ಭಾರತೀಯ ಅಂಚೆ ಇಲಾಖೆಯ ಹೊಸ ಸೇವೆ ‘ಜ್ಞಾನ ಅಂಚೆ’ಗೆ ಚಾಲನೆ

Date:

ದೇಶಾದ್ಯಂತ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಪುಸ್ತಕಗಳನ್ನು ದೇಶದ ಮೂಲೆ ಮೂಲೆಗಳ ಪ್ರದೇಶಗಳಿಗೂ ಕೈಗೆಟುಕುವಂತೆ ಮಾಡುವ ಗುರಿಯೊಂದಿಗೆ ಭಾರತೀಯ ಅಂಚೆ ಇಲಾಖೆಯ ಪ್ರಾರಂಭಿಸಿರುವ ಹೊಸ ಸೇವೆ ‘ಜ್ಞಾನ ಅಂಚೆ ‘ಗೆ ಗುರುವಾರ ಬೆಂಗಳೂರಿನ ರಾಜಾಜಿನಗರ ಪ್ರಧಾನ ಅಂಚೆ ಕಚೇರಿಯಲ್ಲಿ ಪಶ್ಚಿಮ ವಿಭಾಗದ ಹಿರಿಯ ಅಂಚೆ ಅಧೀಕ್ಷಕಿ ಯು.ಸೂರ್ಯ ಚಾಲನೆ ನೀಡಿದರು.

ಈ ಸೇವೆಯನ್ನು ಮೇ 1 ರಿಂದ ದೇಶಾದ್ಯಂತ ಎಲ್ಲಾ ಇಲಾಖಾ ಅಂಚೆ ಕಚೇರಿಗಳ ಮೂಲಕ ಲಭ್ಯವಿರುತ್ತದೆ. ಈ ಸೇವೆಯು ವಿಶೇಷವಾಗಿ ದೂರದ ಮತ್ತು ಸೇವಾ ವಂಚಿತ ಪ್ರದೇಶಗಳಲ್ಲಿ ಕಲಿಕಾ ಸಂಪನ್ಮೂಲಗಳನ್ನು ಹೆಚ್ಚು ಲಭ್ಯವಿರುವಂತೆ ಮಾಡುವ ಮೂಲಕ ಶೈಕ್ಷಣಿಕ ಅಂತರವನ್ನು ಕಡಿಮೆ ಮಾಡುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ.

ಈ ಸೇವೆಯು ಆಕರ್ಷಕವಾದ ದರ ನೀತಿಯನ್ನು ಒಳಗೊಂಡಿದ್ದು, 300 ಗ್ರಾಂ ತೂಕದ ಪ್ಯಾಕೆಟ್‌ಗಳಿಗೆ ಕೇವಲ ₹20 ರಿಂದ ಪ್ರಾರಂಭವಾಗುವ ದರಗಳು. 5 ಕಿಲೋಗ್ರಾಂಗಳಷ್ಟು ಭಾರವಾದ ಪ್ಯಾಕೇಜ್‌ಗಳಿಗೆ, ಗರಿಷ್ಠ ಶುಲ್ಕ ₹100 ಆಗಿರುತ್ತದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...