ಹಿರಿಯ ಪತ್ರಕರ್ತ ಎನ್ ಸಿ ಗುಂಡೂರಾವ್ ನಿಧನ, ಸಿಎಂ ಸಂತಾಪ

Date:

ಹಿರಿಯ ಪತ್ರಕರ್ತ ಎನ್ ಸಿ ಗುಂಡೂರಾವ್ (78) ಅವರ ನಿಧನದಿಂದ ದುಃಖಿತನಾಗಿದ್ದೇನೆ. ಸರಳ ಮತ್ತು ಸಜ್ಜನರಾಗಿದ್ದ ಗುಂಡೂರಾವ್ ಅವರು ವೃತ್ತಿಧರ್ಮವನ್ನು ಒಂದು ವ್ರತದಂತೆ ಪಾಲಿಸಿಕೊಂಡು ಬಂದವರು. ಮಾಧ್ಯಮರಂಗದ ಇಂದಿನ ಪೀಳಿಗೆಗೆ ಇವರ ಬದುಕು ಮತ್ತು ಸಾಧನೆ ಪ್ರೇರಣೆ ನೀಡಲಿ ಎಂದು ಹಾರೈಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಸಂತಾಪ ಸೂಚಿಸಿ ಟ್ವೀಟ್‌ ಮಾಡಿರುವ ಅವರು, “ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಫ್ರೂಪ್‌ ರೀಡರ್ ಆಗಿ ವೃತ್ತಿಜೀವನ‌ ಆರಂಭಿಸಿದ್ದ ಗುಂಡೂರಾವ್ ಅವರು ನಂತರ ಪತ್ರಿಕೆಯ ಸಹಸಂಪಾದಕರಾಗಿ ನಿವೃತ್ತರಾಗಿದ್ದರು ಎನ್ನುವುದು ಅವರಲ್ಲಿನ ವೃತ್ತಿಪರತೆ – ಬದ್ಧತೆಗೆ ನಿದರ್ಶನ. ಈ ಪತ್ರಿಕೆಯಲ್ಲಿ ಹೆಚ್ಚು ಕಡಿಮೆ ನಾಲ್ಕು ದಶಕಗಳ ಕಾಲ ವೃತ್ತಿನಿರತರಾಗಿದ್ದ ಗುಂಡೂರಾವ್ ಅವರ ರಾಜಕೀಯ ವರದಿಗಾರಿಕೆ ಮತ್ತು ಅಂಕಣ ಬರಹಗಳು ಆ ಕಾಲದಲ್ಲಿ ನನ್ನಂತಹವರಿಗೆ ಮಾರ್ಗದರ್ಶನ ನೀಡುತ್ತಿತ್ತು” ಎಂದಿದ್ದಾರೆ.

“ಗುಂಡೂರಾವ್ ಅವರನ್ನು ಕಳೆದುಕೊಂಡ ಕುಟುಂಬ ವರ್ಗಕ್ಕೆ ನನ್ನ ಸಂತಾಪಗಳು. ಅವರೆಲ್ಲರ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ” ಎಂದು ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...