋಗ ತಜ್ಞೆ, ಪ್ರಸಿದ್ಧ ಲೇಖಕಿ, ಕಾರ್ಯಕರ್ತೆ, ಕರ್ನಾಟಕ ರಾಜ್ಯ ಮಹಿಳಾ ದೂರರ್ಜನ್ಯ ವಿರೋಧಿ ಒಕ್ಕೂಟ
ಇಶ್ರತ್ ನಿಸ್ಸಾರ್ – ಶಿಕ್ಷಣತಜ್ಞರು, ರಾಷ್ಟ್ರೀಯ ಪ್ರಶಸ್ತಿ ವಿಜೇತರು, ರಾಜ್ಯ ಲಿಂಗ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಒಕ್ಕೂಟ
ನಂದಿನಿ ಜಯರಾಮ – ರೈತ ಸಂಘ
ಬಿ.ಟಿ.ಜಾಹ್ನವಿ – ಕನ್ನಡ ಲೇಖಕಿ, ಪ್ರಕಾಶಕರು, ಮಹಿಳಾ ಚಳುವಳಿ ಕಾರ್ಯಕರ್ತರು
ರೂಪಾ ಹಾಸನ – ಲೇಖಕಿ, ಸಾಮಾಜಿಕ ಕಾರ್ಯಕರ್ತರು
ಮಾಯಾ ಕೃಷ್ಣರಾವ್ – ರಂಗಭೂಮಿ ಕಲಾವಿದರು
ಡಾ. ದು. ಸರಸ್ವತಿ – ಲೇಖಕರು, ಕವಿಗಳು, ರಂಗಭೂಮಿ ಕಲಾವಿದರು
ಕವಿತಾ ಕುರುಗಂಟಿ – ಸಾಮಾಜಿಕ ಕಾರ್ಯಕರ್ತರು
ದೀಪಾ ಧನರಾಜ್ – ಸಾಕ್ಷ್ಯಚಿತ್ರ ನಿರ್ಮಾಪಕರು
ಜ್ಯೋತಿ ಎ. ಸುಬ್ಬಾ ರಾವ್ – ಭಾರತೀಯ ಮಹಿಳೆಯರ ರಾಷ್ಟ್ರೀಯ ಒಕ್ಕೂಟ(NFIW)
ಗೀತಾ ಮೆನನ್ – ಸ್ತ್ರೀ ಜಾಗೃತಿ ಸಮಿತಿ, ಗೃಹ ಕಾರ್ಮಿಕರ ಹಕ್ಕುಗಳ ಒಕ್ಕೂಟ
ಎಂ. ಗೀತಾ – ಸಾಧನಾ ಮಹಿಳಾ ಸಂಘ – ಬೀದಿ ಆಧಾರಿತ ಲೈಂಗಿಕ ಕಾರ್ಮಿಕರ ಹಕ್ಕುಗಳಿಗಾಗಿ ಕಾರ್ಯ ನಿರ್ವಹಣೆ
ವಿನುತ, ನಾವೆದ್ದು ನಿಲ್ಲದಿದ್ದರೆ, ಕರ್ನಾಟಕ
ಆಯೇಷಾ, ನಾವೆದ್ದು ನಿಲ್ಲದಿದ್ದರೆ, ಕರ್ನಾಟಕ
ಪ್ರತಿಮಾ ರೋಹಿಣಿ ರಾಜಶೇಖರನ್, ಲೇಖಕರು, ಬಹುಶಾಸ್ತ್ರೀಯ ಕಲಾವಿದರು
ಸಿಂಥಿಯಾ ಸ್ಟೀಫನ್, ಸ್ವತಂತ್ರ ಪತ್ರಕರ್ತರು ಮತ್ತು ಸಾಮಾಜಿಕ ನೀತಿ ಸಂಶೋಧಕರು
ಪ್ರಜ್ವಲ್ ಶಾಸ್ತ್ರಿ, ಭೌತಶಾಸ್ತ್ರಜ್ಞರು
ಚುಕ್ಕಿ ನಂಜುಂಡಸ್ವಾಮಿ, ರಾಜ್ಯಾಧ್ಯಕ್ಷ ಸಮಿತಿ ಸದಸ್ಯರು – ಕರ್ನಾಟಕ ರಾಜ್ಯ ರೈತ ಸಂಘಟನೆ, ಹಸಿರು ಸೇನೆ ನಾಯಕತ್ವ
ಮಲ್ಲಿಗೆ ಸಿರಿಮನೆ, ಸಾಮಾಜಿಕ ಕಾರ್ಯಕರ್ತರು, ಮಹಿಳಾ ಮುನ್ನಡೆ – ಸ್ವಾಯತ್ತ ಮಹಿಳಾ ಸಂಘ
ಗೌರಿ, ದಲಿತ-ಸ್ತ್ರೀವಾದಿ ಕಾರ್ಯಕರ್ತರು, ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ – ಎಲ್ಲಾ ಮಹಿಳಾ ಗುಂಪುಗಳು ಮತ್ತು ಸಂಬಂಧಪಟ್ಟ ನಾಗರಿಕರ – ರಾಜ್ಯ ಮಟ್ಟದ ಜಾಲ
ಹೇಮಾ ವೆಂಕಟ್, ಪತ್ರಕರ್ತರು
ಚಂಪಾವತಿ ಎಚ್.ಎಸ್., ಮಾನಸ ವೇದಿಕೆ
ಬೃಂದಾ ಅಡಿಗೆ, ಗ್ಲೋಬಲ್ ಕನ್ಸರ್ನ್ಸ್ ಇಂಡಿಯಾ
ಮರಿಯಾ ಎಸ್, ಅನನ್ಯಾ ಮಹಿಳಾ ಒಕ್ಕೂಟ
ಅಮ್ಮು ಜೋಸೆಫ್, ಪತ್ರಕರ್ತರು 
ಡಾ. ಮೀನಾಕ್ಷಿ ಬಾಲಿ, ಹಿರಿಯ ಸ್ತ್ರೀವಾದಿ-ಕಾರ್ಯಕರ್ತೆ, ಬರಹಗಾರ್ತಿ

