ವೈರುಧ್ಯ ಒಂದಾಗಿಸಿ ತಾತ್ವಿಕತೆ ಕಟ್ಟಿದವರು ಕುವೆಂಪು : ಬರಗೂರು ರಾಮಚಂದ್ರಪ್ಪ

Date:

ಜಾತ್ಯತೀತ ಪದವನ್ನು ಇಂದು ಅಲ್ಲಗಳೆಯುತ್ತಾರೆ. ಆದರೆ ಕಾವ್ಯದ ಮೂಲಕ ಜಾತ್ಯತೀತತೆಯನ್ನು ಕುವೆಂಪು ಕಟ್ಟಿದರು…

ವೈರುಧ್ಯಗಳನ್ನು ಒಂದಾಗಿಸಿ ಕುವೆಂಪು ಅವರು ತಾತ್ವಿಕತೆಯನ್ನು ಕಟ್ಟಿದರು ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ಬೆಂಗಳೂರು ಸರ್ಕಾರಿ ಕಲಾ ಕಾಲೇಜಿನ ಸಹಯೋಗದಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ವತಿಯಿಂದ ಕಾಲೇಜಿನ ಬಾಪೂಜಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ “ಕುವೆಂಪು ವಿಚಾರಗೋಷ್ಠಿ ಮತ್ತು ಡಾ.ಜಿ.ಎನ್.ಉಪಾಧ್ಯ ಅವರ ’ಕುವೆಂಪು: ವಿಚಾರ ಸಾಹಿತ್ಯ ನಿರ್ಮಾಪಕರು’ ಕೃತಿ ಬಿಡುಗಡೆ ಕಾರ್ಯಕ್ರಮ”ದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸಾಮಾಜಿಕವೂ, ಆಧ್ಯಾತ್ಮಿಕವೂ, ವೈಜ್ಞಾನಿಕವೂ ಆದ ವಿಚಾರಧಾರೆಯನ್ನು ಕುವೆಂಪು ಕಟ್ಟಿದರು. ಈ ಮೂರಕ್ಕೂ ಸಂಬಂಧವಿಲ್ಲ ಎಂದು ನಾವು ಭಾವಿಸುತ್ತೇವೆ. ಆದರೆ ಮೂರು ವೈರುಧ್ಯಗಳನ್ನು ಒಂದಾಗಿಸಿದವರು ಕುವೆಂಪು ಎಂದು ಬಣ್ಣಿಸಿದರು.

ಆಧ್ಯಾತ್ಮಿಕತೆ ಎಂದರೆ ದೇವರು, ಧರ್ಮದ ವೈಭವೀಕರಣ ಅಲ್ಲ. ಅದಕ್ಕೆ ಬೇರೆ ಆಯಾಮವಿದೆ. ಶೂದ್ರ ತಪಸ್ವಿ, ಜಲಗಾರ ನಾಟಕಗಳು ಇದಕ್ಕೆ ಸಾಕ್ಷಿ. ರೈತನಲ್ಲಿ, ಕಸ ಗುಡಿಸುವವನಲ್ಲಿ, ಶ್ರಮ ಜೀವಿಗಳಲ್ಲಿ ದೇವರು ಇದ್ದಾನೆ ಎಂದವರು ಕುವೆಂಪು. ಈ ಜನರಲ್ಲಿ ದೇವರನ್ನು ಕಂಡು ಆಧ್ಯಾತ್ಮಿಕತೆಗೆ ಸಾಮಾಜಿಕ ಆಯಾಮ ನೀಡಿದರು ಎಂದು ಸ್ಮರಿಸಿದರು.

ಆಧ್ಯಾತ್ಮಿಕತೆ ಮೂಲಕ ಸಾಂಸ್ಥಿಕ ಧರ್ಮದ ಬಗ್ಗೆ ಅವರು ಹೇಳಲಿಲ್ಲ. ಇವರ ದೃಷ್ಟಿಯ ಆಧ್ಯಾತ್ಮಿಕತೆಯೇ ಬೇರೆಯಾಗಿತ್ತು. ಹೀಗಾಗಿ ವೈಜ್ಞಾನಿಕ ಚಿಂತನೆ ಇಲ್ಲಿ ಕಾಣುತ್ತದೆ. ರಾವಣನಿಗೆ ರಾಮತ್ವವನ್ನು ರಾಮಾಯಣ ದರ್ಶನಂ ನೀಡಿತು. ಇದೆಲ್ಲವನ್ನು ಅರ್ಥ ಮಾಡಿಕೊಂಡರೆ ಭಾವೋವೇಶಕ್ಕೆ, ದ್ವೇಶಕ್ಕೆ ಒಳಗಾಗದ ವೈಚಾರಿಕತೆ ದಕ್ಕುತ್ತದೆ ಎಂದು ತಿಳಿಸಿದರು.

