ಕೆಇಎ ಪರೀಕ್ಷಾ ಅಕ್ರಮ | ಪೊಲೀಸರನ್ನೇ ಸಿನೆಮಾ ಶೈಲಿಯಲ್ಲಿ ಯಮಾರಿಸುತ್ತಿರುವ ಆರ್‌ ಡಿ ಪಾಟೀಲ್

Date:

  • ರುದ್ರಗೌಡ ಪಾಟೀಲ್​ನ ಮೊಬೈಲ್ ಲೊಕೇಷನ್​ ಉತ್ತರ ಪ್ರದೇಶದಲ್ಲಿ ಪತ್ತೆ
  • ‘ಪೊಲೀಸರ ದಾರಿ ತಪ್ಪಿಸಲು ಉತ್ತರ ಪ್ರದೇಶಕ್ಕೆ ತನ್ನ ಫೋನ್ ಕಳುಹಿಸಿದ್ದಾನೆ’

ಕೆಇಎ ಪರೀಕ್ಷೆಯಲ್ಲಿ ಅಕ್ರಮ ಎಸಗಿ, ತಲೆ ಮರೆಸಿಕೊಂಡಿರುವ ಕಿಂಗ್‌ಪಿನ್ ರುದ್ರಗೌಡ ಪಾಟೀಲ್ (ಆರ್‌ ಡಿ ಪಾಟೀಲ್) ಪೊಲೀಸರನ್ನೇ ದಿನ ದಿನ ಸಿನೆಮಾ ಶೈಲಿಯಲ್ಲಿ ಯಮಾರಿಸುತ್ತಿದ್ದಾನೆ.

ನೆರೆಯ ಮಹಾರಾಷ್ಟ್ರ, ತೆಲಂಗಾಣ ಅಥವಾ ಉತ್ತರ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದಾನೆಂದು ಪೊಲೀಸರು ಊಹಿಸಿದ್ದರು. ಅದರಂತೆ ಕಿಂಗ್​ಪಿನ್​ ರುದ್ರಗೌಡ ಪಾಟೀಲ್​ನ ಮೊಬೈಲ್ ಲೊಕೇಷನ್​ ಉತ್ತರ ಪ್ರದೇಶದಲ್ಲಿ ಪತ್ತೆಯಾಗಿದೆ.

ಆದರೆ, ಟವರ್ ಲೊಕೇಷನ್ ಜಾಡು ಹಿಡಿದು ಹೊರಟಿದ್ದ ಪೊಲೀಸರಿಗೆ ರುದ್ರಗೌಡ ಚಳ್ಳೇಹಣ್ಣು ತಿನ್ನಿಸಲು ತನ್ನ ಫೋನ್ ಬೇರೊಬ್ಬರಿಗೆ ನೀಡಿ ಉತ್ತರ ಪ್ರದೇಶಕ್ಕೆ ಕಳುಹಿಸಿ ತಾನು ಕಲಬುರಗಿಯಲ್ಲೇ ತಲೆಮರೆಸಿಕೊಂಡಿದ್ದಾನೆ. ರುದ್ರಗೌಡ ಪಾಟೀಲ್ ಕಲಬುರಗಿಯಲ್ಲೇ ಇದ್ದಾನೆ ಎಂದು ತಿಳಿದ ಬಳಿಕ ಪೊಲೀಸರು ಆತನನ್ನು ಬಂಧಿಸಲು ಬಂದಾಗ ಕಪೌಂಡ್ ಹಾರಿ ಎಸ್ಕೇಪ್ ಆಗಿದ್ದಾನೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪಿಎಸ್‌ಐ ಪರೀಕ್ಷಾ ಅಕ್ರಮದಲ್ಲೂ ಹೀಗೆ ಸಿಐಡಿ ಅಧಿಕಾರಿಗಳಿಗೆ ಚಳ್ಳೆಹಣ್ಣು ತಿಣ್ಣಿಸಿದ್ದ. ಕೊನೆಗೆ ಸಿನೆಮಾ ಶೈಲಿಯಲ್ಲಿ ಸಿಐಡಿ ಅಧಿಕಾರಿಗಳು ದಾಳಿ ಮಾಡಿ, ಸಾಕ್ಷಿ ಸಮೇತ ಬಂಧಿಸಿದ್ದರು. 11 ತಿಂಗಳು ಜೈಲಿನಲ್ಲಿದ್ದ ರುದ್ರಗೌಡ ಪಾಟೀಲ ಷರತ್ತುಬದ್ಧ ಜಾಮೀನಿನ ಮೇಲೆ ಹೊರಗೆ ಬಂದಿದ್ದಾನೆ.

ಪಿಎಸ್‌ಐ ಪ್ರಕರಣದಲ್ಲಿ ಪಾಠ ಕಲಿಯದ ರುದ್ರಗೌಡ ಪಾಟೀಲ್ ತನ್ನ ಹಳೆಯ ಚಾಲಿಯನ್ನೇ ಮುಂದುವರಿಸಿ, ಕಳೆದ ತಿಂಗಳ ಅಕ್ಟೋಬರ್ 28 ರಂದು ನಡೆದಿದ್ದ ಕೆಇಎ ಪರೀಕ್ಷೆಯಲ್ಲಿ ಅಕ್ರಮವೆಸಗಿದ್ದ. ಅಲ್ಲದೆ, ರುದ್ರಗೌಡ ಪಾಟೀಲ್ ಅನೇಕ ದಿನಗಳಿಂದ ಪೊಲೀಸರ ಕೈಗೆ ಸಿಗದೆ ಓಡಾಡಿಕೊಂಡಿದ್ದಾನೆ.

ನಾಲ್ಕು ವಿಶೇಷ ತಂಡಗಳು

ಆರೋಪಿ ರುದ್ರಗೌಡ ಪಾಟೀಲ್ ಬಂಧನಕ್ಕೆ ಹುಡುಕಾಟ ಮುಂದುವರೆದಿದೆ. ನಾಲ್ಕು ವಿಶೇಷ ತಂಡಗಳು ಕಲಬುರಗಿ ಜಿಲ್ಲೆಯ ವಿವಿಧಡೆ ಮತ್ತು ಮಹಾರಾಷ್ಟ್ರ ಹಲವೆಡೆ ಹುಡುಕಾಟ ನಡೆಸುತ್ತಿವೆ. ಮಹಾರಾಷ್ಟ್ರದ ಸೊಲ್ಹಾಪುರ, ಪುಣೆಯಲ್ಲಿ ರುದ್ರಗೌಡ ಅಡಗಿರುವ ಶಂಕೆ ವ್ಯಕ್ತವಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...