ಜಿಎಸ್‌ಟಿ ಕಡಿತದ ಬೆನ್ನಲ್ಲೇ ನಂದಿನಿ ಉತ್ಪನ್ನಗಳ ಬೆಲೆಯನ್ನು ಕಡಿತಗೊಳಿಸಿದ್ದ ಕರ್ನಾಟಕ ಸಹಕಾರ ಹಾಲು ಉತ್ಪಾದಕ ಮಹಾಮಂಡಳ (ಕೆಎಂಎಫ್) ಇದೀಗ, ಮತ್ತೆ ಬೆಲೆ ಏರಿಕೆ ಮಾಡಿದೆ. ನಂದಿನ ತುಪ್ಪದ ಬೆಲೆಯಲ್ಲಿ ಪ್ರತಿ ಲೀಟರ್‌ಗೆ ಬರೋಬ್ಬರಿ 90 ರೂ. ಹೆಚ್ಚಿಸಿದೆ.
ಇತ್ತೀಚೆಗಷ್ಟೇ, ಕೇಂದ್ರ ಸರ್ಕಾರವು ಜಿಎಸ್‌ಟಿ ದರ ಕಡಿತಗೊಳಿಸಿತ್ತು. ಇದರಿಂದಾಗ, ನಂದಿನಿ ತುಪ್ಪದ ಬೆಲೆಯಲ್ಲಿ ಲೀಟರ್‌ಗೆ 40 ರೂ. ಇಳಿಕೆ ಮಾಡಿ ಕೆಎಂಎಫ್ ಘೋಷಿಸಿತ್ತು. ಜಿಎಸ್‌ಟಿ ಇಳಿಕೆಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುತ್ತಿದ್ದೇವೆ ಎಂದು ಹೇಳಿಕೊಂಡಿತ್ತು.
ಆದರೆ, ಈಗ ನಂದಿನಿ ತುಪ್ಪದ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿದೆ. ಈವರೆಗೆ, ನಂದಿನಿ ತುಪ್ಪ ಕೆ.ಜಿಗೆ 610 ರೂ. ಇತ್ತು. ಈಗ, ಬೆಲೆ ಏರಿಕೆಯಿಂದಾಗಿ, 700 ರೂ.ಗೆ ಏರಿಕೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ದರ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಮಾಡಲಾಗಿದೆ ಎಂದು ಕೆಎಂಎಫ್ ತಿಳಿಸಿದೆ.
ಹೊಸ ದರದಂತೆ ನಂದಿನಿ ತುಪ್ಪದ ಬೆಲೆ;
50ಎಂಎಲ್ – 47 ರೂ.
100 ಎಂಎಲ್ – 75 ರೂ.
200 ಎಂಎಲ್ – 155 ರೂ.
500 ಎಂಎಲ್ – 360 ರೂ.
1 ಲೀಟರ್ – 700 ರೂ.




