ಮೌಲ್ಯಾಧಾರಿತ ಶಿಕ್ಷಣಕ್ಕಾಗಿ ʼವಚನ ವಿಶ್ವವಿದ್ಯಾಲಯʼ ಸ್ಥಾಪನೆಗೆ ಯೋಜನೆ: ಇಳಕಲ್‌ ಸ್ವಾಮೀಜಿ

Date:

“ಬುದ್ಧ, ಬಸವ, ಅಂಬೇಡ್ಕರ್‌ ಅವರ ವಿಚಾರಧಾರೆಗಳನ್ನು ಪಸರಿಸಿ ಮಾನವೀಯ ಮೌಲ್ಯಾಧಾರಿತ ಶಿಕ್ಷಣ ನೀಡುವ ಉದ್ದೇಶದಿಂದ ಬಸವಕಲ್ಯಾಣದಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪಿಸಲು ಯೋಜಿಸಲಾಗಿದೆ” ಎಂದು ಇಳಕಲ್‌ ಮಠದ ಗುರುಮಹಾಂತ ಸ್ವಾಮೀಜಿ ಹೇಳಿದರು.

ಇಂದು ಈದಿನ.ಕಾಮ್‌ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, “ವಿದ್ಯಾರ್ಥಿ ದೆಸೆಯಲ್ಲಿಯೇ ಮಕ್ಕಳಿಗೆ ಮಾನವತಾ ಮೌಲ್ಯಗಳು, ವಿಚಾರಗಳೆಡೆ ಆಸಕ್ತಿ ಹುಟ್ಟುವಂತೆ ಭದ್ರ ಬುನಾದಿ ಹಾಕಿದರೆ, ಮುಂದೆ ಅದು ಬದಲಾಗುವುದಿಲ್ಲ. ಜೆ ಹೆಚ್‌ ಪಾಟೀಲರಂತ ಸಮಾಜವಾದಿ ಪರಿಕಲ್ಪನೆಗಳುಳ್ಳವರು ಮುಖ್ಯಮಂತ್ರಿ ಸ್ಥಾನದಲ್ಲಿದ್ದರೂ ತಮ್ಮ ವಿಚಾರಗಳನ್ನು ಬದಲಾಯಿಸಿಕೊಳ್ಳುವುದಿಲ್ಲ. ತಮ್ಮ ನಿಲುವಿನ ಸ್ಪಷ್ಟತೆ ಇರುತ್ತದೆ. ತಮ್ಮ ವಿಚಾರಧಾರೆಗಳ ಆಧಾರದ ಮೇಲೆಯೇ ಆಡಳಿತ ನಡೆಸುವಷ್ಟು ಬದ್ಧತೆ ಬಂದುಬಿಡುತ್ತದೆ. ಹಾಗಾಗಿ ಮಾನವೀಯ ಮೌಲ್ಯಗಳನ್ನೇ ಒಳಗೊಂಡಿರುವ ವಿಚಾರಧಾರೆಗಳನ್ನು ಬಿತ್ತುವ ಸಲುವಾಗಿ ನಾಡಿನ ಮಠಾಧೀಶರೆಲ್ಲ ಒಮ್ಮತದಿಂದ ವಚನ ವಿವಿಯನ್ನು ಸ್ಥಾಪಿಸಲು ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ” ಎಂದರು.

