ಧರ್ಮಸ್ಥಳ ಪ್ರಕರಣ | ದೆಹಲಿ ನಾಯಕರಿಂದ ಎಸ್‌ಐಟಿ ರಚನೆಗೆ ಸೂಚನೆ: ಸಂಸದ ತೇಜಸ್ವಿ ಸೂರ್ಯ

Date:

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಕೆಲ ನಾಯಕರಿಂದ ಎಸ್‌ಐಟಿ ರಚನೆಗೆ ಸೂಚನೆ ಬಂದಿದ್ದು, ಸಿಎಂ ಸಿದ್ದರಾಮಯ್ಯ ಅವರು ಅವರ ಹೆಸರುಗಳನ್ನು ಬಹಿರಂಗಪಡಿಸಬೇಕು ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಒತ್ತಾಯಿಸಿದ್ದಾರೆ.

ಸೋಮವಾರ ಕರ್ನಾಟಕ ಬಿಜೆಪಿ ಆಯೋಜಿಸಿದ್ದ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ‘ಧರ್ಮ ಯಾತ್ರೆ’ಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇದು ಕೇವಲ ತನಿಖೆಯ ವಿಚಾರವಲ್ಲ, ಕರ್ನಾಟಕದ ಪ್ರಮುಖ ಹಿಂದೂ ಧಾರ್ಮಿಕ ಸಂಸ್ಥೆಯನ್ನು ಅಪಕೀರ್ತಿ ಪಡಿಸಿ ಅಸ್ಥಿರಗೊಳಿಸುವ ದೊಡ್ಡ ಷಡ್ಯಂತ್ರದ ಭಾಗವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೋರಿದ “ತುರ್ತುತನ ಮತ್ತು ಉತ್ಸಾಹ”ವೇ ಸಂಶಯಾಸ್ಪದವಾಗಿದೆ ಎಂದು ಹೇಳಿದ್ದಾರೆ.

“ಸಾವಿರಾರು ಹತ್ಯೆಗಳು ನಡೆದಿವೆ ಎಂಬ ಅನಾಮಿಕ ಪೌರ ಕಾರ್ಮಿಕನ ಆರೋಪದ ಮೇಲೆ, ಯಾವುದೇ ಪ್ರಾಥಮಿಕ ತನಿಖೆ ನಡೆಸದೇ, ಆ ವ್ಯಕ್ತಿಯ ಹಿನ್ನೆಲೆ ಪರಿಶೀಲನೆ ಮಾಡದೇ, ತಕ್ಷಣವೇ ಎಸ್‌ಐಟಿ ರಚಿಸಲು ಸಿಎಂ ಯಾಕೆ ಇಷ್ಟು ತುರ್ತು ತೋರಿಸಿದರು? ಇದೇ ರೀತಿಯ ಆರೋಪಗಳು ಯಾವುದೇ ಬೇರೆ ಧರ್ಮದ ಸಂಸ್ಥೆಯ ವಿರುದ್ಧ ಬಂದಿದ್ದರೆ ಸಿಎಂ ಇದೇ ಆತುರ ತೋರಿಸುತ್ತಿದ್ದರೆ? ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಾಥಮಿಕ ವಿಚಾರಣೆ ಮಾಡದೆ ಎಸ್‌ಐಟಿ ರಚಿಸಬಾರದೆಂದು ಸರ್ಕಾರಕ್ಕೆ ಸಲಹೆ ನೀಡಿದ್ದರೂ ಅದನ್ನು ಸಿಎಂ ನಿರ್ಲಕ್ಷಿಸಿದ್ದಾರೆ ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಅಲೆಮಾರಿ ಸಮುದಾಯಗಳಿಗೆ ಅನ್ಯಾಯ – ಜಾತಿಗಣತಿಯ ಮೇಲೂ ಕರಿನೆರಳು: ರಾಹುಲ್‌ ಗಾಂಧಿ ಗಮನಿಸುವರೇ?

“ದೆಹಲಿಯ ಕೆಲ ನಾಯಕರಿಂದಲೇ ಎಸ್‌ಐಟಿ ರಚನೆಗೆ ಸೂಚನೆ ಬಂದಿತೆಂದು ತಿಳಿಯುತ್ತದೆ. ಯಾರು ಆ ದೆಹಲಿ ನಾಯಕರು? ಕರ್ನಾಟಕದ ಪ್ರತಿಯೊಂದು ಹಿಂದು ಭಕ್ತನಿಗೂ, ಪ್ರತಿಯೊಬ್ಬ ನಾಗರಿಕನಿಗೂ ಇದನ್ನು ತಿಳಿದುಕೊಳ್ಳುವ ಹಕ್ಕು ಇದೆ” ಎಂದು ಹೇಳಿದರು.

ಪೌರ ಕಾರ್ಮಿಕನ ಪರವಾಗಿ ಖ್ಯಾತ ವಕೀಲರನ್ನು ನ್ಯಾಯಾಲಯಕ್ಕೆ ಕರೆದೊಯ್ಯಲಾಗಿದೆ. ಇದಕ್ಕೆಲ್ಲ ಯಾರು ಹಣ ನೀಡಿದರು? ಯಾರು ಈ ಸಂಚನ್ನು ರೂಪಿಸಿದರು? ಇದರ ಹಿಂದೆ ಯಾವ ಸಂಘಟನೆಗಳಿವೆ? ಇದು ರಾಹುಲ್ ಗಾಂಧಿಯವರ ‘ಸನಾತನ ಧರ್ಮ ನಿರ್ಮೂಲನೆ ಯೋಜನೆ’ಯ ಭಾಗವೇ ಎಂದು ಪ್ರಶ್ನಿಸಿದರು.

“ಸಿಎಂ ಎಸ್‌ಐಟಿಗೆ ತೋರಿದ ಉತ್ಸಾಹವನ್ನು ಸಿಬಿಐ ತನಿಖೆಗೆ ಸಹ ತಕ್ಷಣ ತೋರಿಸಬೇಕು. ಇಲ್ಲವಾದರೆ ಇದು ಕೇವಲ ಧರ್ಮಸ್ಥಳವನ್ನು ಅಪಕೀರ್ತಿ ಪಡಿಸುವ ಯೋಜನೆಯಲ್ಲ, ಬೃಹತ್ ಮಟ್ಟದ ಸನಾತನ ಧರ್ಮ ನಿರ್ಮೂಲನೆ ಯೋಜನೆಯ ಭಾಗವೆಂಬ ಪ್ರಶ್ನೆ ಉದ್ಭವಿಸುತ್ತದೆ” ಎಂದು ಹೇಳಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...