105 ರಿಂದ 9ಕ್ಕೆ ಇಳಿದ ತೀವ್ರ ಅಪೌಷ್ಟಿಕ ಮಕ್ಕಳ ಸಂಖ್ಯೆ; ಯಶಸ್ಸು ಕಂಡ ಕರ್ನಾಟಕದ EMI ಮಾದರಿ

Date:

ಕರ್ನಾಟಕದಲ್ಲಿ ಜಾರಿಗೆ ಬಂದ ಸಮುದಾಯ ಆಧಾರಿತ ಪೋಷಣಾ ಕಾರ್ಯಕ್ರಮವು ಮಕ್ಕಳ ಅಪೌಷ್ಟಿಕತೆ ವಿರುದ್ಧ ಪರಿಣಾಮಕಾರಿಯಾಗಿ ಯಶಸ್ಸು ಸಾಧಿಸಿದೆ. 105ನೇ ಸ್ಥಾನದಲ್ಲಿದ್ದ ಮಕ್ಕಳ ತೀವ್ರ ಅಪೌಷ್ಟಿಕತೆ ಪ್ರಮಾಣ ಕೇವಲ 9ಕ್ಕೆ ಇಳಿದಿದೆ. ಕಡಿಮೆ ವೆಚ್ಚ, ತಂತ್ರಜ್ಞಾನ ಬಳಕೆ ಮತ್ತು ಪೋಷಕರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ರಾಜ್ಯ ಸರ್ಕಾರ ಜಾರಿಗೆ ತಂದಿದ್ದ EMI ಯೋಜನೆ ಮಕ್ಕಳ ಆರೋಗ್ಯದಲ್ಲಿ ಗಮನಾರ್ಹ ಬದಲಾವಣೆ ತಂದಿದೆ.

