ಜಾನಪದ ಅಕಾಡೆಮಿ | ಕಲಾವಿದರಿಗೆ ಪ್ರಶಸ್ತಿ ಪ್ರಕಟ; ಸಂಪೂರ್ಣ ಪಟ್ಟಿ

Date:

ಜಾನಪದ ಅಕಾಡೆಮಿಯು ಜಾನಪದ ಪ್ರಶಸ್ತಿ ಪ್ರಕಟಿಸಿದೆ. 30 ಜಿಲ್ಲೆಗಳ 30 ಕಲಾವಿದರಿಗೆ ವಾರ್ಷಿಕ ಗೌರವ ಪ್ರಶಸ್ತಿ, ಇಬ್ಬರಿಗೆ ಜಾನಪದ ತಜ್ಞ ಪ್ರಶಸ್ತಿ, ಐವರಿಗೆ ಪುಸ್ತಕ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್‌, “ಶೀಘ್ರವೇ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ದಿನಾಂಕ, ಸ್ಥಳ ನಿಗದಿ ಮಾಡಲಾಗುವುದು. ಬೆಂಗಳೂರಿನಿಂದ ಹೊರಗೆ ಕಾರ್ಯಕ್ರಮ ಹಮ್ಮಿಕೊಳ್ಳುವ ಉದ್ದೇಶವಿದೆ” ಎಂದು ತಿಳಿಸಿದ್ದಾರೆ.

ವಾರ್ಷಿಕ ಗೌರವ ಪ್ರಶಸ್ತಿಯು ತಲಾ ₹ 25,000, ತಜ್ಞ ಪ್ರಶಸ್ತಿಯು ತಲಾ ₹ 50,000, ಪುಸ್ತಕ ಪ್ರಶಸ್ತಿಯು ತಲಾ ₹ 25,000 ನಗದು, ಸ್ಮರಣಿಕೆ, ಶಾಲು, ಹಾರ, ಫಲತಾಂಬೂಲ ಹೊಂದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ? ಬೀದರ್‌ | ಕರ್ನಾಟಕ ಜಾನಪದ ಅಕಾಡೆಮಿ ಸಹ ಸದಸ್ಯರಾಗಿ ವಿಜಯಕುಮಾರ್‌ ಸೋನಾರೆ ನೇಮಕ

ಜೀ.ಶಂ.ಪ ತಜ್ಞ ಪ್ರಶಸ್ತಿಗೆ ದಕ್ಷಿಣ ಕನ್ನಡದ ಕೆ. ಚಿನ್ನಪ್ಪ ಗೌಡ ಹಾಗೂ ಬಿ.ಎಸ್. ಗದ್ದಗಿಮಠ ತಜ್ಞ ಪ್ರಶಸ್ತಿಗೆ ವಿಜಯನಗರದ ಮಂಜುನಾಥ ಬೇವಿನಕಟ್ಟೆ ಅವರನ್ನು ಆಯ್ಕೆ ಮಾಡಲಾಗಿದೆ.

ದಕ್ಷಿಣ ಕನ್ನಡದ ಲೀಲಾವತಿ (ನಾಟಿವೈದ್ಯೆ), ಉಡುಪಿಯ ಅಪ್ಪಿ (ಜನಪದ ಸೂಲಗಿತ್ತಿ), ಬೆಂಗಳೂರು ನಗರ ಜಿಲ್ಲೆಯ ಕೆ.ಎಂ. ರಾಮಯ್ಯ (ಏಕತಾರಿ, ತಂಬೂರಿ), ಬೆಂಗಳೂರು ಗ್ರಾಮಾಂತರದ ಓಬಮ್ಮ (ಸೋಬಾನೆ), ರಾಮನಗರ ಜಿಲ್ಲೆ ರಂಗಯ್ಯ (ಪಟ ಕುಣಿತ), ಚಿಕ್ಕಬಳ್ಳಾಪುರದ ದೊಡ್ಡಕೂರ್ಲಪ್ಪ (ತಮಟೆ ವಾದನ), ಶಿವಮೊಗ್ಗ ಜಿಲ್ಲೆ ಟೀಕಪ್ಪ (ಡೊಳ್ಳು ಕುಣಿತ) ಅವರಿಗೆ ಪ್ರಶಸ್ತಿ ಘೋಷಿಸಲಾಗಿದೆ.

