ಹಾಸನ ಮಣ್ಣಿನ ಹೆಣ್ಣು ಬೇರುಗಳು | ಮಹಿಳಾ ಸಬಲೀಕರಣದ ಆಶಾಕಿರಣಗಳು 

Date:

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ…

ಮಹಿಳಾ ಕಲ್ಯಾಣ ಯೋಜನೆಗಳಲ್ಲಿ ಸ್ವಸಹಾಯ ಸಂಘಗಳು ಅತ್ಯಂತ ಶಕ್ತಿಶಾಲಿ ಕೊಡುಗೆಗಳಾಗಿವೆ. ಈ ಗುಂಪುಗಳು ಸಣ್ಣ ಉಳಿತಾಯದ ಮೂಲಕ ಗ್ರಾಮೀಣ ಮಹಿಳೆಯರ ಸಬಲೀಕರಣ ಹಾಗೂ ಸ್ವಾವಲಂಬಿಗಳನ್ನಾಗಿಸುವ ಮುಖ್ಯ ಗುರಿಯನ್ನಿಟ್ಟುಕೊಂಡು 18 ಅಕ್ಟೋಬರ್ 2000ದಂದು ರಾಷ್ಟ್ರಮಟ್ಟದಲ್ಲಿ ಅನುಷ್ಠಾನಗೊಳಿಸಲಾಯ್ತು. ಆನಂತರ ಕರ್ನಾಟಕದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸುಮಾರು 1.30 ಲಕ್ಷ ಹಾಗೂ ನಗರ ಪ್ರದೇಶದಲ್ಲಿ 10 ಲಕ್ಷ ಸ್ವಸಹಾಯ ಗುಂಪುಗಳನ್ನು ರಾಜ್ಯದ 30 ಜಿಲ್ಲೆಗಳಲ್ಲಿಯೂ ಅಂಗನವಾಡಿ ಕಾರ್ಯಕರ್ತೆಯರ ಸಹಕಾರದಿಂದ ಮೊದಲಿಗೆ ರೂಪಿಸಲಾಯ್ತು. ಹಾಸನ ಜಿಲ್ಲೆಯ ಮಹಿಳೆಯರ ಮಟ್ಟಿಗೆ ಹೇಳುವುದಾದರೆ ಸ್ತ್ರೀಶಕ್ತಿ ಗುಂಪುಗಳು ಆಶಾಕಿರಣಗಳಾಗಿವೆ.

ಈ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ವಿವಿಧೋದ್ದೇಶ ಸಹಕಾರ ಸಂಘದ ಮೂಲಕ ತರಬೇತಿ ನೀಡಲಾರಂಭಿಸಿದವು. ಇದರ ಮೂಲಕ ಸ್ವಸಹಾಯ ಸಂಘಗಳ ಸ್ಥಾಪನೆ ಹಾಗೂ ಅವನ್ನು ಮುಂದುವರಿಸುವ ಕ್ರಮವನ್ನು ಅನುಸರಿಸುತ್ತಾ ಬರಲಾಗಿದೆ. ತನ್ಮೂಲಕ ಗ್ರಾಮೀಣ ಮಹಿಳೆಯರಿಗೆ ಉಳಿತಾಯ ಕಲಿಸುವ ಮತ್ತು ಅವರನ್ನು ಉತ್ತೇಜಿಸಿ ಸಬಲೀಕರಣವನ್ನು ಸಾಧಿಸುವ ಜವಾಬ್ದಾರಿಯನ್ನು ಇಲಾಖೆ ನಿರ್ವಹಿಸುತ್ತಿದೆ. ಅದರಂತೆ ಅಲ್ಲಿಂದ ಇಲ್ಲಿಯವರೆಗೆ ಹಾಸನ ಜಿಲ್ಲೆಯಲ್ಲಿ 6,758 ಸ್ವ ಸಹಾಯ ಸಂಘಗಳು ಅಸ್ತಿತ್ವಕ್ಕೆ ಬಂದಿವೆ. ಇದರಲ್ಲಿ ಒಗ್ಗೂಡಿರುವ ಒಟ್ಟು ಮಹಿಳೆಯರ ಸಂಖ್ಯೆ 1,12,023.

