ಧರ್ಮಸ್ಥಳ ಪ್ರಕರಣ | ಮಹಿಳಾ ಆಯೋಗಕ್ಕೆ ಸಾವಿರ ಪುಟಗಳ ವರದಿ ಸಲ್ಲಿಸಲು ಎಸ್‌ಐಟಿ ತಯಾರಿ?

Date:

ಧರ್ಮಸ್ಥಳ ಪ್ರಕರಣದ (ಅಪರಾಧ ಸಂಖ್ಯೆ 39/2025) ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ಈ ವಾರದ ಕೊನೆಯಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ಪ್ರಗತಿ ವರದಿಯನ್ನು ಸಲ್ಲಿಸುವ ಸಾಧ್ಯತೆಯಿದೆ ಎಂದು ಗೃಹ ಇಲಾಖೆಯ ಮೂಲವೊಂದು ತಿಳಿಸಿರುವುದಾಗಿ blrpost.com ವರದಿ ಮಾಡಿದೆ.

ಮಹಿಳಾ ಆಯೋಗವು ನವೆಂಬರ್ 5 ರಂದು ತನಿಖೆಯ ಪ್ರಗತಿಯ ಬಗ್ಗೆ ವರದಿ ನೀಡುವಂತೆ ಎಸ್‌ಐಟಿಗೆ ಪತ್ರ ಬರೆದ ನಂತರ ಈ ಬೆಳವಣಿಗೆ ನಡೆದಿದೆ. ಇದರಲ್ಲಿ ಧರ್ಮಸ್ಥಳ ಗ್ರಾಮದಿಂದ ಹಲವು ವರ್ಷಗಳಲ್ಲಿ ವರದಿಯಾದ ಅಸಹಜ ಸಾವುಗಳು, ಕಾಣೆಯಾದ ವ್ಯಕ್ತಿಗಳ ಪ್ರಕರಣಗಳನ್ನು ಸೇರಿಸಲು SIT ತನ್ನ ತನಿಖೆಯ ವ್ಯಾಪ್ತಿಯನ್ನು ವಿಸ್ತರಿಸಬೇಕೆಂದು ಒತ್ತಾಯಿಸಲಾಗಿತ್ತು. ತನಿಖೆಯು ಅಕ್ರಮವಾಗಿ ಹೂತ ಶವಗಳಿಗೆ ಮಾತ್ರ ಕೇಂದ್ರೀಕರಿಸಲ್ಪಟ್ಟಿದೆ ಎಂದು ಆಯೋಗವು ತನ್ನ ಪತ್ರದಲ್ಲಿ ಕಳವಳ ವ್ಯಕ್ತಪಡಿಸಿತ್ತು.

ಕಳೆದ ಎರಡು ದಶಕಗಳಲ್ಲಿ ಧರ್ಮಸ್ಥಳ ಪ್ರದೇಶದಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆದ ಕಾಣೆಯಾದ ಮಹಿಳೆಯರು, ವಿದ್ಯಾರ್ಥಿಗಳು, ಕೊಲೆಗಳು ಮತ್ತು ಅಸ್ವಾಭಾವಿಕ ಸಾವುಗಳ ಎಲ್ಲಾ ವರದಿಯಾದ ಪ್ರಕರಣಗಳನ್ನು ಒಳಗೊಳ್ಳಲು ತನ್ನ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸಬೇಕೆಂದು ಅವರು ತನಿಖಾ ತಂಡವನ್ನು ಒತ್ತಾಯಿಸಿದ್ದರು. ತನಿಖೆಯ ಸ್ಥಿತಿ ಮತ್ತು ಪ್ರಗತಿಯ ಕುರಿತು SIT ಯಿಂದ ಆಯೋಗವು ಔಪಚಾರಿಕವಾಗಿ ವಿವರವಾದ ವರದಿಯನ್ನು ಕೋರಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಆಯೋಗದ ಹಸ್ತಕ್ಷೇಪದ ನಂತರ, ಎಸ್‌ಐಟಿ 1,000 ಕ್ಕೂ ಹೆಚ್ಚು ಪುಟಗಳ ಸಮಗ್ರ ವರದಿಯನ್ನು ಸಿದ್ಧಪಡಿಸಿದೆ ಎಂದು ಗೃಹ ಇಲಾಖೆಯ ಮೂಲಗಳು ತಿಳಿಸಿರುವುದಾಗಿ ಬೆಂಗಳೂರು ಪೋಸ್ಟ್‌ ವರದಿ ಮಾಡಿದೆ.

