ಶೂದ್ರ ಶ್ರೀನಿವಾಸ್, ಪ್ರತಿಭಾ ನಂದಕುಮಾರ್ ಸೇರಿ ಆರು ಮಂದಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Date:

ಕರ್ನಾಟಕ ಸಾಹಿತ್ಯ ಅಕಾಡೆಮಿಯು 2024ನೇ ಸಾಲಿನ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಗೌರವ ಹಾಗೂ ಸಾಹಿತ್ಯಶ್ರೀ ಪ್ರಶಸ್ತಿಗೆ 15 ಜನರನ್ನು ಆಯ್ಕೆ ಮಾಡಲಾಗಿದೆ.

ಗೌರವ ಪ್ರಶಸ್ತಿಗೆ ಎಂ. ಬಸವಣ್ಣ(ಚಾಮರಾಜನಗರ), ಶೂದ್ರ ಶ್ರೀನಿವಾಸ್, ಪ್ರತಿಭಾ ನಂದಕುಮಾರ್ (ಬೆಂಗಳೂರು), ಡಿ.ಬಿ.ನಾಯಕ್ (ಕಲಬುರಗಿ), ವಿಶ್ವನಾಥ್ ಕಾರ್ನಾಡ್ (ಮುಂಬಯಿ) ಅವರನ್ನು ಆಯ್ಕೆ ಮಾಡಲಾಗಿದೆ.

‘ಸಾಹಿತ್ಯಶ್ರೀ’ ಪ್ರಶಸ್ತಿಗೆಪದ್ಮಾಲಯ ನಾಗರಾಜ್(ಕೋಲಾರ), ಕೆ.ವೈ. ನಾರಾಯಣಸ್ವಾಮಿ (ಬೆಂಗಳೂರು), ಬಿ.ಎಂ ಪುಟ್ಟಯ್ಯ( ಚಿಕ್ಕಮಗಳೂರು), ‌ ಬಿ.ಯು.ಸುಮಾ (ತುಮಕೂರು), ಮಮತಾ ಸಾಗರ(ಶಿವಮೊಗ್ಗ), ಸಬಿತಾ ಬನ್ನಾಡಿ( ಉಡುಪಿ), ಅಬ್ದುಲ್ ಹೈ ತೋರಣಗಲ್ (ಬಳ್ಳಾರಿ), ಗುರುಲಿಂಗಪ್ಪ ಧಬಾಲೆ(ಅಕ್ಕಲಕೋಟೆ), ಡಾ.ಎಚ್.ಎಸ್. ಅನುಪಮಾ (ಉತ್ತರ ಕನ್ನಡ), ಅಮರೇಶ ಯತಗಲ್( ರಾಯಚೂರು) ಅವರನ್ನು ಆಯ್ಕೆ ಮಾಡಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಗೌರವ ಪ್ರಶಸ್ತಿಯು ₹50 ಸಾವಿರ ನಗದು, ಸಾಹಿತ್ಯಶ್ರೀ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನವು ₹25 ಸಾವಿರ ನಗದು ಹಾಗೂ ಫಲಕ ಒಳಗೊಂಡಿದೆ.

‘ನಗರದಲ್ಲಿ ಗುರುವಾರ ನಡೆದ ಅಕಾಡೆಮಿಯ ಸರ್ವಸದಸ್ಯರ ಸಭೆಯಲ್ಲಿ ಪ್ರಶಸ್ತಿಗಳಿಗೆ ಸಾಹಿತಿಗಳು ಹಾಗೂ ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಮೈಸೂರು, ತುಮಕೂರು ಇಲ್ಲವೇ ಬೆಳಗಾವಿಯಲ್ಲಿ ಸದ್ಯವೇ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದು ಅಕಾಡೆಮಿ ಅಧ್ಯಕ್ಷ ಎನ್‌.ಎಲ್‌.ಮುಕುಂದರಾಜ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸಂವಿಧಾನ ಬದಲಿಸುವ ಸನಾತನಿಗಳ ಹುನ್ನಾರಕ್ಕೆ ವಕೀಲರೇ ದಾಳ

