ಪ್ರಿಯಾಂಕ್ ಖರ್ಗೆ ಹಾಗೂ ಅವರ ಕುಟುಂಬದವರನ್ನು ಕೊಲ್ಲುವ ಬೆದರಿಕೆ ಹಾಕುತ್ತಿರುವ ಅಂಧಭಕ್ತರ ಮನಸ್ಥಿತಿ ತಾಲಿಬಾನ್ ಮನಃಸ್ಥಿತಿಯಲ್ಲವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, ಶಾಲಾ ಕಾಲೇಜು ಹಾಗೂ ಸಾರ್ವಜನಿಕ ಸಂಸ್ಥೆಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗೆ ಅವಕಾಶ ಕೊಡಬಾರದು ಎಂಬ ನನ್ನ ಸಹದ್ಯೋಗಿ ಮಿತ್ರ ಪ್ರಿಯಾಂಕ್ ಖರ್ಗೆ ಪತ್ರಕ್ಕೆ ಅಂಧ ಭಕ್ತರು ಜೀವ ಬೆದರಿಕೆ ಒಡ್ಡಿದ್ದಾರೆ. ಪ್ರಿಯಾಂಕ್ ಖರ್ಗೆ ಹಾಗೂ ಅವರ ಕುಟುಂಬದವರನ್ನು ಕೊಲ್ಲುವುದಾಗಿ ಹೇಳಿದ್ದಾರೆ. ಖರ್ಗೆ ಹಾಗೂ ಅವರ ಕುಟುಂಬದವರನ್ನು ಕೊಲ್ಲುವ ಬೆದರಿಕೆ ಹಾಕುತ್ತಿರುವ ಅಂಧಭಕ್ತರ ಮನಸ್ಥಿತಿ ಯಾವುದು.? ಅದು ತಾಲಿಬಾನ್ ಮನಃಸ್ಥಿತಿಯಲ್ಲವೆ? ಎಂದು ಸಚಿವರು ಪ್ರಶ್ನಿಸಿದ್ದಾರೆ.
ಇದನ್ನು ಓದಿದ್ದೀರಾ? ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ತಂಡ ಸಿದ್ದ; ಶುಭಮನ್ ಗಿಲ್‌ಗೆ ನಾಯಕತ್ವ – ತಂಡಕ್ಕೆ ಮರಳಿದ ಕೊಹ್ಲಿ, ರೋಹಿತ್
ಆರ್‌ಎಸ್‌ಎಸ್ ಒಂದು ಜೀವ ಮುಖಿ ಸಂಘಟನೆಯಾಗಿದ್ದರೆ ಯಾಕೆ ಆ ಸಂಘಟನೆಯ ಕಾರ್ಯಕರ್ತರು ಕೇವಲ ಜೀವ ತೆಗೆಯುವ ಮಾತಾಡುತ್ತಾರೆ? ಪಾನ್ಸೋರೆ, ಗೌರಿ ಲಂಕೇಶ್, ಕಲಬುರಗಿಯವರ ಹತ್ಯೆಯಲ್ಲಿ ಯಾಕೆ ನೇರವಾಗಿ ಭಾಗಿಯಾಗುತ್ತಾರೆ? ಗಾಂಧಿ ಕೊಂದ ಗೂಡ್ಸೆಯನ್ನು ಯಾಕೆ ಆರಾಧಿಸುತ್ತಾರೆ..? ಎಂದು ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದರು.
ಆರ್‌ಎಸ್‌ಎಸ್‌ನವರು ಗಾಂಧಿ ಕೊಂದ ಗೂಡ್ಸೆಯ ಪರ ನಿಂತಿದ್ದಾರೆ. ಹಾಗಂದ ಮಾತ್ರಕ್ಕೆ ಗಾಂಧಿ ತತ್ವಕ್ಕೆ ಸಾವು ಬಂದಿಲ್ಲ. ಅದೇ ರೀತಿ ಗೌರಿ ಲಂಕೇಶ್, ಕಲಬುರಗಿ, ಪಾನ್ಸೋರೆ ಹತ್ಯೆಯಾದರು. ಆದರೆ ಅವರು ಪ್ರತಿಪಾದಿಸಿದ ತತ್ವ ಸಿದ್ದಾಂತಕ್ಕೆ ಸಾವು ಬಂದಿಲ್ಲ. ಸೈದಾಂತಿಕವಾಗಿ ಗಟ್ಟಿಯಿದ್ದಾಗ ಯಾವ ಗೊಡ್ಡು ಬೆದರಿಕೆಗಳು ಅಡ್ಡಿಯಾಗುವುದಿಲ್ಲ. ತಾವು ಪ್ರಿಯಾಂಕ್ ಖರ್ಗೆ ಪರವಾಗಿ ನಿಲ್ಲುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು.
ಶಾಲಾ ಕಾಲೇಜು ಹಾಗೂ ಸಾರ್ವಜನಿಕ ಸಂಸ್ಥೆಗಳಲ್ಲಿ RSS ಚಟುವಟಿಕೆಗೆ ಅವಕಾಶ ಕೊಡಬಾರದು ಎಂಬ ನನ್ನ ಸಹದ್ಯೋಗಿ ಮಿತ್ರ @PriyankKharge ಪತ್ರಕ್ಕೆ ಅಂಧ ಭಕ್ತರು ಜೀವ ಬೆದರಿಕೆ ಒಡ್ಡಿದ್ದಾರೆ. ಪ್ರಿಯಾಂಕ್ ಖರ್ಗೆ ಹಾಗೂ ಅವರ ಕುಟುಂಬದವರನ್ನು ಕೊಲ್ಲುವುದಾಗಿ ಹೇಳಿದ್ದಾರೆ.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) October 14, 2025
ಖರ್ಗೆ ಹಾಗೂ ಅವರ ಕುಟುಂಬದವರನ್ನು ಕೊಲ್ಲುವ ಬೆದರಿಕೆ ಹಾಕುತ್ತಿರುವ…