ಇದನ್ನು ಓದಿದ್ದೀರಾ?: ಐತಿಹಾಸಿಕ ಮಹಿಳೆಯರು ಮತ್ತು ಹಾಸನ ಜಿಲ್ಲೆ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದರಲ್ಲಿ ಸಾಮಾನ್ಯ ಮಹಿಳೆಯರ ಸ್ವಸಹಾಯ ಸಂಘಗಳು 82,268ರಷ್ಟು ಇದ್ದರೆ, ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯರ ಸಂಘಗಳು 15,272 ರಚನೆಯಾಗಿವೆ. ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳೆಯರ ಸ್ವಸಹಾಯ ಸಂಘಗಳು 3,694 ರಚನೆ ಆಗಿವೆ. ಈ ಎಲ್ಲಾ ಸ್ವಸಹಾಯ ಗುಂಪುಗಳಿಂದ ಆಗಿರುವ ಸದ್ಯದ ಉಳಿತಾಯದ ಮೊತ್ತ 256.05 ಲಕ್ಷಗಳಾಗಿದೆ ಎಂದರೆ ಇದೇನು ಕಡಿಮೆ ಸಾಧನೆಯಲ್ಲ. ಎಲ್ಲಾ ಸ್ವಸಹಾಯ ಸಂಘಗಳು ಬ್ಯಾಂಕಿಗೆ ಕೂಡಿಕೆ ಆಗಿದ್ದು, ಶೇಕಡ 100ರಷ್ಟು ಮರುಪಾವತಿಯನ್ನು ಮಾಡುತ್ತಿವೆ ಎಂಬುದು ಹೆಮ್ಮೆಯ ವಿಚಾರವಾಗಿದೆ. ನಮ್ಮ ಹೆಣ್ಣುಮಕ್ಕಳ ನೀಯತ್ತಿಗೆ, ಪ್ರಾಮಾಣಿಕತೆಗೆ ಇದೊಂದು ಮಾದರಿ ನಿದರ್ಶನ.

ಈ ಯೋಜನೆಯಲ್ಲಿ ಪ್ರತಿ ಗುಂಪಿಗೆ 5000ಗಳಂತೆ ಸುತ್ತು ನಿಧಿ ಹಾಗೂ 600 ರೂಪಾಯಿಗಳ ಅವಶ್ಯಕ ಕಿಟ್ ಸಾಮಗ್ರಿಗಳನ್ನು ಒದಗಿಸಲಾಗುತ್ತದೆ. 15,000 ರೂಪಾಯಿಗಳಿಂದ ಒಂದು ಲಕ್ಷ ರೂಪಾಯಿಗಳಿಗೂ ಅಧಿಕ ಉಳಿತಾಯ ಮಾಡುವ ಗುಂಪಿಗೆ ತಲಾ 20 ಸಾವಿರ ರೂಪಾಯಿಗಳಂತೆ ಪ್ರೋತ್ಸಾಹಧನ ನೀಡಲಾಗುತ್ತದೆ. ಸ್ತ್ರೀಶಕ್ತಿ ಸ್ವಸಹಾಯ ಸಂಘದವರು ಆಂತರಿಕ ಸಾಲ ಹಾಗೂ ಬ್ಯಾಂಕ್ ಸಾಲವೆಂದು ಎರಡು ವಿಧದಲ್ಲಿ ಸಾಲ ಪಡೆಯಬಹುದು. ಎರಡೂ ಸಾಲಗಳನ್ನು ಮರುಪಾವತಿಸಬೇಕು. ಎಲ್ಲಾ ಸ್ವಸಹಾಯ ಸಂಘಗಳು ಕೂಡ ಬ್ಯಾಂಕಿಗೆ ನೋಂದಾವಣೆ ಆಗಿರುತ್ತವೆ. ಇದುವರೆಗೆ ನಮ್ಮ ಮಹಿಳೆಯರು ಶೇಕಡಾ 100ರಷ್ಟು ಮರುಪಾವತಿಯನ್ನು ಮಾಡುತ್ತಿರುವುದರಿಂದ ಬ್ಯಾಂಕುಗಳು ಇವರಿಗೆ ಮರುಯೋಚನೆಯಿಲ್ಲದೇ ಸಾಲ ನೀಡಲು ಮುಂದಾಗುತ್ತಿವೆ.

