ಶೇ.80ರಷ್ಟು ರೈತರು ಭೂಮಿ ಕೊಡಲ್ಲ ಎನ್ನುವಾಗ ಸಿದ್ದು ಸರ್ಕಾರಕ್ಕೆ ಕಿವಿಯಿಲ್ಲವೇ: ದರ್ಶನ್‌ ಪಾಲ್‌

Date:

2013ರಲ್ಲಿ ಕೆಲವು ರಾಜ್ಯ ಸರಕಾರಗಳು ಭೂಸ್ವಾಧೀನ ಕಾಯಿದೆ ಅಂಗೀಕರಿಸಿವೆ. ಸರಕಾರ ಕೈಗಾರಿಕ ಉದ್ದೇಶಕ್ಕೆ ಸ್ವಾಧೀನ ಮಾಡಿಕೊಳ್ಳಬೇಕಾದರೆ, ಶೇ.70ರಷ್ಟು ಜನ ರೈತರು ಒಪ್ಪಿಗೆ ನೀಡಬೇಕು. ಜೊತೆಗೆ ಜೀವನ ಭದ್ರತೆ ಸೇರಿದಂತೆ ಎಲ್ಲ ಅಂಶಗಳನ್ನು ಒಳಗೊಳ್ಳಬೇಕು ಎಂದು ಹೇಳುತ್ತದೆ. ಆದರೆ, ದೇವನಹಳ್ಳಿಯಲ್ಲಿ ಶೇ.80ರಷ್ಟು ಜನ ಭೂಮಿ ಕೊಡಲ್ಲ ಅಂತ ಬರೆದುಕೊಟ್ಟಿದ್ದಾರೆ. ಸರ್ಕಾರಕ್ಕೆ ಕಿವಿಯಿಲ್ಲವೇ ಎಂದು ಸಂಯಕ್ತ ಕಿಸಾನ್‌ ಮೋರ್ಚಾದ ನಾಯಕ ದರ್ಶನ್‌ ಪಾಲ್‌ ಟೀಕಿಸಿದರು.

ಬೆಂಗಳೂರು ಗ್ರಾಮಾಂತಾರ ಜಿಲ್ಲೆಯ ದೇವನಹಳ್ಳಿಯ ಸಾವಿರಾರು ಜನ ಭೂಸ್ವಾಧೀನವಿರೋಧಿಸಿ 1185 ದಿನಗಳ ಹೋರಾಟಕ್ಕೆ ಬೆಂಬಲ ಘೋಷಿಸಿ ಮಾತನಾಡಿದರು.

“ರೈತರ ಒಪ್ಪಿಗೆ ಇಲ್ಲದೇ ಒಂದಿಂಚು ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗದು. ನಾನು ಸಂಯಕ್ತ ಕಿಸಾನ್‌ ಮೋರ್ಚಾದ ಪರವಾಗಿ ಇಲ್ಲಿನ ರೈತರ ಪರವಾಗಿ ಬಂದಿದ್ದೇನೆ. 2020ನ 20ರಂದು ದೆಹಲಿಯಲ್ಲಿ ಸೇರಿದಂತೆ ರೈತಸಂಘಟನೆಗಳ ಒಕ್ಕೂಟ ಒಂದು ಹೋರಾಟಟ ನಡೆಸಲು ತೀರ್ಮಾನ ಮಾಡುತ್ತದೆ. ಮೋದಿ ಸರಕಾರ ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಲು ಮುಂದಾಗಿತ್ತು. ಕಾನೂನಿನ ವಿರುದ್ಧ 13ತಿಂಗಳ ಸುದೀರ್ಘ ಹೊರಾಟಕ್ಕೆ ಮಣಿದ ಮೋದಿ ಸರಕಾರ ಕೃಷಿ ವಿರೋಧಿ ಕಾನೂನುಗಳನ್ನು ವಾಪಸ್ಸು ಪಡೆದುಕೊಂಡಿತು. ಅದೇ ಉತ್ಸಾಹದಲ್ಲಿ ಈ ಹೋರಾಟವೂ ನಡೆಯುತ್ತಿದೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಮೂರು ವರ್ಷದ ಸುದೀರ್ಘ ಹೋರಾಟ ಎಂದರೆ ಕಡಿಮೆ ಸಮಯವಲ್ಲ. ಈ ಸುದೀರ್ಘ ಹೋರಾಟಕ್ಕೆ ಸಂಯುಕ್ತ ಹೋರಾಟ ಬೆಂಬಲ ನೀಡುತ್ತಿದೆ. ಇದರ ಭಾಗವಾಗಿ ರೈತರು ಒಂದಿಂಚು ಭೂಮಿಯನ್ನು ಕೊಡುವುದಿಲ್ಲ ಎಂದು ಒಗ್ಗಟ್ಟಾಗಿ ನಿಂತಿರುವುದು ಅಭಿನಂದನಾರ್ಹವಾದದ್ದು. ಅಲ್ಲಿ ಇರುವ ಅರ್ಧ ಎಕರೆ, ಒಂದು ಎಕರೆ ಭೂಮಿಯಲ್ಲಿ ರೈತರು ತರಕಾರಿ, ಹಣ್ಣು ಹಂಪಲ ಬೆಳೆಯುತ್ತಿದ್ದಾರೆ. ಅದನ್ನು ಈಗ ಕಿತ್ತುಕೊಳ್ಳಲು ಹೊರಟಿದೆ. ಈಗ ಒಂದಿಂಚು ಭೂಮಿಯನ್ನು ಕೂಡ ಕೊಡುವುದಿಲ್ಲ ಎಂದು ತೀರ್ಮಾನ ಮಾಡಿರುವುದು ಸಂತೋಷ” ಎಂದು ಹೇಳಿದರು.