ಮಂಗಳೂರಿನ ಎಡ್ವರ್ಡ್ & ಸಿಂಥಿಯಾ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ (ECIPH) ಹಾಗೂ ಯೆನೆಪೋಯ ಡೀಮ್ಡ್ ಟು ಬಿ ಯುನಿವರ್ಸಿಟಿಯ ಸಾರ್ವಜನಿಕ ಆರೋಗ್ಯ ತಜ್ಞರು ನಡೆಸಿದ ಅಧ್ಯಯನದ ಪ್ರಕಾರ, “ಈ ಕಡಿಮೆ ವೆಚ್ಚದ ಹಾಗೂ ತಂತ್ರಜ್ಞಾನ ಆಧಾರಿತ ಯೋಜನೆ, ಮಕ್ಕಳ ಪೋಷಣಾ ಸ್ಥಿತಿಯಲ್ಲಿ ಸ್ಪಷ್ಟ ಸುಧಾರಣೆ ತಂದಿದೆ. ಈ ಅಧ್ಯಯನವನ್ನು “The Malnutrition Turnaround: A Proof of Concept of the End Malnutrition Initiative in Karnataka, India” ಎಂಬ ಶೀರ್ಷಿಕೆಯಡಿ ಜರ್ನಲ್ ಆಫ್ ಫ್ಯಾಮಿಲಿ ಮೆಡಿಸಿನ್ ಅಂಡ್ ಪ್ರೈಮರಿ ಕೇರ್ ಪತ್ರಿಕೆ ಪ್ರಕಟಿಸಿದೆ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ–5 (2019–21) ಪ್ರಕಾರ, ಭಾರತದಲ್ಲಿ ಐದು ವರ್ಷದೊಳಗಿನ ಮಕ್ಕಳಲ್ಲಿ ಅಪೌಷ್ಟಿಕತೆ ದೊಡ್ಡ ಸಾರ್ವಜನಿಕ ಆರೋಗ್ಯ ಸವಾಲಾಗಿದೆ. ದೇಶದ ಶೇ.32.1 ರಷ್ಟು ಮಕ್ಕಳು ಕುಗ್ಗಿದ ಬೆಳವಣಿಗೆಗೆ ಒಳಗಾಗಿದ್ದರೆ, ಶೇ.19.3 ರಷ್ಟು ಮಕ್ಕಳು ತೀವ್ರ ಕಡಿಮೆ ತೂಕದಿಂದ ಬಳಲುತ್ತಿದ್ದಾರೆ. ಕರ್ನಾಟಕದಲ್ಲಿಯೂ ಇದೇ ಪರಿಸ್ಥಿತಿ ಮುಂದುವರಿದಿದ್ದು, ನಗರ–ಗ್ರಾಮೀಣ ಅಂತರಗಳು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿವೆ. ಮೈಸೂರು ನಗರದಲ್ಲಿ ತೂಕ ಕೊರತೆ ಪ್ರಮಾಣ ಶೇ.21.6 ಇದ್ದರೆ, ಯಾದಗಿರಿ ಜಿಲ್ಲೆಯಲ್ಲಿ ನಡೆದ ಪ್ರಾದೇಶಿಕ ಅಧ್ಯಯನದಲ್ಲಿ ಶೇ.53.6 ರಷ್ಟು ಮಕ್ಕಳು ಕುಂಠಿತ ಬೆಳವಣಿಗೆಯನ್ನೂ, ಶೇ.15.3 ರಷ್ಟು ಮಕ್ಕಳು ತೀವ್ರ ಕಡಿಮೆ ತೂಕದ ಸಮಸ್ಯೆಯನ್ನೂ ಎದುರಿಸುತ್ತಿರುವುದು ಬೆಳಕಿಗೆ ಬಂದಿದೆ. ಇದಕ್ಕಿಂತಲೂ ಕಳವಳಕಾರಿ ಸಂಗತಿಯೆಂದರೆ, ಶೇ.10 ಕ್ಕಿಂತ ಹೆಚ್ಚು ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಇದು ಮಕ್ಕಳ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಗೆ ಗಂಭೀರ ಅಪಾಯ ಉಂಟುಮಾಡುತ್ತಿದೆ ಎಂದು ವರದಿ ತಿಳಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಗಂಭೀರ ಪರಿಸ್ಥಿತಿಗೆ ಪ್ರತಿಕ್ರಿಯೆಯಾಗಿ ECIPH ಸಂಸ್ಥೆ “ಎಂಡ್ ಮಾಲ್ನ್ಯೂಟ್ರಿಷನ್ ಇನಿಶಿಯೇಟಿವ್” (EMI) ಎಂಬ ವಿಶಿಷ್ಟ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿತು. ಈ ಕಾರ್ಯಕ್ರಮವು ಕುಟುಂಬಗಳು ಮತ್ತು ಸಮುದಾಯವನ್ನೇ ಕೇಂದ್ರಬಿಂದುವಾಗಿ ಮಾಡಿಕೊಂಡು ಕಾರ್ಯನಿರ್ವಹಿಸಿದೆ. ಮಕ್ಕಳ ಪೋಷಣೆಯ ಹೊಣೆಗಾರಿಕೆಯನ್ನು ಪೋಷಕರೊಂದಿಗೆ ಹಂಚಿಕೊಳ್ಳುವ ಉದ್ದೇಶದಿಂದ, ಪೋಷಕರು, ಅಂಗನವಾಡಿ ಕಾರ್ಯಕರ್ತರು, ಸ್ವಯಂ ಸೇವಕರು, ಧಾರ್ಮಿಕ ಹಾಗೂ ಸ್ಥಳೀಯ ನಾಯಕರನ್ನು ಸೇರಿಸಿ ತರಬೇತಿಗೊಳಿಸಲಾಯಿತು. ಸ್ಥಳೀಯವಾಗಿ ಸುಲಭವಾಗಿ ಲಭ್ಯವಿರುವ ಪದಾರ್ಥಗಳಿಂದ ಕಡಿಮೆ ವೆಚ್ಚದ ಪೌಷ್ಟಿಕ ಆಹಾರ ತಯಾರಿಸುವ ವಿಧಾನಗಳನ್ನು ಪೋಷಕರಿಗೆ ಕಲಿಸಲಾಯಿತು. ಒಂದೇ ರೀತಿಯ ಆಹಾರ ಪದ್ಧತಿ ಪಾಲನೆಯಾಗುವಂತೆ ಸಮುದಾಯಗಳ ನಡುವೆ ಆಹಾರ ಮೆನುಗಳನ್ನು ಹಂಚಿಕೊಳ್ಳಲಾಯಿತು.