ನಾಡಗಿತೆಯನ್ನು ಹಾಡುತ್ತೇವೆ. ಆದರೆ ಅದರ ಆಶಯವನ್ನು ಅನುಸರಿಸಿದರೆ ಮಾತ್ರ ನಾವು ಪ್ರಜಾಪ್ರಭುತ್ವ, ಸೌದಾರ್ಹತೆ, ಒಕ್ಕೂಟ ವ್ಯವಸ್ಥೆಯನ್ನು ಗೌರವಿಸಿದಂತೆ. ಧಾರ್ಮಿಕ ಮೂಲಭೂತವಾದ ಇಂದು ವಿಜೃಂಭಿಸುತ್ತಿದೆ. ಯಾವುದೇ ಧರ್ಮದ ಮೂಲಭೂತವಾದ ಖಂಡನೀಯ. ದ್ವೇಷೋತ್ಪಾದನೆ, ಭಯೋತ್ಪಾದನೆಯ ಕಾಲದಲ್ಲಿ ಕುವೆಂಪು ಅವರು ಸಾರಿದ ಸರ್ವಜನಾಂಗ ಶಾಂತಿಯ ತೋಟ ಎಂಬ ಮಾತು ಮುಖ್ಯವಾಗುತ್ತದೆ ಎಂದರು.

ಜಾತ್ಯತೀತ ಪದವನ್ನು ಇಂದು ಅಲ್ಲಗಳೆಯುತ್ತಾರೆ. ಆದರೆ ಕಾವ್ಯದ ಮೂಲಕ ಜಾತ್ಯತೀತತೆಯನ್ನು ಕುವೆಂಪು ಕಟ್ಟಿದರು. ಅವರು ಬರೆದ ನಾಡಗೀತೆ ಒಕ್ಕೂಟ ವ್ಯವಸ್ಥೆಯ ಪ್ರತಿರೂಪವಾಗಿದೆ. ಭಾರತ ಜನನಿಯ ತನುಜಾತೆ ಎಂಬುದು ಒಕ್ಕೂಟದ ಪ್ರತಿರೂಪವಾಗಿದೆ. ಏಕತ್ವದಲ್ಲಿ ಅನೇಕತ್ವ, ಅನೇಕತ್ವದಲ್ಲಿ ಏಕತ್ವ ಇರುವುದೇ ಒಕ್ಕೂಟ ಪದ್ಧತಿ. ಇದನ್ನು ಕುವೆಂಪು ಪ್ರತಿಪಾದಿಸಿದರು. ಅರಮನೆಯಲ್ಲಿರುವ ರಾಜ ಪುತ್ರನಿಗೆ ಪಾಠ ಮಾಡಲು ಅವರನ್ನು ಆಹ್ವಾನಿಸಲಾಯಿತು. ಆದರೆ ಕುವೆಂಪು ಅವರು ಅರಮನೆಗೆ ಹೋಗಿ ಪಾಠ ಮಾಡಲಲ್ಲ. ಬೇಕಿದ್ದರೆ ಬಂದು ಕ್ಲಾಸ್ ರೂಮ್‌ಗೆ ಕೂತು ಕೇಳಲಿ ಎಂದರು. ಅರಸನಾದರೂ ಒಂದೇ, ಸಾಮಾನ್ಯನಾದರೂ ಒಂದೇ ಎಂಬುದು ಅವರು ಸಾರಿದ ಪ್ರಜಾಸತ್ತಾತ್ಮಕ ಮೌಲ್ಯವಾಗಿತ್ತು ಎಂದು ವಿವರಿಸಿದರು.