‘ಸಾಹಿತ್ಯ ಅಕಾಡೆಮಿಗೆಸರ್ಕಾರ ವಾರ್ಷಿಕ ₹80 ಲಕ್ಷ ಅನುದಾನ ಒದಗಿಸುತ್ತಿದ್ದು, ಇದರಲ್ಲೇ ಚಟುವಟಿಕೆ ನಡೆಸುತ್ತಿದ್ದೇವೆ. ಇದಲ್ಲದೇ ಬಜೆಟ್‌ನಲ್ಲಿ ಘೋಷಿಸಿದ ಕನ್ನಡ ಭಾರತಿ 150 ಪುಸ್ತಕ ಪ್ರಕಟಣೆಗೆ ₹50 ಲಕ್ಷ, ಸೌಹಾರ್ದ ಕರ್ನಾಟಕ ಕಾರ್ಯಕ್ರಮಕ್ಕೆ ₹ 50 ಲಕ್ಷ ಒದಗಿಸಿದ್ದು, ಈ ಕಾರ್ಯ ಚಟುವಟಿಕೆಗಳನ್ನು ರೂಪಿಸುತ್ತಿದ್ದೇವೆ’ ಎಂದು ಹೇಳಿದರು.

2023ನೇ ವರ್ಷದ ಪುಸ್ತಕ ಬಹುಮಾನ ವಿಜೇತರು

ಕಾವ್ಯ: ಲಕ್ಷ್ಮಣ ವಿ.ಎ(ಕೃತಿ: ಕಾಯಿನ್ ಬೂತ್) ನವಕವಿಗಳ ಪ್ರಥಮ ಸಂಕಲನ‌: ಬಿ.ಎಂ. ಗುರುನಾಥ( ನಕ್ಷತ್ರ ತಬ್ಬಿ ಮಲಗಿದ ಹೊತ್ತು) ಕಾದಂಬರಿ: ಗಂಗಪ್ಪ ತಳವಾರ್ (ಧಾವತಿ) ಸಣ್ಣಕತೆ:ಮಾಧವಿ ಭಂಡಾರಿ ಕೆರೆಕೋಣ(ಗುಲಾಬಿ ಕಂಪಿನ ರಸ್ತೆ) ನಾಟಕ: ಸಾಸ್ವೇಹಳ್ಳಿ ಸತೀಶ್ (ಏಸೂರು ಕೊಟ್ಟರೂ ಈಸೂರು ಕೊಡೆವು) ಲಲಿತ ಪ್ರಬಂಧ:ಸರಸ್ವತಿ ಭೋಸಲೆ (ಕಾಡತಾವ ನೆನಪ) ಪ್ರವಾಸ ಸಾಹಿತ್ಯ: ಡಿ. ವಿ. ಗುರುಪ್ರಸಾದ್(ಮಾಯನ್ನರ ಮಾಯಾನಗರಿ ಮೆಕ್ಸಿಕೋದಲ್ಲೊಂದು ಸುತ್ತು) ಜೀವನ ಚರಿತ್ರೆ/ಆತ್ಮಕಥೆ: ಡಾ. ಸಿ. ಚಂದ್ರಪ್ಪ(ಅಶೋಕ ಸತ್ಯ- ಅಹಿಂಸೆಯ ಮಹಾಶಯ) ಸಾಹಿತ್ಯ ವಿಮರ್ಶೆ:ರಂಗನಾಥ ಕಂಟನಕುಂಟೆ(ಓದಿನ ಒಕ್ಕಲು)‌ ಮಕ್ಕಳ ಸಾಹಿತ್ಯ: ಮತ್ತೂರು ಸುಬ್ಬಣ್ಣ(ಮುತ್ತಳ್ಳಿಯ ಅಜ್ಜಿ ಕಥೆಗಳು) ವಿಜ್ಞಾನ ಸಾಹಿತ್ಯ: ಡಾ. ಎಚ್. ಎಸ್. ಮೋಹನ್(ಕಣ್ಣಿನಲ್ಲಿ ಕಂಡ ಮೃತ್ಯುಬಿಂಬ ಮತ್ತು ಇತರ ವೈದ್ಯಕೀಯ ಲೇಖನಗಳು) ಮಾನವಿಕ: ಪ್ರಕಾಶ ಭಟ್ (ಹಳ್ಳಿಗಳನ್ನು ಕಟ್ಟುವ ಕಷ್ಟಸುಖ) ಸಂಶೋಧನೆ:ಕಾಡುಗೊಲ್ಲ ಬುಡಕಟ್ಟು (ಮಲ್ಲಿಕಾರ್ಜುನ ಕಲಮರಹಳ್ಳಿ) ಅನುವಾದ: (ಭಾರತೀಯ ಭಾಷೆಯಿಂದ ಕನ್ನಡಕ್ಕೆ ಅನುವಾದ):ಜೆ.ಪಿ. ದೊಡಮನಿ( ಡಾ. ಬಾಬಾಸಾಹೇಬ ಅಂಬೇಡ್ಕರ (ಜೀವನ ಚರಿತ್ರೆ) ಅಂಕಣ ಬರಹ/ವೈಚಾರಿಕ ಬರಹ: ದೇವು ಪತ್ತಾರ (ಈಶಾನ್ಯೆ ಒಡಲು) ಸಂಕೀರ್ಣ: ಸತೀಶ್ ತಿಪಟೂರು‌( ಮಣ್ಣಿನ ಬಂಡಿಯಲ್ಲಿ ಫುಕುವೋಕಾ) ಲೇಖಕರ ಮೊದಲ ಸ್ವತಂತ್ರ ಕೃತಿ:ಗೋವಿಂದರಾಜು ಎಂ. ಕಲ್ಲೂರು( ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು)

