ಕೇಂದ್ರ ಸಾಹಿತ್ಯ ಅಕಾಡೆಮಿಯು ಅನುವಾದಿತ ಕೃತಿಗಳಿಗೆ ನೀಡಲಾಗುವ 2023ನೇ ಸಾಲಿನ ಪ್ರಶಸ್ತಿಗಳನ್ನು ಇಂದು ಘೋಷಣೆ ಮಾಡಿದೆ.
ಲೇಖಕ ಕೆ ಕೆ ಗಂಗಾಧರನ್ ಅವರ ‘ಮಲಯಾಳಂ ಕತೆಗಳು’ ಕನ್ನಡ ವಿಭಾಗದಿಂದ ಆಯ್ಕೆಯಾಗಿದೆ. ಇನ್ಫೊಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರು ಬರೆದ ‘ಮಕ್ಕಳಿಗೆ ನನ್ನ ನೆಚ್ಚಿನ ಕತೆಗಳು’ ಕೃತಿಯ ಸಂಸ್ಕೃತ ಅನುವಾದ ‘ರುಚಿರಃ ಬಾಲಕಥಹಃ ’ (ಅನುವಾದಕಿ: ನಾಗರತ್ನ ಹೆಗಡೆ) ಪ್ರಶಸ್ತಿಗೆ ಆಯ್ಕೆಯಾಗಿದೆ.
ಕೆ ಶಿವರಾಮ್ ಕಾರಂತ ಅವರು ಬರೆದ ’ಚೋಮನ ದುಡಿ’ ಕೃತಿಯ ಕಾಶ್ಮೀರಿ ಭಾಷೆಯ ಅನುವಾದ ‘ಚೋಮಸುನ್ ದೋಲ್’ (ಅನುವಾದಕ: ಗುಲ್ಝರ್ ಅಹ್ಮದ್ ರಥರ್) ಕೃತಿಯೂ ಆಯ್ಕೆಯಾಗಿದೆ. ಡಾ. ಎಂ .ಎಸ್ ಆಶಾದೇ ವಿ, ಕೇಶವ ಮಳಗಿ ಮತ್ತು ಪ್ರೊ ಎಸ್ ಸಿರಾಜ್ ಅಹ್ಮದ್ ಅವರು ಕನ್ನಡ ವಿಭಾಗದ ತೀರ್ಪುಗಾರರಾಗಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕಾರ್ಯಕರ್ತರನ್ನು ಕಡೆಗಣಿಸಿದ ಬಿಜೆಪಿ ‘ಗೋ ಬ್ಯಾಕ್’ ಘೋಷಣೆಗೆ ಬೆಚ್ಚಿತೇ?