ವರದಿಯಲ್ಲೇನಿದೆ ?

ವರದಿಯು “ಸ್ಫೋಟಕ” ವಿವರಗಳನ್ನು ಒಳಗೊಂಡಿದೆ ಎಂದು ಗೃಹ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ ಎಂದು ಬೆಂಗಳೂರು ಪೋಸ್ಟ್‌ ವರದಿ ತಿಳಿಸಿದೆ. ಧರ್ಮಸ್ಥಳದ ಪಟ್ಟಣ ಮತ್ತು ಸುತ್ತಮುತ್ತ 74 ಮೃತ ದೇಹಗಳು ಪತ್ತೆಯಾದ ಒಂದೇ ದಿನದಲ್ಲಿ ಹೂತು ಹಾಕಿರುವ ಬಗ್ಗೆ ಎಸ್‌ಐಟಿ ತನಿಖೆಯನ್ನು ಪ್ರಾರಂಭಿಸಿದೆ ಎಂದು ಸಹ ಅದು ದಾಖಲಿಸಿದೆ. ಪ್ರಸ್ತುತ, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ವಿಠಲ್ ಗೌಡ, ಜಯಂತ್ ಟಿ ಮತ್ತು ಸುಜಾತಾ ಭಟ್ ಸೇರಿದಂತೆ ಯಾರನ್ನೂ ಎಸ್‌ಐಟಿ ತನಿಖೆ ಮಾಡುತ್ತಿಲ್ಲ.

ಸೌಜನ್ಯ ಅವರ ತಾಯಿ ಕುಸುಮಾವತಿ ಗೌಡ ಅವರು ವಿವರವಾದ ತನಿಖೆ ಕೋರಿ ಅರ್ಜಿ ಸಲ್ಲಿಸಿದ ನಂತರ ಎಸ್‌ಐಟಿ ವಿಷಯವನ್ನು ಪರಿಶೀಲಿಸಲು ಪ್ರಾರಂಭಿಸಿತು. ಈ ಎಲ್ಲಾ ಅನುಮಾನಾಸ್ಪದ ಸಾವುಗಳನ್ನು ತನಿಖೆ ಮಾಡಿ ನ್ಯಾಯ ಒದಗಿಸುವಂತೆ ಕುಸುಮಾವತಿ ಅವರು ಎಸ್‌ಐಟಿಗೆ ಸಲ್ಲಿಸಿದ ಅರ್ಜಿಯಲ್ಲಿ ವಿನಂತಿಸಿದ್ದರು. ಈ ಪ್ರದೇಶದಿಂದ ವರದಿಯಾದ ಸಾವುಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂಬುದು ಅವರ ಬೇಡಿಕೆ.

ಶವ ಪತ್ತೆಯಾದಂದೇ ಅಂತ್ಯಕ್ರಿಯೆ!

1990 ಮತ್ತು 2021ರ ನಡುವೆ ಧರ್ಮಸ್ಥಳ ಮತ್ತು ಸುತ್ತಮುತ್ತ ಪತ್ತೆಯಾದ ಕನಿಷ್ಠ 74 ಗುರುತಿಸಲಾಗದ ಶವಗಳನ್ನು ಅವು ಪತ್ತೆಯಾದ ಅದೇ ದಿನದಂದು ಮಣ್ಣುಮಾಡಲಾಗಿದೆ ಎಂದು ಧರ್ಮಸ್ಥಳ ಪಂಚಾಯತ್ ದಾಖಲೆಗಳು ಬಹಿರಂಗಪಡಿಸಿವೆ. ಇದು ಸರಿಯಾದ ಪ್ರಕ್ರಿಯೆ, ವಿಧಿವಿಜ್ಞಾನ ಪರೀಕ್ಷೆ ಮತ್ತು ಕಾನೂನು ಪ್ರೋಟೋಕಾಲ್‌ಗಳ ಅನುಸರಣೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಧರ್ಮಸ್ಥಳ ಮತ್ತು ಸುತ್ತಮುತ್ತ 72 ಶವಗಳನ್ನು ಸಮಾಧಿ ಮಾಡಲಾಗಿದ್ದರೆ, ಎರಡು ಮೃತ ದೇಹಗಳನ್ನು ಕೆ.ಎಸ್. ಹೆಗ್ಡೆ ಸ್ಮಶಾನದಲ್ಲಿ ಒಂದೇ ದಿನ ಅಂತ್ಯಕ್ರಿಯೆ ಮಾಡಲಾಗಿದೆ. ಖಾಸಗಿ ಆಸ್ಪತ್ರೆಗೆ ಸೇರಿದ ಸ್ಮಶಾನದಲ್ಲಿ ಈ ಶವಗಳನ್ನು ಏಕೆ ಹೂಳಲಾಗಿದೆ ಎಂಬುದನ್ನು ಪಂಚಾಯತ್ ದಾಖಲೆಯಲ್ಲಿ ಉಲ್ಲೇಖಿಸಲಾಗಿಲ್ಲ. ಆಸ್ಪತ್ರೆ ಬೆಳ್ತಂಗಡಿಯಿಂದ ಸುಮಾರು 60 ಕಿ.ಮೀ ದೂರದಲ್ಲಿದೆ. ಉಳಿದ ಶವಗಳಿಗೆ ಸಂಬಂಧಿಸಿದಂತೆ, ಪಂಚಾಯತ್ ಅಂತ್ಯಕ್ರಿಯೆ ಮಾಡಿದ ಸ್ಥಳವನ್ನು ಉಲ್ಲೇಖಿಸಿಲ್ಲ.

