ವಿವಾಹ ಸ್ವಾತಂತ್ರ್ಯಕ್ಕೆ ಅಡ್ಡಿ ಶಿಕ್ಷಾರ್ಹ ಅಪರಾಧ : ಮರ್ಯಾದೆಗೇಡು ಹತ್ಯೆ ನಿಷೇಧ ಮುಸೂದೆ ಮಂಡನೆ 

Date:

ಮರ್ಯಾದೆಗೇಡು ಹತ್ಯೆ ನಿಯಂತ್ರಣಕ್ಕೆ ಕಠಿಣ ಕಾನೂನ್ನು ತರುವುದಕ್ಕೆ ಇದ್ದ ಒತ್ತಡದ ಹಿನ್ನೆಲೆಯಲ್ಲಿ ರಾಜ್ಯ ವಿಧಾನಸಭೆಯಲ್ಲಿ ಮರ್ಯಾದೆಗೇಡು ಹತ್ಯೆ ನಿಷೇಧ ಕಾಯ್ದೆಯನ್ನು ಮಂಡಿಸಲಾಗಿದೆ. ವಿಶೇಷವಾಗಿ ಇದನ್ನು ʼಇವ ನಮ್ಮವ, ಇವ ನಮ್ಮವʼ ಮಸೂದೆ ಎಂದು ಉಲ್ಲೇಖಿಸಿ ಮಂಡಿಸಲಾಯಿತು. ಜಾತಿ, ಧರ್ಮ, ವರ್ಗ ಮೀರಿ ಪ್ರೀತಿಸಿ ಮದುವೆಯಾಗುವವರನ್ನು ಮರ್ಯಾದೆ ಮತ್ತು ಘನತೆಯ ಹೆಸರಿನಲ್ಲಿ ಹಲ್ಲೆ, ಹತ್ಯೆ ಮಾಡುವ ಹಾಗೂ ಬಹಿಷ್ಕರಿಸುವವರನ್ನು ಕಠಿಣ ಶಿಕ್ಷೆಗೆ ಗುರಿ ಮಾಡುವ ಉದ್ದೇಶದಿಂದ ಈ ಮಸೂದೆಯನ್ನು ಮಂಡಿಸಲಾಗಿದೆ.

ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ʼಮರ್ಯಾದೆʼಯ ಹೆಸರಿನಲ್ಲಿ ನಡೆದ ಕೊಲೆ, ದೌರ್ಜನ್ಯಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಪ್ರೀತಿಸುವ ವೈಯಕ್ತಿಕ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಮರ್ಯಾದೆ, ಸಂಪ್ರದಾಯದ ಹೆಸರಿನಲ್ಲಿ ಹತ್ಯೆ ಮಾಡುವುದನ್ನು ತಡೆಯುವುದಕ್ಕೆ ಕಠಿಣ ಕಾನೂನು ಕ್ರಮ ಜಾರಿಗೆ ತರಬೇಕು ಎಂದು ವಿವಿಧ ಪ್ರಗತಿಪರ ಸಂಘ ಸಂಸ್ಥೆಗಳು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದವು.  

ಇದನ್ನು ಓದಿದ್ದೀರಾ !? : ಹಿರಿಗೌಡರು ಮೋದಿಯೊಂದಿಗೆ ಆಗಿದ್ದು ಎರಡನೇ ಮದುವೆ | ʼಮದುವೆ, ವಿಚ್ಛೇದನʼಗಳಲ್ಲಿ ಸೊರಗಿದ ಜೆಡಿಎಸ್‌!

ಮಸೂದೆಯನ್ನು ಜಾರಿಗೆ ತರುವುದಾಗಿ ಭರವಸೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಸಂಪುಟದಿಂದ ಒಪ್ಪಿಗೆ ಪಡೆದು ವಿಧಾನಸಭೆಯಲ್ಲಿ ʼವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ಮತ್ತು ಮರ್ಯಾದೆ ಹಾಗೂ ಸಂಪ್ರದಾಯದ ಹೆಸರಿನಲ್ಲಿ ಅಪರಾಧಗಳ ಪ್ರತಿಬಂಧಕ ಮತ್ತು ನಿಷೇಧ ಮಸೂದೆ -2026 (ಇವ ನಮ್ಮವ, ಇವ ನಮ್ಮವ) ಮಸೂದೆಯನ್ನು ಅನುಮೋದಿಸಿದರು.

ಅಂತರ್ಜಾತಿಯ ವಿವಾಹಗಳನ್ನು ಮಾನ್ಯ ಮಾಡುವುದರೊಂದಿಗೆ, ಅಂತರ್ಜಾತಿ ಮದುಯಾದವರಿಗೆ ತಾರತಮ್ಯ ಮಾಡುವುದರ ವಿರುದ್ದ ರಕ್ಷಣೆ ಒದಗಿಸುವುದು, ಮರ್ಯಾದೆ ಅಥವಾ ಸಂಪ್ರದಾಯದ ಹೆಸರಿನಲ್ಲಿ ದೌರ್ಜನ್ಯ ಎಸಗುವ, ಹತ್ಯೆ ಮಾಡುವ ಕೃತ್ಯಗಳನ್ನು ತಡೆಯುವುದು, ಮೇಲ್ವಿಚಾರಣಾ ಸಮಿತಿಗಳನ್ನು ರಚಿಸುವುದು, ಪ್ರತಿ ಜಿಲ್ಲೆಗಳಲ್ಲೂ ʼಇವ ನಮ್ಮವ, ಇವ ನಮ್ಮವʼ ವೇದಿಕೆಗಳನ್ನು ರಚಿಸುವುದು ವಿಶೇ಼ಷ ತ್ವರಿತ ನ್ಯಾಯಾಲಯಗಳನ್ನು  ಸ್ಥಾಪನೆ ಮಾಡುವುದು, ಅಪರಾಧಿಗಳಿಗೆ ಐದು ವರ್ಷಗಳಿಗೆ ಕಡಿಮೆ ಇಲ್ಲದಂತೆ ಕಠಿಣ ಶಿಕ್ಷೆ ವಿಧಿಸಲು ಮಸೂದೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...