ಮುಖ್ಯವಾಹಿನಿಗೆ ನಕ್ಸಲರು: ಕವಿತೆ ಮೂಲಕ ಸ್ವಾಗತದ ಕರೆ ಕೊಟ್ಟ ಅಂಬಣ್ಣ ಅರೋಲಿಕರ್

Date:

ಸಶಸ್ತ್ರ ಹೋರಾಟದಲ್ಲಿ ತೊಡಗಿದ್ದ ಆರು ಮಂದಿ ನಕ್ಸಲ್‌ ಹೋರಾಟಗಾರರು ಬುಧವಾರ ಸರ್ಕಾರದ ಎದುರು ಶರಾಗಲು ನಿರ್ಧರಿಸಿದ್ದಾರೆ. ಆ ಮೂಲಕ, ತಾವು ಮುಖ್ಯವಾಹಿನಿಗೆ ಬಂದು ಪ್ರಜಾತಾಂತ್ರಿಕವಾಗಿ ಹೋರಾಟ ಮುಂದುವರೆಸಲು ಸಜ್ಜಾಗಿದ್ದಾರೆ. ಅವರು ಮುಖ್ಯವಾಹಿನಿಗೆ ಬರುತ್ತಿರುವ ಬಗ್ಗೆ ಹೋರಾಟಗಾರ ಅಂಬಣ್ಣ ಅರೋಲಿಕರ್ ಅವರು ಕವಿತೆ ಬರೆದಿದ್ದಾರೆ. ಪ್ರಜಾತಾಂತ್ರಿಕ ಹೋರಾಟಕ್ಕೆ ಸ್ವಾಗತಿಸಿದ್ದಾರೆ. ಅವರ ಕವಿತೆ ಹೀಗಿದೆ ಕೇಳಿ – ಓದಿ;

ನಾಡಪ್ರೇಮಿಗಳೇ ನಿಮಗಿದೋ
ಜೈಭೀಮ್ …
ಲಾಲ್ ಸಲಾಮ್…

ಕನ್ನಡ ನಾಡಿನ ನೆಲ ಜಲಕ್ಕಾಗಿ ಶಪಥ ಮಾಡಿದಿರಾ ಕಾಮ್ರೇಡ್ಸ್ ..
-ಸಂಘ ಕಟ್ಟಿದಿರಾ..
ಜನರ ಸೈನ್ಯ ಕಟ್ಟಿದಿರಾ..

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಊಳುವವನಿಗೆ ಭೂಮಿಯೆಂದು
ಸರಣಿ ಧರಣಿ ಮಾಡಿದವರು..
ದರ್ಪ ದಮನ ನಡೆಯದೆಂದು ಧೈರ್ಯದಿಂದ ನುಗ್ಗಿದವರು..
-ಸಂವಿಧಾನ ನಮ್ಮದೆಂದು ಸಾರಿ ಹೇಳಿದಿರಾ..
ಜಾರಿಗೆ ಜಿದ್ದು ಮಾಡಿದಿರಾ…

ಆದಿವಾಸಿ ಹಕ್ಕಿಗಾಗಿ ಆತ್ಮಗೌರವ ಘನತೆಗಾಗಿ..
ಸುಲಿಗೆ ಸಹಿಸೋದಿಲ್ಲವೆಂದು..ಸಂಘರ್ಷವೆ ನಮ್ಮ ಸ್ಪೂರ್ತಿಯೆಂದು..
-ಜೀವದ ಹಂಗು ತೊರೆದು ನೀವು
ಚಳುವಳಿ ಕಟ್ಟಿದಿರಾ..
ನೊಂದವರ ಭಂದುಗಳಾದಿರಾ..

ಸಾವು ನೋವು ಸಹಜವೆಂದು
ಸಮ ಸಮಾಜ ಶ್ರೇಷ್ಠವೆಂದು..
ತ್ಯಾಗವಿಲ್ಲದ
ಪಯಣವಿಂದು ತಾರತಮ್ಯ ತಡೆಯದೆಂದು..
-ತಂದೆ ತಾಯಿ ಬಂಧು ಬಳಗವ ತ್ಯಜಿಸಿ ಬಂದವರು,
ತ್ಯಾಗಕೆ ನೀವೇ ವಾರಸರು..

ಜಾತಿಯಿಲ್ಲದ ನಾಡಿಗಾಗಿ ಭೀತಿಯಿಲ್ಲದ ದೇಶಕ್ಕಾಗಿ..
ಶಾಂತಿ ಸಹನೆ ನಮ್ಮದಾಗಲಿ.‌.
ನ್ಯಾಯ ಪ್ರೀತಿ
ಉದಯವಾಗಲಿ..
-ನಾವೂ..‌ನೀವೂ ಸೇರಿ ನಡೆದು ಜಯವ ಗಳಿಸೋಣ..
ಜನಪರ ರಾಜ್ಯವ ಕಟ್ಟೋಣ

ಬುಧವಾರ, ಚಿಕ್ಕಮಗಳೂರಿನ ಮುಂಡಗಾರು ಲತಾ, ವನಜಾಕ್ಷಿ, ದಕ್ಷಿಣ ಕನ್ನಡದ ಸುಂದರಿ, ಕೇರಳದ ಜೀಶ, ತಮಿಳುನಾಡಿನ ವಸಂತ ಕೆ ಮತ್ತು ಆಂದ್ರಪ್ರದೇಶದ ಮಾರೆಪ್ಪ ಅರೋಲಿ ಅವರು ಸರ್ಕಾರದ ಎದುರು ಶರಣಾಗಲಿದ್ದಾರೆ. ಮುಖ್ಯವಾಹಿನಿಗೆ ಬರಲಿದ್ದಾರೆ. ತಮ್ಮ ನಿಲುವು ಮತ್ತು ಹಕ್ಕೊತ್ತಾಯಗಳ ಬಗ್ಗೆ ಸರ್ಕಾರಕ್ಕೆ ಪತ್ರವನ್ನೂ ಬರೆದಿದ್ದಾರೆ.

ಅವರಿಗೆ ಸರ್ಕಾರವು ಶರಣಾಗತಿ ಮತ್ತು ಪುನರ್ವಸತಿಯ ವಿಶೇಷ ಪ್ಯಾಕೇಜ್ ಅಡಿಯಲ್ಲಿ ಸೌಲಭ್ಯಗಳನ್ನು ಒದಗಿಸಲಿದೆ ಎಂದು ಸರ್ಕಾರ ತಿಳಿಸಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...