2023ನೇ ವರ್ಷದ ಅಕಾಡೆಮಿಯ ದತ್ತಿ ಬಹುಮಾನ

ಕಾದಂಬರಿ(ಚದುರಂಗ ದತ್ತಿ ಬಹುಮಾನ): ಲತಾ ಗುತ್ತಿ( ಕೃತಿ: ಚದುರಂಗ) ಲಲಿತ ಪ್ರಬಂಧ(ವಿ. ಸೀತಾರಾಮಯ್ಯ ಸೋದರಿ ಇಂದಿರಾ ದತ್ತಿ ಬಹುಮಾನ):ಸುಮಾ ರಮೇಶ್( ಹಚ್ಚೆ ದಿನ್ ಬೆಚ್ಚಗಿನ ನಗೆಯೊಂದಿಗೆ) ಜೀವನಚರಿತ್ರೆ(ಸಿಂಪಿ ಲಿಂಗಣ್ಣ ದತ್ತಿ ಬಹುಮಾನ):ರೂಪ ಹಾಸನ(ಮಹಾಸಂಗ್ರಾಮಿ ಎಸ್. ಆರ್. ಹಿರೇಮಠ) ಸಾಹಿತ್ಯ ವಿಮರ್ಶೆ (ಪಿ. ಶ್ರೀನಿವಾಸರಾವ್ ದತ್ತಿ ಬಹುಮಾನ): ಕಾತ್ಯಾಯಿನಿ ಕುಂಜಿಬೆಟ್ಟು( ಇರವಿನ ಅರಿವು) ಕಾವ್ಯ ಹಸ್ತಪ್ರತಿ (ಚಿ. ಶ್ರೀನಿವಾಸರಾಜು ದತ್ತಿ ಬಹುಮಾನ): ಟಿ. ಜಿ. ಪುಷ್ಪಲತಾ (ಕೇದಿಗೆ) ಅನುವಾದ: (ಎಲ್. ಗುಂಡಪ್ಪ ಮತ್ತು ಶಾರದಮ್ಮ ದತ್ತಿ ಬಹುಮಾನ): ರೋಸಿ ಡಿಸೋಜಾ( ಹೆಚ್.ಡಿ. ದೇವೇಗೌಡರ ಬದುಕು ಮತ್ತು ದುಡಿಮೆ ಕುರಿತ ನೇಗಿಲ ಗೆರೆಗಳು) ಲೇಖಕರ ಮೊದಲ ಸ್ವತಂತ್ರ ಕೃತಿ(ಮಧುರಚೆನ್ನ ದತ್ತಿ ಬಹುಮಾನ): ಅಬ್ಬೂರು ಪ್ರಕಾಶ್( ಕಣ್ಣ ಕನ್ನಡಿಯಲ್ಲಿ) ವೈಚಾರಿಕ/ಅಂಕಣ ಬರಹ(ಬಿ.ವಿ. ವೀರಭದ್ರಪ್ಪ ದತ್ತಿ ಬಹುಮಾನ):ಸುದೇಶ ದೊಡ್ಡಪಾಳ್ಯ(ಈಶಾನ್ಯದ ದಿಕ್ಕಿನಿಂದ) ಕನ್ನಡದಿಂದ ಇಂಗ್ಲಿಷಿಗೆ ಅನುವಾದ(ಅಮೆರಿಕನ್ನಡ ದತ್ತಿನಿಧಿ ಬಹುಮಾನ): ಅನುವಾದಕಿ- ಸುಕನ್ಯಾ ಕನಾರಳ್ಳಿ(ಲವ್‌ ಅಂಡ್‌ ವಾಟರ್‌ ಫ್ಲೋ ಟುಗೆದರ್‌)

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...