ಇದನ್ನು ಓದಿದ್ದೀರಾ?: ಸ್ತ್ರೀ ಲೋಕದ ಅಸ್ಮಿತೆ- ಪದ್ಮಾ ಶ್ರೀರಾಮ್

ಹಾಸನ ಜಿಲ್ಲೆಯ ಎಂಟು ಮುಖ್ಯ ತಾಲೂಕು ಕೇಂದ್ರಗಳಲ್ಲಿ ಪ್ರಸ್ತುತ 6,758 ಸ್ವಸಹಾಯ ಗುಂಪುಗಳಿವೆ. ಅರಸೀಕೆರೆಯಲ್ಲಿ 1,479 ಸ್ವಸಹಾಯ ಸಂಘಗಳು, ಅರಕಲಗೂಡಿನಲ್ಲಿ 819 ಸ್ವಸಹಾಯ ಸಂಘಗಳು, ಆಲೂರಿನಲ್ಲಿ 41 ಸ್ವಸಹಾಯ ಗುಂಪುಗಳು, ಬೇಲೂರಿನಲ್ಲಿ 812 ಸ್ವಸಹಾಯ ಗುಂಪುಗಳು, ಚನ್ನರಾಯಪಟ್ಟಣದಲ್ಲಿ 1,124 ಸ್ವಸಹಾಯ ಗುಂಪುಗಳು, ಹೊಳೆನರಸೀಪುರದಲ್ಲಿ 723 ಸ್ವಸಹಾಯ ಸಂಘಗಳು, ಹಾಸನದಲ್ಲಿ 863 ಸ್ವಸಹಾಯ ಸಂಘಗಳಿದ್ದು… ಎಲ್ಲ ಸಂಘದವರೂ ಮರುಪಾವತಿಯನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ. ಇದರಿಂದ ಬ್ಯಾಂಕಿನ ಆದಾಯದಲ್ಲೂ ಹೆಚ್ಚಳವಾಗಿರುವುದು ಕಂಡು ಬರುತ್ತದೆ. ಬ್ಯಾಂಕಿಗೆ ಇದು ಉತ್ತಮ ವ್ಯವಹಾರವನ್ನು ಕುದುರಿಸುತ್ತದೆ. ಅತ್ಯುತ್ತಮವಾಗಿ ಕೆಲಸ ಮಾಡುವ ಸ್ವ ಸಹಾಯ ಸಂಘಗಳಿಗೆ 5,000 ರೂಪಾಯಿಗಳಂತೆ 5 ಬಾರಿ ಪ್ರೋತ್ಸಾಹಧನ ನೀಡುವ ಯೋಜನೆ ಇರುತ್ತದೆ. ಈ ಪ್ರೋತ್ಸಾಹಧನ ಕನಿಷ್ಠ 5000 ರೂಪಾಯಿಗಳಿಂದ ಗರಿಷ್ಠ 25,000ದವರೆಗೆ ಇರುತ್ತದೆ. ಹೆಣ್ಣುಮಕ್ಕಳಿಗೂ ಇದರಿಂದ ಲಾಭವಾಗುತ್ತದೆ.

ಹಾಸನ ಜಿಲ್ಲೆಯ ಸ್ವಸಹಾಯ ಸಂಘಗಳಿಂದ ದಾಖಲೆ ಪ್ರಮಾಣದಲ್ಲಿ ಉಳಿತಾಯವಾಗಿದ್ದು- 2022-23ನೆಯ ಸಾಲಿನಲ್ಲಿ ಈ ಸಂಘಗಳಿಂದ ಆದ ಒಟ್ಟು ಉಳಿತಾಯ 272 ಕೋಟಿ 34 ಲಕ್ಷ. 2023-24ನೆಯ ಸಾಲಿನಲ್ಲಿ ಆದ ಉಳಿತಾಯ 212 ಕೋಟಿ 82 ಲಕ್ಷ. 2024-25ನೆಯ ಸಾಲಿನಲ್ಲಿ ಆದ ಉಳಿತಾಯ 227 ಕೋಟಿ 50 ಲಕ್ಷ. ಒಟ್ಟು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ಪಡೆದು ಮರುಪಾವತಿ ಮಾಡಿದ ಸಾಲದ ಮೊತ್ತ 277 ಕೋಟಿ 19 ಲಕ್ಷ ಆಗಿರುತ್ತದೆ. ಇವೆಲ್ಲ ಸಣ್ಣ ಅಂಕಿಅಂಶಗಳ ಮೂಲಕ ಜಿಲ್ಲೆಯ ಹೆಣ್ಣುಮಕ್ಕಳ ಉಳಿತಾಯ ಮತ್ತು ಸ್ವಾವಲಂಬನೆಯ ಚಿತ್ರಣವನ್ನು ನೀಡುವ ಪ್ರಯತ್ನ ಇದಾಗಿದೆ. ಜೊತೆಗೆ ಇದು ಜಿಲ್ಲೆಯ ಆರ್ಥಿಕಾಭಿವೃದ್ಧಿಗೆ ಮಹಿಳೆಯರ ಬಹು ದೊಡ್ಡ ಕೊಡುಗೆಯೂ ಹೌದು.