“ಪ್ರಸ್ತುತ ಜಾತಿ ಆಧಾರದ ಮೇಲೆ ಒಬ್ಬ ವ್ಯಕ್ತಿಯ ಸ್ಥಾನಮಾನ ಅಳೆಯುವ ಪ್ರವೃತ್ತಿ ಬೆಳೆದಿದೆ. ಯಾವುದೇ ಮೇಲ್ಪಂಕ್ತಿಯ ಹುದ್ದೆಗೆ ಆಯ್ಕೆ ಮಾಡುವಾಗ, ಅವನು ಮೇಲ್ವರ್ಗದವನಾ? ಎನ್ನುವುದು ಗಣನೆಗೆ ಬರುತ್ತದೆ. ಒಂದು ವೇಳೆ ಕೆಳವರ್ಗದವನಾದರೆ, ಜಾತಿಯಿಂದಲೇ ಅವನ್ನು ಹುದ್ದೆಗೆ ಅನರ್ಹಗೊಳಿಸಲಾಗುತ್ತದೆ. ಇದು ಸಮಾಜದಲ್ಲಿ ಬೇರೂರಿದೆ. ಜಾತಿಯಿಂದ ಒಬ್ಬ ವ್ಯಕ್ತಿಗೆ ಅವಕಾಶ ನೀಡಕೂಡದು, ಅವನ ಅರ್ಹತೆ ಮೇಲೆ ಅವನಿಗೆ ಅವಕಾಶ ಸಿಗಬೇಕು. ಜಾತಿ, ಮೌಢ್ಯತೆ ಇಲ್ಲದ ಸಮಾಜದ ನಿರ್ಮಾಣ ಮಾಡಬೇಕು. ಇದೇ ಬಸವಣ್ಣನವರ ಸಮಾನತೆಯ ಪರಿಕಲ್ಪನೆಯಾಗಿತ್ತು. ಅವರು ಮನಶುದ್ಧಿಗಾಗಿ ಧ್ಯಾನದ ಪರಿಕಲ್ಪನೆಯನ್ನು ಹಾಗೂ ನಮ್ಮಲ್ಲಿರುವ ಋಣಾತ್ಮಕ ಆಲೋಚನೆಗಳನ್ನು ಹೊರಗೆಡವಲು ಲಿಂಗದ ಪರಿಕಲ್ಪನೆಗಳನ್ನು ಪರಿಚಯಿಸಿದರು. ಇದರಿಂದ ಧನಾತ್ಮಕ ಆಲೋಚನೆಗಳು ಬೆಳೆದು, ಅದು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಕಾರಿಯಾಗುತ್ತಿತ್ತು” ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಸಮಾನತೆಯೊಂದಿಗೆ ದಾಸೋಹದ ವಿಚಾರವನ್ನೂ ಬಸವಣ್ಣ ತಿಳಿಸಿದ್ದರು. ಚಿಕ್ಕ ಮಕ್ಕಳು, ವೃದ್ಧರು, ದೈಹಿಕ-ಮಾನಸಿಕ ದುರ್ಬಲರು ಸೇರಿದಂತೆ ದುಡಿಯುವ ಶಕ್ತಿ ಇಲ್ಲದವರ ಜವಾಬ್ದಾರಿಯು ದುಡಿಯುವ ಸಾಮರ್ಥ್ಯ ಇರುವವರ ಮೇಲಿರುತ್ತದೆ. ಕಾಯಕ ಮಾಡಿ ಹಣ ಸಂಗ್ರಹ ಮಾಡಿಟ್ಟುಕೊಳ್ಳುವುದಕ್ಕಿಂತ ನಿರ್ಗತಿಕರಿಗೆ, ಅಸಹಾಯಕರಿಗೆ, ಅಗತ್ಯವಿರುವವರಿಗೆ ಕೈಲಾದಷ್ಟು ಸಹಾಯ ಮಾಡಬೇಕು. ಈ ಅರಿವನ್ನೇ ದಾಸೋಹದ ಪರಿಕಲ್ಪನೆಯ ಮೂಲಕ ಸಮಾಜದಲ್ಲಿ ಬಿತ್ತಿದರು. ಈ ವಿಚಾರಧಾರೆಗಳಿಂದ ಸಮ ಸಮಾಜವನ್ನು ನಿರ್ಮಿಸಲು ಶ್ರಮಿಸಿದರು. ಅದೇ ವಿಚಾರಗಳನ್ನು ಗೌತಮ ಬುದ್ಧ, ಅಂಬೇಡ್ಕರರು ಮುಂದುವರೆಸಿದರು. ಕಾಲಘಟ್ಟ, ಪ್ರದೇಶ ಬೇರೆಯಾದರೂ ಅವರ ವಿಚಾರಧಾರೆಗಳು ಒಂದೇ ಆಗಿದ್ದವು. ಇದೇ ಆಲೋಚನೆಗಳನ್ನು ಸರಿ ಎಂದು ಒಪ್ಪಿಕೊಂಡ ಲಕ್ಷಾಂತರ ಮಂದಿ ಬುದ್ಧ, ಬಸವ, ಅಂಬೇಡ್ಕರರ ಅನುಯಾಯಿಗಳು ಸಮಾಜದಲ್ಲಿದ್ದಾರೆ. ಇದು ಶುಭೋದಯ ಎನಿಸಿದರೂ ಮತ್ತಷ್ಟು ಬದಲಾವಣೆಗಳಾಗಬೇಕಿದೆ. ಮುಂದಿನ ಪೀಳಿಗೆಗೆ ಆ ವಿಚಾರಗಳನ್ನು ವರ್ಗಾಯಿಸುವ ಕೆಲಸವಾಗಬೇಕಿದೆ” ಎಂದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...