ಡಿ ಕೆ ಶಿವಕುಮಾರ್‌ ಮನೆಯಲ್ಲಿ ಉಪಾಹಾರ ಜೊತೆ ಸಮಾಲೋಚನೆ ನಡೆಸಿದ ಸಿದ್ದರಾಮಯ್ಯ

Date:

ಸಿಎಂ ಸಿದ್ದರಾಮಯ್ಯ ಅವರು ಡಿಸಿಎಂ ಡಿ ಕೆ ಶಿವಕುಮಾರ್ ಅವರ ಸದಾಶಿವನಗರ ನಿವಾಸಕ್ಕೆ ಮಂಗಳವಾರ ಉಪಾಹಾರ ಕೂಟಕ್ಕೆ ಆಗಮಿಸಿ, ಆಪ್ತವಾಗಿ ಸಮಾಲೋಚನೆ ನಡೆಸಿದರು.

ನಾಯಕತ್ವ ಬದಲಾವಣೆ ಸುತ್ತ ಹುಟ್ಟಿಕೊಂಡ ಬೆಳವಣಿಗೆಗಳು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್‌ ನಡುವೆ ಭಿನ್ನಮತದ ಕಂದಕವನ್ನು ಸೃಷ್ಟಿಸಿತ್ತು. ಕೂಡಲೇ ಎಚ್ಚೆತ್ತುಕೊಂಡ ಹೈಕಮಾಂಡ್‌ ಇಬ್ಬರು ನಾಯಕರ ನಡುವೆ ಯಾವುದೇ ಭಿನ್ನಮತದ ಗೊಂದಲವಿಲ್ಲದಂತೆ ನೋಡಿಕೊಳ್ಳಲು ಸಿಎಂ ಅವರಿಗೆ ಬ್ರೇಕ್‌ ಫಾಸ್ಟ್‌ ಸಭೆ ಆಯೋಜಿಸಲು ಸೂಚಿಸಿತ್ತು.

ಸಿದ್ದರಾಮಯ್ಯ ಅವರು ಡಿ ಕೆ ಶಿವಕುಮಾರ್‌ ಅವರನ್ನು ತಮ್ಮ ಆಹ್ವಾನಿಸಿ ಬ್ರೇಕ್‌ ಫಾಸ್ಟ್‌ ಸಭೆ ಮಾಡಿ, ಸುದ್ದಿಗಾರರ ಮುಂದೆ ತಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಜಂಟಿಯಾಗಿ ಸಾರಿದ್ದರು. ಅದೇ ಸುದ್ದಿಗೋಷ್ಠಿಲ್ಲಿ ಡಿ ಕೆ ಶಿವಕುಮಾರ್‌ ಅವರು ಸಿದ್ದರಾಮಯ್ಯ ಅವರನ್ನು ಸಹ ನಾನು ಬ್ರೇಕ್‌ ಫಾಸ್ಟ್‌ಗೆ ಆಹ್ವಾನಿಸುವೆ ಎಂದಿದ್ದರು. ಆ ಪ್ರಕಾರ ಮಂಗಳವಾರ ಸಿಎಂ ಅವರು ಡಿಸಿಎಂ ಮನೆಗೆ ಆಗಮಿಸಿ ಬೆಳಗಿನ ತಿಂಡಿ ಮಾಡುವ ಜೊತೆಗೆ ರಾಜಕೀಯ ವಿಚಾರಗಳನ್ನು ಪರಸ್ಪರ ಹಂಚಿಕೊಂಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...