ಕುವೆಂಪು ಅವರು ಬ್ರಾಹ್ಮಣದ್ವೇಷಿಯಾಗಿದ್ದರು ಎಂಬಂತೆ ನೋಡುತ್ತಾರೆ. ಅವರು ಯಾವ ಜಾತಿಯನ್ನೂ ದ್ವೇಷಿಸಲಿಲ್ಲ. ವೈದಿಕಶಾಹಿ, ಪುರೋಹಿತಶಾಹಿ ವ್ಯವಸ್ಥೆಯನ್ನು ಟೀಕಿಸಿದರು. ಪುರೋಹಿತಶಾಹಿ ಮನಸ್ಥಿತಿ ಬ್ರಾಹ್ಮಣರನ್ನು ಒಳಗೊಂಡು, ಶೂದ್ರರಲ್ಲೂ ಇದೆ. ಬ್ರಾಹ್ಮಣರನ್ನು ವಿರೋಧಿಸಿದ್ದರು ಎನ್ನುವುದಾದರೆ ಅವರೇಕೆ ರಾಮಾಯಣ ದರ್ಶನಂ ಮಹಾಕಾವ್ಯವನ್ನು ಬ್ರಾಹ್ಮಣ ಗುರು ಟಿ.ಎಸ್.ವೆಂಕಣ್ಣಯ್ಯ ಅವರಿಗೆ ಅರ್ಪಿಸಿದರು ಎಂದು ಪ್ರಶ್ನಿಸಿದರು.

ಶೂದ್ರ ತಪಸ್ವಿಯನ್ನು ದೊಡ್ಡ ದೊಡ್ಡ ಸಾಹಿತಿಗಳೇ ಟೀಕಿಸಿದರು. ಮೂರನೇ ಮುದ್ರಣದ ವೇಳೆ ಕುವೆಂಪು ಅವರು ಅದಕ್ಕೆ ಪ್ರತಿಕ್ರಿಯೆ ಬರೆದರು. ಈ ಕೃತಿಗೆ ಬಂದಿರುವ ಹೊಗಳಿಕೆ ಮತ್ತು ತೆಗಳಿಕೆ ಎರಡಕ್ಕೂ ಬ್ರಾಹ್ಮಣರ ವಿರೋಧ ಎಂದು ಭಾವಿಸಿರುವವರು ಈ ಕೃತಿಯನ್ನು ಅರ್ಥಮಾಡಿಕೊಂಡಿಲ್ಲ. ಯಾವುದೇ ಸಮುದಾಯದಲ್ಲಿ ಹುಟ್ಟಿದವನೂ ತಪ್ಪಸ್ಸಿಗೂ, ಎಲ್ಲ ಸ್ವತಂತ್ರಕ್ಕೂ ಅರ್ಹ ಎಂದು ಈ ಕೃತಿಯಲ್ಲಿ ಹೇಳಿದ್ದೇನೆ ಎಂದು ಕುವೆಂಪು ಸ್ಪಷ್ಟಪಡಿಸಿರುವುದನ್ನು ಬರಗೂರು ಉಲ್ಲೇಖಿಸಿದರು.

’ಕುವೆಂಪು ಅವರ ವೈಚಾರಿಕ ಪ್ರಜ್ಞೆ’ ವಿಷಯ ಕುರಿತು ಮಾತನಾಡಿದ ಡಾ.ಬೈರಮಂಗಲ ರಾಮೇಗೌಡ ಅವರು, “ಇದು ಇಂಡಿಯಾವೋ ಭಾರತವೋ? ಎಂದು ಗೊಂದಲ ಆಗುವ ಹಾಗೆ ರಾಜಕೀಯ ಪ್ರೇರಿತವಾದ ಶಕ್ತಿಗಳು, ರಾಜಕಾರಣಿಗಳು ಮಾತನಾಡುತ್ತಿರುವುದನ್ನು ಕಾಣುತ್ತಿದ್ದೇವೆ. ವಿಚಿತ್ರವಾದ, ಆತಂಕಕಾರಿಯಾದ ಬಿಕ್ಕಟ್ಟು ಈ ದೇಶದಲ್ಲಿ ಸೃಷ್ಟಿಯಾಗಿದೆ. ಮುಂದೆ ಈ ದೇಶ ಎತ್ತ ಸಾಗುತ್ತದೆ, ಏನಾಗುತ್ತದೆ ಅನ್ನುವಂತಹ ತಳಮಳ ನಮ್ಮನ್ನು ಕಾಡುತ್ತಿದೆ. ಮುಂದಿನ ದಿನಗಳು ಹೇಗಿರಲಿವೆ, ದೇಶ ಎತ್ತ ಕಡೆ ಸಾಗಲಿದೆ, ರಾಜಕಾರಣಿಗಳು ಏನಾಗಲಿದ್ದಾರೆ ಎಂಬ ಎಚ್ಚರಿಕೆಯನ್ನು ಎಪ್ಪತ್ತು ವರ್ಷಗಳ ಹಿಂದೆಯೇ ಕುವೆಂಪು ಅವರು ನೀಡಿದ್ದರು” ಎಂದು ಉಲ್ಲೇಖಿಸಿದರು.

