ಸಿದ್ದರಾಮಯ್ಯ ಸರ್ಕಾರದ ಪತನ ಬೆಳಗಾವಿಯಿಂದ ಆರಂಭ: ಮುನಿರತ್ನ

Date:

  • ‘ಬೆಳಗಾವಿ ಜಿಲ್ಲಾ ಕಾಂಗ್ರೆಸ್​ ನಾಯಕರಲ್ಲಿ ಆಂತರಿಕ ಭಿನ್ನಾಬಿಪ್ರಾಯ’
  • ‘ಡಿಕೆ ಶಿವಕುಮಾರ್‌ಗೆ ಯಾವೊಬ್ಬ ಶಾಸಕನೂ ಸ್ವಾಗತ ಕೋರಲಿಲ್ಲ’

ಸಿದ್ದರಾಮಯ್ಯ ಸರ್ಕಾರ ಪತನ ಬೆಳಗಾವಿಯಿಂದ ಆರಂಭವಾಗಿದ್ದು, ಬೆಂಗಳೂರಿನಲ್ಲಿ ಕೊನೆಗೊಳ್ಳಲಿದೆ ಎಂದು ಆರ್ ​ಆರ್​ ನಗರದ ಬಿಜೆಪಿ ಶಾಸಕ ಎನ್ ಮುನಿರತ್ನ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಬೆಳಗಾವಿ ಜಿಲ್ಲಾ ಕಾಂಗ್ರೆಸ್​ ನಾಯಕರಲ್ಲಿ ಆಂತರಿಕ ಭಿನ್ನಾಬಿಪ್ರಾಯ ಎದ್ದಿದೆ. ಸ್ವತಃ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ ಜಿಲ್ಲೆಗೆ ಆಗಮಿಸಿದ್ದರೂ ಯಾವೊಬ್ಬ ಶಾಸಕನೂ ಸ್ವಾಗತ ಕೋರಲು ಆಗಮಿಸಿಲ್ಲ” ಎಂದರು.

“ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಸ್ವಾಗತಿಸಲು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೋಗದಿರುವುದು ಮತ್ತಷ್ಟು ಆಶ್ಚರ್ಯ ತಂದಿದೆ. ಇದು ಎಂಟನೇ ಅದ್ಭುತ. ಸತೀಶ್ ಜಾರಕಿಹೊಳಿ ಹೋಗದಿರುವುದರಲ್ಲಿ ಯಾವುದೇ ವಿಶೇಷತೆ ಇಲ್ಲ” ಎಂದು ಕಿಚಾಯಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಬೆಳಗಾವಿ ಜಿಲ್ಲಾ ಕಾಂಗ್ರೆಸ್​ನಲ್ಲಿ ಆಂತರಿಕ ಜಗಳ ಕಾವೇರಿ ನೀರು ಉಕ್ಕಿ ಹರಿಯುವ ರೀತಿಯಲ್ಲಿ ಅಲ್ಲಿ ಉಕ್ಕಿ ಹರಿಯುತ್ತಿದೆ. ಈ ಹಿಂದೆ ಇದೇ ರೀತಿ ಅಲ್ಲಿ ಉಕ್ಕಿ ಹರಿದು ಮೈತ್ರಿ ಸರ್ಕಾರ ಪತನ ಆಗಿತ್ತು. ಇದೀಗ ಸಿದ್ದರಾಮಯ್ಯ ಸರ್ಕಾರ ಉರುಳಿಸಲು ಬೆಳಗಾವಿಯಿಂದ ಕದನ ಆರಂಭವಾಗಿದ್ದು, ಬೆಂಗಳೂರಿನಲ್ಲಿ ಮುಕ್ತಾಯ ಆಗಲಿದೆ” ಎಂದರು.

ಆಪರೇಷನ್​ ಕಮಲದ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್‌ ಮಾಡಿದ ಆರೋಪದ ಬಗ್ಗೆ ಮುನಿರತ್ನ ಪ್ರತಿಕ್ರಿಯಿಸಿ, “ಕಾಂಗ್ರೆಸ್ ನಾಯಕರು ನೆಮ್ಮದಿಯಾಗಿ ಆಡಳಿತ ಮಾಡಲಿ. ಒಳ್ಳೆಯ ರೀತಿಯಲ್ಲಿ ಸರ್ಕಾರ ನಡೆಸಿಕೊಂಡು ಹೋಗಲಿ. ನಮಗೆ ಸರ್ಕಾರ ಬೀಳಿಸುವ ಆಲೋಚನೆ ಇಲ್ಲ. ಆದರೆ ಈಗ ಕಾಂಗ್ರೆಸ್​ನವರೇ ಸರ್ಕಾರ ಬೀಳಿಸಲು ಕೈ ಹಾಕಿದ್ದಾರೆ. ದೇವಾನುದೇವತೆಗಳು ನಮಗೆ ತಥಾಸ್ತು ಅಂದರೆ ನಾವಂತೂ ಸುಮ್ಮನಿರಲ್ಲ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಭಾರತದ ಹಸಿದ ಹೊಟ್ಟೆಗಳು ಹೇಳುತ್ತಿರುವ ಕುಬೇರರ ಕಥೆ