ಗಮನ – ಮಹಿಳಾ ಕಲೆಕ್ಟಿವ್
ನಾವೆದ್ದು ನಿಲ್ಲದಿದ್ದರೆ, ಕರ್ನಾಟಕ
ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ
ವಿಮೋಚನಾ – ಮಹಿಳಾ ಹಕ್ಕುಗಳ ವೇದಿಕೆ
ಅವೇಕ್ಷಾ – ಮಹಿಳಾ ಟ್ರಸ್ಟ್
ಹಸಿರು ದಳ – ಪರಿಸರ ಮತ್ತು ತ್ಯಾಜ್ಯ ಕಾರ್ಮಿಕರ ಹಕ್ಕುಗಳ ಸಂಘಟನೆ ವಿಮೆನ್ಸ್‌ ವಾಯ್ಸ್
ಅಖಿಲ ಭಾರತ ಕೇಂದ್ರೀಯ ಕಾರ್ಮಿಕ ಸಂಘಗಳ ಮಂಡಳಿ (AICCTU), ಕರ್ನಾಟಕ
ಅಖಿಲ ಭಾರತ ಪ್ರಗತಿಪರ ಮಹಿಳಾ ವೇದಿಕೆ (AIPWA), ಕರ್ನಾಟಕ
ಗಾರ್ಮೆಂಟ್ ಮತ್ತು ಜವಳಿ ಕಾರ್ಮಿಕರ ಸಂಘ (GATWU), ಕರ್ನಾಟಕ

ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ದಾಖಲೆಗಳು:

ಮೇಲ್ಮನವಿ ದಸ್ತಾವೇಜು: State By Central Bureau Of … vs Santhosh Rao on 30 August, 2024

ಸಿಬಿಐ ನ್ಯಾಯಾಲಯದ ತೀರ್ಪು – Soujanya judgment ಸೌಜನ್ಯ ಪ್ರಕರಣ ತೀರ್ಪು | PDF

ಕರ್ನಾಟಕ ಹೈಕೋರ್ಟ್ ಆದೇಶ (ಮರುತನಿಖೆ ಅರ್ಜಿಗಳನ್ನು ವಜಾಗೊಳಿಸಿರುವುದು) WP3301 24 30 08 2024 | PDF | Acquittal | Bangalore

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...