“ಒಕ್ಕಲಿಗರ ಸಂಘದ ಚುನಾವಣೆ ನಡೆಸುವ ಸಂದರ್ಭದಲ್ಲಿ ಕರಪತ್ರಗಳಲ್ಲಿ ಕುವೆಂಪು ಅವರ ಫೋಟೋ ಹಾಕಿರುತ್ತಾರೆ. ನಿಮ್ಮ ಚುನಾವಣೆಗೂ ಕುವೆಂಪು ಅವರ ಚಿತ್ರಕ್ಕೂ ಏನು ಸಂಬಂಧ? ಎಂದು ಸ್ನೇಹಿತರನ್ನು ಕೇಳಿದೆ. ಕುವೆಂಪು ನಮ್ಮವರು, ಒಕ್ಕಲಿಗರು, ಹಾಗಾಗಿ ಹಾಕಿದ್ದೇವೆ ಎಂದರು. ಕುವೆಂಪು ಅವರ ಒಂದಾದರೂ ಪದ್ಯದ ಸಾಲು ಗೊತ್ತಾ? ನಾನು ಹಿಂದೂ ಅಲ್ಲ ಎಂದು ಕುವೆಂಪು ಹೇಳಿರುವುದು ಗೊತ್ತಾ? ವಿಶ್ವಮಾನವ ಸಂದೇಶವನ್ನು ತಿಳಿದುಕೊಳ್ಳದೆ ಮುಗ್ದತೆಯಿಂದಲೋ ಮೂರ್ಖತನದಿಂದಲೋ ಒಂದು ಜಾತಿಗೆ ಕುವೆಂಪು ಅವರನ್ನು ಸೀಮಿತ ಮಾಡುತ್ತಿದ್ದೀರಿ ಅಂತ ತಿಳಿಸಿದರೂ ಅವರಿಗೆ ಅರ್ಥವಾಗುವುದಿಲ್ಲ ಎಂದು ವಿಷಾದಿಸಿದರು.

ಆದಿ ಚುಂಚನಗಿರಿ ಮಠಾಧೀಶರು ಕುವೆಂಪು ಅವರನ್ನು ಭೇಟಿಯಾಗಲು ಬಂದ ಪ್ರಸಂಗವನ್ನು ಪ್ರಸ್ತಾಪಿಸಿ ಮಾತನಾಡಿದ ಅವರು, “ವೈದಿಕ ಜಗದ್ಗುರುಗಳು ಅನುಸರಿಸಿಕೊಂಡು ಬಂದಿರುವ ಕೆಲವು ಸಾಂಪ್ರದಾಯಿಕ ವಿಧಿಗಳನ್ನು ನೀವು ಅನುಸರಿಸುವುದಾದರೆ (ಉದಾಹರಣೆಗೆ ಅಡ್ಡಪಲ್ಲಕ್ಕಿ, ಕೀರಿಟ ಧಾರಣೆ) ಶೂದ್ರ ಜಗತ್ತು ಈ ಪುರೋಹಿತಶಾಹಿಗಳಿಂದ ಯಾವ ತೆರನಾಗಿ ದಿಕ್ಕು ತಪ್ಪಿತೋ ಅದನ್ನೇ ನೀವು ಮುಂದುವರಿಸುತ್ತಿದ್ದೀರಿ ಎಂದರ್ಥ. ಅದರ ಬದಲಾಗಿ ಆಧ್ಯಾತ್ಮಿಕವಾದ ಶಕ್ತಿಯನ್ನು, ವೈದಿಕಶಾಹಿಗಳು ಸೃಷ್ಟಿ ಮಾಡಿರುವ ಗೊಂದಲಗಳಿಂದ ಬಿಡುಗಡೆ ಮಾಡುವ ದಾರಿಯನ್ನು ನೀವು ತೋರಿಸುವುದಾದರೆ ಈ ಶೂದ್ರ ಜಗತ್ತನ್ನು ನೀವು ಒಂದಿಷ್ಟು ಉದ್ದಾರ ಮಾಡಲು ಸಾಧ್ಯ ಎಂದು ಕುವೆಂಪು ಅವರು ಮಠಾಧೀಶರಿಗೆ ಹೇಳಿದ್ದರು” ಎಂದು ಮಾರ್ಮಿಕವಾಗಿ ನುಡಿದರು.

