ಕೊಲೆಯತ್ನ ಆರೋಪದಡಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಅವರನ್ನು ನೆಲೋಗಿ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.
ಜೇವರ್ಗಿ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ನಾಟಿ ಔಷಧಿ ಕೊಡುತ್ತಿದ್ದ ರಶೀದ್ ಮುತ್ಯಾ ಎಂಬಾತನ ಬಂಧನಕ್ಕೆ ಆಗ್ರಹಿಸಿ ಮಣಿಕಂಠ, ಜೇವರ್ಗಿ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ರಶೀದ್ ಬೆಂಬಲಿಗರೊಂದಿಗೆ ವಾಗ್ವಾದ ನಡೆಸಿ ಗಲಾಟೆ ಮಾಡಿದ್ದರು.
ರಶೀದ್ ದಸ್ತಗೀರ್ ಇನಾಮದಾರ ಮುತ್ಯಾ ಹಾಗೂ ಅವರ ಕಾರು ಚಾಲಕ ಜುಬೇರ್, ಭಾಗೇಶ ಎಂಬುವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದಲ್ಲಿ ಜೇವರ್ಗಿ ತಾಲೂಕಿನ ನೆಲೋಗಿ ಪೊಲೀಸರು ತಡರಾತ್ರಿ ಮಣಿಕಂಠ ರಾಠೋಡ್ ಅವರನ್ನು ಬಂಧಿಸಿದ್ದಾರೆ.
ರಶೀದ್ ಮುತ್ಯಾ, ಚಾಲಕ ಜುಬೇರ್ ಮತ್ತು ಭಾಗೇಶ ಅವರ ಮೇಲೆ ಹಲ್ಲೆ ನಡೆದಿದ್ದು, ತಕ್ಷಣ ಅವರನ್ನು ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಭಾಗೇಶ ಅವರು ನೀಡಿದ ದೂರಿನ ಅನ್ವಯ ಮಣಿಕಂಠ ರಾಠೋಡ ಅವರನ್ನು ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಅಫಜಲಪುರ ತಾಲ್ಲೂಕಿನ ಶಿರವಾಳ ಕ್ರಾಸ್ ಹತ್ತಿರ ಕಲಬುರಗಿಗೆ ತೆರಳುತ್ತಿದ್ದ ಬಂಧಿಸಿ ಪೊಲೀಸರು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.





