ಆಘಾತಕಾರಿ ಘಟನೆಯೊಂದರಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯ ತಲೆ ಕಡಿದು ಆಕೆಯ ದೇಹವನ್ನು ತುಂಡುತುಂಡಾಗಿ ಕತ್ತರಿಸಿದ ಘಟನೆ ತುಮಕೂರು ಪಟ್ಟಣದಲ್ಲಿ ನಡೆದಿದೆ.
ತುಮಕೂರು ಪಟ್ಟಣದ ಹೊಸಪೇಟೆಯಲ್ಲಿ ಘಟನೆ ನಡೆದಿದ್ದು, ಹತ್ಯೆಯಾದ ಮಹಿಳೆಯನ್ನು 32 ವರ್ಷದ ಪುಷ್ಪಾ ಎಂದು ಗುರುತಿಸಲಾಗಿದೆ. ಆರೋಪಿ ಪತಿಯನ್ನು ಶಿವರಾಮ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ವರದಿಯ ಪ್ರಕಾರ, ಆರೋಪಿ ಶಿವರಾಮ್ ಸೋಮವಾರ ರಾತ್ರಿ ಅಪರಾಧ ಕೃತ್ಯವೊಂದನ್ನೆಸಗಿ ಬಂದಿದ್ದಾನೆ. ಪತ್ನಿಯು ಇದನ್ನು ಪ್ರಶ್ನಿಸಿದಾಗ ಜಗಳ ಶುರುವಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ‘ಧರ್ಮಾಧಿಕಾರಿ’ಗೆ ಅಡ್ಡಬಿದ್ದ ಸರ್ಕಾರ ಸಾರುತ್ತಿರುವ ಸಂದೇಶವೇನು?
ನಂತರ ಜಗಳ ತಾರಕ್ಕೇರಿ ಹೆಂಡತಿಯ ತಲೆ ಕಡಿದ ಆರೋಪಿ ಆಕೆಯ ದೇಹವನ್ನು ಅಡುಗೆ ಮನೆಯಲ್ಲಿ ತುಂಡರಿಸಿದ್ದಾನೆ. ಪುಷ್ಪಾ ಶಿವಮೊಗ್ಗದ ಸಾಗರ ಪಟ್ಟಣದವರಾಗಿದ್ದು, ದಂಪತಿಗಳು 8 ವರ್ಷದ ಮಗುವಿನೊಂದಿಗೆ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದರು.
ಆರೋಪಿಯು ಮರ ಕತ್ತರಿಸುವ ಕಾರ್ಖಾನೆಯಲ್ಲಿ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ. ದಂಪತಿಗಳು ಆಗಾಗ ಜಗಳವಾಡುತ್ತಿದ್ದರು ಎಂದು ಪ್ರಾಥಮಿಕ ವಿಚಾರಣೆಗಳಲ್ಲಿ ತಿಳಿದುಬಂದಿದೆ.