“ಎಲ್ಲಿಯವರೆಗೆ ಈ ಪುರೋಹಿತಶಾಹಿ ಮಾತುಗಳನ್ನು ಕೇಳಿಕೊಂಡು ಅವರ ಕಾಲುಗಳನ್ನು ತೊಳೆದು, ಅದನ್ನೇ ತೀರ್ಥ ಎಂದು ಭಾವಿಸಿ ಹೊಟ್ಟೆ ಮತ್ತು ತಲೆಗೆ ಹಾಕಿಕೊಳ್ಳುತ್ತೀರೊ ಅಲ್ಲಿಯವರೆಗೂ ನೀವು ಉದ್ಧಾರವಾಗಲ್ಲ ಎಂದು ಕುವೆಂಪು ಎಚ್ಚರಿಸಿದ್ದರು. ಬ್ರಾಹ್ಮಣ ಬ್ರಹ್ಮನ ತಲೆಯಿಂದ ಹುಟ್ಟಿದ್ದು, ಶೂದ್ರರಾದವರು ಕಾಲಿನಿಂದ ಹುಟ್ಟಿದ್ದು ಎಂಬ ಇಲ್ಲಸಲ್ಲದ ಕತೆಯನ್ನು ಪುರಾಣಗಳು ಹೇಳುತ್ತವೆ. ಆ ಕಟ್ಟುಕತೆಗಳನ್ನು ನಿಜ ಎಂದು ನಂಬಿಸಿದ್ದಾರೆ. ನಿಮ್ಮನ್ನು ನಾಯಿಗಳಂತೆ ಕಾಣುತ್ತಿದ್ದಾರೆ. ಅದರಿಂದ ನಾವು ಹೊರಗಡೆ ಬರದಿದ್ದರೆ, ಸ್ವತಂತ್ರವಾಗಿ ಆಲೋಚನೆ ಮಾಡದಿದ್ದರೆ ನೀವು ಉದ್ಧಾರವಾಗಲ್ಲ ಎಂದು ಕುವೆಂಪು ಎಚ್ಚರಿಸಿದ್ದರು” ಎಂಬ ಮಾತನ್ನು ನೆನೆದರು.

‘ಕುವೆಂಪು ಅವರ ಕಾವ್ಯದಲ್ಲಿ ಮಹಿಳೆ’ ಎಂಬ ವಿಷಯದ ಕುರಿತು ಮಾತನಾಡಿದ ಡಾ.ಎಲ್.ಜಿ.ಮೀರಾ ಅವರು, “ಅಲಕ್ಷಿತ ಪಾತ್ರಗಳಿಗೆ ಮಹತ್ವ ಕೊಟ್ಟವರು ಕುವೆಂಪು. ಊರ್ಮಿಳೆ, ಮಂಡೋದರಿ, ಧಾನ್ಯಮಾಲಿನಿ, ಶೂರ್ಪನಖಿ, ಮಂಥರೆ- ಮೊದಲಾದ ಪಾತ್ರಗಳು ಇದಕ್ಕೆ ಉದಾಹರಣೆಯಾಗಿ ನಿಂತಿವೆ” ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಶ್ರೀನಿವಾಸ ನಾಯಕ್, ಬಂಡಾಯ ಸಾಹಿತ್ಯ ಸಂಘಟನೆಯ ಜಿಲ್ಲಾ ಸಂಚಾಲಕರಾದ ಬಿ.ರಾಜಶೇಖರಮೂರ್ತಿ ಉಪಸ್ಥಿತರಿದ್ದರು. ಡಾ.ಪಾಪಣ್ಣ ಕಾರ್ಯಕ್ರಮ ನಿರೂಪಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...