ಸಿದ್ದರಾಮಯ್ಯನವರೇ, ನಿಮ್ಮ ಮೈಯಲ್ಲಿ ಹಸಿರು ರಕ್ತ ಹರಿಯುತ್ತಿದೆಯಾ: ಕೆ ಎಸ್ ಈಶ್ವರಪ್ಪ ಪ್ರಶ್ನೆ

Date:

  • ನಾವು ಸಹ ಲಾಂಗು ಮಚ್ಚು ಹಿಡಿದಿದ್ದರೆ ಕುರಿ ಕಡಿದು ಹಾಕುವಂತೆ ಕಡಿಯುತ್ತಿದ್ದೆವು
  • ‘ದೇಶದ್ರೋಹಿ ಮುಸಲ್ಮಾನರು ಭಾರತದ ಭೂಪಟಕ್ಕೆ ಹಸಿರು ಬಣ್ಣ ಬಳಿದಿದ್ದಾರೆ’

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ನಿಮ್ಮ ಮೈಯಲ್ಲಿ ಹಸಿರು ರಕ್ತ ಹರಿಯುತ್ತಿದೆಯಾ? ಅಥವಾ ಹಿಂದೂ ರಕ್ತ ಹರಿಯುತ್ತಿದೆಯಾ? ಈ ದೇಶದ ದೇಶದ್ರೋಹಿ ಮುಸಲ್ಮಾನರು ಅಖಂಡ ಭಾರತದ ಭೂಪಟಕ್ಕೆ ಹಸಿರು ಬಣ್ಣ ಬಳಿದಿದ್ದಾರೆ. ನಿಮಗೆ ತಾಕತ್ತಿದ್ದರೆ ಹಸಿರು ಬಣ್ಣ ಆರಿಸಿಕೊಳ್ಳಿ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ನಾಲಿಗೆ ಹರಿಬಿಟ್ಟಿದ್ದಾರೆ.

ಶಿವಮೊಗ್ಗದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, “ಮುಸ್ಲಿಮರಿಗೆ ಸಿದ್ದರಾಮಯ್ಯನವರ ರಕ್ಷಣೆಯಿದೆ. ಡಿಸಿ, ಎಸ್ಪಿ ಅವರೇ ಎಷ್ಟು ದಿನ ಕಾಂಗ್ರೆಸ್ ನ ಗುಲಾಮರಾಗುತ್ತೀರಿ? ಹರ್ಷನ ಕೊಲೆಯಾದಾಗ ನಾವು ಸಹ ಲಾಂಗು ಮಚ್ಚು ಹಿಡಿದಿದ್ದರೆ ಮಾರಿ ಜಾತ್ರೆಯಲ್ಲಿ ಕುರಿ ಕಡಿದು ಹಾಕುವಂತೆ ಹಾಕುತ್ತಿದ್ದೆವು. ಆದರೆ ನಾವು ಅದನ್ನು ಮಾಡಲಿಲ್ಲ. ಓಂ ಚಿತ್ರವನ್ನು ಸಿದ್ದರಾಮಯ್ಯನವರಿಗೆ ತೋರಿಸಬೇಕು. ನಾವು ಈಗ ಶಾಂತಿಯಿಂದ ಸಭೆ ಮಾಡುತ್ತಿದ್ದೇವೆ” ಎಂದರು.

“ಹೇಡಿ ಸಿದ್ದರಾಮಯ್ಯನವರಿಗೆ ರಾಷ್ಟ್ರ ಭಕ್ತ ಹಿಂದೂಗಳ ರಕ್ಷಣೆ ಮಾಡಲಾಗುವುದಿಲ್ಲ. ಏಕರೂಪ ನಾಗರಿಕ ಸಂಹಿತೆ ಜಾರಿ ತರಲು ಹೊರಟರೆ ಕಾಂಗ್ರೆಸ್ ಒಪ್ಪುವುದಿಲ್ಲವಂತೆ. ಈ ಕಾನೂನು ಒಪ್ಪುವುದಾದರೇ ಇಲ್ಲಿ ಇರಿ, ಇಲ್ಲದಿದ್ದರೆ ಪಾಕಿಸ್ತಾನಕ್ಕೆ ಹೋಗಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.‌

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಕೆಂಪುಕೋಟೆ ಮೇಲೆ ಮುಂದೊಂದು ದಿನ ಭಗವಾಧ್ವಜ ಹಾರಿಸುತ್ತೇವೆ ಎಂದಿದ್ದೆ. ಆಗ ಡಿ.ಕೆ ಶಿವಕುಮಾರ್ ಗೆ ಸಿಟ್ಟು ಬಂದಿತ್ತು. ಡಿಕೆ ಶಿವಕುಮಾರ್ ನೀನು ಈಗ ಡಿಸಿಎಂ ಆಗಿರುವುದು. ನಾನು ಆವಾಗಲೇ ಡಿಸಿಎಂ ಆಗಿದ್ದೆ” ಎಂದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪಟಾಕಿ ಎಂಬ ‘ಸಾವಿನ ಫ್ಯಾಕ್ಟರಿ’ಗಳಲ್ಲಿ ಬಡವರ ನಿತ್ಯ ದಹನ

ಆಯುಧದಿಂದ ಉತ್ತರ ಕೊಡೋಣ

ನಮ್ಮ ಸಮಾಜದವರನ್ನು ಮುಟ್ಟಿದರೆ ಅದೇ ಆಯುಧದಿಂದ ಉತ್ತರ ಕೊಡೋಣ. ಮುಸ್ಲಿಂ ಗೂಂಡಾಗಳು ಹರ್ಷನ ಕೊಲೆ ಮಾಡಿದ್ದಾರೆ. ನಿಮ್ಮ ಮಗ ಯತೀಂದ್ರನಿಗೆ ಕೊಲೆ ಮಾಡಿದ್ದರೆ ನಿಮಗೆ ಏನು ಅನಿಸುತ್ತಿತ್ತು? ಡಿಕೆ ಶಿವಕುಮಾರ್ ನಿಮ್ಮ ತಮ್ಮನನ್ನು ಮುಸ್ಲಿಮರು ಕೊಲೆ ಮಾಡಿದ್ದರೆ ಏನು ಅನಿಸುತ್ತಿತ್ತು” ಎಂದು ಖಾರವಾಗಿ ಪ್ರಶ್ನಿಸಿದರು.

ಕನಿಷ್ಠ ಐದು ಮಕ್ಕಳಾದರೂ ಮಾಡಿಕೊಳ್ಳಿ

“ಕನಿಷ್ಠ ಐದು ಮಕ್ಕಳಾದರೂ ಮಾಡಿಕೊಳ್ಳಿ. ನನಗೆ ಐದು ಮಕ್ಕಳು, ಎಂಟು ಮೊಮ್ಮಕ್ಕಳು. ನೀವು ಅಷ್ಟಾದರೂ ಮಾಡಿಕೊಳ್ಳಿ. ಮತ್ತೊಮ್ಮೆ ರಾಘಣ್ಣ ಸಂಸದರಾಗುತ್ತಾರೆ. ನರೇಂದ್ರ ಮೋದಿ ಪ್ರಧಾನಿಯಾಗುತ್ತಾರೆ. ಹಿಂದೂ ಸಮಾಜ ರಕ್ಷಣೆ ಮಾಡುವ ಸರ್ಕಾರ ಬರುತ್ತದೆ. ಪ್ರತಿಬೂತ್ ನಲ್ಲಿ ಪ್ರಧಾನಿ ನೆನಪು ಮಾಡಬೇಕು” ಎಂದು ಕರೆ ನೀಡಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...