ಇದನ್ನು ಓದಿದ್ದೀರಾ?: ಪೌರಕಾರ್ಮಿಕ ಮಹಿಳೆಯರಿಗೆ ಸಿಗಬೇಕಿದೆ ಘನತೆಯ ಬದುಕು…

ಸ್ತ್ರೀಶಕ್ತಿ ಗುಂಪುಗಳ ಬಲವರ್ಧನೆಗಾಗಿ ವಿವಿಧ ರೀತಿಯ ತರಬೇತಿಯನ್ನು ಪ್ರಾರಂಭದಿಂದಲೇ ಸದಸ್ಯರಿಗೆ ನೀಡಲಾಗುತ್ತಿದ್ದು, ಗುಂಪುಗಳು ತಯಾರಿಸಿದ ವಸ್ತುಗಳಿಗೆ ಮಾರುಕಟ್ಟೆ ಸೌಲಭ್ಯವನ್ನು ಸಹ ಸಣ್ಣ ಪ್ರಮಾಣದಲ್ಲಿ ಒದಗಿಸಲಾಗುತ್ತಿದೆ. ಆದಾಯ ಉತ್ಪನ್ನ ಚಟುವಟಿಕೆಯಲ್ಲಿ ತೊಡಗಿರುವ ಗುಂಪುಗಳಿಗೆ 5,000 ರೂಪಾಯಿಗಳಂತೆ ಪ್ರೋತ್ಸಾಹಧನ ಕೂಡ ನೀಡಲಾಗುತ್ತಿದೆ. ಪ್ರತಿ ವರ್ಷ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ, ಉಳಿತಾಯ ಮತ್ತು ಸಾಲ ಮರುಪಾವತಿ ಮಾಡಿದ ಸ್ತ್ರೀಶಕ್ತಿ ಗುಂಪುಗಳನ್ನು ಗುರುತಿಸಿ- ತಾಲೂಕುವಾರು ಜಿಲ್ಲಾವಾರು ರಾಜ್ಯವಾರು ವಿಭಾಗೀಯ ಮಟ್ಟದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿರುವುದರಿಂದ ಸ್ಪರ್ಧೆ ಉಂಟಾಗಿ, ಗೆಲುವಿಗಾಗಿ ಮಹಿಳಾ ಗುಂಪುಗಳು ಶ್ರಮವಹಿಸಿ ಕಾರ್ಯನಿರ್ವಹಿಸುತ್ತಿವೆ.

2022-23ನೆಯ ಸಾಲಿನಲ್ಲಿ ಹಾಸನ ಜಿಲ್ಲೆಯ 325 ಸ್ವಸಹಾಯ ಸಂಘಗಳಿಗೆ ಅಮೃತ ಕಿರು ಯೋಜನೆ ಅಡಿ 325 ಲಕ್ಷ ಗೌರವಧನ ನೀಡಲಾಗಿದೆ. ಪ್ರತಿ ಗುಂಪಿಗೆ ಒಂದು ಲಕ್ಷ ರೂಪಾಯಿ ಪ್ರೋತ್ಸಾಹಧನ ಮತ್ತು ತರಬೇತಿಯನ್ನು ಸಹ ನೀಡಲಾಗಿದೆ. ಹಾಸನ ಜಿಲ್ಲೆಯ ಮಹಿಳೆಯರು ರಾಜ್ಯಮಟ್ಟದಲ್ಲಿ, ರಾಷ್ಟ್ರಮಟ್ಟದಲ್ಲಿ ಗೌರವಕ್ಕೆ ಭಾಜನರಾಗಿದ್ದಾರೆ ಎಂಬುದು ಹೆಮ್ಮೆಯ ವಿಚಾರ. ಉದಾಹರಣೆಗೆ ನಾಗರತ್ನ ಅಗ್ಗುಂದ, ಉಡಿಸಲಮ್ಮ ಸ್ತ್ರೀಶಕ್ತಿ ಸ್ವಸಹಾಯ ಸಂಘ, ಅರಸೀಕೆರೆ ಇವರು ರಾಷ್ಟ್ರಮಟ್ಟದ ಗೌರವ ಪುರಸ್ಕಾರ ಪಡೆದಿದ್ದಾರೆ. ಗಣಪತಿ ಸ್ವ ಸಹಾಯ ಸಂಘ, ಬಿಕ್ಕೋಡು ಇವರು 2022ರಲ್ಲಿ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ಇನ್ನೂ ಅನೇಕ ಸಂಸ್ಥೆಗಳೂ ಉತ್ತಮ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿವೆ.