ರಕ್ತದ ಬಲಿ‌ ಕೊಡಿ ಅನ್ನೋ ಉದ್ದೇಶನಾ?

ವಿಧಾನಸೌಧದಲ್ಲಿ ರಾಸಾಯನಿಕಯುಕ್ತ ಕುಂಬಳಕಾಯಿ, ಅರಿಶಿನ ಕುಂಕುಮ ಬಳಸದಂತೆ ಸರ್ಕಾರಿ ಆದೇಶ ವಿಚಾರವಾಗಿ ಮಾತನಾಡಿದ ಅವರು, “ಕುಂಬಳಕಾಯಿ ಒಡೆಯುವುದು ತಪ್ಪು, ಕುರಿ, ಕೋಳಿ ಕಡಿಯಿರಿ ಅಂತ ಆದೇಶ ಇರಬೇಕು. ಅವರು ಹೊರಡಿಸಿರುವ ಆದೇಶ ಮಿಸ್ಟೇಕ್ ಆಗಿದೆ” ಎಂದರು.

“ಕೆಂಗಲ್ ಹನುಮಂತಯ್ಯ ಕಟ್ಟಿದ ವಿಧಾನಸೌಧಕ್ಕೆ ದೀಪ ಹಚ್ಚಿ, ಕುಂಬಳಕಾಯಿ ಒಡೆದೇ ಪ್ರವೇಶ ಮಾಡಿದ್ದರು. ಆ ಜಾಗದಲ್ಲೇ ಇವತ್ತು ಅರಿಶಿನ ಕುಂಕುಮ ಬೇಡ, ಕುಂಬಳಕಾಯಿ ಬೇಡ ಅಂತಾರಲ್ಲಾ ಇವರು? ಕಾಂಗ್ರೆಸ್ ಬಂದಿದೆ, ಕುಂಬಳಕಾಯಿ ಬೇಡ ರಕ್ತದ ಬಲಿ‌ ಕೊಡಿ ಅನ್ನೋ ಉದ್ದೇಶನಾ? ಕೆಂಗಲ್ ಹನುಮಂತಯ್ಯ ತಪ್ಪು ಮಾಡಿದ್ದಾರೆ, ನಾವು ಸರಿ ಮಾಡುತ್ತೇವೆ ಅನ್ನೋದು ಇವರ ಉದ್ದೇಶ ಇರಬೇಕು” ಎಂದು ಕುಟುಕಿದರು.

ಸಿಎಂ ಇಬ್ರಾಹಿಂ ಔಟ್ ಡೇಟೆಡ್

ಸಿಎಂ ಇಬ್ರಾಹಿಂ ಮೂವಿ ಯಾರೂ ನೋಡಲ್ಲ, ಔಟ್ ಡೇಟೆಡ್ ಹೀರೋ ಅವರು. ದೇವೇಗೌಡರು ನನ್ನ ದೇವರು, ಹಾರ್ಟ್, ಕಿಡ್ನಿ, ಕುಮಾರಸ್ವಾಮಿ ನನ್ನ ಉಸಿರು ಅಂತ ಹೇಳಿದ ವ್ಯಕ್ತಿ ಇಬ್ರಾಹಿಂ. ಈಗ ದೇವೇಗೌಡರ ಪಕ್ಷಕ್ಕೆ ವಾರಸುದಾರ ಆಗಲು ಹೋಗುತ್ತಿದ್ದಾರೆ. ದೇವೇಗೌಡರ ಶ್ರಮ, ಪಕ್ಷ ಕಟ್ಟಲು ಹರಿಸಿದ ಬೆವರ ಹನಿ ಎಷ್ಟಿದೆ ಎಲ್ಲರಿಗೂ ಗೊತ್ತು. ಆವತ್ತು ರಾಮಕೃಷ್ಣ ಹೆಗಡೆ ಅವರನ್ನು ಸಸ್ಪೆಂಡ್ ಮಾಡಲು ಇದೇ ಇಬ್ರಾಹಿಂ ತಾನೇ ಕಾರಣ?” ಎಂದು ಹರಿಹಾಯ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...