ಅಧಿವೇಶನ | ಧರ್ಮಸ್ಥಳಕ್ಕೆ ಅಪಖ್ಯಾತಿ ತರಲು ಗ್ಯಾಂಗ್‌ವೊಂದು ಕೆಲಸ ಮಾಡುತ್ತಿದೆ: ವಿ ಸುನಿಲ್‌ ಕುಮಾರ್

Date:

ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ನೂರಾರು ಅಸಹಜ ಸಾವಿನ ತನಿಖೆ ವಿಚಾರ ಕುರಿತು ನಿಯಮ 69ರಡಿ ವಿಧಾನಸಭೆಯ ಅಧಿವೇಶನದಲ್ಲಿ ಚರ್ಚೆಗೆ ಸಭಾಧ್ಯಕ್ಷರು ಅವಕಾಶ ಮಾಡಿಕೊಟ್ಟರು.

ನಿಲುವಳಿ ಸೂಚಿಸಿದ್ದ ಬಿಜೆಪಿ ಸದಸ್ಯ ವಿ ಸುನಿಲ್‌ ಕುಮಾರ್‌ ಮಾತನಾಡಿ, “ಧರ್ಮಸ್ಥಳ ಹಿಂದೂ ಧಾರ್ಮಿಕ ಕ್ಷೇತ್ರ. ಧಾರ್ಮಿಕ ಕ್ಷೇತ್ರದ ಬಗ್ಗೆ ಅಪಪ್ರಚಾರ ನಡೆಯುತ್ತಿದೆ. ಒಂದು ಗುಂಪು ವ್ಯವಸ್ಥಿತ ಪಿತೂರಿ ಮಾಡುತ್ತಿದೆ. ಪ್ರತಿ ದಿನ ಒಂದಿಷ್ಟು ಜನರು ಬರುತ್ತಾರೆ, ಸಾಕ್ಷಿ ಹೇಳುತ್ತೇವೆ ಎನ್ನುತ್ತಾರೆ. ಯಾರೋ ಅನಾಮಿಕ ವ್ಯಕ್ತಿ ತೆಗೆದುಕೊಂಡ ಬಂದ ಬುರುಡೆ ಬಗ್ಗೆ ತನಿಖೆಯಾಗಲೇ ಇಲ್ಲ” ಎಂದರು.

“ಎಸ್‌ಐಟಿ ರಚನೆ ಬಗ್ಗೆ ನಮಗೆ ತಕರಾರು ಇಲ್ಲ. ಆದರೆ ಅನಾಮಿಕ ವ್ಯಕ್ತಿ ಹೇಳಿದ 13 ಜಾಗಗಳನ್ನು ಅಗೆದರೂ ಒಂದು ಜಾಗದಲ್ಲಿ ಏನು ಸಿಕ್ಕಿದೆ ಅಂತ ಗೃಹ ಸಚಿವರು ಹೇಳಬೇಕು. ಗುಂಡಿಗಳನ್ನು ಎಷ್ಟು ಅಗೆಯುತ್ತೀರಾ? 13ನೇ ಗುಂಡಿಯಲ್ಲಿ ಏನೋ ಇದೆ ಎನ್ನುವ ಬಗ್ಗೆ ಕುತೂಹಲ ಸೃಷ್ಟಿಸಲಾಯಿತು. ಆದರೆ 13ನೇ ಗುಂಡಿಯಲ್ಲಿ ಏನೂ ಸಿಕ್ಕಿಲ್ಲ ಎನ್ನುವ ವರದಿಯಾಗಿದೆ. ನಮಗೆ ಎಸ್‌ಐಟಿ ತನಿಖೆಯ ಬಗ್ಗೆ ಮಧ್ಯಂತರ ವರದಿ ಬೇಕು” ಎಂದು ಆಗ್ರಹಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ಎಷ್ಟು ಗೌರವವಿದೆ. ಆದರೆ ಅವರೆಲ್ಲರ ವಿರುದ್ಧ ಅಪಪ್ರಚಾರ ನಡೆದಿದೆ. ಬಗ್ಗೆ ಎಫ್‌ಐಆರ್‌ ದಾಖಲು ಆಗಿಲ್ಲ. ಸುಳ್ಳು ಸುದ್ದಿಗೆ ಕಡಿವಾಣ ಯಾವಾಗ? ಹಿಂದೂ ಧಾರ್ಮಿಕ ಕ್ಷೇತ್ರದ ಬಗ್ಗೆ ಅವಹೇಳನ ಮಾಡಿರುವ ಬಗ್ಗೆ ಕ್ರಮ ಏನು? ಧರ್ಮಸ್ಥಳ ಬಗ್ಗೆ ಅಪಪ್ರಚಾರ ಮಾಡುವಲ್ಲಿ ಒಂದು ಗ್ಯಾಂಗ್‌ ನಿರತವಾಗಿದೆ. ಕಾಡಲ್ಲಿ ಇರುವ ನಕ್ಸಲರು ನಗರಕ್ಕೆ ಬಂದಿದ್ದಾರೆ. ಅವರೇ ಈ ಪ್ರಕರಣದ ಹಿಂದಿದ್ದಾರೆ. ಸರ್ಕಾರದ ಮಂತ್ರಿಮಂಡಲ ಧರ್ಮಸ್ಥಳಕ್ಕೆ ಹೋಗಿ ಕ್ಷಮೆಯಾಚಿಸಬೇಕು” ಎಂದು ಆಗ್ರಹಿಸಿದರು.

