ಸಚಿವ ಪ್ರಿಯಾಂಕ್ ಖರ್ಗೆ ಕ್ಷೇತ್ರವಾದ ಚಿತ್ತಾಪುರದಲ್ಲಿ ಇತ್ತೀಚೆಗೆ ನಡೆದ ಆರ್‌ಎಸ್‌ಎಸ್ ಪಥಸಂಚಲನ ಮತ್ತು ಭೀಮ್ ಆರ್ಮಿ ಸೇರಿದಂತೆ ವಿವಿಧ ನಡುವಿನ ಜಟಾಪಟಿ ವಿಚಾರಕ್ಕೆ ಸಂಬಂಧಿಸಿದಂತೆ ಬುಧವಾರ (ನ.5) ಬೆಂಗಳೂರಿನಲ್ಲಿ ಎಜಿ ಕಚೇರಿಯಲ್ಲಿ ಶಾಂತಿ ಸಭೆ ನಡೆದಿದೆ.
ಹೈಕೋರ್ಟ್ ಆದೇಶದ ಮೇರೆಗೆ ಶಾಂತಿ ಸಭೆ ನಡೆದಿದೆ. ಈ ವೇಳೆ ಅರ್ಜಿದಾರರು ಪ್ರಸ್ತಾವನೆ ಸಲ್ಲಿಸಿದ್ದು, ನ.13 ಅಥವಾ 16ರಂದು ಪಥಸಂಚಲನಕ್ಕೆ ಅನುಮತಿ ಕೋರಿದ್ದಾರೆ. ಪಥಸಂಚಲನ ವಿಚಾರವಾಗಿ ನಡೆದ ಎರಡನೇ ಶಾಂತಿ ಸಭೆ ಇದಾಗಿದ್ದು, ಅಕ್ಟೋಬರ್ 28ರಂದು ಕಲಬುರಗಿಯಲ್ಲಿ ನಡೆದಿದ್ದ ಮೊದಲ ಸಭೆ ವಿಫಲವಾಗಿತ್ತು.
ಬೆಂಗಳೂರಿನ ಅಡ್ವೊಕೇಟ್ ಜನರಲ್ ಎಜಿ ಶಶಿಕಿರಣ್ ಶೆಟ್ಟಿ ಕಚೇರಿಯಲ್ಲಿ ಅರ್ಜಿದಾರ ಅಶೋಕ್ ಪಾಟೀಲ್, ಹಿರಿಯ ವಕೀಲ ಅರುಣ್ ಶ್ಯಾಮ್, ಕಡ್ಲೂರ್ ಸತ್ಯನಾರಾಯಣಾಚಾರ್ಯ, ಎಜಿ ಶಶಿಕಿರಣ್ ಶೆಟ್ಟಿ, ಕಲಬುರಗಿ ಜಿಲ್ಲಾಡಳಿತದ ಅಧಿಕಾರಿಗಳು ಭಾಗಿಯಾಗಿದ್ದರು. ಅಧಿಕಾರಿಗಳು ಭಾಗಿಯಾಗಿದ್ದರು. ಇಂದಿನ ಸಭೆಯಲ್ಲಾದ ತೀರ್ಮಾನದ ವರದಿಯನ್ನ ನ.7ರಂದು ಹೈಕೋರ್ಟ್ಗೆ ಎಜಿ ತಿಳಿಸಲಿದ್ದಾರೆ.
ಆರ್ ಎಸ್ಎಸ್ ಮುಖಂಡ ಪ್ರಹ್ಲಾದ್ ವಿಶ್ವಕರ್ಮ ಸಭೆಯಲ್ಲಿ ರೂಟ್ ಮ್ಯಾಪ್ ಬಗ್ಗೆ ಮಾಹಿತಿ, ನವೆಂಬರ್ 13 ಅಥವಾ 16 ರಂದು ಪಥಸಂಚಲನ ಮಾಡುವುದಾಗಿ ತಿಳಿಸಿದರು. ಗಣವೇಷಧಾರಿಗಳು ಮಾತ್ರ ಪಥ ಸಂಚಲದಲ್ಲಿ ಭಾಗಿಯಾಗಲಿದ್ದಾರೆ. 850 ಮಂದಿ ಮಾತ್ರ ಗಣವೇಷಧಾರಿಗಾಳು ಮಾತ್ರ ಇರಲಿದ್ದಾರೆ. ಸಂಜೆ 3 ಗಂಟೆಯಿಂದ 6 ಗಂಟೆವರೆಗೆ ಮಾತ್ರ ಪಥಸಂಚಲನ ಮಾಡಲಿದ್ದೇವೆ. ಜೊತೆಗೆ ನಾಲ್ಕು ಲೈನ್ ಪಥಸಂಚಲನದ ಬದಲಿಗೆ ಮೂರು ಲೈನ್ ನಲ್ಲಿ ಹೋಗುತ್ತೇವೆ” ಎಂದು ಹೇಳಿದರು.