ʼಅನುಬಂಧ ಬಿʼ ಎಂಬ ಶೀರ್ಷಿಕೆಯ ಅರ್ಜಿಯಲ್ಲಿ ಸಂಗ್ರಹಿಸಲಾದ ದತ್ತಾಂಶವು, ನೇತ್ರಾವತಿ ನದಿ, ಸ್ನಾನಘಟ್ಟ, ಧರ್ಮಸ್ಥಳ ಬಸ್ ನಿಲ್ದಾಣ, ಪಾರ್ಕಿಂಗ್ ಪ್ರದೇಶಗಳು ಮತ್ತು ಬಾಹುಬಲಿ ಬೆಟ್ಟದ ಬಳಿಯ ಅರಣ್ಯ ಪ್ರದೇಶಗಳಂತಹ ವಿವಿಧ ಸ್ಥಳಗಳಲ್ಲಿ ಭಿಕ್ಷುಕರು ಅಥವಾ ಗುರುತಿಸಲಾಗದ ವ್ಯಕ್ತಿಗಳು ಎಂದು ವಿವರಿಸಲಾದ 74 ಪ್ರಕರಣಗಳನ್ನು ಪಟ್ಟಿ ಮಾಡಿದೆ. ಪ್ರತಿಯೊಂದು ಶವ ಪತ್ತೆ ದಿನಾಂಕ ಮತ್ತು ಹೂತ ದಿನಾಂಕ ಒಂದೇ ಆಗಿರುವುದನ್ನು ತೋರಿಸುತ್ತದೆ.

ಈ ದಾಖಲೆಗಳು 1990 ರಿಂದ 2021 ರವರೆಗಿನ ಮೂರು ದಶಕಗಳದ್ದಾಗಿವೆ. ಒಂದೇ ರೀತಿಯಲ್ಲಿವೆ. ನದಿ, ದೇವಾಲಯದ ಆವರಣ ಮತ್ತು ಸಾರ್ವಜನಿಕ ಪ್ರದೇಶಗಳಿಂದ ವಶಕ್ಕೆ ಪಡೆದ ಶವಗಳನ್ನು ಪತ್ತೆಯಾದ ಕೆಲವೇ ಗಂಟೆಗಳಲ್ಲಿ ಹೂಳಲಾಗಿದೆ. ಹಲವಾರು ಪ್ರಕರಣಗಳ ಮೃತರನ್ನು ಭಿಕ್ಷುಕ, ಪ್ರಜ್ಞಾಹೀನ ಅಥವಾ ಆತ್ಮಹತ್ಯೆ ಎಂದು ನಮೂದಿಸಲಾಗಿದೆ. ಆದರೆ ಯಾವುದೇ ದೃಢೀಕರಣ ತನಿಖಾ ಟಿಪ್ಪಣಿಗಳನ್ನು ಒದಗಿಸಿರುವುದಿಲ್ಲ ಎಂದು ಮೂಲಗಳು ತಿಳಿಸಿರುವುದಾಗಿ ಬೆಂಗಳೂರು ಪೋಸ್ಟ್‌ ವರದಿ ಮಾಡಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...