ತುಮಕೂರು ಜಿಲ್ಲೆಯ ಕದರಮ್ಮ (ಜನಪದ ಹಾಡು), ಚಿಕ್ಕಮಗಳೂರಿನ ನಾಗರಾಜಪ್ಪ ವೈ.ಪಿ. (ಕರಡಿಗೆ ಕಾವ್ಯ), ಕೋಲಾರದ ತೋಪಣ್ಣ ಮಂಚಂಡಹಳ್ಳಿ (ಕೀಲುಕುದುರೆ), ಬಳ್ಳಾರಿಯ ದಳವಾಯಿ ಚಿತ್ತಪ್ಪ (ಜನಪದ ಮಹಾಕಾವ್ಯ), ಹಾವೇರಿಯ ಸಾವಕ್ಕಾ ಓಲೇಕಾರ (ಸೋಬಾನೆ, ಸಂಪ್ರಾದಯ ಪದ), ರಾಯಚೂರಿನ ಶಾಂತಮ್ಮ (ಬುರಕಥೆ), ಯಾದಗಿರಿಯ ಅಮಯ್ಯಸ್ವಾಮಿ ಹಿರೇಮಠ (ಭಜನೆ) ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಇದನ್ನು ಓದಿದ್ದೀರಾ? ಕಲಬುರಗಿ | ಅಸ್ಪೃಶ್ಯತೆಯ ಕಾರಣದಿಂದ ಜಾನಪದ ಕಲೆಗಳು ನಶಿಸುತ್ತಿವೆ: ಪ್ರೊ. ದಯಾನಂದ ಅಗಸರ

ಉತ್ತರ ಕನ್ನಡದ ಈರಯ್ಯ ಮೊಗೇರ (ಕಾರಿನ್‌ಮನೆ ಕುಣಿತ, ಹೌಂದೇರಾಯನ ಕುಣಿತ), ಕೊಪ್ಪಳದ ರೇವಣಪ್ಪ (ಡೊಳ್ಳಿನ ಹಾಡು, ಕುಣಿತ), ಧಾರವಾಡದ ರಾಮಪ್ಪ ಬಸವಂತಪ್ಪ ಮೂಲಗಿ (ಹಂತಿಪದ), ಮೈಸೂರಿನ ಗುರುಸಿದ್ದಯ್ಯ (ತಂಬೂರಿಪದ), ಬೆಳಗಾವಿಯ ಶಿವನಪ್ಪ ಚಂದರಗಿ (ಡೊಳ್ಳುಕುಣಿತ), ಗದಗದ ಬಸಪ್ಪ ಹಡಗಲಿ (ಗೀಗೀ ಪದ) ಅವರಿಗೆ ವಾರ್ಷಿಕ ಗೌರವ ಪ್ರಶಸ್ತಿ ಘೋಷಿಸಲಾಗಿದೆ.

ಮಂಡ್ಯದ ಗುರುಬಸವಯ್ಯ (ತಂಬೂರಿಪದ), ಕಲಬುರಗಿ ಅಕ್ಕಮ್ಮ (ಸಂಪ್ರದಾಯ ಪದ), ಬೀದರ್‌ನ ಏಸಪ್ಪಾ (ಶಹನಾಯಿ), ವಿಜಯಪುರದ ಇಮಾಂಬಿ ಇಮಾಮಸಾಬ (ತತ್ವಪದ), ಬಾಗಲಕೋಟೆಯ ಹನಮಂತ ವೆಂಕಪ್ಪ ಸುಗತೇಕರ (ಗೊಂದಳಿಪದ), ಚಾಮರಾಜನಗರದ ಗೌರಮ್ಮ (ಸೋಬಾನೆಪದ), ದಾವಣಗೆರೆ ಜಿಲ್ಲೆಯ ಕಾಟಮ್ಮ (ಕಥನ ಕಾವ್ಯ), ಹಾಸನದ ವೀರಭದ್ರಯ್ಯ (ತತ್ವಪದ), ಚಿತ್ರದುರ್ಗದ ಸಿರಿಯಮ್ಮ (ಮಹಾಕಾವ್ಯ), ಕೊಡಗು ಜಿಲ್ಲೆಯ ದೇವಕಿ ಕೆ.ಸಿ. (ಊರ್ಟಿಕೋಟ್) ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

janapada award

ಪುಸ್ತಕ ಪ್ರಶಸ್ತಿ ಘೋಷಣೆ

2022ರ ಸಾಲಿನಲ್ಲಿ ಬೆಂಗಳೂರು ಬಿ.ಎಸ್. ಸ್ವಾಮಿ ಅವರ ‘ಜಾನಪದ ಲೇಖನ ಗುಚ್ಚ’, ಕುರುವ ಬಸವರಾಜು ಅವರ ‘ಭೌತಿಕ ವಸ್ತು ವಿಜ್ಞಾನ ಜಾನಪದ ಮತ್ತು ವಸ್ತು ಸಂಗ್ರಹಾಲಯಗಳ ಕುರಿತ ಲೇಖನಗಳು’, ನಾಗ ಎಚ್. ಹುಬ್ಬಿ ಜಾರ್ಖಂಡ್ ಅವರ ‘ಆದಿವಾಸಿ ಸಂಸ್ಕೃತಿ’, 2023ನೇ ಸಾಲಿನಲ್ಲಿ ಮೈಸೂರಿನ ವ.ನಂ. ಶಿವರಾಮು ಅವರ ‘ಜನಪದ-ಜಾನಪದ ಮತ್ತು ಕ್ಷೇತ್ರಕಾರ್ಯ’ ಬೆಂಗಳೂರಿನ ವಿಜಯಶ್ರೀ ಸಬರದ ಅವರ ‘ಸಬರದ ಮತ್ತು ಜಾನಪದ’ ಕೃತಿಗಳನ್ನು ಪುಸ್ತಕ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...