“ದೆಹಲಿಯ ಗಡಿಗಳಲ್ಲಿ ಸರಕಾರ ಪ್ರತಿಭಟನೆ ಮಾಡುವಾಗ, ಪಂಜಾಬ್‌ನಲ್ಲಿ ಕಾಂಗ್ರೆಸ್‌ ಸರಕಾರ ಇತ್ತು. ಆಗ ಬಿಜೆಪಿ ಸರಕಾರ ರೈತರ ವಿರುದ್ಧ ದಾಳಿ ಮಾಡುತ್ತಿತ್ತು. ಪಂಜಾಬ್‌ ಸರಕಾರ ಎಲ್ಲ ರೀತಿಯಲ್ಲೂ ನೈತಿಕವಾಗಿ, ಹಣಕಾಸಿನ ಮೂಲಕ ಸೇರಿದಂತೆ ಎಲ್ಲ ರೀತಿಯಲ್ಲೂ ಬೆಂಬಲ ನೀಡಿತ್ತು. ಆ ಹೋರಾಟದಲ್ಲಿ 700 ಜನ ರೈತರು ಪ್ರಾಣ ಕಳೆದುಕೊಂಡರು. ಪ್ರಾಣ ಕಳೆದುಕೊಂಡ ರೈತರಿಗೆ ಎಲ್ಲರಿಗೂ ತಲಾ 5 ಲಕ್ಷ ರೂ ಪರಿಹಾರ ಮತ್ತು ಮನೆಗೊಂದು ಸರಕಾರದ ಕೆಲಸ ಕೊಡುತ್ತೇವೆ ಎಂದು ಘೋಷಣೆ ಮಾಡುತ್ತು. ಅದರೆ ಕರ್ನಾಟಕದಲ್ಲಿ ಇಲ್ಲಿನ ಸರಕಾರ ಯಾಕೆ ಹೀಗೆ ಈ ರೀತಿಯಲ್ಲಿ ನಡೆದುಕೊಳ್ಳುತ್ತಿದೆ” ಎಂದು ಪ್ರಶ್ನಿಸಿದರು.

“ಸಿದ್ದರಾಮಯ್ಯ ಸರಕಾರ ಬಿಜೆಪಿ ಯಾವ ಪಾತ್ರವನ್ನು ನಿರ್ವಹಿಸಿತ್ತೋ ಅದೇ ರೀತಿ ಕರ್ನಾಟಕದಲ್ಲಿ ಇದೆ. ಸಂಯುಕ್ತ ಕಿಸಾನ್‌ ಮೋರ್ಚಾ ಸಂಘಟನೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ರೈತರು ಇದ್ದಾರೆ. ಆದುದರಿಂದ ರಾಜ್ಯದಲ್ಲಿ ಈ ಹೋರಾಟಕ್ಕೆ ಸರಕಾರ ಮಣಿದು, ರೈತರ ಭೂಮಿ ಪಡೆದುಕೊಳ್ಳಲ್ಲ ಎಂದು ಘೋಷಣೆ ಮಾಡದಿದ್ದರೆ, ದೇಶಾದ್ಯಂತ ಹೋರಾಟ ಮಾಡಬೇಕಾಗುತ್ತದೆ” ಎಂದು ಎಚ್ಚರಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...