“ಹೊರಗಡೆ ಅವರಿಗೆ ಬರಬೇಡಿ ಎಂದು ಸೂಚನೆ ನೀಡಿದ್ದೇವೆ. ನಮಗೆ ಅವಕಾಶ ನೀಡದ ದಿನ ಬೇರೆ ಸಂಘಟನೆಗಳಿಗೆ ಅವಕಾಶ ಕೊಡಬೇಡಿ. ಫಥಸಂಚಲನದಲ್ಲಿ ಕಲಬುರ್ಗಿಯ ಆರ್ ಎಸ್ ಎಸ್ ಕಾರ್ಯಕರ್ತರಿಗೆ ಮಾತ್ರ ಅವಕಾಶ ಕೊಡಿ” ಎಂದು ಎ ಜಿ ಶಶಿಕಿರಣ್ ಶೆಟ್ಟಿ ಅವರಿಗೆ ವಿನಂತಿಸಿದರು.
ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನದ ವಿಚಾರವಾಗಿ ಹೈಕೋರ್ಟ್ ಸೂಚನೆ ಮೇರೆಗೆ ಅಕ್ಟೋಬರ್ 28ರಂದು ಕಲಬುರಗಿಯಲ್ಲಿ 10 ಸಂಘಟನೆಗಳ ಜತೆ ನಡೆದ ಸಾಂತಿಸಭೆ ವಿಫಲವಾಗಿತ್ತು. ಡಿಸಿ ಫೌಜಿಯಾ, SP ಅಡ್ಡೂರು ಶ್ರೀನಿವಾಸಲು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಆರ್‌ಎಸ್‌ಎಸ್ ಹಾಗೂ ಭೀಮ್ ಆರ್ಮಿ ನಡುವೆ ವಾಗ್ವಾದ ನಡೆದಿದ್ದರಿಂದ ಯಾವುದೇ ನಿರ್ಧಾರ ಆಗಿರಲಲ್ಲಿಲ್ಲ. ಈ ವಿಚಾರವಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಕೋರ್ಟ್ ಅಂತಿಮವಾಗಿ ನವೆಂಬರ್ 5ರಂದು ಬೆಂಗಳೂರಿನ ಅಡ್ವೊಕೇಟ್ ಜನರಲ್ ಕಚೇರಿಯಲ್ಲಿ ಮತ್ತೊಂದು ಶಾಂತಿ ನಡೆಸಲು ಸೂಚಿಸಿ ವಿಚಾರಣೆಯನ್ನು ನವೆಂಬರ್ 7ಕ್ಕೆ ಮುಂದೂಡಿತ್ತು.
ಸಭೆಯಲ್ಲಿ ಶಾಂತಿ ಭಂಗ ಉಂಟಾಗಬಹುದು ಎಂಬ ಕಾರಣದಿಂದ ಹಾಗೂ ಉಳಿದ ಸಂಘಟನೆಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸದ ಹಿನ್ನೆಲೆಯಲ್ಲಿ, ಭೀಮ್ ಆರ್ಮಿ ಸೇರಿದಂತೆ ಇತರ 9 ಸಂಘಟನೆಗಳಿಗೂ ಆಹ್ವಾನ ನೀಡಲಾಗಿಲ್ಲ. ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಆರ್‌ಎಸ್‌ಎಸ್ ಮುಖಂಡರಿಗೆ ಮಾತ್ರ ಹಾಜರಾಗುವಂತೆ ತಿಳಿಸಲಾಗಿದೆ. ಸಭೆಯಲ್ಲಿ ಆರ್‌ಎಸ್‌ಎಸ್ ಮುಖಂಡರ ಮತ್ತು ವಕೀಲರ ಲಿಖಿತ ಹೇಳಿಕೆಗಳನ್ನು ಎಜಿ ಮತ್ತು ಜಿಲ್ಲಾಡಳಿತ ಪಡೆದುಕೊಂಡಿದ್ದು, ನ್ಯಾಯಾಲಯಕ್ಕೆ ಸಲ್ಲಿಸಲಿದೆ.