ಡಿಸಿಎಂ ಡಿ ಕೆ ಶಿವಕುಮಾರ್‌ ಮಾತನಾಡಿ, “ಧರ್ಮಸ್ಥಳ ಪ್ರಕರಣವನ್ನು ರಾಜಕೀಯವಾಗಿ ನೋಡಬೇಡಿ. ಬಿಜೆಪಿಗಿಂತ ನಮಗೆ ಧರ್ಮಸ್ಥಳ ಬಗ್ಗೆ ಗೌರವವಿದೆ. ಅನಾಮಿಕ ವ್ಯಕ್ತಿಯೊಬ್ಬರು ನ್ಯಾಯಾಧೀಶರ ಮುಂದೆ 164ಅಡಿ ಹೇಳಿಕೆ ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಸ್‌ಐಟಿ ಮಾಡಿದ್ದೇವೆ. ತನಿಖೆ ನಡೆಯುತ್ತಿದೆ. ನಾವು ಧರ್ಮಸ್ಥಳದ ಭಾವನೆಗೆ ಅಗೌರವ ತೋರಿಲ್ಲ” ಎಂದು ಹೇಳಿದರು.

ಆರ್‌ ಅಶೋಕ್‌ ಮಾತನಾಡಿ, “164 ಪ್ರಕಾರ ಹೇಳಿಕೆ ದಾಖಲೆ ಮಾಡಿದ್ರೆ ಎಸ್‌ಐಟಿ ಮಾಡಲು ಕೋರ್ಟ್‌ ಹೇಳಿತ್ತಾ? ಮೊಹಂತಿ ಅವರನ್ನೇ ನೇಮಿಸಲು ಕೋರ್ಟ್‌ ನಿರ್ದೇಶನ ನೀಡಿತ್ತಾ? ಎಸ್‌ಐಟಿ ರಚನೆ ಹಿಂದಿರುವ ಗ್ಯಾಂಗ್‌ ಯಾವುದು? ಮುಖ್ಯಮಂತ್ರಿಗಳನ್ನು ಸುತ್ತುವರಿದಿರುವ ಆ ಗ್ಯಾಂಗ್‌ ಬಗ್ಗೆ ರಾಜ್ಯಕ್ಕೆ ಗೊತ್ತಾಗಬೇಕು? ಬೋಗಸ್‌ ಬುರುಡೆ ಸಿಕ್ಕಿದೆ, ಗುಂಡಿಯಲ್ಲಿ ಒಂದು ಇಲಿಯೂ ಸಿಕ್ಕಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಮಾಸ್ಕ್‌ ಮ್ಯಾನ್‌ ಯಾರು? ಭೀಮ್‌ ಎಂದು ಅವರೇ ಇಟ್ಟಿರುವ ಹೆಸರು. ಜನ ಹೇಳುತ್ತಾರೆ ಚಿನ್ನಯ್ಯ ಅಂತ. ಕ್ರೈಸ್ತ್‌ ಧರ್ಮಕ್ಕೆ ಮತಾಂತರ ಆಗಿದ್ದಾನೆ. ಅವನಿಗೆ ಎಷ್ಟು ಭದ್ರತೆ ಒದಗಿಸಲಾಗುತ್ತಿದೆ. ಆ ಭದ್ರತೆ ನಮಗೂ ಇಲ್ಲ. ಅವನು ಬಿರಿಯಾನಿ ಊಟ ಮಾಡುತ್ತ ಎಂಜಾಯ್‌ ಮಾಡುತ್ತಿದ್ದಾನೆ. ಎಸ್‌ಐಟಿ ತನಿಖೆ ಮುಂದುವರಿಯಲಿ. ಈಗ ಅಗೆದಿರುವ ಗುಂಡಿಗಳನ್ನು ಕೃಷಿ ಹೊಂಡ ಮಾಡಿ ಬಿಡಿ” ಎಂದು ಲೇವಡಿ ಮಾಡಿದರು.

(ಚರ್ಚೆ ಮುಂದುವರಿದಿದೆ..)

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...