ಈ ಯೋಜನೆಯಲ್ಲಿ ಪೋಷಕರು ತಾವು ತಯಾರಿಸಿದ ಆಹಾರದ ವಿಡಿಯೊಗಳನ್ನು ಹಂಚಿಕೊಂಡರೆ, ಸ್ವಯಂಸೇವಕರು ಮೇಲ್ವಿಚಾರಣೆ ನಡೆಸಿದರು. ಮಕ್ಕಳ ತೂಕವನ್ನು ವಾರಕ್ಕೊಮ್ಮೆ ತಪಾಸಣೆ ಮಾಡಿ ಪ್ರಗತಿಯನ್ನು ದಾಖಲಿಸಲಾಯಿತು. ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಮಕ್ಕಳನ್ನು ಗುರುತಿಸಿ ಅವರಿಗೆ ECIPH ವತಿಯಿಂದ ವಿಶೇಷ ಪೋಷಣಾ ನೆರವು ನೀಡಲಾಯಿತು. ಸಮುದಾಯದ ಪ್ರಭಾವಿ ವ್ಯಕ್ತಿಗಳ ಬೆಂಬಲದಿಂದ ಜನರಲ್ಲಿ ಸ್ವಾಮ್ಯಭಾವನೆ ಮೂಡಿದ್ದು, ಇದು ಯೋಜನೆಯ ಯಶಸ್ಸಿಗೆ ಪ್ರಮುಖ ಕಾರಣವಾಯಿತು.

ಇದನ್ನೂ ಓದಿ: ಈ ದಿನ ಸಂಪಾದಕೀಯ | ‘ಬ್ಯಾಲೆಟ್ ಪೇಪರ್’ ಬಂದರೆ ಎಲ್ಲವೂ ಸರಿಯಾಗುವುದೇ?

ಈ ಕುರಿತು ಮಾತನಾಡಿರುವ ECIPHನ ಸಿಂಥಿಯಾ ಸೆಂಟರ್ ಫಾರ್ ರಿಸರ್ಚ್ ಅಂಡ್ ಪಾಲಿಸಿಯ ಡಾ. ಎಡ್ಮಂಡ್ ಫರ್ನಾಂಡಿಸ್, “ಅಪೌಷ್ಟಿಕತೆ ಸಮಸ್ಯೆ ಕೇವಲ ಆರೋಗ್ಯ ಇಲಾಖೆಯ ಜವಾಬ್ದಾರಿಯಲ್ಲ. ಪೋಷಕರು, ಸಮುದಾಯ ಮತ್ತು ವಿವಿಧ ವಲಯಗಳು ಒಟ್ಟಾಗಿ ಹೊಣೆ ಹೊತ್ತುಕೊಂಡಾಗ ಮಾತ್ರ ಶಾಶ್ವತ ಪರಿಹಾರ ಸಾಧ್ಯ. EMI ಯೋಜನೆ ಸಹಭಾಗಿತ್ವ ಮತ್ತು ಸ್ವಾಮ್ಯಭಾವನೆ ಮೇಲೆ ನಿಂತಿದೆ” ಎಂದು ಹೇಳಿದ್ದಾರೆ.

2022ರ ಜನವರಿಯಲ್ಲಿ 105 ಆಗಿದ್ದ ತೀವ್ರ ಅಪೌಷ್ಟಿಕತೆ ಪ್ರಕರಣಗಳು 2023ರ ಮಾರ್ಚ್ ವೇಳೆಗೆ ಕೇವಲ 9ಕ್ಕೆ ಇಳಿದಿವೆ. ಅದೇ ರೀತಿ, ಮಧ್ಯಮ ಅಪೌಷ್ಟಿಕತೆ ಪ್ರಕರಣಗಳು 2022ರ ಸೆಪ್ಟೆಂಬರ್‌ನಲ್ಲಿ 1,067 ಇದ್ದರೆ, 2023ರ ಮಾರ್ಚ್ ವೇಳೆಗೆ ಸುಮಾರು 300ಕ್ಕೆ ಇಳಿಕೆಯಾಗಿದೆ. ಈ ಅಂಕಿ ಅಂಶಗಳು EMI ಯೋಜನೆಯ ಪರಿಣಾಮಕಾರಿತ್ವವನ್ನು ಸ್ಪಷ್ಟವಾಗಿ ತೋರಿಸುತ್ತವೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...