ಇದನ್ನು ಓದಿದ್ದೀರಾ?: ದಿಟ್ಟತನದ ಗಟ್ಟಿ ಹೋರಾಟಗಾರ್ತಿ, ಸಾಹಿತಿ- ವಿಜಯಾ ದಬ್ಬೆ

ಹೀಗೆ ಆರ್ಥಿಕ ವ್ಯವಹಾರದಲ್ಲಿ ಬಹುದೊಡ್ಡ ಕೊಡುಗೆ ಜಿಲ್ಲೆಯ ಮಹಿಳೆಯರಿಂದಾಗುತ್ತಿದೆ. ಸ್ವಸಹಾಯ ಸಂಘಗಳು ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಮಹಿಳಾ ವಲಯದಲ್ಲಿ ಉಳಿತಾಯದ ಜಾಗೃತಿ, ಅಪಾರ ಸ್ವಾವಲಂಬನೆ, ಸ್ವಾಭಿಮಾನ ಮೂಡಿಸುವಲ್ಲಿ ಯಶಸ್ವಿಯಾಗಿವೆ. ಅಷ್ಟೇ ಅಲ್ಲದೆ ಆರ್ಥಿಕ ಜಾಗೃತಿ, ಅಸಮಾನತೆಯ ನಿವಾರಣೆ, ಸ್ವ ಅವಲಂಬನೆ, ಸಂಕಷ್ಟ ನಿವಾರಣೆ, ಆತ್ಮವಿಶ್ವಾಸ ಮೂಡಿಸಿ- ನಾಯಕತ್ವ ಮನೋಧರ್ಮ ಬೆಳೆಸುವಲ್ಲಿಯೂ ಯಶಸ್ವಿಯಾಗಿವೆ. ಹಾಗೂ ರಾಷ್ಟ್ರದ, ರಾಜ್ಯದ ಅಭಿವೃದ್ಧಿಗೆ ಹಾಸನದ ಹೆಣ್ಣುಮಕ್ಕಳ ಆರ್ಥಿಕ ಕೊಡುಗೆಯೇನೆಂಬುದನ್ನು ಸ್ಪಷ್ಟವಾಗಿ ಸಾಬೀತುಪಡಿಸಿವೆ. ಆದರೆ ಸ್ತ್ರೀಶಕ್ತಿಗಳ ಉದ್ದೇಶ ಕೇವಲ ಉಳಿತಾಯ ಮತ್ತು ಆರ್ಥಿಕ ಸ್ವಾವಲಂಬನೆ ಮಾತ್ರವಾಗದೇ, ಜೊತೆಗೆ ಇವರ ವ್ಯಕ್ತಿತ್ವ ರೂಪಿಸುವ ಪ್ರಯತ್ನಗಳೆಡೆಗೆ ಮುಂದಿನ ದಿನಗಳಲ್ಲಿ ದೃಷ್ಟಿಹರಿಸಬೇಕಿದೆ. ಒಟ್ಟಾರೆ ನಮ್ಮ ಹಾಸನದ ಸ್ವಸಹಾಯ ಸಂಘಗಳ ಶಕ್ತಿ ಸ್ವರೂಪಿಣಿಯರಿಗೆ ಒಂದು ದೊಡ್ಡ ಸಲಾಂ.

-ವನಜಾಕ್ಷಿ ಬೆಟ್ಟದಾಲೂರು

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...